Kannadathi ರಂಜಿನಿ ರಾಘವನ್ ರೆಕಮಂಡ್ ಮಾಡಿದ ಈ ಕಾರಿನ ಸ್ಪೆಷಾಲಿಟಿ ಏನು?

By Suvarna News  |  First Published Aug 14, 2023, 11:08 AM IST

ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ಇದೀಗ ಸದಾ ಜೊತೆಯಾಗಿ ಹಾಗೂ ಹಿತ ಪ್ರಯಾಣಕ್ಕೆ ಕಾರೊಂದನ್ನು ಸೂಚಿಸಿದ್ದಾರೆ. ಈ ಕಾರು ನನ್ನ ಬದುಕನ್ನು ಮತ್ತಷ್ಟು ಸುಂದರ ಹಾಗೂ ಶ್ರಮರಹಿತ ಮಾಡಿದೆ ಎಂದಿದ್ದಾರೆ. ಹಾಗಾದರೆ ರಂಜನಿ ರಾಘವನ್ ರೆಕಮಂಡ್ ಮಾಡಿದ ಈ ಕಾರು ಯಾವುದು? ಇದರ ಸ್ಪೆಷಾಲಿಟಿ ಏನು? ಬೆಲೆ ಸೇರಿದಂತೆ ಎಲ್ಲಾ ವಿವರ ಇಲ್ಲಿದೆ.


ಬೆಂಗಳೂರು(ಆ.14): ಕಿರುತರೆ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಕನ್ನಡತಿ ಧಾರವಾಹಿ ನಟಿ ರಂಜನಿ ರಾವಘವನ್ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯ. ಇನ್‌ಸ್ಟಾಗ್ರಾಂ ಮೂಲಕ ಹಲವು ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಅಭಿಮಾನಿಗಳ ನೆಚ್ಚಿನ ನಟಿಯಾಗಿರುವ ರಂಜನಿ ಇದೀಗ ಹಿತವಾಗಿ ಹಾಗೂ ಹಾಯಾಗಿ ಪ್ರಯಾಣ ಮಾಡಲು ಕಾರೊಂದನ್ನು ರೆಕಮಂಡ್ ಮಾಡಿದ್ದಾರೆ. ರಂಜನಿ ರಾಘವನ್ ರೆಕಮಂಡ್ ಮಾಡಿದ ಕಾರು ಎಂಜಿ ಮೋಟಾರ್ಸ್ ಕಾಮೆಟ್ ಎಲೆಕ್ಟ್ರಿಕ್ ಕಾರು. ಈ ಕಾರಿನಿಂದ ನನ್ನ ಬದುಕು ಮತ್ತಷ್ಟು ಸುಂದರ ಹಾಗೂ ಸರಳವಾಗಿದೆ ಎಂದು ರಂಜನಿ ರಾಘವನ್ ಹೇಳಿದ್ದಾರೆ.

ಎಂಜಿ ಮೋಟಾರ್ಸ್ ಅವರ ಕಾಮೆಟ್ ಇವಿ ಸಣ್ಣ ಕಾರು. ಅತ್ಯಂತ ಆಕರ್ಷ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಕಾರಾಗಿದೆ. ಇದರ ಬೆಲೆ 7.98 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತದೆ. ಸಣ್ಣ ಕಾರಾದರೂ ಒಂದು ಬಾರಿ ಚಾರ್ಜ್ ಮಾಡಿದರೆ 230 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದೀಗ ನಗರ ಪ್ರದೇಶದಲ್ಲಿ ಕಾಮೆಟ್ ಕಾರಿನ ಬೇಡಿಕೆ ಹೆಚ್ಚಾಗಿದೆ.

Latest Videos

undefined

ರಂಜನಿ ರಾಘವನ್ ನೋಡಿದ್ ತಕ್ಷಣ ನಿಮ್ಗೆ ನೆನಪಾಗೋ 3 ವಿಷ್ಯ ಯಾವ್ದು?

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮಿಷ್ಟದ ಕಾರಿನ ಕುರಿತು ವಿವರಿಸಿದ್ದಾರೆ. ಶೂಟಿಂಗ್, ಪುಸ್ತಕ ಓದುವುದು, ಜಿಮ್, ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಸೇರಿದಂತೆ ಮಲ್ಟಿ ಟಾಸ್ಕಿಂಗ್ ಮಾಡುವುದು ನನಗೆ ಇಷ್ಟ. ಆದರೆ ಸ್ವಲ್ಪ ಕಷ್ಟ ಕೂಡ, ಆದರೆ ಇನ್ನು ಮುಂದೆ ಕಷ್ಟವಿಲ್ಲ. ಕಾರಣ ನನಗೆ ಹೊಸ ಜೊತೆಗಾರ ಸಿಕ್ಕಿದ್ದಾನೆ. ಈ ಜೊತೆಗಾರ ನನ್ನ ಬದುಕನ್ನು ಆಸಕ್ತಿರ ಹಾಗೂ ಶ್ರಮರಹಿತವಾಗಿ ಮಾಡಿದ್ದಾನೆ ಎಂದು ರಂಜನಿ ರಾಘವನ್ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ಹೇಳಿದ್ದಾರೆ.

 

 

ಇದು ಎಂಜಿ ಕಾಮೆಟ್ ನೋ ನಾನ್ಸೆನ್ಸ್ ಕಾರು. ಇದು ಪರಿಸರ ಪೂರಕವಾಗಿರುವ ಎಲೆಕ್ಟ್ರಿಕ್ ಕಾರು. ಇನ್ನು ಅತ್ಯಾಧುನಿಕ ತಂತ್ರಜ್ಞಾನ, ಇಂಟರ್ನೆಟ್ ಇನ್‌ಸೈಡ್ ಹೊಂದಿರುವ ಈ ಕಾರು ವಾಯ್ಸ್ ಅಸಿಸ್ಟ್ ಹೊಂದಿದೆ. ಹೀಗಾಗಿ ನಿಮ್ಮ ಯಾವುದೇ ಪ್ರಶ್ನೆಗೆ ಎಂಜಿ ಕಾಮೆಟ್ ಉತ್ತರ ನೀಡಲಿದೆ. ಇನ್ನು ವಾಯ್ಸ್ ಅಸಿಸ್ಟ್ ಮೂಲಕವೇ ನ್ಯಾವಿಗೇಶನ್ ಸೇರಿದಂತೆ ಇತರ ನೆರವು ನೀಡಲಿದೆ. ಸುಲಭ ಚಾಲನೆ, ನಗರ ಪ್ರದೇಶದಲ್ಲಿ ಕ್ಲಚ್ ತುಳಿದು ಗೇರ್ ಹಾಕಬೇಕಾದ ಅನಿವಾರ್ಯತೆ ಇಲ್ಲ. ಆಟೋಮ್ಯಾಟಿಕ್ ಕಾರಾಗಿರುವ ಕಾರಣ ಅಡೆತಡೆ ಇಲ್ಲದೆ ಪ್ರಯಾಣ ಮಾಡಬಹುದು. ಇನ್ನು ನಗರದಲ್ಲಿನ ಅತೀ ದೊಡ್ಡ ಸಮಸ್ಯೆಯಾಗಿರುವ ಪಾರ್ಕಿಂಗ್‌ಗೂ ಉತ್ತರ ನೀಡಲಿದೆ. ಸುಲಭವಾಗಿ ಪಾರ್ಕ್ ಮಾಡಬಹುದು.

ಇನ್ನು ಕಾರಿನಲ್ಲಿ ಎಸಿ ಆನ್ ಮಾಡಬೇಕು ಎಂದರೆ ಧ್ವನಿ ಮೂಲಕ ಕಮಾಂಡ್ ನೀಡಿದರೆ ಸಾಕು, ಎಸಿ ಆನ್ ಆಗಲಿದೆ. ಇದೇ ಕಾರನ್ನು ರಂಜನಿ ರಾಘವನ್ ಸದಾ ಜೊತೆಯಾಗಿ, ಹಿತವಾಗಿ ಇರುವ ಈ ಕಾರು ನನ್ನ ಜೊತೆಗಾರ ಎಂದು ರಂಜನಿ ರಾಘವನ್ ಹೇಳಿದ್ದಾರೆ.

ಭಾರತದ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರು ಎಂಜಿ ಕೊಮೆಟ್ ಬಿಡುಗಡೆ, 230 ಕಿ.ಮೀ ಮೈಲೇಜ್!

ಎಂಜಿ ಮೋಟಾರ್ಸ್  17.3 KWH ಬ್ಯಾಟರಿ ಪ್ಯಾಕ್ ಮಾಡಿದೆ. ಇನ್ನು ಈ ಕಾರಿನಲ್ಲಿ ಇಕೋ, ಸ್ಪೋರ್ಟ್, ನಾರ್ಮಲ್ ಮೂಡ್‌ಗಳಿವೆ. 41HP ಪವರ್ ಹಾಗೂ 110NM ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 230 ಕಿ.ಮೀ ಮೈಲೇಜ್ ರೇಂಜ್ ಸಿಗಲಿದೆ. ಕಾರಿನ ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ. ಟಚ್ ಸ್ಕ್ರೀನ್, ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಆಟೋ ಕಾರ್ ಪ್ಲೇ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಇನ್ನು ಕಾರಿನೊಳಗೆ ಹೆಚ್ಚಿನ ಸ್ಪೀಸ್ ನೀಡಲಾಗಿದೆ.  

ಕಾಮೆಟ್‌ ಇವಿ ಸ್ಮಾರ್ಟ್‌ ಎಲೆಕ್ಟ್ರಿಕ್‌ ವಾಹನದಲ್ಲಿ ಜಿಯೋ ಡಿಜಿಟಲ್‌ನ ವಾಯ್ಸ್‌ ಅಸಿಸ್ಟೆಂಟ್‌ ಹೊಂದಿದೆ. ಹಿಂದಿ ಮತ್ತು ಇಂಗ್ಲೀಷ್‌ ಧ್ವನಿ ಸಹಾಯಕ ವ್ಯವಸ್ಥೆ ಹೊಂದಿದೆ. ಹೆಲೋ ಜಿಯೋ ಎಂಬ ಈ ವಾಯ್ಸ್‌ ಅಸಿಸ್ಟೆಂಟ್‌ ಭಾರತೀಯ ಪ್ರಾದೇಶಿಕ ಭಾಷೆಗಳನ್ನು ಮಾತನಾಡುವವರ ಉಚ್ಚಾರ, ಧ್ವನಿಯ ಏರಿಳಿತಗಳನ್ನು ಸುಲಭವಾಗಿ ಗ್ರಹಿಸಲಿದೆ. ಕಾರಿನ ಕೀ ಇರುವ ಜಾಗದಲ್ಲಿ ಟ್ಯಾಪ್‌ ಮಾಡುವ ಮೂಲಕ ಈ ವ್ಯವಸ್ಥೆಯ ಉಪಯೋಗ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
 

click me!