Mahindra Thar ಕಾರು ಡೆಲಿವರಿ ವೇಳೆ ಗ್ರಾಹಕನ ಎಡವಟ್ಟು, ಶೋ ರೂಂ ಗಾಜು ಪುಡಿ ಪುಡಿ, ಅತೀ ದೊಡ್ಡ ದುರಂತದಿಂದ ಪಾರು!

By Suvarna News  |  First Published Jan 20, 2022, 4:14 PM IST
  • ಶೋರೂಂನಲ್ಲಿ ನಿಲ್ಲಿಸಿದ್ದ ಮಹೀಂದ್ರ ಥಾರ್ ಕಾರು ಅಪಘಾತ
  • ಶೋ ರೂಂ ಒಳಗೆ ಕಾರು ಡ್ರೈವ್ ಮಾಡಿದ ಗ್ರಾಹಕ
  • ಶೋ ರೂಂ ಗಾಜು ಪುಡಿ ಪುಡಿ, ಬೆಂಗಳೂರಿನಲ್ಲಿ ನಡೆದ ಘಟನೆ
     

ಬೆಂಗಳೂರು(ಜ.20):  ವಾಹನ ಡೆಲಿವರಿ ವೇಳೆ ಹಲವು ಅಪಘಾತಗಳು, ದುರಂತಗಳು ನಡೆದಿದೆ. ಹೊಚ್ಚ ಹೊಸ ಕಾರು(cars) ನಜ್ಜುಗುಜ್ಜಾದ ಹಲವು ಘಟನೆಗಳು ವರದಿಯಾಗಿದೆ. ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಇದು ಬೆಂಗಳೂರಿನ(Bengaluru) ಮಹೀಂದ್ರ ಶೋ ರೂಂನಲ್ಲಿ(Mahindra Show Room) ನಡೆದ ಘಟನೆ. ಶೋ ರೂಂ ಒಳಗ ನಿಲ್ಲಿಸಿದ್ದ ಮಹೀಂದ್ರ ಥಾರ್(Mahindra Thar) ವಾಹನವನ್ನು ಗ್ರಾಹಕನೋರ್ವ ಡ್ರೈವ್ ಮಾಡಿದ ಕಾರಣ ಕಾರು ನೇರವಾಗಿ ಶೋ ರೂಂ ಪುಡಿ ಪುಡಿಯಾಗಿದೆ.  ಶೋ ರೂಂನಿಂದ ಕೆಳಕ್ಕೆ ಉರುಳುಬೀಳುವ ಅಪಾಯದಿಂದ ಪಾರಾಗಿದೆ. 

ಮಹೀಂದ್ರ ಥಾರ್ ಕಾರು ಬುಕ್ ಮಾಡಿದ ಗ್ರಾಹಕ(Customer) ಶೋ ರೂಂನಲ್ಲಿ ನಿಲ್ಲಿಸಿದ್ದ ಥಾರ್ ವಾಹನವನ್ನು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಕಾರನ್ನು ಸ್ಟಾರ್ಟ್ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ಪರ್ವಾಗಿರ್ಲಿಲ್ಲ. ಗ್ರಾಹಕ ಎಕ್ಸಲೇಟರ್ ಕೊಂಚ ರೈಸ್ ಮಾಡಿದ್ದಾರೆ.  ಅಚಾನಕ್ ಆಗಿ ಕಾರು ನೇರವಾಗಿ ರಸ್ತೆಯಲ್ಲಿ ಸಂರಿಸುವ ರೀತಿಯಲ್ಲಿ ಮುಂದೆ ಸಾಗಿದೆ.

Tap to resize

Latest Videos

undefined

ನೂತನ ಬೈಕ್ ಪಡೆದ ಸಂಭ್ರಮ, ಸವಾರನ ಸಾಹಸಕ್ಕೆ ಶೋ ರೂಂ ಮೆಟ್ಟಿಲು ಕಿತ್ತು ಬಂತು!

ಮಹೀಂದ್ರ ಶೋ ರೂಂ ನೆಲದಿಂದ ಎತರಲ್ಲಿತ್ತು. ಇತ್ತ ಗ್ರಾಹಕರ ಅಚಾತುರ್ಯದಿಂದ ಕಾರು ನೇರವಾಗಿ ಮುಂದೆ ಸಾಗಿದೆ. ಶೋ ರೂಂ ಗಾಜಿಗೆ ಡಿಕ್ಕೆ ಹೊಡೆದಿದೆ(Accident). ಶೋ ರೂಂ ಗಾಜು ಸಂಪೂರ್ಣ ಪುಡಿ ಪುಡಿಯಾಗಿದೆ. ಇತ್ತ ಕಾರಿನ ಮುಂಭಾಗದ ಚಕ್ರಗಳು ಶೋ ರೂಂ ಮಹಡಿಯಿಂದ ಹೊರಬಂದಿದೆ. ಆದರೆ ಫ್ಲೋರ್‌ಮೇಲೆ ಥಾರ್‌ಗೆ ಡಿಕ್ಕಿಯಾಗಿ ನಿಂತಿದೆ. ಇದರ ಪರಿಣಾಮ ಕಾರು ಮೇಲಿನಿಂದ ಕೆಳಕ್ಕೆ ಉರುಳಿ ಆಗಬಹುದಾದ ದೊಡ್ಡ ದುರಂತದಿಂದ ಪಾರಾಗಿದ್ದಾರೆ.

ಈ ಅಪಘಾತಕ್ಕೆ ಕಾರಣವೇನು? ಹೇಗೆ ನಡೆದಿದೆ ಅನ್ನೋ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಹಿಂದಿನ ಹಲವು ಘಟನೆಗಳಲ್ಲಿ ಗ್ರಹಾಕರು ಆಟೋಮ್ಯಾಟಿಕ್ ಕಾರು ಪರಿಶೀಲನೆ ವೇಳೆ ನಡೆದಿದೆ. ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರಿನ ರೀತಿಯಲ್ಲಿ ಎಕ್ಸ್‌ರೇಟರ್, ಬ್ರೇಕ್ ನಡುವೆ ಗೊಂದಲ ಸೃಷ್ಟಿಯಾಗಿ ಅಪಘಾತ ಘಟನೆಗಳು ನಡೆದಿದೆ. ಮಹೀಂದ್ರ ಥಾರ್ ಘಟನೆಯೂ ಇದೇ ರೀತಿ ಆಗಿರುವ ಸಾಧ್ಯತೆ ಇದೆ.

ಆಟೋಮ್ಯಾಟಿಕ್ ಥಾರ್ ಪರಿಶೀಲನೆ ವೇಳೆ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು ಎಂದು ಗೊಂದಲಕ್ಕೀಡಾಗಿರುವ ಸಾಧ್ಯತೆ ಇದೆ. ಪರಿಣಾಮ ಸ್ಟಾರ್ಟ್ ಮಾಡಿದ ಕಾರು ಡ್ರೈವ್ ಮೊಡ್‌ಗೆ ತಿರುಗಿದೆ. ಇತ್ತ ಎಕ್ಸಲೇಟರ್ ಹಾಗೂ ಬ್ರೈಕ್ ಗೊಂದಲ ಕೂಡ ಸೃಷ್ಟಿಯಾಗಿದೆ. ಇನ್ನು ಕಾರನ್ನು ನಿಯಂತ್ರಣಕ್ಕೆ ತರಲು ಹೆಚ್ಚಿನ ಸಮಯಾವಕಾಶ ಇರಲಿಲ್ಲ. ಶೋ ರೂಂ ನಲ್ಲಿ ಘಟನೆ ನಡೆದಿರುವ ಕಾರಣ ಕ್ಷಣಮಾತ್ರದಲ್ಲಿ ಎಲ್ಲವೂ ನಡೆದುಹೋಗಿದೆ. 

ಹೊಸ ಕಾರಿನ ಕೀ ಪಡೆದ ಮರುಕ್ಷಣದಲ್ಲೇ ಶೋ ರೂಂ ಗೋಡೆಗೆ ಡಿಕ್ಕಿ, ಮಾಲೀಕನ ಕನಸು ಪುಡಿ ಪುಡಿ!

ಈ ಅಪಘಾತದಿಂದ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೋ ಶೋ ರೂಂ ಹಾಗೂ ಮಹೀಂದ್ರ ಥಾರ್ ವಾಹನ ಡ್ಯಾಮೇಜ್ ಆಗಿದೆ. ಶೋ ರೂಂನ ಮುಂಭಾಗದಲ್ಲಿನ ಗಾಜು,ಮಹಡಿಯ  ನೆಲ ಹಾನಿಯಾಗಿದೆ. ಇತ್ತ ಮಹೀಂದ್ಲ ಖಾರಿನ ಮುಂಭಾಗದ ಗ್ರಿಲ್, ಕೆಳಭಾಗದಲ್ಲಿನ ಭಾಗಗಳು ಡಿಕ್ಕಿಯಿಂದ ಹಾನಿಗೊಳಗಾಗಿದೆ

ಇದೇ ರೀತಿ ಹಲವು ಘಟನೆಗಳು ನಡೆದಿದೆ. ಆಟೋಮ್ಯಾಟಿಕ್ ಕಾರು ಪರಿಶೀಲನೆ ವೇಳೆ ಮಹಿಳಾ ಗ್ರಾಹಕರೊಬ್ಬರು ಕಾರನ್ನು ಮೇಲಿನಿಂದ ಕೆಳಕ್ಕೆ ಹಾರಿಸಿದ್ದರು. ಶೋ ರೂಂ ಗಾಜು ಒಡೆದು ಮುನ್ನಗ್ಗಿದ ಕಾರು ಕೆಳಕ್ಕೆ ಹಾರಿತ್ತು. ಇನ್ನು ಕೆಳಭಾಗದಲ್ಲಿ ನಿಲ್ಲಿಸಿದ್ದ ಹಲವು ಹೊಸ ಕಾರುಗಳಿಗೆ ಡಿಕ್ಕಿಯಾಗಿತ್ತು.

ಇನ್ನು ಹೊಸ ಕಿಯಾ ಕಾರ್ನಿವಲ್ ಕಾರನ್ನು ಡಿಲವರಿ ವೇಳೆ ಗ್ರಾಹಕ ನೇರವಾಗಿ ಶೋ ರೂಂ ಕೌಂಪೌಂಡ್‌ಗೆ ಗುದ್ದಿದ ಘಟನೆ ನಡೆದಿತ್ತು. ಟಾಟಾ ಟಿಯಾಗೋ ಖರೀದಿಸಲು ಬಂದ ಗ್ರಾಹಕ ಮೊದಲ ಮಹಡಿಯಿಂದ ಕಾರು ಹಾರಿಸಿದ್ದರು. ಈ ರೀತಿ ಹಲವು ಘಟನೆಗಳು ನಡೆದಿದೆ.

click me!