Dream Car 83ರ ಹರೆಯದಲ್ಲಿ ಮೊದಲ ಕಾರು ಖರೀದಿಸಿದ ತಾತ, ಹೊಸ ವ್ಯಾಗನರ್ ಮೂಲಕ ಲಾಂಗ್ ಟ್ರಿಪ್ ಪ್ಲಾನ್!

Published : Feb 08, 2022, 09:17 PM ISTUpdated : Feb 08, 2022, 09:47 PM IST
Dream Car  83ರ ಹರೆಯದಲ್ಲಿ ಮೊದಲ ಕಾರು ಖರೀದಿಸಿದ ತಾತ, ಹೊಸ ವ್ಯಾಗನರ್ ಮೂಲಕ ಲಾಂಗ್ ಟ್ರಿಪ್ ಪ್ಲಾನ್!

ಸಾರಾಂಶ

ವಯಸ್ಸು ಕೇವಲ ನಂಬರ್ ಅನ್ನೋದು ಹಲವು ಬಾರಿ ಸಾಬೀತು 83ನೇ ವಯಸ್ಸಿನಲ್ಲಿ ಮೊದಲ ಕಾರು ಖರೀದಿಸಿದ ತಾತ ಮಾರುತಿ ವ್ಯಾಗನರ್ ಕಾರು ಖರೀದಿಸಿ ರೋಡ್ ಟ್ರಿಪ್ ಪ್ಲಾನ್  

ಮುಂಬೈ(ಫೆ.08):  ಕಾರು ಖರೀದಿಸಿಬೇಕು ಅನ್ನೋದು ಬಹುತೇಕರ ಬಯಕೆಯಾಗಿರುತ್ತದೆ. ಹಲವರಿಗೆ ಸಾಧ್ಯವಾದರೆ ಮತ್ತೆ ಕೆಲವರಿಗೆ ಕನಸಾಗಿಯೇ ಉಳಿಯುತ್ತದೆ. ಆದರೆ ಸತತ ಪ್ರಯತ್ನ, ಗುರಿ ಸಾಧಿಸುವ ಛಲವಿದ್ದರೆ ಯಾವುದು ಅಸಾಧ್ಯವಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಕಾರು ಖರೀದಿಸಬೇಕು ಅನ್ನೋ ಹಂಬಲ ಚಿಕ್ಕಂದಿನಂದಲೇ ಇದ್ದರೂ, ಕಾರು ಖರೀದಿಸಿದ್ದು 83ನೇ ವಯಸ್ಸಿನಲ್ಲಿ. ಇಷ್ಟೇ ಅಲ್ಲ ಈ ತಾತನ ಉತ್ಸಾಹಕ್ಕೆ ತಲೆ ಬಾಗಲೇ ಬೇಕು. ಕಾರಣ ಕಾರು ಖರೀದಿ ಮಾತ್ರವಲ್ಲ ಇದೀಗ ಲಾಂಗ್ ಟ್ರಿಪ್ ಕೂಡ ಪ್ಲಾನ್ ಮಾಡಿದ್ದಾರೆ. 

ವಯಸ್ಸು ಕೇವಲ ನಂಬರ್. ಈ ಮಾತು ಹಲವು ಬಾರಿ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಇದೀಗ ಮುಂಬೈನ ಈ ತಾತ 83ನೇ ವಯಸ್ಸಿನಲ್ಲಿ ಮಾರುತಿ ವ್ಯಾಗನರ್ ಕಾರು ಖರೀದಿಸಿದ್ದಾರೆ. ಇದು ತಾತ ಖರೀದಿಸಿದ ಮೊದಲ ಕಾರು. ಇದೀಗ ಮೊಮ್ಮಕ್ಕಳನ್ನು ಕೂರಿಸಿ ಲಂಚ್, ಡಿನ್ನರ್ ಎಂದು ಸುತ್ತಾಡುತ್ತಲೇ ಇದ್ದಾರೆ. ಇಷ್ಟೇ ಯಾಕೆ, ಇದೀಗ ಇದೇ ಮಾರುತಿ ವ್ಯಾಗನರ್ ಕಾರಿನ ಮೂಲಕ ಲಾಂಗ್ ಟ್ರಿಪ್ ಕೂಡ ಪ್ಲಾನ್ ಮಾಡಿದ್ದಾರೆ.

Ambani cars ವಿಶ್ವದ ಅತ್ಯಂತ ದುಬಾರಿ ಕಾರು ರೋಲ್ಸ್ ರಾಯ್ಸ್ ಕಲ್ಲಿನಾನ್ ಖರೀದಿಸಿದ ಮುಕೇಶ್ ಅಂಬಾನಿ!

83ನೇ ಹರೆಯದ ತಾತಾ ಬಾಲ್ಯದಲ್ಲೇ ಕಾರಿನ ಕನಸು ಕಂಡಿದ್ದರು. ಆದರೆ ಕುಟುಂಬದ ಜವಾಬ್ದಾರಿ, ಹಣಕಾಸು ಸೇರಿದಂತೆ ಹಲವು ಕಾರಣಗಳಿಂದ ಕಾರು ಖರೀದಿ ಸಾಧ್ಯವಾಗಲೇ ಇಲ್ಲ. ಮಕ್ಕಳ ಮದುವೆ ಸೇರಿದಂತೆ ಎಲ್ಲಾ ಜವಾಬ್ಜಾರಿಗಳನ್ನು ತಾತಾ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕೊಂಚ ಹಣ ಕೂಡಿಟ್ಟು, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಮುಂದಾಗಿದ್ದಾರೆ. ಈ ಮೂಲಕ ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಯಾವುದೇ ಸಮಸ್ಯೆಯಾದಂತೆ ಕಡಿಮೆ ಬೆಲೆಗೆ ಕಾರು ಖರೀದಿಗೆ ಮುಂದಾಗಿದ್ದಾರೆ.

Car Maintenance Tips ಮೊದಲ ಬಾರಿಗೆ ಕಾರು ಖರೀದಿಸಿದ್ದೀರಾ? ನಿರ್ವಹಣೆಗೆ ಇಲ್ಲಿದೆ ಸರಳ ಟಿಪ್ಸ್!

ತಾತಾನ ಕನಸು ಅರಿತ ಮಕ್ಕಳು ಹಾಗೂ ಮೊಮ್ಮಕ್ಕಳು ಹೊಸ ಕಾರು ಬುಕ್ ಮಾಡಿದ್ದಾರೆ.. ಎಲ್ಲರೂ ಕೂಡಿ ಹಣ ನೀಡಿ ಮಾರುತಿ ವ್ಯಾಗನರ್ ಕಾರು ಬುಕ್ ಮಾಡಿದ್ದಾರೆ.   ಮೊಮ್ಮಗನ 25ನೇ ಹುಟ್ಟುಹಬ್ಬದ ದಿನ ಹೊಸ ಕಾರು ಡೆಲಿವರಿ ಪಡೆದಿದ್ದಾರೆ. ಹೊಸ ಕಾರು ಬುಕ್ ಮಾಡಿರುವ ಕುರಿತು ತಾತನಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಶೋ ರೂಂ ಕರೆದುಕೊಂಡು ಹೋದ ಮಕ್ಕಳು ತಾತನಿಗೆ ಸರ್ಪ್ರೈಸ್ ನೀಡಿದ್ದಾರೆ. ಹೊಸ ಕಾರು ನೋಡಿ ಆನಂದ ಬಾಷ್ಷ ಹರಿದಿದೆ. 

 

ಹೊಸ ಕಾರು ಪಡೆದು ನೇರವಾಗಿ ಡ್ರೈವ್ ಮಾಡುತ್ತಲೇ ಮನೆಗೆ ಬಂದಿದ್ದಾರೆ. ಮಕ್ಕಳನ್ನು ಕೂರಿಸಿಕೊಂಡು ಹಲೆವೆಡೆ ಸುತ್ತಾಡಿದ್ದಾರೆ. ಇಷ್ಟೇ ಯಾಕೆ, ಮುಂಬೈನಿಂದ ಪ್ರವಾಸಿ ತಾಣವಾಗಿರುವ ಪುಣೆಯ ಸಮೀಪದ ಲೋನವಾಲಾಗೆ ತೆರಳಿ ಒಂದು ದಿನ ಕಳೆದಿದ್ದಾರೆ. ಎಲ್ಲಾ ಕಡೆಗೂ ಅಜ್ಜ ಡ್ರೈವ್ ಮಾಡಿದ್ದಾರೆ. ಇದೀಗ ತಾತಾ ಲಾಂಗ್ ಟ್ರಿಪ್ ಪ್ಲಾನ್ ಮಾಡಿದ್ದಾರೆ.

ಹೊಸ ಕಾರಿನ ಮಾಲೀಕನಾಗಿರುವುದು ಹೆಚ್ಚು ಸಂತಸ ತಂದಿದೆ. ಕಾರು ಖರೀದಿಸಬೇಕು ಅನ್ನೋ ಆಸೆ ಈಡೇರಿದೆ. ಇದೀಗ ಎಲ್ಲಾ ಕಡೆ ಸುತ್ತಾಡಬೇಕು. ಕುಟುಂಬ ಸದಸ್ಯರ ಮನೆಗೆ ಹೋಗಬೇಕು. ಪ್ರವಾಸಿ ತಾಣಗಳನ್ನು ನೋಡಬೇಕು. ಕಾರು ಡ್ರೈವ್ ಮಾಡಬೇಕು, ಸ್ವಂತ ಕಾರು ಇರಬೇಕು ಅನ್ನೋ ಬಹುದಿನಗಳ ಕನಸು ಮಕ್ಕಳು, ಮೊಮ್ಮಕ್ಕಳಿಂದ ಸಾಧ್ಯವಾಗಿದೆ. ಇದಕ್ಕಿಂತ ಸಂತಸ ಇನ್ನೇನು ಬೇಕು ಎಂದು ತಾತಾ ಹೇಳಿದ್ದಾರೆ.

18ನೇ ವಯಸ್ಸಿಗೆ ಕಾರು ಡ್ರೈವಿಂಗ್ ಕಲಿತಿದ್ದ ತಾತ, ಕಾರು ಓಡಿಸಲು ಸಾಧ್ಯವಾಗಲೇ ಇಲ್ಲ. ಹಲವು ಬಾರಿ ಕಾರು ಖರೀದಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಕೈಗೂಡಲಿಲ್ಲ. ಕೊನೆಗೂ ತಾತ ತನ್ನ ಗುರಿ ಸಾಧಿಸಿದ್ದಾರೆ. ಕಾರಿನ ಮಾಲೀಕನಾಗಬೇಕು ಅನ್ನೋ ಬಯಕೆಯನ್ನು ಪೂರೈಸಿದ್ದಾರೆ. ಇದೀಗ ತಾತ ಚಿರ ಯುವಕರಂತೆ ಟ್ರಿಪ್ ಮೇಲೆ ಟ್ರಿಪ್ ಪ್ಲಾನ್ ಮಾಡುತ್ತಿದ್ದಾರೆ.

PREV
Read more Articles on
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ