ಮುಂದಿನ ತಿಂಗಳು ಬಿಡುಗಡೆಯಾಗುತ್ತಾ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ?

Suvarna News   | Asianet News
Published : Oct 22, 2021, 04:47 PM IST
ಮುಂದಿನ ತಿಂಗಳು ಬಿಡುಗಡೆಯಾಗುತ್ತಾ ಮಾರುತಿಯ ಹೊಸ ತಲೆಮಾರಿನ ಸೆಲೆರಿಯೋ?

ಸಾರಾಂಶ

ಬಹಳ ದಿನಗಳಿಂದ ನಿರೀಕ್ಷೆಯಲ್ಲಿರುವ ಮಾರುತಿ ಸುಜುಕಿ (Maruti Suzuki) ಕಂಪನಿಯ ಹೊಸ ತಲೆಮಾರಿನ ಸೆಲೆರಿಯೋ (Celerio) ಕಾರ್ ಮುಂದಿನ ತಿಂಗಳು ಮಾರುಕಟ್ಟೆಗೆ ಲಾಂಚ್ ಆಗುವ ಸಾಧ್ಯತೆಯಿದೆ. ಈಗಾಗಲೇ, ಕಂಪನಿಯು ಪ್ರಯೋಗಾರ್ಥವಾಗಿ ಕಾರನ್ನು ಸಾಕಷ್ಟು ಬಾರಿ ರಸ್ತೆಗಳಿಸಿದೆ. ಹೊಸ ಫೀಚರ್‌ಗಳ ಮೂಲಕ ಸಣ್ಣ ಕಾರು ಸೆಗ್ಮೆಂಟ್‌ನಲ್ಲಿ ಹಿಡಿತ ಸಾಧಿಸಲು ಮಾರುತಿ ಈ ಸೆಲೆರಿಯೋ ಮೂಲಕ ಮುಂದಾಗಿದೆ.

ಭಾರತೀಯ ವಾಹನ ಕ್ಷೇತ್ರದಲ್ಲಿ ಮಾರುತಿ ಸುಜುಕಿ (Maruti Suzuki) ಕಂಪನಿಯು ಇತರ ಎಲ್ಲ ಕಂಪನಿಗಳಿಗಿಂತಲೂ ಮುಂದಿದೆ. ಆದರೆ, ಈ ಹಬ್ಬದ ಸೀಸನ್‌ಗೆ ಬಹುತೇಕ ಎಲ್ಲ ಕಂಪನಿಗಳು ಹೊಸ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಮಾರುತಿ ಕಂಪನಿಯಿಂದ ಅಂಥ ಯಾವುದೇ ಸುದ್ದಿಗಳಿರಲಿಲ್ಲ. ಕೆಲವು ವರದಿಗಳ ಪ್ರಕಾರ, ಬಹಳ ದಿನಗಳಿಂದಲೂ ನಿರೀಕ್ಷೆಯಲ್ಲಿರುವ ಹೊಸ ತಲೆಮಾರಿನ ಸೆಲೆರಿಯೋ (Celerio) ಕಾರನ್ನು ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಲಾಂಚ್ ಮಾಡುವ ಸಾಧ್ಯತೆ ಇದೆ. ಆ ಮೂಲಕ ಚಿಕ್ಕ ಕಾರುಗಳ ಸೆಗ್ಮೆಂಟ್‌ನಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಗೊಳಿಸುವ ಯೋಜನೆಯನ್ನು ಹಾಕಿಕೊಂಡಂತಿದೆ.

ಮಾರುತಿಯ ಆಫ್‌ರೋಡ್ ಎಸ್‌ಯುವಿ Jimny ಬಿಡುಗಡೆಗೆ ಸಜ್ಜಾಗಿದೆಯಾ? 

ಈ ಸೆಲೆರಿಯೋ (Celerio) ಕಾರನ್ನು ಕಂಪನಿಯು ಬಹಳಷ್ಟು ಸಾರಿ ಪ್ರಯೋಗಾರ್ಥವಾಗಿ ರಸ್ತೆಗಳಿಗಿಸಿದೆ. ಕೆಲವು ಸ್ಪೈ ಚಿತ್ರಗಳ ಪ್ರಕಾರ, ಸೆಲೆರಿಯೋ ಹೊರಮೈ ಮತ್ತು ಒಳಾಂಗಣದಲ್ಲಿ ಸಾಕಷ್ಟು ಪರಿಷ್ಕೃತ ವಿನ್ಯಾಸವನ್ನು ಕಾಣಬಹುದಾಗಿದೆ. ಎರಡು ವರ್ಷಗಳಿಂದಲೂ ಕಂಪನಿಯು ಈ ಕಾರನ್ನು ಲಾಂಚ್ ಮಾಡಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಅನೇಕ ಬಾರಿ ಲಾಂಚ್ ಮುಂದೂಡಿಕೆಯಾಗಿದೆ. ಈಗಿರುವ ವರದಿ ಪ್ರಕಾರ, ಕಂಪನಿಯು ಈ ನವೆಂಬರ್‌ನಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

2014ರಲ್ಲಿ ಲಾಂಚ್ ಆದ ಮಾರುತಿ ಸುಜುಕಿಯ ಸೆಲೆರಿಯೋ (Celerio) ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಹುಂಡೈ (Hyundai) ಕಂಪನಿಯ ಗ್ರ್ಯಾಂಡ್ ಐ10 (Grand i10) ಮತ್ತು ಟಾಟಾ (TATA) ಕಂಪನಿಯ ಟಾಟಾ ಟಿಯಾಗೋ (Tiago), ಡಟ್ಸನ್ ಗೋ (Datsun Go)  ಕಾರುಗಳಿಗೆ ನೇರ ಸ್ಪರ್ಧೆಯೊಡ್ಡುವ ಸೆಲೆರಿಯೋ ಈ ವರ್ಷ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ. 

ಈ ಕಾರು ಏಪ್ರಿಲ್‌ನಲ್ಲಿ ಲಾಂಚ್ ಆಗಬೇಕಿತ್ತು. ಆದರೆ, ಲಾಂಚ್ ಮುಂದೂಡಲಾಯಿತು. ಈ ಸೆಲೆರಿಯೋ ಹೊಸ ಜನರೇಷನ್ ಕಾರಿಗಾಗಿ  2019ರಿಂದಲೇ ಕಂಪನಿ ಕೆಲಸ ಮಾಡುತ್ತಿದೆ. ದೇಶದ ರಸ್ತೆಗಳಲ್ಲಿ ಈ ಕಾರು ಪ್ರರೀಕ್ಷಾರ್ಥವಾಗಿ  ಹಲವು ಬಾರಿ ಓಡಾಡಿದೆ. ಈ ಬಗ್ಗೆ ಚಿತ್ರಗಳೂ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡಿದ್ದನ್ನು ನೆನಪಿಸಿಕೊಳ್ಳಬಹುದು. ಸೆಲೆರಿಯೋ (celerio) ಬಗ್ಗೆ ಆಸಕ್ತಿ ಹೊಂದಿರುವ ಹಲವು ಗ್ರಾಹಕರು ಹೊಸ ತಲೆಮಾರಿನ ಕಾರು ಲಾಂಚ್‌ಗಾಗಿ ಕಾದಿದ್ದಾರೆ.

ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್!    

ರಸ್ತೆಗಳಲ್ಲಿ ಪರೀಕ್ಷಾರ್ಥವಾಗಿ ಸಂಚರಿಸುವ ಸಂದರ್ಭದಲ್ಲಿ ತೆಗೆಯಲಾದ ಚಿತ್ರಗಳ ಪ್ರಕಾರ, ಹೊಸ ಸೆಲೆರಿಯೋದಲ್ಲಿ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಇರಲಿದೆ. ಹೊಸ ಸೆಲೆರಿಯೋದಲ್ಲಿ ಏಳು ಇಂಚಿನ ಸ್ಮಾರ್ಟ್ ಪ್ಲೇ (Smart Ply) ಸ್ಟುಡಿಯೋ ಕೂಡ ಇರಲಿದೆ. ಈ ತರಹದ್ದನ್ನು ನೀವು ಮಾರುತಿ ಸುಜುಕಿಯ ಸ್ವಿಫ್ಟ್ (Switf), ಎಸ್ ಪ್ರೆಸ್ಸೋ (S presso) ಇತ್ಯಾದಿ ಕಾರುಗಳಲ್ಲಿ ಕಾಣಬಹುದು. ಸ್ಪೈ ಶಾಟ್‌ಗಳ ಪ್ರಕಾರ ಈ ಹ್ಯಾಚ್‌ಬ್ಯಾಕ್‌ನಲ್ಲಿ ಹೊಸ ಇನ್ಸ್‌ಟ್ರುಮೆಟ್ ಡಿಜಟಲ್ ಕನ್ಸೋಲ್ ಹೊಂದಲಿದೆ ಎಂದು ವರದಿಗಳ ಹೇಳುತ್ತಿವೆ.
 

ಹೊಸ ತಲೆಮಾರಿನ ಸೆಲೆರಿಯೋ ಮಾರುತಿ ಸುಜುಕಿಯ ಹಾರ್ಟೆಕ್ಟ್ ಪ್ಲಾಟ್‌ಫಾರ್ಮ್‌ ಆಧರಿತವಾಗಿ ನಿರ್ಮಾಣವಾಗಲಿದೆ.  ಅಂದರೆ, ಹೊಸ ಸೆಲೆರಿಯೋದಲ್ಲಿ ಈಗಿರುವ ಸೆಲೆರಿಯೋಗಿಂತಲೂ ಹೆಚ್ಚು ಜಾಗ ಸಿಗಲಿದೆ. ಹೆಡ್‌ಲ್ಯಾಂಪ್ಸ್, ವಿಭಿನ್ನ ತರಹದ ಗ್ರಿಲ್, ಎಲ್ಇಡಿ ಸಿಗ್ನಚರ್ ಇರುವ ಹೊಸ ಟೈಲ್, ಲೈಟ್‌ ಹೊಸ ಟೇಲ್‌ಗೇಟ್ ಇತ್ಯಾದಿ ವಿನ್ಯಾಸಗಳಲ್ಲಿ ಹೊಸತನ ಕಾಣಲು ಸಿಗಲಿದೆ.

ಈಗ ಚಾಲ್ತಿಯಲ್ಲಿರುವ ಸೆಲೆರಿಯೋ 1.0 ಲೀಟರ್ ಎಂಜಿನ್ ಹೊಂದಿದೆ. ಆದರೆ, ಕೆಲವು ವರದಿಗಳ ಪ್ರಕಾರ, ಹೊಸ ಸೆಲೆರಿಯೋ ನಿಮಗೆ 1.2 ಲೀಟರ್ ಪೆಟ್ರೋಲ್ ಎಂಜಿನ್ ಆಪ್ಷನ್‌ನಲ್ಲಿ ಸಿಗಲಿದ್ದು, ಈ ಬಗ್ಗೆ ಯಾವುದೇ ಖಚಿತ ಮಾಹಿತಿಲ್ಲ. ಇನ್ನು ಈ ಹೊಸ ತಲೆಮಾರಿನ ಸೆಲೆರಿಯೋ ಚಾಲ್ತಿಯಲ್ಲಿರುವ ಬಿಎಸ್6- ನಿಯಮಗಳ ಪ್ರಕಾರವೇ ರೂಪಿತಗೊಳ್ಳಲಿದೆ. ಇದರಲ್ಲಿ 1.0 ಲೀಟರ್ ಟ್ರಿಪಲ್ ಸಿಲೆಂಡರ್ ಕೆ10ಬಿ (K10B) ಪೆಟ್ರೋಲ್ ಎಂಜಿನ್ ಇರಲಿದೆ. ಈ ಎಂಜಿನ್ ಪೀಕ್ ಟಾರ್ಕ್‌ನಲ್ಲಿ 67 ಬಿಎಚ್‌ಪಿ ಉತ್ಪಾದಿಸಲಿದೆ ಹಾಗೂ 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.  ಈ ಕಾರು ನಿಮಗೆ 5 ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಸಿಗಲಿದೆ. ಜೊತೆಗೆ 5 ಸ್ಪೀಡ್ ಎಜಿಎಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಆಯ್ಕೆಯೂ ಸಿಗಲಿದೆ ಎನ್ನುತ್ತಿವೆ ಮೂಲಗಳು.

2024ರ ಮೊದಲಾರ್ಧದಲ್ಲಿ ಶಿಯೋಮಿಯಿಂದ ಕಾರ್ ಉತ್ಪಾದನೆ!

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ