ಹಸುವಿನ ಸಗಣಿ ಸೆಖೆ ಕಡಿಮೆ ಮಾಡುತ್ತಾ? ಕಾರಿಗೆ ಸೆಗಣಿ ಮಾಸ್ಕ್ ಹಾಕಿದ ಡಾಕ್ಟರ್

By Anusha Kb  |  First Published Apr 25, 2023, 1:21 PM IST

ಬಹುಪಯೋಗವನ್ನು ಹೊಂದಿರುವ ಹಸುಗಳ ಗೋಮಯ ಬೇಸಿಗೆಯ ಧಗೆಯನ್ನು ಕಡಿಮೆ ಮಾಡುತ್ತಾ? ಹೌದು ಎನ್ನುತ್ತಾರೆ ಒಬ್ಬರು ಹೋಮಿಯೋಪಥಿ ವೈದ್ಯರು.


ಸಾಗರ್: ಕಾಮಧೇನು ಎಂದು ಕರೆಯಲ್ಪಡುವ ಹಸುಗಳಿಂದ ಮಾನವನಿಗೆ ಆಗುವ ಉಪಯೋಗಗಳು ಹಲವು ಹಸುವಿನ ಹಾಲು ಮಾನವನ ದೇಹವನ್ನು ತಂಪಾಗಿಸುತ್ತದೆ. ಇನ್ನು ಹಾಲಿನ ಉತ್ಪನ್ನಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಹಾಲಾಗಿ ಮೊಸರಾಗಿ ಮಜ್ಜಿಗೆಯಾಗಿ ಹಲವು ರೀತಿಯಲ್ಲಿ ಮನುಷ್ಯನ ಅಗತ್ಯವನ್ನು ಹಸು ಪೂರೈಸುತ್ತದೆ. ಇನ್ನು ಕೃಷಿಕರಾದರೆ ಗೋಮೂತ್ರ ಗೊಬ್ಬರ ಎಲ್ಲವೂ ಕೃಷಿಭೂಮಿಗೆ (Agriculture Land) ಅಗತ್ಯ ಹಾಗೂ ಪ್ರಯೋಜನಕಾರಿ, ಜೊತೆಗೆ ಬೆರಣಿಯಾಗಿಯೂ ಮನೆಯ ಒಲೆಯನ್ನು ಬೆಳಗುತ್ತದೆ ಇಷ್ಟಲ್ಲಾ ಬಹುಪಯೋಗವನ್ನು ಹೊಂದಿರುವ ಹಸುಗಳ ಗೋಮಯ ಬೇಸಿಗೆಯ ಧಗೆಯನ್ನು ಕಡಿಮೆ ಮಾಡುತ್ತಾ? ಹೌದು ಎನ್ನುತ್ತಾರೆ ಒಬ್ಬರು ಹೋಮಿಯೋಪಥಿ ವೈದ್ಯರು.

ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಏರುತ್ತಿರುವ ತಾಪಮಾನ ಜನರನ್ನು ಹೈರಾಣುಗೊಳಿಸಿದೆ. ಬಿಸಿಲಿನ ದಾಹದಿಂದ ಹೊರಬರಲು ಜನ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಇನ್ನು ವಾಹನ ಸವಾರರು ಬೇಸಿಗೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಮರಗಿಡಗಳ ನೆರಳನ್ನು ಅರಸಿ ಹೋಗುತ್ತಿದ್ದಾರೆ. ಆದರೆ ಮಧ್ಯಪ್ರದೇಶದ ಸಾಗರ ಜಿಲ್ಲೆಯ ಹೋಮಿಯೋಪಥಿ ವೈದ್ಯರೊಬ್ಬರು ಈ ಬಿಸಿಲಿನ ಧಗೆ ತಣಿಸಲು ಹೊಸ ಉಪಾಯವೊಂದನ್ನು ಮಾಡಿದ್ದು, ಅದೀಗ ವೈರಲ್ ಆಗಿದೆ. 

Tap to resize

Latest Videos

undefined

ನೀಲಾವರ ಗೋಶಾಲೆಯಲ್ಲಿ ಸಗಣಿಯಿಂದ ವಿದ್ಯುತ್‌ ಉತ್ಪಾದನೆಗೆ ಚಿಂತನೆ!

ಹೆಚ್ಚುತ್ತಿರುವ ತಾಪಮಾನದ (Temperature) ನಡುವೆ ತಮ್ಮ ವಾಹನವನ್ನು ತಂಪಾಗಿರಿಸಿಕೊಳ್ಳಲು  ಕಾರಿನ ಮೇಲೆಲ್ಲಾ ಅವರು ಹಸುವಿನ ಸೆಗಣಿಯಿಂದ ಕವರ್‌ ಮಾಡಿದ್ದಾರೆ.  ಮಧ್ಯಪ್ರದೇಶದ (Madhya Pradesh) ಸುಶಿಲ್ ಸಾಗರ್ (Sushil sagar) ಎಂಬುವವರೇ  ಹೀಗೆ ಕಾರಿನ ಮೇಲೆ ಸೆಗಣಿ ಹಚ್ಚಿ ಕಾರನ್ನು ತಂಪಾಗಿಸಲು ಮುಂದಾದವರು.  ಖುರೈನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಸುಶೀಲ್ ಅವರು ತಮ್ಮ ಕಾರಿನ ಮುಂಭಾಗದ ಬಂಪರ್ ಮೇಲೆ ಸೈಡ್‌ಗೆ ಮೇಲ್ಭಾಗಕ್ಕೆ ಗೋಮಯವನ್ನು ಹಚ್ಚಿದ್ದಾರೆ. 

ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ಬೇಸಿಗೆಯಲ್ಲಿ ಕಾರಿನ ಮೇಲ್ಭಾಗ ಬಿಸಿಲಿನ ಧಗೆಗೆ ಕಾದ ಕಾವಲಿಯಂತಾಗಿ ಕಾರಿನ  ಒಳಭಾಗದಲ್ಲಿ ಕುಳಿತುಕೊಳ್ಳಲಾಗದಷ್ಟು ಧಗೆ ಹೆಚ್ಚಿಸುತ್ತದೆ. ಆದರೆ ಹಸುವಿನ ಸೆಗಣಿಯನ್ನು ಕಾರಿನ ಮೇಲೆ ಹಚ್ಚುವುದರಿಂದ ಈ ತಾಪ ಕಡಿಮೆ ಆಗುತ್ತದೆ.  ಹಸುವಿನ ಸೆಗಣಿಯನ್ನು ಹಚ್ಚಿದ ನಂತರ ಧಗೆ ಕಡಿಮೆ ಆಗಿರುವುದು ನಮ್ಮ ಅನುಭವಕ್ಕೆ ಬಂದಿದೆ ಎಂದು ವೈದ್ಯ ಸಾಗರ್ ಹೇಳಿಕೊಂಡಿದ್ದಾರೆ. 

ಕಾರ್ ಕಾರ್ ಕಾರ್... ಮಾಲೀಕನ ಕೈಚಳಕದಿಂದಾಗಿ ಎಲ್ಲರನ್ನು ಸೆಳೆಯುತ್ತಿದೆ ಕಾರು

ಹಸುವಿನ ಸೆಗಣಿ ಹಚ್ಚಿದ ಬಳಿಕ ಕಾರು ತಂಪಾಗಿದ್ದು,  ಕಾರಿನೊಳಗಿನ ಏಸಿ ಈಗ ವೇಗವಾಗಿ ಹಾಗೂ ಮೊದಲಿಗಿಂತ ಚೆನ್ನಾಗಿ ಕೆಲಸ ಮಾಡುತ್ತದೆ.  ಅಲ್ಲದೇ ಈ ಸೆಗಣಿಯ ಕೋಟಿಂಗ್ ಎರಡು ತಿಂಗಳ ಕಾಲ ಹಾಗೆಯೇ ಕಾರಿನಲ್ಲಿ ಇರಬಲ್ಲದು. ನೀರಿನಿಂದ ತೊಳೆದ ನಂತರವಷ್ಟೇ ಅದು ಹೋಗುವುದು ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಈ ವಿಭಿನ್ನ ಪ್ರಯೋಗದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಆದರೆ ಅನೇಕರು ಈ ಪ್ರಯೋಗವನ್ನು ಒಪ್ಪಿಕೊಂಡಿಲ್ಲ. 

ವಿಡಿಯೋದಲ್ಲಿ ಸಾಗರ್ ಅವರು ಕಾರು ಚಲಾಯಿಸುತ್ತಾ ಸೆಗಣಿಯಿಂದ ಕಾರು ಕೂಲ್ ಆಗಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಕೆಲವರು ಇದಕ್ಕೆ ಮೂರ್ಖತನ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಮತ್ತೊಬ್ಬರು ಸಕರಾತ್ಮಕವಗಿ ಕಾಮೆಂಟ್ ಮಾಡಿದ್ದು, ಈ ಪ್ರಯೋಗ ಕಾರಿನ ಮೇಲೆ ಯಶಸ್ವಿಯಾಗುವುದೋ ಗೊತ್ತಿಲ್ಲ. ಆದರೆ ನಮ್ಮ ಹಳ್ಳಿಗಳಲ್ಲಿ ಬಹಳ ಹಿಂದಿನಿಂದಲೂ ಹಸುವಿನ ಸೆಗಣಿಯಿಂದ (Cow dung) ಮನೆಯ ಗೋಡೆಯನ್ನು ಮುಚ್ಚಿದ್ದು, ಇದರಿಂದ ಮನೆಯ ಒಳಗೆ ತಾಪಮಾನ ಕಡಿಮೆ ಆಗಿರುವುದಂತೂ ನಿಜ ಎಂದು ಬರೆದುಕೊಂಡಿದ್ದಾರೆ. 

 
 
 
 
 
 
 
 
 
 
 
 
 
 
 

A post shared by Brut India (@brut.india)

 

click me!