Small Screen

ರಂಜನಿ ರಾಘವನ್

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ರಂಜನಿ ರಾಘವನ್ ಇನ್ಸ್ಟಾದಲ್ಲಿ ತಮ್ಮ ಎರಡು ಫೋಟೋಗಳನ್ನು ಹಾಕಿದ್ದಾರೆ. 
 

Image credits: Instagram

ನಿಮ್ಗೆ ಏನ್ ನೆನಪಾಗುತ್ತೆ?

ಫೋಟೋ ಜೊತೆ ಕ್ಯಾಪ್ಶನ್ ನೀಡಿರುವ ರಂಜನಿ ನನ್ ನೋಡಿದ್ ತಕ್ಷಣ ನಿಮ್ಗೆ ನೆನಪಾಗೋ ಮೂರು ವಿಷ್ಯ ಯಾವ್ದು?  ಫನ್ನಿ ಕಾಮೆಂಟ್ ಮಾತ್ರ ಎಂದು ಬರೆದುಕೊಂಡಿದ್ದಾರೆ. 
 

Image credits: Instagram

ಅಭಿಮಾನಿಗಳ ಪ್ರೀತಿಯ ಸುರಿಮಳೆ

ಕನ್ನಡತಿಯ ಹಸಿರುಪೇಟೆ ಟೀಚರ್ ಫೋಟೋಗೆ ಅಭಿಮಾನಿಗಳು ಪ್ರೀತಿಯ ಸುರಿಮಳೆಯೇ ಸುರಿಸಿದ್ದು, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಜನ ಏನೇನು ಹೇಳಿದ್ದಾರೆ ನೋಡಿ. 
 

Image credits: Instagram

ವಿಭಿನ್ನ ವ್ಯಕ್ತಿತ್ವ

ಕಾಂಟ್ರವರ್ಸಿಗೆ ಕೈಹಾಕದ, ನಿಂತ ನೀರಾಗದೆ ಹೊಸತನಕ್ಕೆ ತುಡಿಯುವ,  ನಕಲು ಮಾಡಲು ಸಾಧ್ಯವಾಗದ ವಿಭಿನ್ನ - ವಿಶೇಷ ವ್ಯಕ್ತಿತ್ವದ ವಿಶಿಷ್ಠ ವ್ಯಕ್ತಿ. 
 

Image credits: Instagram

ಸರಳತೆಯ ಸುಂದರಿ

ಕೆಲವರು ಸರಳತೆಯ ಸುಂದರಿ,ಕನ್ನಡತಿ, ನೈಜ ನಟನೆ ಮಾಡುವವರು ಎಂದು ಬರೆದರೆ ಮತ್ತೆ ಕೆಲವರು ಸರಳತೆ, ಒಳ್ಳೆ ಮನಸಿನ ಮುದ್ದು ಚೆಲುವೆ, ಟೀಚರ್ ಎಂದಿದ್ದಾರೆ.

Image credits: our own

ವರ್ಣಮಾಲೆಯಲ್ಲಿ ಪದಗಳೇ ಇಲ್ಲ

ನಿನ್ನ ಅಂದವನ್ನ ವರ್ಣನೆ ಮಾಡ್ತಾ ಮಾಡ್ತಾ "ವರ್ಣಮಾಲೆ ಯಲ್ಲಿ" ಪದಗಳೇ ಖಾಲೀ ಆದ್ವು ಕ್ವೀನ್ ಎಂದು ಮತ್ತೊಬ್ಬರು ಬರೆದಿದ್ದಾರೆ.

Image credits: our own

ದುರಹಂಕಾರ ಇಲ್ಲದ ಕನ್ನಡತಿ

ಅಪ್ಪಟ ಕನ್ನಡತಿ, ಶೋಕಿ ಇಲ್ಲ, ದುರಂಕಾರ ಇಲ್ಲ.. ಕನ್ನಡಿಗರು ಕನ್ನಡ ಭಾಷೆ ಮೇಲೆ ವಿಶೇಷ ವಾದ ಪ್ರೇಮ ಪ್ರೀತಿ ಇದೆ ನಿಮಗೆ.. ಒಬ್ಬ ಒಳ್ಳೆಯ ಹವ್ಯಾಸಿ ಲೇಖಕಿ ಕೂಡ.. ಸರಳ ಸುಂದರಿ. 
 

Image credits: social media

ನಗು ಮೊಗದ ನೈದೇಲೆ

ಕನ್ನಡದ ಕುಸುಮ ಸುಂದರಿ, ನಗು ಮೊಗದ ನೈದೇಲೆ, ಕಲಿಯಗದ ಕನ್ನಡದ ಕವಿಯತ್ರಿ ಎಂದರೆ ನೆನಪಾಗೋದು ರಂಜಿನಿ ಎಂದು ಒಬ್ರು ಹೇಳಿದ್ರೆ ಮತ್ತೊಬ್ರು ಪರ್ಫೆಕ್ಟ್ ಮಹಿಳೆ ಎಂದಿದ್ದಾರೆ.
 

Image credits: social media

ಎಲ್ಲವೂ ಬಲು ಇಷ್ಟ

ನಿಮ್ಮನ್ನು ನೋಡಿ ತಕ್ಷಣ ನೆನಪಾಗುವುದು ನಿಮ್ಮ ನಗುಮುಖ ಹಾಗೂ ನ್ಯಾಚುರಲ್ ಆಕ್ಟಿಂಗ್ ಸ್ಪಷ್ಟ ಕನ್ನಡ.  ನಿಮ್ಮ ಕನ್ನಡ ಪರಿಶುದ್ಧತೆ, ನಿಮ್ಮ ಸರಳತೆ, ನಿಮ್ಮ ವಿಭಿನ್ನ ವ್ಯಕ್ತಿತ್ವ ಎಲ್ಲವೂ ಬಲು ಇಷ್ಟ
 

Image credits: social media

ನೀವೇ ಇಷ್ಟ

ನೀವೇ ಇಷ್ಟ ಅಂದ್ಮೇಲೆ ಬರೀ 3 ವಿಷ್ಯ ಮಾತ್ರ ಹೇಳೋದು ಸ್ವಲ್ಪ ಕಷ್ಟ ಟೀಚರ್. ಆದ್ರೂ ಹೇಳ್ಬೇಕು ಅಂದ್ರೆ ನಿಮ್ಮ ಸರಳತೆ, ಕನ್ನಡ ಪ್ರೀತಿ, ಮತ್ತು ನಿಮ್ಮ ವಿಭಿನ್ನ ಆಲೋಚನೆ ಇಷ್ಟ ಅಂದಿದ್ದಾರೆ ಒಬ್ಬರು.
 

Image credits: social media

ಶನಿ ಸೀರಿಯಲ್‌ನಲ್ಲಿ ತಾಯಿ ಛಾಯಾ ಪಾತ್ರ ನಿರ್ವಹಿಸಿದ ನಟಿ ಎಲ್ಲಿದ್ದಾರೀಗ?

ಅನುಶ್ರೀಗೆ ಬಾಲ್ಯದಲ್ಲೇ ಒಲಿದಿತ್ತು ನಿರೂಪಣಾ ಕಲೆ!

ನನ್ನ, ಭವ್ಯಾ ಬಗ್ಗೆ ಸುಮ್ ಸುಮ್ನೆ ಗಾಸಿಪ್ ಮಾಡ್ಬೇಡಿ: ಗೀತಾ ಸೀರಿಯಲ್ ಹೀರೋ

ಸಿನಿಮಾದಿಂದ ದೂರ ಉಳಿದ ಬಾಲನಟಿ ಸಿಂಧು ರಾವ್‌ಗೆ ಗಂಡು ಮಗು!