30 ನಿಮಿಷದಲ್ಲಿ 1 ಲಕ್ಷ ಕಾರು ಬುಕಿಂಗ್, ಹೊಸ ದಾಖಲೆ ಬರೆದ ನೂತನ ಮಹೀಂದ್ರ ಸ್ಕಾರ್ಪಿಯೋ!

By Suvarna News  |  First Published Jul 30, 2022, 3:48 PM IST

ಹೊಸ ರೂಪದಲ್ಲಿ ನೂತನ ಮಹೀಂದ್ರ ಸ್ಕಾರ್ಪಿಯೋ ಬಿಡುಗಡೆಯಾಗಿದೆ.  ಬುಕಿಂಗ್ ಇಂದಿನಿಂದ ಆರಂಭಗೊಂಡಿದ್ದು, ಕೇವಲ ಅರ್ಧ ಗಂಟೆಯಲ್ಲಿ 1 ಲಕ್ಷ  ಮಂದಿ ಹೊಸ ಕಾರು ಬುಕಿಂಗ್ ಮಾಡವ ಮೂಲಕ ದಾಖಲೆ ಬರೆದಿದೆ. ಮಹೀಂದ್ರ ಸ್ಕಾರ್ಪಿಯೋ ಈ ಮಟ್ಟಿಗೆ ಬೇಡಿಕೆ ಪಡೆಯಲು ಕಾರಣವೂ ಇದೆ.


ನವದೆಹಲಿ(ಜು.30): ಹೊಚ್ಚ ಹೊಸ  ಮಹೀಂದ್ರ ಸ್ಕಾರ್ಪಿಯೋ ಕಾರು ಮೊದಲ ನೋಟಕ್ಕೆ ಕಾರು ಪ್ರಿಯರ ಮನಸ್ಸು ಗಲ್ಲುತ್ತಿದೆ.  ಸದ್ಯ ಮಾರುಕಟ್ಟೆಯಲ್ಲಿರುವ ಸ್ಕಾರ್ಪಿಯೋ ಹಾಗೂ ಹೊಸ ಸ್ಕಾರ್ಪಿಯೋ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಅತ್ಯಾಕರ್ಷಕ ವಿನ್ಯಾಸ, SUV ಸ್ಪೋರ್ಟ್ಸ್ ಲುಕ್, ದಕ್ಷ ಎಂಜಿನ್ ಸೇರಿದಂತೆ ಹಲವು ಬದಲಾವಣೆಗಳು ಹೊಸ ಕಾರಿನಲ್ಲಿದೆ. ಇದರ ಬುಕಿಂಗ್ ಇಂದಿನಿಂದ(ಜು.30) ಆರಂಭಗೊಂಡಿದೆ. ಬೆಳಗ್ಗೆ 11 ಗಂಟೆಗೆ ಬುಕಿಂಗ್ ಆರಂಭಿಸಲಾಗಿದೆ. ಕೇವಲ 30 ನಿಮಿಷದಲ್ಲಿ ಬರೋಬ್ಬರಿ 11 ಲಕ್ಷ ಕಾರುಗಳು ಬುಕ್ ಆಗಿವೆ. ಈ ಮೂಲಕ ಅತೀ ಅವಧಿಯಲ್ಲಿ ಗರಿಷ್ಠ ಬುಕಿಂಗ್ ಪಡೆದ ಅನ್ನೋ ಹೆಗ್ಗಳಿಕೆಗೆ ಕಾರಣವಾಗಿದೆ. ಮಹೀಂದ್ರ ಸ್ಕಾರ್ಪಿಯೋ ಬುಕಿಂಗ್ ಬೆಲೆ 21,000 ರೂಪಾಯಿ.

ಅರ್ಧಗಂಟೆಯಲ್ಲಿ 1 ಲಕ್ಷ ಮಹೀಂದ್ರ ಸ್ಕಾರ್ಪಿಯೋ ಕಾರುಗಳು ಬುಕಿಂಗ್ ಪಡೆದುಕೊಂಡಿದೆ. ಇದು SUV ಹಾಗೂ ಇತರ ಕಾರುಗಳಿಗೆ ಹೋಲಿಸಿದರೆ ಗರಿಷ್ಠವಾಗಿದೆ. 11 ಗಂಟೆಗೆ ಆನ್‌ಲೈನ್ ಹಾಗೂ ಡೀಲರ್ ಬಳಿ ಬುಕಿಂಗ್ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಬುಕಿಂಗ್ ಆರಂಭಗೊಂಡ ಒಂದು ನಿಮಿಷಕ್ಕೆ 25,000 ಕಾರುಗಳು ಬುಕ್ ಆಗಿತ್ತು. 30 ನಿಮಿಷದಲ್ಲಿ 1 ಲಕ್ಷ ಕಾರುಗಳು ಬುಕಿಂಗ್ ಆಗಿವೆ. ಎಕ್ಸ್ ಶೋ ರೂಂ ಮೊತ್ತದಲ್ಲಿ ಬುಕಿಂಗ್ ಕಾರುಗಳು ಮೊತ್ತ ನೋಡುವುದಾದರೆ ಬರೋಬ್ಬರಿ 18,000 ಕೋಟಿ ರೂಪಾಯಿ.

Tap to resize

Latest Videos

21 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ!

ನೂತನ ಸ್ಕಾರ್ಪಿಯೋ ಎನ್ ಕಾರು ಭಾರತ ಮಾತ್ರವಲ್ಲ, ನೇಪಾ, ಸೌತ್ ಆಫ್ರಿಕಾದಲ್ಲೂ ಅನಾವರಣ ಮಾಡಲಾಗಿದೆ. ವಿದೇಶಗಳಲ್ಲೂ ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.  ಬುಕಿಂಗ್ ಮಾಡಿದ ಗ್ರಾಹಕರಿಗೆ ಸೆಪ್ಟೆಂಬರ್ 26 ರಿಂದ ಕಾರು ಕೈಸೇರಲಿದೆ ಎಂದು ಮಹೀಂದ್ರ ಕಂಪನಿ ಹೇಳಿದೆ. ಇದರ ಜೊತೆಗೆ ಗ್ರಾಹಕರಿಗೆ ಸುಲಭ ವಿಧಾನದಲ್ಲಿ ಸಾಲ ಹಾಗೂ ಬಡ್ಡಿದರಗಳನ್ನು ನಿಗದಿಪಡಿಸಿದೆ. ಮಹೀಂದ್ರ ಸ್ಕಾರ್ಪಿಯೋ ಕಾರಿ ಖರೀದಿಸಲು ಸುಲಭವಾಗಿ ಸಾಲ ಸಿಗಲಿದದೆ. ಇದಕ್ಕೆ ಕೇವಲ 6.99 ಬಡ್ಡಿದರ ನಿಗದಿಪಡಿಸಲಾಗಿದೆ.   ಕಂತಿನ ಅವಧಿಯನ್ನು  7 ವರ್ಷದಿಂದ ಗರಿಷ್ಠ 10 ವರ್ಷಕ್ಕೆ ಏರಿಸಲಾಗಿದೆ. ಇದರಿಂದ ಜನಸಾಾನ್ಯರಿಗೆ ಕಾರು ಖರೀದಿಸುವ ಅವಕಾಶ ಒಲಿದು ಬರಲಿದೆ, 

ಎಸ್‌ಯುವಿಗಳ ಬಿಗ್‌ ಡ್ಯಾಡಿ ಅನ್ನೋ ಟ್ಯಾಗ್‌ಲೈನ್‌ ಮೂಲಕ ಫೇಮಸ್‌ ಆಗ್ತಿರುವ ಎಸ್‌ಯುವಿ ಮಹೀಂದ್ರಾ ಸ್ಕಾರ್ಪಿಯೋ ಎನ್‌ ಜೂನ್‌ 27ಕ್ಕೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಇದಾದ ಒಂದು ತಿಂಗಳ ಬಳಿಕ ಬುಕಿಂಗ್ ಆರಂಭಿಸಲಾಗಿದೆ. ಇದರಲ್ಲಿ ಹಲವು ವೇರಿಯೆಂಟ್ ಹಾಗೂ ಹಲವಾರು ಫೀಚರ್ಸ್ ಲಭ್ಯವಿದೆ.  4*4 ಆಗಿರೋ ಕಾರಣ ಆಫ್‌ ರೋಡ್‌ ಡ್ರೈವ್‌ ಸಲೀಸು. ಅಡ್ವೆಂಚರ್‌ ರೈಡ್‌ಗೂ ಬೆಸ್ಟ್‌ ಎನ್ನಬಹುದು. ಡ್ಯುಯೆಲ್‌ ಎಲ್‌ಇಡಿ ಪ್ರೊಜೆಕ್ಟರ್‌ ಯೂನಿಟ್ಸ್‌ ಇರುವ ಕಾರಣ ಸ್ಪೋರ್ಟಿ ಹಾಗೂ ಸ್ಟೈಲಿಶ್‌ ಲುಕ್‌ನಲ್ಲಿರುತ್ತದೆ. ಬೋಲ್ಡ್‌ ಡಿಸೈನ್‌, ಅತ್ಯಾಧುನಿಕ ಫೀಚರ್‌ಗಳು, ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಶನ್‌ ಇತ್ಯಾದಿ ಫೀಚರ್‌ಗಳುಳ್ಳ ಈ ಕಾರು ಈಗಾಗಲೇ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

click me!