ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಪುನೀತ್ ಸೂಪರ್‌ಸ್ಟಾರ್ ಮಾಡಿದ ರೀಲ್ಸ್ ವೈರಲ್!

By Suvarna News  |  First Published Aug 14, 2023, 10:28 AM IST

ಟ್ರಾಫಿಕ್ ಇಲ್ಲದ ರಸ್ತೆ, ಲಾಂಗ್ ರೈಡ್, ಮರ್ಸಿಡೀಸ್ ಬೆಂಜ್ ಐಷಾರಾಮಿ ಕಾರು ಜೊತೆಗೊಂದು ಹಾಡು. ಇಷ್ಟಿದ್ದರೆ ಸಂಭ್ರಮಕ್ಕೆ ಇನ್ನೇನು ಬೇಕು? ಇದೀಗ ಪುನೀತ್ ಸೂಪರ್‌‌ಸ್ಟಾರ್ ತಮ್ಮ ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಮಾಡಿದ ರೀಲ್ಸ್ ಒಂದು ಭಾರಿ ವೈರಲ್ ಆಗಿದೆ.


ಮುಂಬೈ(ಆ.14) ಮರ್ಸಿಡಿಸ್ ಬೆಂಜ್ ಕಾರು, ಲವ್ಲಿ ಹಾಡು, ಲಾಂಗ್ ರೈಡ್. ಇಷ್ಟಿದ್ದರೆ ಸಾಕು, ಅದೆಂತಾ ಒತ್ತಡದ ಮನಸ್ಸೂ ಕೂಡ ಆಹ್ಲಾದಗೊಳ್ಳುತ್ತೆ. ಸಂಭ್ರಮ, ಸಂತಸ ಇಮ್ಮಡಿಯಾಗುತ್ತದೆ. ಇದೀಗ ಪುನೀತ್ ಸೂಪರ್‌ಸ್ಟಾರ್ ಮಾಡಿ ರೀಲ್ಸ್ ಒಂದು ಭಾರಿ ವೈರಲ್ ಆಗಿದೆ. ತಮ್ಮ ಮರ್ಸಿಡಿಸ್ ಬೆಂಜ್ ಕಾರಿನಲ್ಲಿ ಪ್ರಯಾಣ ಮಾಡುತ್ತಾ ರೀಲ್ಸ್ ಮಾಡಿದ್ದಾರೆ. ಹಿಂದಿ ಬಿಗ್‌ಬಾಸ್ ಒಟಿಟಿಯಲ್ಲಿ ಸಂಚಲನ ಮೂಡಿಸಿರುವ ಇನ್‌ಸ್ಟಾಗ್ರಾಂ ಹಾಗೂ ಟಿಕ್‌ಟಾಕ್ ಸ್ಟಾರ್ ಪುನೀತ್ ಸೂಪರ್‌ಸ್ಟಾರ್ ಬಾಲಿವುಡ್ ಜನ್ನತ್ ಚಿತ್ರದ ಜರಾ ಸಿ ದಿಲ್ ಮೇ ಹಾಡಿನ ಜೊತೆ ಮಾಡಿರುವ ಈ ರೀಲ್ಸ್ ಇದೀಗ ಭಾರಿ ವೈರಲ್ ಆಗಿದೆ. 

ಪುನೀತ್ ಸೂಪರ್‌ಸ್ಟಾರ್ ರೀಲ್ಸ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ರೀಲ್ಸ್ ಮೂಲಕವೇ ಆದಾಯವನ್ನೂ ಗಳಿಸುತ್ತಿದ್ದಾರೆ. ವಿಶೇಷ ಅಂದರೆ ಪುನೀತ್ ಸೂಪರ್‌ಸ್ಟಾರ್ ರೀಲ್ಸ್ ಆರಂಭಿಸಿ ಖ್ಯಾತಿ ಗಳಿಸುತ್ತಿದ್ದಂತೆ ಖರೀದಿಸಿದ ಕಾರು ಮಾರುತಿ ಸುಜುಕಿ ಎಸ್‌ಪ್ರೆಸ್ಸೋ. ಈ ಕಾರಿನ ಆರಂಭಿಕ ಬೆಲೆ 4.26 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮಾರುತಿ ಅಲ್ಟೋ ಎಂಜಿನ್, ಅದೇ ಸ್ಥಳವಕಾಶ ಹೊಂದಿರುವ ಕಾರು. ಆದರೆ ಎಸ್‌ಯುವಿ ಮಾದರಿ ಕಾರಾಗಿರುವ ಕಾರಣ ಹೆಡ್‌ರೂಂ ಸ್ಥಳವಕಾಶ ಹೆಚ್ಚಿದೆ. ಜೊತೆಗೆ ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದ ಸಣ್ಣ ಕಾರು. ಇದು ಪುನೀತ್ ಸೂಪರ್‌ಸ್ಟಾರ್ ಮೊದಲ ಕಾರು. 

Tap to resize

Latest Videos

undefined

Khaby Lame ಜೊತೆ ಸೋನು ಸೂದ್ ರೀಲ್ಸ್: 21 ಮಿಲಿಯನ್‌ಗೂ ಹೆಚ್ಚು ಜನರಿಂದ ವೀಕ್ಷಣೆ

ಇನ್‌ಸ್ಟಾಗ್ರಾಂ, ಟಿಕ್‌ಟಾಕ್, ಯೂಟ್ಯೂಬ್ ಮೂಲಕ ಜನಪ್ರಿಯತೆ ಗಳಿಸಿದ ಪುನೀತ್ ಸೂಪರ್‌ಸ್ಟಾರ್ ಬಿಗ್‌ಬಾಸ್ ಆಯೋಜಕರನ್ನು ಮೋಡಿ ಮಾಡಿದ್ದರು. ಹೀಗಾಗಿ ಬಿಗ್‌ಬಾಸ್ ಒಟಿಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. 4.26 ಲಕ್ಷ ರೂಪಾಯಿ ಮಾರುತಿ ಎಸ್‌ಪ್ರೆಸ್ಸೋ ಕಾರಿನಿಂದ ಪುನೀತ್ ಸೂಪರ್‌ಸ್ಟಾರ್ ನೇರವಾಗಿ ಖರೀದಿಸಿದ್ದು 45.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಮರ್ಸಿಡಿಸ್ ಬೆಂಜ್ ಎ ಕ್ಲಾಸ್ 200 ಕಾರು. ಪೊಲಾರ್ ವೈಟ್ ಕಲರಿನ ಇದೇ ಕಾರಿನಲ್ಲಿ ಪುನೀತ್ ಸೂಪರ್‌ಸ್ಟಾರ್ ರೀಲ್ಸ್ ಮಾಡಿ ಇದೀಗ ವೈರಲ್ ಆಗಿದ್ದಾರೆ. ಪುನೀತ್ ಸೂಪರ್‌ಸ್ಟಾರ್ ಬಳಿ ಇರುವ ಬೆಂಜ್ ಎ ಕ್ಲಾಸ್ ಕಾರಿನ ಆನ್ ರೋಡ್ ಬೆಲೆ ಸರಿಸುಮಾರು 53 ಲಕ್ಷ ರೂಪಾಯಿ.

4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಕಾರು ಇದಾಗಿದ್ದು, 160.92bhp ಪವರ್ ಹಾಗೂ  250Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದ್ದು, 66 ಲೀಟರ್ ಇಂದನ ಸಾಮರ್ಥ್ಯ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 230 ಕಿಲೋಮೀಟರ್ ಪ್ರತಿ ಗಂಟೆಗೆ. ಇದೇ ಕಾರಿನಲ್ಲಿ ಪುನೀತ್ ಸೂಪರ್‌ಸ್ಟಾರ್ ಇಮ್ರಾನ ಹಶ್ಮಿಯ ಝರಾ ಸೇ ದಿಲ್ ಮೇ ಬಾಲಿವುಡ್ ಹಾಡಿನ ಮೂಲಕ ರೀಲ್ಸ್ ಮಾಡಿದ್ದಾರೆ.

 

 

ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕವೇ ಭಾರಿ ಜನಪ್ರಿಯವಾಗಿರುವ ಪುನೀತ್ ಸೂಪರ್‌ಸ್ಟಾರ್ ಬಿಗ್‌ಬಾಸ್ ಒಟಿಟಿಯಿಂದ ಹೊರಬಿದ್ದ ಬೆನ್ನಲ್ಲೇ ಪ್ರತಿ ಸ್ಪರ್ಧಿ ಎಂಸಿ ಸ್ಟಾನ್ ವಿರುದ್ದ ಹರಿಹಾಯ್ದಿದ್ದರು. ಬಿಗ್‌ಬಾಸ್ ಒಟಿಟಿಗೆ ಎಂಟ್ರಿಕೊಡುವ ಮೂಲಕ ಭಾರಿ ಸಂಚಲನ ಸೃಷ್ಟಿಸಿದ್ದ ಪುನೀತ್ ಸೂಪರ್‌ಸ್ಟಾರ್ ಅಷ್ಟೇ ವೇಗದಲ್ಲಿ ರಿಯಾಲಿಟಿ ಶೋನಿಂದ ಹೊರಬಿದ್ದಿದ್ದರು. ರೀಲ್ಸ್ ಮೂಲಕ ಜನಪ್ರಿಯರಾಗಿದ್ದ ಪುನೀತ್ ಸೂಪರ್‌ಸ್ಟಾರ್‌ಗೆ ಬಿಗ್‌ಬಾಸ್ ಒಟಿಟಿಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ಇವರಪ್ಪಾ ರಿಯಲ್‌ ಜೋಡಿ ಅಂದ್ರೆ! ನಟಿ ರೂಪಾ ಮತ್ತು ಪ್ರಶಾಂತ್ ವೈರಲ್ ರೀಲ್ಸ್‌!

ರೀಲ್ಸ್, ಬಿಗ್‌ಬಾಸ್ ಒಟಿಟಿ ಮೂಲಕ ಖ್ಯಾತಿ ಗಳಿಸಿರುವ ಪುನೀತ್ ಸೂಪರ್‌ಸ್ಟಾರ್‌ಗೆ ಅಭಿಮಾನಿಗಳು ಲಾರ್ಡ್ ಪುನೀತ್ ಎಂದು ಕರೆಯುತ್ತಾರೆ. ಆದರೆ ಅಸಲಿ ಹೆಸರು ಪ್ರಕಾಶ್ ಕುಮಾರ್.  ಪುನೀತ್ ಸೂಪರ್‌ಸ್ಟಾರ್ ಯೂಟ್ಯೂಬ್ ಮೂಲಕವೇ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಪುನೀತ್ ಸೂಪರ್‌ಸ್ಟಾರ್ ವಾರ್ಷಿಕವಾಗಿ 20 ರಿಂದ 24 ಲಕ್ಷ ರೂಪಾಯಿ ಆದಾಯವನ್ನು ಯೂಟ್ಯೂಬ್ ಮೂಲಕ ಗಳಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಹಾಗೂ ಇತರ ಸಾಮಾಜಿಕ ಮಾಧ್ಯಮದ ಮೂಲಕ ಪುನೀತ್ 10 ರಿಂದ 15 ಲಕ್ಷ ರೂಪಾಯಿ ಆದಾಯಗಳಿಸುತ್ತಿದ್ದಾರೆ. 
 

click me!