ತಾಂತ್ರಿಕ ದೋಷಗಳಿಂದ ಮಹೀಂದ್ರಾ ಎಕ್ಸ್‌ಯುವಿ700 ತನ್ನ ಬಹುಬೇಡಿಕೆಯ ವಾಹನಗಳನ್ನು ಹಿಂಪಡೆದಿದೆ. ಈಗ ಕಂಪನಿ ಮತ್ತೊಮ್ಮೆ XUV700 ಕ್ರಾಸ್ಒವರ್ ಅನ್ನು ಹಿಂಪಡೆದಿದೆ
ಮಹೀಂದ್ರಾ ಆ್ಯಂಡ್ ಮಹೀಂದ್ರಾ ತನ್ನ ಮಹೀಂದ್ರಾ ಎಕ್ಸ್ಯುವಿ700 ಯಶಸ್ಸಿನ ಬೆನ್ನಲ್ಲೇ, ತಾಂತ್ರಿಕ ದೋಷಗಳಿಂದ ತನ್ನ ಬಹುಬೇಡಿಕೆಯ ವಾಹನಗಳನ್ನು ಹಿಂಪಡೆದಿದೆ. ಈಗ ಕಂಪನಿ ಮತ್ತೊಮ್ಮೆ XUV700 ಕ್ರಾಸ್ಒವರ್ ಅನ್ನು ಹಿಂಪಡೆದಿದೆ ಮತ್ತು ಇದು ಕಳೆದ ಒಂದು ತಿಂಗಳಲ್ಲಿ ಹಿಂಪಡೆಯುತ್ತಿರುವ ಮೂರನೇ ವಾಹನವಾಗಿದೆ. ಮಹೀಂದ್ರಾ XUV700 ಗಾಗಿ ಇತ್ತೀಚಿಗೆ ತನ್ನ ವಾಹನಗಳಲ್ಲಿ ಆಲ್ಟರ್ನೇಟರ್ ಬೆಲ್ಟ್ ಮತ್ತು ಸ್ವಯಂ-ಟೆನ್ಷನರ್ ಪುಲ್ಲಿಯನ್ನು ಸರಿಪಡಿಸುವ ಉದ್ದೇಶದಿಂದ ಅವುಗಳನ್ನು ಹಿಂಪಡೆದಿದೆ. ಇವುಗಳು ವಾಹನದ ನಿರ್ಣಾಯಕ ಭಾಗಗಳಾಗಿದ್ದು, ಅದರ ವೈಫಲ್ಯವು ವಾಹನದ ಸ್ಥಗಿತಕ್ಕೆ ಕಾರಣವಾಗಬಹುದು. ಆದ್ದರಿಂದ ಇತ್ತೀಚಿನ ಮಹೀಂದ್ರಾ XUV700 ಹಿಂಪಡೆಯುವಿಕೆ ಮಹತ್ವದ ನಿರ್ಣಯವಾಗಿದ್ದು, ಅದು ESCL (ಎಲೆಕ್ಟ್ರಾನಿಕ್ ಸ್ಟೀರಿಂಗ್ ಕಾಲಮ್ ಲಾಕ್) ಅಳವಡಿಸುವ ಗುರಿಯನ್ನೂ ಕೂಡ ಹೊಂದಿದೆ.
ಆಲ್ಟರ್ನೇಟರ್ ಬೆಲ್ಟ್ ವಾಹನದ ಎಂಜಿನ್ ಅನ್ನು ಆಲ್ಟರ್ನೇಟರ್ಗೆ ಸಂಪರ್ಕಿಸುವ ಒಂದು ಭಾಗವಾಗಿದೆ. ಇದು ಆಲ್ಟರ್ನೇಟರ್ನ ಸುಗಮ ಕಾರ್ಯನಿರ್ವಹಣೆಗೆ ಕಾರಣವಾಗಿದೆ. ಇದು ವಾಹನದ ಎಂಜಿನ್ನಿಂದ ಶಕ್ತಿ ಪಡೆದು ಬ್ಯಾಟರಿಯನ್ನು ಮರು-ಚಾರ್ಜ್ ಮಾಡುತ್ತದೆ. ಆಲ್ಟರ್ನೇಟರ್ ಬೆಲ್ಟ್ ಸ್ನ್ಯಾಪ್ ಆಗಿದ್ದರೆ, ಇದು ವಾಹನದ ಬ್ಯಾಟರಿಯು ವೇಗವಾಗಿ ಡಿಸ್ಚಾರ್ಜ್ ಆಗಲು ಕಾರಣವಾಗಬಹುದು, ಇದು ವಾಹನದ ಕಾರ್ಯಕ್ಷಮತೆಗೆ ಧಕ್ಕೆ ಉಂಟು ಮಾಡುತ್ತದೆ. ತನ್ನ ಹೆಚ್ಚಿನ ತಂತ್ರಜ್ಞಾನಗಳೊಂದಿಗೆ, ಮಹೀಂದ್ರಾ ಎಕ್ಸ್ಯುವಿ7100 ಅಚ್ಚು ಪವರ್ ಬಳಕೆ ಮಾಡುವುದರಿಂದ, ಇದರಲ್ಲಿ ಆಲ್ಟರ್ನೇಟರ್ನ ಪಾತ್ರ ಪ್ರಮುಖವಾಗಿರುತ್ತದೆ.
ಆಗಸ್ಟ್‌ನಲ್ಲಿ ಬಿಡುಗಡೆಯಾಗೋ ಹೊಸ ಕಾರುಗಳಿವು
ಹಿಂಪಡೆದ ವಾಃನಗಳಲ್ಲಿ ಮಹೀಂದ್ರಾ ಡೀಲರ್ಗಳು ಪೀಡಿತ ವಾಹನಗಳ ಆಲ್ಟರ್ನೇಟರ್ ಬೆಲ್ಟ್ ಮತ್ತು ಆಟೋ-ಟೆನ್ಷನರ್ ಪುಲ್ಲಿಯನ್ನು ಬದಲಾಯಿಸುತ್ತಾರೆ. XUV700 ಮಾಲೀಕರು ತಮ್ಮ ಮಹೀಂದ್ರಾ ಡೀಲರ್ಗಳನ್ನು ಸಂಪರ್ಕಿಸಲು ತಮ್ಮ SUV ಹಿಂಪಡೆಯುವಿಕೆಯ ಅಡಿಯಲ್ಲಿ ಒಳಗೊಂಡಿದೆಯೇ ಎಂದು ಪರಿಶೀಲಿಸಬಹುದಾಗಿದೆ. ಇತ್ತೀಚಿನ ಹಿಂಪಡೆಯುವಿಕೆಯು SUV ಯ ಆಲ್ ವೀಲ್ ಡ್ರೈವ್ ಆವೃತ್ತಿಯ ಮೇಲೆ ಪರಿಣಾಮ ಬೀರುತ್ತದೆಯೇ ಅಥವಾ SUV ಯ ಎಲ್ಲಾ ವೇರಿಯಂಟ್ಗಳ ಮೇಲೆ ಪರಿಣಾಮ ಬೀರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇತ್ತೀಚೆಗಷ್ಟೇ ಎರಡು ಬಾರಿ XUV700 ಅನ್ನು ಹಿಂಪಡೆಯಲಾಗಿದೆ. ಮೊದಲ ಬಾರಿ, ಅದರ ಪ್ರಾಪ್ ಶಾಫ್ಟ್ ಅನ್ನು ಪರಿಶೀಲಿಸಲು ಮತ್ತು ಅಗತ್ಯವಿದ್ದರೆ ಬದಲಾಯಿಸಲು ಮತ್ತು ಎರಡನೇ ಬಾರಿ ಮತ್ತೆ ಎಡಬ್ಲ್ಯುಡಿ (AWD) ವೇರಿಯಂಟ್ಗಳಲ್ಲಿ SUV ಯ ಹಿಂಭಾಗದ ಕಾಯಿಲ್ ಸ್ಪ್ರಿಂಗ್‌ಗಳನ್ನು ಪರಿಶೀಲಿಸುವ ಉದ್ದೇಶದಿಮದ. ಸದ್ಯ ಈ ಹಿಂಪಡೆಯುವಿಕೆ ಸ್ವಯಂಪ್ರೇರಿತವಾಗಿವೆ ಮತ್ತು ವಾಹನ ತಯಾರಕರ ತೀರ್ಪಿನ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ.
10 ತಿಂಗಳಲ್ಲಿ 1.5 ಲಕ್ಷ ಮಹಿಂದ್ರಾ ಬುಕ್ಕಿಂಗ್
ಆಗಸ್ಟ್ 2021 ರಲ್ಲಿ ಬಿಡುಗಡೆಯಾದ ಮಹೀಂದ್ರಾ XUV700 ಭಾರತೀಯ ಮಾರುಕಟ್ಟೆಯಲ್ಲಿ ಸೂಪರ್ ಹಿಟ್ ಆಗಿದೆ. ಮಹೀಂದ್ರಾ ತನ್ನ ಪ್ರಮುಖ SUV ಯ ಸುಮಾರು 50,000 ವಾಹನಗಳನ್ನು ವಿತರಿಸಿದೆ ಮತ್ತು 100,000 ಕ್ಕೂ ಹೆಚ್ಚು ಬುಕ್ಕಿಂಗ್ಗಳನ್ನು ಹೊಂದಿದೆ. ಭಾರೀ ಬೇಡಿಕೆ, ಬಿಡಿಭಾಗದ ಕೊರತೆಯೊಂದಿಗೆ ಸೇರಿಕೊಂಡು, ಮಹೀಂದ್ರಾ XUV700 ಖರೀದಿದಾರರು ಕೆಲವು ಟ್ರಿಮ್ಗಳಿಗಾಗಿ 2 ಪೂರ್ಣ ವರ್ಷಗಳವರೆಗೆ ಕಾಯಬೇಕಿದೆ.
ಭಾರತದಲ್ಲಿ ಮಾರಾಟವಾಗುವ ಮಹೀಂದ್ರಾ XUV700 ಬೆಲೆ 13.18 ಲಕ್ಷ ರೂ.ನಿಂದ ಪ್ರಾರಂಭವಾಗುತ್ತದೆ. ಮತ್ತು 26 ಕ್ಕೂ ಹೆಚ್ಚು ವೇರಿಯಂಟ್ಗಳಲ್ಲಿ ಲಭ್ಯವಿದೆ. ಇದು ಮಹೀಂದ್ರಾ mFalcon (ಎಂಫಾಲ್ಕನ್) ಎಂದು ಕರೆಯುವ 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೋಡೀಸೆಲ್ ಅನ್ನು ಎಂಹಾಕ್ (mHawk) ಎಂದು ಕರೆಯಲಾಗುತ್ತದೆ. ಎರಡೂ ಎಂಜಿನ್ಗಳು 6 ಸ್ಪೀಡ್ ಮ್ಯಾನುವಲ್ ಮತ್ತು ಟಾರ್ಕ್ ಪರಿವರ್ತಕ ಸ್ವಯಂಚಾಲಿತ ಗೇರ್ಬಾಕ್ಸ್ ಆಯ್ಕೆಗಳನ್ನು ಹೊಂದಿದೆ. ಡೀಸೆಲ್ ಟ್ರಿಮ್ಗಳಲ್ಲಿ ಮಾತ್ರ ಆಲ್ ವೀಲ್ ಡ್ರೈವ್ ಆಯ್ಕೆಗಳಿವೆ.