ಈಜುಕೊಳ ಹೆಲಿಪ್ಯಾಡ್ ಇರೋ ವಿಶ್ವದ ಅತ್ಯಂತ ಉದ್ದದ ಕಾರು

Suvarna News   | Asianet News
Published : Mar 12, 2022, 04:53 PM IST
ಈಜುಕೊಳ ಹೆಲಿಪ್ಯಾಡ್ ಇರೋ ವಿಶ್ವದ ಅತ್ಯಂತ ಉದ್ದದ ಕಾರು

ಸಾರಾಂಶ

ಹೆಲಿಪ್ಯಾಡ್ ಈಜುಕೊಳ ಹೊಂದಿರುವ ವಿಶ್ವದ ಅತ್ಯಂತ ಉದ್ದದ ಕಾರು 100 ಅಡಿ ಉದ್ದದ ಕಾರು ಹೇಗಿದೆ ಗೊತ್ತಾ.. 36 ವರ್ಷಗಳ ನಂತರ ಬಂದ ದಿ ಅಮೆರಿಕನ್ ಡ್ರೀಮ್

ನ್ಯೂಯಾರ್ಕ್‌(ಮಾ.12):ಸಾಮಾನ್ಯವಾಗಿ ನಾಲ್ಕು ಜನ ಅದಕ್ಕಿಂತ ಹೆಚ್ಚೆಂದರೆ ಆರು ಅಥವಾ ಎಂಟು ಜನ ಕೂರುವ ಕಾರನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ಕಡೆ ವಿಶ್ವದ ಅತೀ ಉದ್ದದ ಕಾರೊಂದು ನಿರ್ಮಾಣವಾಗಿದ್ದು, ಇದು ಈಜುಕೊಳ ಹಾಗೂ ಹೆಲಿಪ್ಯಾಡ್‌ನ್ನು ಕೂಡ ಒಳಗೊಂಡಿದೆ. 

36 ವರ್ಷಗಳ ನಂತರ, 'ದಿ ಅಮೆರಿಕನ್ ಡ್ರೀಮ್' (The American Dream) ಎಂಬ ಹೆಸರಿನ ವಿಶ್ವದ ಅತಿ ಉದ್ದದ ಕಾರನ್ನು ಅದರ ಹಿಂದಿನ ವೈಭವಕ್ಕೆ ಪುನಃಸ್ಥಾಪಿಸಲಾಗಿದೆ. ಸಂಪೂರ್ಣವಾಗಿ ರಿಪೇರಿ ಮಾಡುವುದರ ಜೊತೆಗೆ, ಇದು ತನ್ನ ಹಿಂದಿನ ವಿಶ್ವ ದಾಖಲೆಯನ್ನು ಮುರಿದು ಮಾರ್ಚ್ 1, 2022 ರಂದು ವಿಶ್ವದ ಅತಿ ಉದ್ದದ ಕಾರಾಗಿದೆ. ಇದನ್ನು ಮೊದಲ ಬಾರಿಗೆ 1986 ರಲ್ಲಿ ಪ್ರಸಿದ್ಧ ಕಾರ್ ಬಿಲ್ಡರ್ ಜೇ ಓರ್ಬರ್ಗ್ (Jay Ohrberg) ನಿರ್ಮಿಸಿದ್ದರು 'ದಿ ಅಮೆರಿಕನ್ ಡ್ರೀಮ್' ಕಾರಿನಲ್ಲಿ ಕೆಲವು ಬದಲಾವಣೆ ಮಾಡಿದ ನಂತರ ಇದು 100 ಅಡಿಗಳನ್ನು ಉದ್ದವಾಗಿದೆ. 2022ರಲ್ಲಿ ಈ ಲೆಜೆಂಡರಿ ಕಾರು 1.5 ಇಂಚುಗಳಷ್ಟು ಹೆಚ್ಚು ಉದ್ದದೊಂದಿಗೆ ಬಂದಿದೆ. ಒಂದು ಸಾಮಾನ್ಯ ಕಾರು ಸರಾಸರಿ  12 ರಿಂದ 16 ಅಡಿ ಉದ್ದವಿರುತ್ತದೆ.

ಈ ಅಮೆರಿಕನ್ ಡ್ರೀಮ್ ಕಾರಿನಲ್ಲಿ ಐಷಾರಾಮಿ ಸೌಕರ್ಯಗಳಾದ ಜಕುಝಿ (jacuzzi), ಬಾತ್‌ಟಬ್, ವಾಟರ್‌ಬೆಡ್, ಮಿನಿ-ಗಾಲ್ಫ್ ಕೋರ್ಸ್, ಹಲವಾರು ಟೆಲಿವಿಷನ್‌ಗಳು ಮತ್ತು ಐದು ಸಾವಿರ ಪೌಂಡ್‌ಗಳಷ್ಟು ತೂಕವನ್ನು ಹೊಂದಿರುವ ಹೆಲಿಪ್ಯಾಡ್‌ ಇದೆ ಆದಾಗ್ಯೂ, ಅದರ ಅತೀಯಾದ ಉದ್ದದಿಂದ ಇದನ್ನು ರಸ್ತೆಗಳಲ್ಲಿ ನಿಲುಗಡೆ ಮಾಡಲು ಅಥವಾ ಓಡಿಸಲು ಕಷ್ಟವಾಗುತ್ತದೆ.

Used Cars ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿ ಬೆಂಗಳೂರು ಮಹಿಳೆಯರೇ ನಂಬರ್ 1

ಅದರ  ಹೊಸತನದ ಹೊರತಾಗಿಯೂ, ಈ ಕಾರನ್ನು ಒಮ್ಮೆ ಗೋದಾಮಿನಲ್ಲೇ ಬಿಡಲ್ಪಟ್ಟಿತ್ತು. ಅದೃಷ್ಟವಶಾತ್, ಆಟೋ ವಾಹನಗಳ ಬಗ್ಗೆ ಆಸಕ್ತರಾಗಿರುವ ಮೈಕೆಲ್ ಮ್ಯಾನಿಂಗ್ (Michael Manning ) ಕಾರನ್ನು ಇಬೇ ಪಟ್ಟಿಯಲ್ಲಿ ನೋಡಿದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವರದಿ ಮಾಡಿದಂತೆ, ಮ್ಯಾನಿಂಗ್ ಅದನ್ನು ಖರೀದಿಸಲು ಶಕ್ತರಾಗಿರಲಿಲ್ಲ ಆದರೆ ಆಟೋಸಿಯಮ್ (Autoseum) ಎಂಬ ಹೆಸರಿನ ತನ್ನ ಆಟೋಮೋಟಿವ್ ಟೀಚಿಂಗ್ ಮ್ಯೂಸಿಯಂನಲ್ಲಿ ಮರುಸ್ಥಾಪಿಸಲು ನ್ಯೂಯಾರ್ಕ್‌ಗೆ ತರುವಂತೆ ಕಾರನ್ನು ಮಾರಾಟ ಮಾಡುತ್ತಿದ್ದ ಕಾರ್ಪೊರೇಷನ್‌ಗೆ ಮನವರಿಕೆ ಮಾಡಿದರು.

 

ಮರುಸ್ಥಾಪನೆ ಯೋಜನೆಗಾಗಿ ಸಮುದಾಯದ ದೇಣಿಗೆ ಪಡೆಯಲು ಮ್ಯಾನಿಂಗ್ ಯೋಜಿಸಿದ್ದರು. ಆದರೆ ಸಾಕಷ್ಟು ಹಣವನ್ನು ಸಂಗ್ರಹಿಸಲು ವಿಫಲರಾದರು. ನಂತರ 2019ರಲ್ಲಿ, ಡೆಜರ್ಲ್ಯಾಂಡ್ ಪಾರ್ಕ್ ಕಾರ್ ಮ್ಯೂಸಿಯಂನ (Dezerland Park Car Museum)ಮಾಲೀಕ ಮೈಕೆಲ್ ಡೆಜರ್ ( Michael Dezer) ಅವರು ಕಾರಿನ ಬಗ್ಗೆ ತಿಳಿದುಕೊಂಡು ಅದನ್ನು ತಂದರು.

MG Electric Car ಭಾರತದಲ್ಲಿ ಕಡಿಮೆ ಬೆಲೆಯ, ಸಣ್ಣ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಎಂಜಿ ತಯಾರಿ!
ನಂತರ ಮ್ಯಾನಿಂಗ್ ಜೊತೆಗೆ ಸೇರಿ ಅವರು 2,50,000 ಡಾಲರ್ (ಸುಮಾರು 1.9 ಕೋಟಿ) ವೆಚ್ಚದ ಕಾರಿನ ದೀರ್ಘ ಮರುಸ್ಥಾಪನೆ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಈಗ ಕಾರನ್ನು ಅಮೆರಿಕದ (USA) ಫ್ಲೋರಿಡಾದಲ್ಲಿರುವ (Florida) ಡೆಜರ್‌ಲ್ಯಾಂಡ್ ಪಾರ್ಕ್ ಕಾರ್ ಮ್ಯೂಸಿಯಂನಲ್ಲಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
 

PREV
Read more Articles on
click me!

Recommended Stories

ಎರ್ಟಿಗಾ ಸೇರಿ 7 ಸೀಟರ್ ಕಾರಿಗೆ ಠಕ್ಕರ್, ಬರುತ್ತಿದೆ ಮೇಡ್ ಇನ್ ಇಂಡಿಯಾ ನಿಸ್ಸಾನ್ ಗ್ರಾವೈಟ್ ಕಾರು
ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!