ಹೊಚ್ಚ ಹೊಸ ಮಹೀಂದ್ರ ಸ್ಕಾರ್ಪಿಯೋ ಕಾರಿನ ಬುಕಿಂಗ್ ನಾಳೆಯಿಂದ(ಜು.30) ಆರಂಭಗೊಳ್ಳುತ್ತಿದೆ. ಸೆಪ್ಟೆಂಬರ್ 26 ರಿಂದ ಬುಕ್ ಮಾಡಿದ ಗ್ರಾಹಕರಿಗೆ ಕಾರು ಡೆಲಿವರಿ ಆರಂಭಗೊಳ್ಳಲಿದೆ. ನೂತನ ಸ್ಕಾರ್ಪಿಯೋ ಕುರಿತ ವಿವರ ಇಲ್ಲಿವೆ.
ಬೆಂಗಳೂರು(ಜು.29): ಭಾರತದ ಮಾರುಕಟ್ಟೆಯಲ್ಲಿ ಸರಿಸುಮಾರು 20 ವರ್ಷಗಳ ಕಾಲ ಸಾಮ್ರಾಟನಾಗಿ ಮೆರೆದ ಮಹೀಂದ್ರ ಸ್ಕಾರ್ಪಿಯೋ ಇದೀಗ ಹೊಸ ರೂಪ, ಹೊಸ ವಿನ್ಯಾಸ ಸೇರಿದಂತೆ ಹಲವು ಹೊಸತನಗಳೊಂದೆ ಕಾರು ಬಿಡುಗಡೆಯಾಗಿದೆ. ನೂತನ ಸ್ಕಾರ್ಪಿಯೋದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ನೂತನ ಮಹೀಂದ್ರ ಸ್ಕಾರ್ಪಿಯೋ ಕಾರಿನ ಬುಕಿಂಗ್ ಜುಲೈ 30 ರಿಂದ ಆರಂಭಗೊಳ್ಳುತ್ತಿದೆ. ಹೊಚ್ಚ ಹೊಸ ಸ್ಕಾರ್ಪಿಯೋ ಬುಕಿಂಗ್ ಮಾಡಲು ಕೇವಲ 21,000 ರೂಪಾಯಿ ಪಾವತಿಸಿದರೆ ಸಾಕು. ಇನ್ನು ನೂತನ ಕಾರು ಸೆಪ್ಟೆಂಬರ್ 26 ರಿಂದ ಬುಕ್ ಮಾಡಿದ ಗ್ರಾಹಕರ ಕೈಸೇರಲಿದೆ. ನೂತನ ವಾಹನ ಸ್ಕಾರ್ಪಿಯೋ ಎನ್ ಕಾರು ಎರಡು ಪ್ರಮುಖ ಆಯ್ಕೆಗಳಲ್ಲಿ ಲಭ್ಯವಿದೆ. ಒಂದು ಆಲ್ ವ್ಹೀಲ್ ಡ್ರೈವಿಂಗ್ ಹಾಗೂ ಆಟೋಮ್ಯಾಟಿಕ್ ಆಯ್ಕೆಗಳು ಲಭ್ಯವಿದೆ. ನೂತನ ಮಹೀಂದ್ರ ಸ್ಕಾರ್ಪಿಯೋ ಎನ್ ಕಾರಿನ ಬೆಲೆ 11.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ. ಟಾಪ್ ಎಂಡ್ ಕಾರಿನ ಬೆಲೆ 21.45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಜುಲೈ 30ರಂದು ಬೆಳಗ್ಗೆ 11 ಗಂಟೆಯಿಂದ ಬುಕಿಂಗ್ ಆರಂಭಗೊಳ್ಳಲಿದೆ. ಈಗಾಗಲೇ ಹೊಸ ಸ್ಕಾರ್ಪಿಯೋ ಕುರಿತು ಗ್ರಾಹಕರು ವಿಚಾರಣೆ ಹೆಚ್ಚಾಗಿದೆ. ಮೊದಲ ದಿನದಲ್ಲೇ ದಾಖಲೆಯ ಬುಕಿಂಗ್ ಆಗುವ ಸಾಧ್ಯತೆ ಇದೆ. ಮಹೀಂದ್ರ ಸ್ಕಾರ್ಪಿಯೋ ಕಾರಿನ ವೇರಿಯೆಂಟ್ ಹಾಗೂ ಬೆಲೆ ಮಾಹಿತಿ ಇಲ್ಲಿದೆ.
undefined
ಕೈಯಲ್ಲಿ ದುಡ್ಡಿದ್ರು Mahindra XUV 700 ಖರೀದಿ ಮಾಡೋಕಾಗಲ್ಲ: ಯಾಕೆ?
ಮಹೀಂದ್ರ ಸ್ಕಾರ್ಪಿಯೋ N ಕಾರಿನ Z2 ವೇರಿಯೆಂಟ್
ಪೆಟ್ರೋಲ್ - ರೂ 11.99 ಲಕ್ಷ (MT)(ಎಕ್ಸ್ ಶೋ ರೂಂ)
ಡೀಸೆಲ್ - ರೂ 12.49 ಲಕ್ಷ (MT)(ಎಕ್ಸ್ ಶೋ ರೂಂ)
ಮಹೀಂದ್ರ ಸ್ಕಾರ್ಪಿಯೋ N Z4 ವೇರಿಯೆಂಟ್
ಪೆಟ್ರೋಲ್ – Rs 13.49 ಲಕ್ಷ (MT) / Rs 15.45 ಲಕ್ಷ (AT)
ಡೀಸೆಲ್ - ರೂ 13.99 ಲಕ್ಷ (ಎಂಟಿ) / ರೂ 15.95 ಲಕ್ಷ (ಎಟಿ)(ಎಕ್ಸ್ ಶೋ ರೂಂ)
ಮಹೀಂದ್ರ ಸ್ಕಾರ್ಪಿಯೋ N Z6 ವೇರಿಯೆಂಟ್
ಡೀಸೆಲ್ - ರೂ 14.99 ಲಕ್ಷ (ಎಂಟಿ) / ರೂ 16.95 ಲಕ್ಷ (ಎಟಿ)(ಎಕ್ಸ್ ಶೋ ರೂಂ)
ಮಹೀಂದ್ರ ಸ್ಕಾರ್ಪಿಯೋ N Z8 ವೇರಿಯೆಂಟ್
ಪೆಟ್ರೋಲ್ - ರೂ 16.99 ಲಕ್ಷ (MT) / ರೂ 18.95 ಲಕ್ಷ (AT)(ಎಕ್ಸ್ ಶೋ ರೂಂ)
ಡೀಸೆಲ್ - ರೂ 17.49 ಲಕ್ಷ (ಎಂಟಿ) / ರೂ 19.45 ಲಕ್ಷ (ಎಟಿ)(ಎಕ್ಸ್ ಶೋ ರೂಂ)
ಆಗಸ್ಟ್ ತಿಂಗಳಲ್ಲಿ ಸಾಲು ಸಾಲು ಹೊಸ ಕಾರುಗಳ ಬಿಡುಗಡೆ
ಮಹೀಂದ್ರ ಸ್ಕಾರ್ಪಿಯೋ N Z8L ವೇರಿಯೆಂಟ್
ಪೆಟ್ರೋಲ್ - ರೂ 18.99 ಲಕ್ಷ (MT) / ರೂ 20.95 ಲಕ್ಷ (AT)(ಎಕ್ಸ್ ಶೋ ರೂಂ)
ಡೀಸೆಲ್ - ರೂ 19.49 ಲಕ್ಷ (ಎಂಟಿ) / ರೂ 21.45 ಲಕ್ಷ (ಎಟಿ)(ಎಕ್ಸ್ ಶೋ ರೂಂ)
ಮಹೀಂದ್ರ ಸ್ಕಾರ್ಪಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಮಾಸಿಕ ಕಂತಿನಲ್ಲಿ ಸಾಲ ನೀಡಲು ಹಲವು ಬ್ಯಾಂಕ್ ಜೊತೆ ಒಪ್ಪಂದ ಮಾಡಿದೆ. ಕಾರಣ ಮಹೀಂದ್ರ ಸ್ಕಾರ್ಪಿಯೋ ಗ್ರಾಹಕರು ಸಾಲದ ಅವಧಿಯನ್ನು ಗರಿಷ್ಠ 10 ವರ್ಷಕ್ಕೆ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಗ್ರಾಹಕರ ಪ್ರತಿ ತಿಂಗಳ ಕಂತು ಅತ್ಯಂತ ಕಡಿಮೆಯಾಗಿಲಿದೆ.
ಮಹೀಂದ್ರ ಸ್ಕಾರ್ಪಿಯೋ ಕಾರಿಗೆ ಹೊಸ ಲೋಗೋ ಮತ್ತಷ್ಟು ಅಂದ ನೀಡುತ್ತಿದೆ. ಹೊಸ ಲೋಗೋವು ಇಂಗ್ಲಿಷ್‌ನ ‘ಎಂ’ (ಮಹೀಂದ್ರಾ) ಅಕ್ಷರವನ್ನು ಹೋಲುವಂತಿದೆ. ಹಾಲಿ ಇರುವ ಲೋಗೋವನ್ನು 2000ನೇ ಇಸವಿಯಲ್ಲಿ ಪರಿಚಯಿಸಲಾಗಿತ್ತು. ಸ್ಕಾರ್ಪಿಯೋ ವಾಹನದಲ್ಲಿ 2002ರಲ್ಲಿ ಮೊದಲ ಬಾರಿಗೆ ಲೋಗೋ ಕಾಣಿಸಿಕೊಂಡಿತ್ತು. ಮುಂಬರುವ ದಿನಗಳಲ್ಲಿ ವಾಣಿಜ್ಯ ಮತ್ತು ಕೃಷಿ ಸಂಬಂಧಿ ವಾಹನಗಳಲ್ಲೂ ಲೋಗೋ ಕಾಣಿಸಲಿದೆ.