Kia Electric Car ಆಕರ್ಷಕ ವಿನ್ಯಾಸ, 441 ಕಿ.ಮೀ ಮೈಲೇಜ್, ಭಾರತಕ್ಕೆ ಬರುತ್ತಿದೆ ಕಿಯಾ EV6 ಎಲೆಕ್ಟ್ರಿಕ್ ಕಾರು!

By Suvarna News  |  First Published Feb 26, 2022, 9:19 PM IST
  • ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗ ಕಿಯಾ
  • ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ರೇಂಜ್ ಕಾರು
  • 5 ಟ್ರಿಮ್ ವೇರಿಯೆಂಟ್‌ನಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ
     

ಅನಂತಪುರಂ(ಫೆ.26): ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ(Electric Cars) ಬೇಡಿಕೆ ಹೆಚ್ಚಾಗುತ್ತಿದೆ. ಟಾಟಾ ಮೋಟಾರ್ಸ್(Tata Motors) ಕೈಗೆಟುಕುವ ದರದ ಕಾರುಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯನ್ನು(Electric Car Market) ಆಕ್ರಮಿಸಿಕೊಂಡಿದೆ.ಇದೀಗ ಕಿಯಾ ಮೋಟಾರ್ಸ್(Kia) ಭಾರತದಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಅತ್ಯಾಕರ್ಷಕ ವಿನ್ಯಾಸ ಹಾಗೂ ಗರಿಷ್ಠ ಮೈಲೇಜ್ ರೇಂಜ್ ಹೊಂದಿದ ಎಲೆಕ್ಟ್ರಿಕ್ ಕಾರು(Kia Electric Car EV6) ಬಿಡುಗಡೆ ಮಾಡಲು ಸಜ್ಜಾಗಿದೆ.

ಕಿಯಾ EV6, EV6 ಅರ್ಥ್, EV6 ವಾಟರ್, EV6 ಏರ್ ಹಾಗೂ EV6 ಲೈಟ್ ಎಂಬು 5 ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ.ಈ ಎಲೆಕ್ಟ್ರಿಕ್ ಕಾರು ಸೌಥ್ ಕೊರಿಯಾ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದೀಗ ಇದೇ ಕಾರನ್ನು ಭಾರತದ ರಸ್ತೆಗಳಿಗೆ ಅನುಗುಣವಾಗಿ ಬಿಡುಗಡೆ ಮಾಡಲು ಕಿಯಾ ಮುಂದಾಗಿದೆ.

Tap to resize

Latest Videos

Kia Carens Car ದಾಖಲೆ ಬರೆದ ಕಿಯಾ ಕರೆನ್ಸ್, ಒಂದೇ ದಿನ 40 MPV ಕಾರು ವಿತರಣೆ!

ಕಿಯಾ ನೂತನ ಎಲೆಕ್ಟ್ರಿಕ್ ಕಾರಿನಲ್ಲಿ 3 ಎಲೆಕ್ಟ್ರಿಕ್ ಮೋಟಾರ್ ವೇರಿಯೆಂಟ್ ಲಭ್ಯವಿದೆ. 58KwH ಬ್ಯಾಟರಿ ಪ್ಯಾಕ್ ಹೊಂದಿದ ಕಾರು 167 bhp ಹಾಗೂ 349 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ.ಟಾಪ್ ಸ್ಪೀಡ್ 185 ಕಿ.ಮೀ ಪ್ರತಿ ಗಂಟೆಗೆ ಇನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 373 ಕಿ.ಮೀ ಮೈಲೇಜ್ ರೇಂಜ್ ಸಿಗಲಿದೆ ಎಂದು ಕಿಯಾ ಹೇಳಿದೆ.

ಇನ್ನು 77.4 kWh ಬ್ಯಾಟರಿ ಪ್ಯಾಕ್ ಹೊಂದಿದ ಕಾರು 225 bhp ಹಾಗೂ 349 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಕಿಯಾ EV6 AWD ಕಾರಿನಲ್ಲಿ ಡ್ಯುಯೆಲ್ ಮೋಟಾರು ಬಳಸಲಾಗುತ್ತಿದೆ. ಈ ಕಾರು 441 ಕಿ.ಮೀ ಮೈಲೇಜ್ ನೀಡಲಿದೆ.  

Fire Risk: ಖಾಲಿ ಜಾಗದಲ್ಲಿ ವಾಹನ ನಿಲ್ಲಿಸುವಂತೆ ಗ್ರಾಹಕರಿಗೆ ಕಿಯಾ, ಹ್ಯುಂಡೈ ಕರೆ!

ಭಾರತದಲ್ಲಿ ಕಿಯಾ ಮೋಟಾರ್ಸ್ ನಾಲ್ಕು ಕಾರುಗಳನ್ನು ಬಿಡುಗಡೆ ಮಾಡಿದೆ. ಅತೀ ಕಡಿಮೆ ಅವಧಿಯಲ್ಲಿ ಅತ್ಯಂತ ಜನಪ್ರಿಯ ಕಾರಾಗಿ ಹೊರಹೊಮ್ಮಿದೆ. ಸೆಲ್ಟೋಸ್ ಕಾರಿನ ಮೂಲಕ ಭಾರತದಲ್ಲಿ ಪಯಣ ಆರಂಭಿಸಿದ ಕಿಯಾ ಇತ್ತೀಚೆಗೆ ಕಿಯಾ ಕರೆನ್ಸ್ ಕಾರು ಬಿಡುಗಡೆ ಮಾಡಿ ಸೈ ಎನಿಸಿಕೊಂಡಿದೆ.

ಭಾರತದಲ್ಲಿ ಕಿಯಾ ಕರೆನ್ಸ್ ಕಾರು
ಕಿಯಾ ಸೆಲ್ಟೋಸ್‌, ಕಿಯಾ ಸಾನೆಟ್‌ ಮೂಲಕ ಭಾರತದಲ್ಲಿ ಕಾರು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿರುವ ಕಿಯಾ ಕಂಪನಿ ಈಗ ಹೊಸ ಕಾರನ್ನು ಅನಾವರಣ ಮಾಡಿದೆ. 6 ಸೀಟರ್‌ ಅಥವಾ 7 ಸೀಟರ್‌ನ ಈ ಹೊಸ ಕಾರಿನ ಹೆಸರು ಕಿಯಾ ಕರೆನ್ಸ್‌. ಕಿಯಾ ಕರೆನ್ಸ್‌ನ ಫೀಚರ್‌ಗಳು, ಅಂದ ಚಂದ ಇತ್ಯಾದಿಗಳನ್ನೆಲ್ಲಾ ಹೇಳಿರುವ ಕಿಯಾ ಸಂಸ್ಥೆ ಈ ಕಾರಿನ ಬಿಡುಗಡೆ ದಿನಾಂಕ, ಬೆಲೆ ಇತ್ಯಾದಿಗಳನ್ನು ಸಸ್ಪೆನ್ಸ್‌ನಲ್ಲಿ ಇಟ್ಟಿದೆ. 2022ರ ಆದಿಯಲ್ಲೇ ಈ ಕಾರು ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂಬ ಭರವಸೆ ನೀಡಿದೆ.

ನೋಡಲು ಆಕರ್ಷಕವಾಗಿರುವ ಈ ಕಿಯಾ ಕರೆನ್ಸ್‌ನ ಒಳಗೆ ಸ್ಪೇಸ್‌ ಕೂಡ ವಿಶಾಲವಾಗಿದೆ. ಮೂರನೇ ಸಾಲಿನ ಸೀಟಿಗೆ ಹೋಗಬೇಕಾದರೆ ಈ ಕಾರಿನಲ್ಲಿ ಕಷ್ಟವಿಲ್ಲ. ಎರಡನೇ ಸಾಲಿನ ಸೀಟಿನ ಮೇಲೆ ಒಂದು ಬಟನ್‌ ಇದೆ. ಅದನ್ನು ಒತ್ತಿದರೆ ಎರಡನೇ ಸಾಲಿನ ಸೀಟು ತನ್ನಿಂತಾನೇ ಮಡಚಿಕೊಳ್ಳುತ್ತದೆ. ಕಾರಿನ ಟೈರಿನ ಕತೆ ಹೇಗೆ ಎಂದು ತಲೆಕೆಡಿಸಿಕೊಳ್ಳುವ ಅವಶ್ಯಕತೆಯೂ ಕರೆನ್ಸ್‌ ಓಡಿಸುವವರಿಗೆ ಇರುವುದಿಲ್ಲ. ಯಾಕೆಂದರೆ ಕಾರಿನಲ್ಲಿ ಟೈರ್‌ ಪ್ರೆಷರ್‌ ಮಾನಿಟರಿಂಗ್‌ ಸಿಸ್ಟಮ್‌ ಇದೆ. ಕಾರಿನ ರೂಫ್‌ನಲ್ಲಿ ಏಸಿ ವೆಂಟ್‌ ಇರುವುದು ಇಲ್ಲಿನ ವಿಶೇಷ.

ಎಲೆಕ್ಟ್ರಿಕ್‌ ಸನ್‌ರೂಫ್‌, 10.25 ಇಂಚಿನ ಇನ್‌ಫೋಟೇನ್‌ಮೆಂಟ್‌ ಸಿಸ್ಟಮ್‌, ವೈರ್‌ಲೆಸ್‌ ಚಾರ್ಜರ್‌, ಕಿಯಾ ಕನೆಕ್ಟ್ ಎಂಬ ಇಂಟರ್‌ನೆಟ್‌ ತಂತ್ರಜ್ಞಾನ ಈ ಕಾರನ್ನು ಬಳಸುವವರ ಪ್ರಯಾಣವನ್ನು ಹಗುರಗೊಳಿಸುತ್ತದೆ. ಆರು ಏರ್‌ಬ್ಯಾಗುಗಳು, ಹಿಲ್‌ ಸ್ಟಾರ್ಟ್‌ ಅಸಿಸ್ಟ್‌- ಬ್ರೇಕ್‌ ಅಸಿಸ್ಟ್‌ ಇತ್ಯಾದಿ ಅತ್ಯಾಧುನಿಕ ಫೀಚರ್‌ಗಳು ಆರಾಮದಾಯಕ ಡ್ರೈವಿಂಗ್‌ಗೆ ನೆರವಾಗುತ್ತದೆ ಅನ್ನುವುದು ಕಂಪನಿ ಘೋಷಣೆ.

ಈ ಹೊಸ ಕಿಯಾ ಕರೆನ್ಸ್‌ ಅನ್ನು ಕಿಯಾದ ಅಧ್ಯಕ್ಷರಾದ ಹೋ ಸಂಗ್‌ ಸಾಂಗ್‌ ಮತ್ತು ಕಿಯಾ ಇಂಡಿಯಾ ಎಂಡಿ ಟೇ ಜಿನ್‌ ಪಾರ್ಕ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಹೋ ಸಂಗ್‌ ಸಾಂಗ್‌, ಈ ಕಾರು ಫ್ಯಾಮಿಲಿ ಕಾರುಗಳ ವಿಭಾಗದಲ್ಲಿ ಕ್ರಾಂತಿ ಮಾಡಲಿದೆ ಎಂದು ತಿಳಿಸಿದರು.

click me!