ಬರಲಿದೆ ಜಗತ್ತಿನ ಮೊದಲ ಸೋಲಾರ್ ಆಧರಿತ SUV, ಇದಕ್ಕೆ ಬಿಸಿಲು ಇದ್ದರೆ ಸಾಕಷ್ಟೇ

By Suvarna News  |  First Published Apr 2, 2021, 4:05 PM IST

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಹಂಬಲ್ ಮೋಟಾರ್ಸ್ ಎಂಬ ಸ್ಟಾರ್ಟಪ್‌ ಜಗತ್ತಿನ ಮೊದಲ ಸೋಲಾರ್ ಆಧರಿತ ಎಸ್‌ಯುವಿ ಪರಿಕಲ್ಪನೆಯನ್ನು ಸಿದ್ಧಪಡಿಸಿ, ಮಾಹಿತಿಯನ್ನು ನೀಡಿದೆ. ಈ ಸೋಲಾರ್ ಆಧರಿತ ಎಸ್‌ಯುವಿ ಕಾರ್ ಉತ್ಪಾದನೆ 2024ರಲ್ಲಿ ಆರಂಭವಾಗಿ, 2025ರ ಹೊತ್ತಿಗೆ ಗ್ರಾಹಕರ ಬಳಕೆಗೆ ಸಿಗಲಿದೆ. ಅಲ್ಲಿಯವರೆಗೂ ಕಾಯಬೇಕಷ್ಟೇ!


ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಭರಾಟೆ ಜೋರಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಸಾಂಪ್ರದಾಯಿಕ ವಾಹನಗಳು, ಅಂದರೆ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಆಧರಿತ ವಾಹನಗಳ ಕಣ್ಮರೆಯಾಗಬಹುದು. ಎಲ್ಲೆಲ್ಲೋ ವಿದ್ಯುತ್ ಚಾಲಿತ ವಾಹನಗಳೇ ಕಾಣಬಹುದು. ಆದರೆ, ಈಗ ಬಂದಿರುವ ಸುದ್ದಿಯ ಪ್ರಕಾರ, ಎಲೆಕ್ಟ್ರಿಕ್ ವಾಹನಗಳು ಕೂಡ ಸ್ವಲ್ಪ ವರ್ಷಗಳ ಬಳಿಕ ಕಣ್ಮರೆಯಾಗಬಹುದು. ಯಾಕೆಂದರೆ, ಸೋಲಾರ್ ಆಧರಿತ ಎಸ್‌ಯುವಿ ಪರಿಕಲ್ಪನೆಯು ಜನ್ಮ ತಳೆದಿದೆ!

ಹೊಸ ಆವಿಷ್ಕಾರಗಳ ಕೇಂದ್ರವಾಗುತ್ತಿರುವ ಅಮೆರಿಕದ ಕ್ಯಾಲಿಫೋರ್ನಿಯಾ ನಗರದಲ್ಲಿ 2020ರಲ್ಲಿ ಸ್ಥಾಪಿತವಾದ ಹಂಬಲ್ ಮೋಟರ್ಸ್, ಸೂರ್ಯನ ಕಿರಣಗಳಾಧರಿತ ಎಲೆಕ್ಟ್ರಿಕ್ ಎಸ್‌ಯುವಿ ಪರಿಚಯಿಸುವ ವಿಚಾರವನ್ನು ಪ್ರಕಟಿಸಿದೆ. ಈ ಪರಿಕಲ್ಪನೆಯು ವಾಸ್ತವದಲ್ಲಿ ಯಶಸ್ವಿಯಾಗಿ ಬದಲಾದರೆ, ಈ ವಾಹನವು ಜಗತ್ತಿನ ಮೊದಲ ಸೋಲಾರ್ ಆಧರಿತ ಎಸ್‌ಯುವಿ ಎಂಬ ಕೀರ್ತಿಗೆ ಪಾತ್ರವಾಗಲಿದೆ.

Tap to resize

Latest Videos

undefined

ಸ್ಮಾರ್ಟ್‌ಫೋನ್ ಆಯ್ತು, ಇನ್ನು ಶಿಯೋಮಿಯಿಂದಲೂ ಎಲೆಕ್ಟ್ರಿಕ್ ವೆಹಿಕಲ್?

ಕ್ಯಾಲಿಫೋರ್ನಿಯಾ ಮೂಲದ ಹಂಬಲ್ ಮೋಟರ್ಸ್ ಈ ಸೋಲಾರ್ ಆಧರಿತ ಎಸ್‌ಯುವಿ ಕಾರ್ ಪರಿಕಲ್ಪನೆ ಬಗೆಗಿನ ಅನೇಕ ಇಮೇಜ್‌ಗಳನ್ನು ಪ್ರಕಟಿಸಿದೆ. ಈ ಕಾರು ನಾಲ್ಕು ಬಾಗಿಲುಗಳ ಎಸ್‌ಯುವಿಯಾಗಿದೆ. ಐದು ಸೀಟ್‌ಗಳು ಕ್ರಾಸ್‍ಓವರ್ ಎಸ್‌ಯುವಿ. ಕಂಪನಿಯು ಈ ಸೋಲಾರ್ ಆಧರಿತ ವಾಹನಕ್ಕೆ ಹಂಬಲ್ ಒನ್ ಎಂದು ಹೆಸರಿಟ್ಟಿದೆ. ಅಮೆರಿಕದ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಈ ಕಾರಿನಲ್ಲಿ ನಾಲ್ಕು ಜನರು ಆರಾಮವಾಗಿ ಕುಳಿತುಕೊಂಡ ಪ್ರಯಾಯಣಿಸಬಹುದು. ಮತ್ತು ಇದು ಒಮ್ಮೆ ಸೋಲಾರ್‌ನಿಂದ ಚಾರ್ಜ್ ಆದರೆ 800 ಕಿ.ಮೀ.ವರೆಗೂ ಓಡುತ್ತದೆ ಎಂದು ಕಂಪನಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ ಎಂದು ಹಲವು ವೆಬ್ ತಾಣಗಳು ವರದಿ ಮಾಡಿವೆ.

ಸೋಲಾರ್ ಆಧರಿತ ಹಂಬಲ್ ಒನ್ ಎಸ್‌ಯುವಿ ಬ್ಯಾಟರಿ ಪವರ್‌ನಿಂದ ಚಲಿಸುತ್ತದೆ. ಆದರೆ, ಬ್ಯಾಟರಿ ಚಾರ್ಜ್ ಆಗಲು ವಿದ್ಯುತ್ ಬಳಸುವ ಅಗತ್ಯವಿಲ್ಲ. ಬದಲಿಗೆ, ಈ ಎಸ್‌ಯುವಿ ವಾಹನದ ಮೇಲ್ಚಾವಣಿ ಮತ್ತು ವಿಂಡೋಗಳಿಗೆ ಅಳವಡಿಸಲಾಗಿರುವ ಅತ್ಯಂತ ದಕ್ಷತೆಯ 82.35 ಚದರ ಅಡಿ ಸೋಲಾರ್‌ ಸೆಲ್‌ಗಳು ಬ್ಯಾಟರಿ ಚಾರ್ಜ್‌ಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಲಿವೆ. ಹಗಲಿನಲ್ಲಿ ಈ ಎಸ್‌ಯುವಿ 97 ಕಿಲೋ ಮೀಟರ್‌ಗೆ ಮರುಪೂರಣಗೊಳ್ಳಲಿದೆ. ಹಾಗಂತ ಇದು ಸಂಪೂರ್ಣವಾಗಿ ಸೂರ್ಯನ ಕಿರಣಗಳ ಆಧಾರಿತವಾಗಿಯೇ ಇರುತ್ತದೆ ಎಂದೇನಲ್ಲ. ಸೋಲಾರ್ ಪವರ್ ಜೊತೆಗೆ ವಿದ್ಯುತ್ ಚಾರ್ಜಿಂಗ್‌ಗೂ ಅವಕಾಶವಿರುತ್ತದೆ. ಅಂದರೆ, ಈ ಎಸ್‌ಯುವಿಯಲ್ಲಿ ನಿಮಗೆ ಎಸಿ ಮತ್ತು ಡಿಸಿ ಚಾರ್ಜಿಂಗ್ ಪಾಯಿಂಟ್‌ಗಳು ಇರುತ್ತವೆ. ಅಗತ್ಯ  ಬಿದ್ದಾಗ ನೀವು ವಿದ್ಯುತ್‌ನಿದಂಲೂ ಚಾರ್ಜ್ ಮಾಡಿಕೊಳ್ಳಬಹುದು ಎನ್ನುತ್ತಿವೆ ವರದಿಗಳು.

ಕ್ರೆಟಾ, ಸೆಲ್ತೋಸ್‌ಗೆ ಟಕ್ಕರ್ ಕೊಡಲು ಬರ್ತಿದೆ ವೋಕ್ಸ್‌ವಾಗನ್‌ ‘ಟಿಗ್ವಾನ್’ ಎಸ್‌ಯುವಿ

ಹಂಬಲ್ ಮೋಟರ್ಸ್ ಕಂಪನಿಯು ಈಗ ಜಗತ್ತಿನ ಮೊದಲ ಸೋಲಾರ್ ಆಧರಿತ ಎಸ್‌ಯುವಿ ಪರಿಕಲ್ಪನೆಯನ್ನು ಸಿದ್ಧಪಡಿಸಿದೆ. ಈ ಎಸ್‌ಯುವಿ ಉತ್ಪಾದನೆಯು 2024ರಲ್ಲಿ ಆರಂಭವಾಗಲಿದ್ದು, ಗ್ರಾಹಕರಿಗೆ ಬಳಕೆಗೆ ಈ ಎಸ್‌ಯುವಿ 2025ರ ಹೊತ್ತಿಗೆ ಸಿಗಲಿದೆ. ಹಾಗಾಗಿ, ಈಗಿನಿಂದಲೇ ಗ್ರಾಹಕರು ಬೇಕಿದ್ದರೆ ತಮ್ಮ ಎಸ್‌ಯುವಿಯನ್ನು ಕಾಯ್ದಿರಿಕೊಳ್ಳಬಹುದು. ಸೋಲಾರ್ ಆಧರಿತ ಈ ಹಂಬಲ್ ಒನ್ ಎಸ್‌ಯುವಿ ಬೆಲೆ ಎಲ್ಲ ತೆರಿಗೆಗಳು ಸೇರಿ 109,000 ಡಾಲರ್ ಇರಲಿದೆ ಎನ್ನಲಾಗುತ್ತಿದೆ.

ಹಂಬಲ್ ಒನ್ ಕಾನ್ಸೆಪ್ಟ್ ಎಸ್‌ಯುವಿ 5 ಮೀಟರ್‌ಗಿಂತಲೂ ಉದ್ದವಿದೆ. ಅಸಲಿಗೆ ಇದು, ಕೆಲವು ಪ್ರೀಮಿಯಂ ಸೆಡಾನ್‌ ಕಾರುಗಳಿಗಿಂತಲೂ ಉದ್ದದ ಕಾರ್ ಎನ್ನಬಹುದು. ಹಾಗೆಯೇ ಇದು ಕೇವಲ 1814 ಕಿಲೋ ಗ್ರಾಮ್ ಮಾತ್ರವೇ ತೂಗುತ್ತದೆ. ಲೈಟ್‍ವೇಟ್ ಆಗಿರುವ ಈ ಎಸ್‌ಯುವಿನಲ್ಲಿ ನಾಲ್ಕು ಜನರು ಆರಾಮಾಗಿ ಕುಳಿತುಕೊಳ್ಳಬಹುದು.

ಜಗತ್ತಿನ ಅತ್ಯಂತ ಡೇಂಜರಸ್ ರಸ್ತೆಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಂ.1

ಮತ್ತೊಂದು ವಿಶೇಷ ಏನ್ ಗೊತ್ತಾ? ಕಂಪನಿಯು ಹೇಳುವ ಪ್ರಕಾರ, ಈಗಾಗಲೇ ಪ್ರೀ ಆರ್ಡರ್‌ನಿಂದಾಗಿ(ಬುಕ್ಕಿಂಗ್) 20 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಹಣ ಸಂಗ್ರಹವಾಗಿದೆ.  ಕಳೆದ ಒಂದು ತಿಂಗಳಲ್ಲಿ ಅಮೆರಿಕವೊಂದರಲ್ಲಿ ಕಾರು ಕಾಯ್ದಿರಿಸುವ ಸಂಬಂಧದ ಪ್ರಮಾಣದಲ್ಲಿ ಶೇ.426ರಷ್ಟು ಏರಿಕೆಯಾಗಿದಂತೆ!

click me!