Maruti WagonR Launch ಹೊಚ್ಚ ಹೊಸ ಮಾರುತಿ ಸುಜುಕಿ ವ್ಯಾಗನರ್ ಕಾರು ಬಿಡುಗಡೆ, ಕೇವಲ 5.39 ಲಕ್ಷ ರೂ!

Published : Feb 25, 2022, 08:00 PM IST
Maruti WagonR Launch ಹೊಚ್ಚ ಹೊಸ ಮಾರುತಿ ಸುಜುಕಿ ವ್ಯಾಗನರ್ ಕಾರು ಬಿಡುಗಡೆ, ಕೇವಲ 5.39 ಲಕ್ಷ ರೂ!

ಸಾರಾಂಶ

ಭಾರಿ ಬೇಡಿಕೆಯ ಮಾರುತಿ ಸುಜುಕಿ ವ್ಯಾಗನರ್ ಕಾರು ಬಿಡುಗಡೆ ಮಾರುತಿ ಬಲೆನೋ ಬೆನ್ನಲ್ಲೇ ವ್ಯಾಗನರ್ ಕಾರು ಲಾಂಚ್ 5.59 ಲಕ್ಷ ರೂಪಾಯಿ ಆರಂಭಿಕ ಬೆಲೆಯಿಂದ ನೂತನ ಕಾರು ಲಭ್ಯ

ನವದೆಹಲಿ(ಫೆ.25): ಭಾರತದಲ್ಲಿ ಭಾರಿ ಬೇಡಿಕೆಯ ಮಾರುತಿ ವ್ಯಾಗನರ್(Maruti WagonR) ಇದೀಗ ಹೊಸ ಬದಲಾವಣೆಯೊಂದಿಗೆ ಬಿಡುಗಡೆಯಾಗಿದೆ. ಹೆಚ್ಚುವರಿ ಫೀಚರ್ಸ್, ಆಕರ್ಷಕ ವಿನ್ಯಾಸ, ಅಪ್‌ಗ್ರೇಡೆಡ್ ವರ್ಶನ್ ಕಾರು ಇದಾಗಿಗೆ. ನೂತನ ವ್ಯಾಗನರ್  ಕಾರಿನ ಬೆಲೆ 5.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ಆರಂಭಿಕ ಬೆಲೆಯಿಂದ ಟಾಪ್ ಮಾಡೆಲ್ ಬೆಲೆ 7.10 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಲ್ಲಿ ಲಭ್ಯವಿದೆ.

ನೂತನ ವ್ಯಾಗನರ್ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ 1.2 ಲೀಟರ್ ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ.  ಮೊದಲ ವೇರಿಯೆಂಟ್  1.0 ಲೀಟರ್ k ಸಿರೀಸ್, ಡ್ಯುಯೆಲ್ ಜೆಟ್ ಹಾಗೂ ಡ್ಯುಯೆಲ್ VVT ಎಂಜಿನ್ ಹೊಂದಿದೆ. 1.0 ಲೀಟರ್ ಫ್ಯಾಕ್ಟರಿ ಫಿಟ್ಟೆಡ್ S CNG ವೇರಿಯೆಂಟ್ ಕೂಡ ಲಭ್ಯವಿದೆ. CNG ವೇರಿಯೆಂಟ್ ಕಾರಿನ ಬೆಲೆ 6.81 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

Dream Car 83ರ ಹರೆಯದಲ್ಲಿ ಮೊದಲ ಕಾರು ಖರೀದಿಸಿದ ತಾತ, ಹೊಸ ವ್ಯಾಗನರ್ ಮೂಲಕ ಲಾಂಗ್ ಟ್ರಿಪ್ ಪ್ಲಾನ್!

ನೂತನ ವ್ಯಾಗನರ್ ಕಾರು(car) ಹಿಲ್ ಹೋಲ್ಡ್ ಅಸಿಸ್ಟ್ ಫೀಚರ್ಸ್ ಹೊಂದಿದೆ. ಇದರ ಜೊತೆಗೆ 7 ಇಂಚಿನ್ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಹೊಂದಿದೆ. ನ್ಯಾವಿಗೇಶನ್ ಸೌಲಭ್ಯವೂ ಲಭ್ಯವಿದೆ. ಇನ್ನು ಕಾರಿನಲ್ಲಿ 4 ಸೌಂಡ್ ಸ್ಪೀಕರ್ಸ್ ಅಳವಡಿಸಲಾಗಿದೆ. ಇದರ ಜೊತೆಗೆ ಕ್ಲೌಡ್ ಬೇಸ್ ಸರ್ವೀಸ್ ಇರುವುದರಿಂದ ಗ್ರಾಹಕರು ಡ್ರೈವಿಂಗ್ ವೇಳೆ ಕನೆಕ್ಟೆಡ್ ಫೀಚರ್ಸ್ ಅನುಭವ ಪಡೆಯಬಹುದು.

ನೂತನ ವ್ಯಾಗನರ್ ಕಾರು 3655mm ಉದ್ದ, 1620 mm ಅಗಲ, 1675 mm ಎತ್ತರ ಹೊಂದಿದೆ. 2435 mm ವ್ಹೀಲ್ ಬೇಸ್ ಹೊಂದಿದೆ.ಇಂಟಿರೀಯರ್‌ನಲ್ಲಿ ಗ್ರೇ ಸೇರಿದಂತೆ 3 ಬಣ್ಣಗಳನ್ನು ಬಳಸಲಾಗಿದೆ. ಟಾಪ್ ಮಾಡೆಲ್ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ಕ್ರ್ಯೂಸ್ ಕಂಟ್ರೋಲ್ ಹಾಗೂ ಆಟೋ ಗೇರ‌್‌ಶಿಫ್ಟ್ ಆಯ್ಕೆಯೂ ಲಭ್ಯವಿದೆ.

Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

ಮಾರುತಿ ವ್ಯಾಗನರ್ ಕಾರಿನ ಸುರಕ್ಷತೆ
2019ರಲ್ಲಿ ನಡೆಸಿದ ಗ್ಲೋಬಲ್ NCAP ಕ್ರಾಶ್ ಟೆಸ್ಟ್‌ನಲ್ಲಿ  ಮಾರುತಿ ವ್ಯಾಗನರ್ ಕಾರು 2 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ 2 ಸ್ಟಾರ್ ಹಾಗೂ ಮಕ್ಕಳ ಪ್ರಯಾಣದಲ್ಲೂ 2 ಸ್ಟಾರ್ ರೇಟಿಂಗ್ ಪಡೆದುಕೊಂಡಿತ್ತು.

ಮಾರುತಿ ವ್ಯಾಗನರ್ ಕಾರಿನ ಮೈಲೇಜ್
ಹೊಚ್ಚ ಹೊಸ ಮಾರುತಿ ವ್ಯಾಗನರ್ ಕಾರು 25.19 ಕಿಲೋಮೀಟರ್ ಪ್ರತಿ ಲೀಟರ್‌ಗೆ ನೀಡಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ವ್ಯಾಗನರ್ ಕಾರು 21 ಲೀಟರ್ ಮೈಲೇಜ್ ಪ್ರತಿ ಲೀಟರ್ ಪೆಟ್ರೋಲ್‌ಗೆ ನೀಡಲಿದೆ. ದಿನ ಬಳಕೆ, ದೂರ ಪ್ರಯಾಣ ಸೇರಿದಂತೆ ಕುಟುಂಬಕ್ಕೆ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

1999ರಲ್ಲಿ ವ್ಯಾಗನರ್ ಕಾರು ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆಯಾಗಿತ್ತು. ಬಳಿಕ ಹಲವು ಬದಲಾವಣೆ ಮೂಲಕ ವ್ಯಾಗನರ್ ಕಾರು ಬಿಡುಗಡೆಯಾಗಿದೆ. ಭಾರತದಲ್ಲಿ ಮಾರಾಟವಾಗುವ ಟಾಪ್ 5 ಕಾರುಗಳ ಪಟ್ಟಿಯಲ್ಲಿ ವ್ಯಾಗನರ್ ಸದಾ ಸ್ಥಾನ ಪಡೆದುಕೊಂಡಿದೆ.

ಮಾರುತಿ ಸುಜುಕಿ ಒಂದರ ಮೇಲೊಂದರಂತೆ ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಹೊಚ್ಚ ಹೊಸ ಮಾರುತಿ ಬಲೆನೋ ಕಾರು ಬಿಡುಗಡೆ ಮಾಡಿದೆ. ಹೊಸ ರೂಪ, ಹೊಸ ವಿನ್ಯಾಸ ಹಾಗೂ ಹೆಚ್ಚುವರಿ ಫೀಚರ್ಸ್ ನೂತನ ಕಾರಿನಲ್ಲಿ ಸೇರಿಸಲಾಗಿದೆ. 360 ಡಿಗ್ರಿ ಕ್ಯಾಮಾರ ಸೇರಿದಂತೆ ಹಲವು ಫೀಚರ್ಸ್ ಕಾರಿನಲ್ಲಿದೆ.

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ