ಕೈಗೆಟುಕುವ ಬೆಲೆಯಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ SUV ಕಾರು ಬಿಡುಗಡೆ!

By Suvarna News  |  First Published Apr 24, 2023, 3:36 PM IST

ಮಾರುತಿ ಸುಜುಕಿ ಸಬ್ ಕಾಂಪಾಕ್ಟ್ SUV ವಿಭಾಗದಲ್ಲಿ ಬ್ರೆಜಾ ಅತ್ಯಂತ ಯಶಸ್ವಿ ಕಾರಾಗಿದೆ. ಇದೀಗ ಇದೇ ಸೆಗ್‌ಮೆಂಟ್‌ನಲ್ಲಿ ಹೊಸ ಕಾರನ್ನು ಮಾರುತಿ ಸುಜುಕಿ ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಫ್ರಾಂಕ್ಸ್ SUV ಕಾರು ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರು ಕೈಗೆಟುಕವ ದರಲ್ಲಿ ಲಭ್ಯವಿದೆ.


ನವದೆಹಲಿ(ಏ.24): ಭಾರತದಲ್ಲಿ SUV ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲಾ ಆಟೋಮೊಬೈಲ್ ಕಂಪನಿಗಳು ಸಬ್ ಕಾಂಪಾಕ್ಟ್, ಪ್ರಿಮಿಯಂ, ಸೇರಿದಂತೆ ಹಲವು ಸೆಗ್ಮೆಂಟ್‌ಗಳಲ್ಲಿ SUV ಕಾರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಮಾರುತಿ ಸುಜುಕಿ ಸಬ್ ಕಾಂಪಾಕ್ಟ್ SUV ಸೆಗ್ಮೆಂಟ್‌ನಲ್ಲಿ ಮತ್ತೊಂದು ಕಾರು ಬಿಡುಗಡೆ ಮಾಡಿದೆ. ಹೊಚ್ಚ ಹೊಸ ಮಾರುತಿ ಸುಜುಕಿ ಫ್ರಾಂಕ್ಸ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ನೂತನ ಫ್ರಾಂಕ್ಸ್ ಕಾರಿನ ಬೆಲೆ 7.46 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದ್ದು, ಗರಿಷ್ಠ ಬೆಲೆ 13.13 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

2023ರ ಭಾರತದ ಆಟೋ ಎಕ್ಸ್‌ಪೋದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ ಕಾರನ್ನು ಅನಾವರಣ ಮಾಡಿತ್ತು. ಇದೀಗ ಅತ್ಯಾಕರ್ಷಕ ವಿನ್ಯಾಸದಲ್ಲಿ ಫ್ರಾಂಕ್ಸ್ ಬಿಡುಗಡೆಯಾಗಿದೆ. ಇದು ಮಾರುತಿ ಸುಜುಕಿಯ ಮೊದಲ ಕೂಪ್ SUV ಕಾರಾಗಿದೆ.ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಸೇರಿದಂತೆ ಹಲುವ ವೈಶಿಷ್ಟತೆ ಈ ಕಾರಿನಲ್ಲಿದೆ.

Tap to resize

Latest Videos

undefined

ಟಾಟಾ ಸಫಾರಿಗೆ 1 ಕೋಟಿ , ಮಾರುತಿ ಸ್ವಿಫ್ಟ್ 27 ಲಕ್ಷ ರೂ; ಭಾರತದ ಕಾರಿಗೆ ವಿದೇಶದಲ್ಲಿ ಬೆಂಕಿ ಬೆಲೆ!

ಮಾರುತಿ ಸುಜುಕಿ ಫ್ರಾಂಕ್ಸ್ ವೇರಿಯೆಂಟ್ ಹಾಗೂ ಬೆಲೆ:(ಎಕ್ಸ್ ಶೋ ರೂಂ)
1.2L ಸಿಗ್ಮಾ 5MT:    7,46,500 ರೂಪಾಯಿ
1.2L ಡೆಲ್ಟಾ 5MT:    8,32,500 ರೂಪಾಯಿ
1.2L ಡೆಲ್ಟಾ AGS:    8,87,500 ರೂಪಾಯಿ
1.2L ಡೆಲ್ಚಾ+ 5MT:    8,72,500 ರೂಪಾಯಿ
1.2L ಡೆಲ್ಟಾ+ AGS:    9,27,500 ರೂಪಾಯಿ
1.0L ಡೆಲ್ಟಾ+ 5MT:    9,72,500 ರೂಪಾಯಿ
1.0L ಝೀಟಾ 5MT:    10,55,500 ರೂಪಾಯಿ
1.0L ಝೀಟಾ 6AT:    12,05,500 ರೂಪಾಯಿ
1.0L ಆಲ್ಫಾ 5MT:    11,47,500 ರೂಪಾಯಿ
1.0L ಆಲ್ಫಾ 6AT:    12,97,500 ರೂಪಾಯಿ
1.0L ಆಲ್ಫಾ ಡುಯೆಲ್ ಟೋನ್ MT:    Rs 11,63,500 ರೂಪಾಯಿ
1.0L ಆಲ್ಫಾ ಡುಯೆಲ್ ಟೋನ್ AT:    Rs 13,13,500 ರೂಪಾಯಿ

ಸ್ಪೋರ್ಟ್ಸ್ ಫ್ರಾಂಕ್ಸ್ ಕಾರು ನೆಕ್ಸ್ಟ್‌ ಜನರೇಶನ್ ಪವರ್‌ಟ್ರೈನ್ ಹಾಗೂ ಟ್ರಾನ್ಸಮಿಶನ್ ಆಯ್ಕೆ ಹೊಂದಿದೆ. 1.0L ಬೂಸ್ಟರ್‌ಜೆಟ್ ಪೆಟ್ರೋಲ್ ಎಂಜಿನ್, ಸ್ಮಾರ್ಟ್ ಹೈಬ್ರಿಡ್ ಟೆಕ್ನಾಲಜಿ ಹೊಂದಿದೆ. ಇದರ ಜೊತೆಗೆ ಟರ್ಬೋ ಬೂಸ್ಟರ್‌ಜೆಟ್ ಎಂಜಿನ್ ಆಯ್ಕೆ ಕೂಡ ಲಭ್ಯವಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. 1.2L K ಸೀರಿಸ್ ಡ್ಯುಯೆಲ್ ಜೆಟ್, ಡ್ಯುಯೆಲ್ VVT ಎಂಜಿನ್ ಆಯ್ಕೆಯೂ ಹೊಂದಿದೆ. ಐಡಲ್ ಸ್ಟಾರ್ಟ್ ಸ್ಟಾಪ್ ಟೆಕ್ನಾಲಜಿ ಹೊಂದಿರುವ ಈ ವೇರಿಯೆಂಟ್ ಎಂಜಿನ್ 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ AGS ಟ್ರಾನ್ಸ್‌ಮಿಶನ್ ಹೊಂದಿದೆ.

ಗ್ರಾಹಕರಿಗೆ ಶಾಕ್, ಕೈಗೆಟುಕುವ ದರದ ಸ್ವಿಫ್ಟ್, ವ್ಯಾಗನಆರ್ ಸೇರಿ ಮಾರುತಿ ಸುಜುಕಿ ಕಾರು ಬೆಲೆ ಏರಿಕೆ!

360 ಡಿಗ್ರಿ ವಿವ್ಯೂ ಕ್ಯಾಮಾರ, ವೈಯರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 22.86cm ಹೆಚ್‌ಡಿ ಪ್ಲೇ ಪ್ರೋ ಪ್ಲಸ್ ಇನ್ಫೋಟೈನ್ಮೆಂಟ್‌ ಸಿಸ್ಟಮ್, ವೈಯರ್‌ಲೆಸ್ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಆಟೋ ಪ್ಲೇ, ಸ್ಮಾರ್ಟ್ ಕನೆಕ್ಟಿವಿಟಿ ಫೀಚರ್ಸ್ ಹೊಂದಿದೆ. ಸರಿಸುಮಾರು 40ಕ್ಕೂ ಹೆಚ್ಚು ಕನೆಕ್ಟೆಡ್ ಫೀಚರ್ಸ್ ಹೊಂದಿದೆ. 

ನೂತನ ಫ್ರಾಂಕ್ಸ್ ಕಾರು ಮಹೀಂದ್ರ XUV300,ಕಿಯಾ ಸೋನೆಟ್, ಹ್ಯುಂಡೈ ವೆನ್ಯೂ, ರೆನಾಲ್ಟ್ ಕಿಗರ್, ನಿಸಾನ್ ಮ್ಯಾಗ್ನೇಟ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ. 

click me!