ಪಾಕ್‌ನಲ್ಲಿ ಇಡೀ ತಿಂಗಳು ಖರೀದಿಸುವ ವಾಹನಕ್ಕಿಂತ ಭಾರತದಲ್ಲಿ ಪ್ರತಿ ದಿನ ಖರೀದಿಸುವ ಕಾರು ದುಪ್ಪಟ್ಟು!

By Suvarna NewsFirst Published Mar 21, 2023, 7:00 PM IST
Highlights

ಪಾಕಿಸ್ತಾನ ಯಾವತ್ತೂ ಭಾರತಕ್ಕೆ ಸರಿಸಾಟಿ ಅಲ್ಲ. ಯಾವುದೇ ಕ್ಷೇತ್ರವಿರಬಹುದು, ಭಾರತದ ಹತ್ತಿರಕ್ಕೆ ನಿಲ್ಲುವ ಯೋಗ್ಯತೆಯೂ ಪಾಕಿಸ್ತಾನಕ್ಕಿಲ್ಲ. ಇದೀಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಕಾರು ಖರೀದಿ ಭಾರಿ ಚರ್ಚೆಯಾಗುತ್ತಿದೆ. ಪಾಕಿಸ್ತಾನದಲ್ಲಿ ಇಡೀ ತಿಂಗಳು ಖರೀದಿಸುವ ಕಾರು ಹಾಗೂ ಭಾರತದಲ್ಲಿ ಪ್ರತಿ ದಿನ ಖರೀದಿಸುವ ಕಾರಿನ ಸಂಖ್ಯೆ ಏಷ್ಟಿದೆ? ಇಲ್ಲಿವೆ. 

ನವದೆಹಲಿ(ಮಾ.21) ಭಾರತ ಬ್ರಟಿಷರಿಂದ ಸ್ವಾತಂತ್ರ್ಯ ಪಡೆದರೆ, ಒಂದು ದಿನ ಮೊದಲು ಪಾಕಿಸ್ತಾನ ಹುಟ್ಟಿಕೊಂಡಿತು. ಸದ್ಯ ಭಾರತವನ್ನು ಪಾಕಿಸ್ತಾನ ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಆರ್ಥಿಕತೆ, ಸಾಮಾಜಿಕ, ಶೈಕ್ಷಣಿಕ, ಜೀವನ ಮಟ್ಟ, ಸ್ವಾತಂತ್ರ್ಯ, ಭದ್ರತೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಭಾರತಕ್ಕೆ ಪಾಕಿಸ್ತಾನ ಸರಿಸಾಟಿ ಅಲ್ಲ. ಇದರ ನಡುವೆ ಪಾಕಿಸ್ತಾನದಲ್ಲಿನ ವಾಹನ ಖರೀದಿ ಹಾಗೂ ಭಾರತದಲ್ಲಿನ ವಾಹನ ಖರೀದಿ ಭಾರಿ ಚರ್ಚೆಯಾಗುತ್ತಿದೆ. ಪಾಕಿಸ್ತಾನದಲ್ಲಿ ಇಡೀ ತಿಂಗಳು ಖರೀಗಿಸುವ ವಾಹನಗಳ ಸಂಖ್ಯೆಗಿಂತ ಭಾರತದಲ್ಲಿ ಪ್ರತಿ ದಿನ ಖರೀದಿಸುವ ವಾಹನ ಸಂಖ್ಯೆ ದುಪ್ಪಟ್ಟಾಗಿದೆ. ಇದರ ಹಿಂದಿನ ಕಾರಣ ಇಲ್ಲಿ ವಾಹನ ಆಸಕ್ತರು ಹೆಚ್ಚಿದ್ದಾರೆ ಅನ್ನೋದಲ್ಲ, ಇಲ್ಲಿನ ಜನರ ಆರ್ಥಿಕ ಮಟ್ಟ ಪಾಕಿಸ್ತಾನಕ್ಕಿಂತ ಮೂರರಿಂದ ನಾಲ್ಕು ಪಟ್ಟು ಹೆಚ್ಚಿದೆ ಅನ್ನೋದು ಪ್ರಮುಖ. ಪಾಕಿಸ್ತಾನದಲ್ಲಿ ಫೆಬ್ರವರಿ 2023ರಲ್ಲಿ ಇಡೀ ತಿಂಗಳು 5,672 ಕಾರು ಮಾರಾಟವಾಗಿದೆ. ಇದೇ ಫೆಬ್ರವರಿ ತಿಂಗಳಲ್ಲಿ ಒಂದು ದಿನ ಭಾರತದಲ್ಲಿ ಸರಾಸರಿ 10,000 ಕಾರುಗಳು ಮಾರಾಟವಾಗಿದೆ.

ಪಾಕಿಸ್ತಾನ ಆಟೋ ಉತ್ಪಾದಕರ ಸಂಸ್ಥೆ(PAMA)ನೀಡಿದ ಮಾಹಿತಿ ಪ್ರಕಾರ ಫೆಬ್ರವರಿಯ 28 ದಿನದಲ್ಲಿ 5,672 ಕಾರುಗಳು ಮಾರಾಟವಾಗಿದೆ. ಇದೇ ತಿಂಗಳ 28 ದಿನದಲ್ಲಿ ಭಾರತದಲ್ಲಿ 3.34 ಲಕ್ಷ ಕಾರುಗಳು ಮಾರಾಟವಾಗಿದೆ. ಸರಾಸರಿ ತೆಗೆದರೆ ಪ್ರತಿ ದಿನ ಭಾರತದಲ್ಲಿ 10,000 ಕಾರುಗಳು ಮಾರಾಟಗೊಂಡಿದೆ. 

ಕೈಗೆಟುಕುವ ಬೆಲೆಯ ಹೊಚ್ಚ ಹೊಸ ಮಾರುತಿ ಬ್ರೆಜ್ಜಾ CNG ಕಾರು ಬಿಡುಗಡೆ, 26 ಕಿ.ಮೀ ಮೈಲೇಜ್!

ಪಾಕಿಸ್ತಾನದಲ್ಲಿ 2022ರ ಫೆಬ್ರವರಿ ತಿಂಗಳಲ್ಲಿ ಮಾರಾಟವಾಗಿರುವುದು 21,664 ಕಾರುಗಳು. ಪಾಕಿಸ್ತಾನದಲ್ಲಿ ಗರಿಷ್ಠ ಮಾರಾಟ ದಾಖಲೆ 25 ರಿಂದ 30 ಸಾವಿರ. ಇದೀಗ ಈ ಸಂಖ್ಯೆ 5 ರಿಂದ 6 ಸಾವಿರಕ್ಕೆ ಇಳಿಕೆಯಾಗಿದೆ. ಇದಕ್ಕೆ ಹಲವು ಕಾರಣಗಳಿವೆ. ಪಾಕಿಸ್ತಾನದಲ್ಲಿನ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಸೇರಿದಂತೆ ಹಲವು ಕಾರಣಗಳು ಇದರ ಹಿಂದಿದೆ. 

ಪಾಕಿಸ್ತಾನ ಆಟೋಮೊಬೈಲ್ ಕ್ಷೇತ್ರ ಹಲವು ಹೊಡೆತಗಳನ್ನು ಎದುರಿಸುತ್ತಿದೆ. ಹಣಹುಬ್ಬರ, ವಿದೇಶಿ ವಿನಿಮಯದ ಕೊರತೆಯಿಂದ ಇತ್ತೀಚೆಗೆ ಪಾಕಿಸ್ತಾನ ಅಗತ್ಯವಸ್ತು ಹೊರತು ಪಡಿಸಿ ಇತರ ವಸ್ತುಗಳ ಆಮದು ನಿಲ್ಲಿಸಿತ್ತು. ಇದರ ಪರಿಣಾಮ ಹಲವು ಆಟೋ ಕಂಪನಿಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಇತ್ತೀಚೆಗೆ ಹೋಂಡಾ ತನ್ನ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು.

ವಾಹನ ಸವಾರರಿಗೆ ಮತ್ತೆ ಬರೆ: ಏಪ್ರಿಲ್‌ 1ರಿಂದ ಹೈವೇ ಟೋಲ್‌ ದರ ಶೇ. 5ರಿಂದ ಶೇ.10 ರಷ್ಟು ಏರಿಕೆ..?

ಜನರು ಗೋಧಿ, ಹಾಲು ಖರೀದಿಸಲು ಹಸರಸಾಹಸ ಪಡಬೇಕಾಗಿದೆ. ಆರ್ಥಿಕ ಬಿಕ್ಕಟ್ಟಿನಿಂದ ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ ಜನರು ಕಾರು ಬಿಡಿ, ಆಹಾರ ಖರೀದಿಸಲು ಸಾಧ್ಯವಾಗುತ್ತಿಲ್ಲ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಪಾಕಿಸ್ತಾನ ಆರ್ಥಿಕ ಬಿಕ್ಕಿಟ್ಟಿಗೆ ಅದೇ ದೇಶ ಮಾಡಿಕೊಂಡ ಹಲವು ತಪ್ಪುಗಳು ಕಾರಣವಾಗಿದೆ. ಆದರೆ ಅದೇನೇ ಇದ್ದರು ಪಾಕಿಸ್ತಾನದ ಆರ್ಥಿಕವಾಗಿ ಸರಿದಾರಿಯಲ್ಲಿ ನಡೆಯುತ್ತಿದ್ದಾಗಲೂ ಅಲ್ಲಿನ ವಾಹನ ಮಾರಾಟ ಅಷ್ಟಕಷ್ಟೆ. ಈ ವಿಚಾರದಲ್ಲಿ ಭಾರತಕ್ಕೆ ಜನಸಂಖ್ಯೆಯೂ ಕಾರಣವಾಗಲಿದೆ. ಸಹಜವಾಗಿ ಭಾರತದಲ್ಲಿ ಅತೀ ಹೆಚ್ಚಿನ ಜನರು ವಾಹನ ಖರೀದಿಸುತ್ತಾರೆ ಅನ್ನೋ ವಾದವೂ ಸರಿ. ಆದರೆ ಇಲ್ಲಿನ ಜನರ ಜೀವನ ಮಟ್ಟ ಸುಧಾರಣೆಯಾಗಿದೆ ಅನ್ನೋದು ಅದಕ್ಕಿಂತ ಮುಖ್ಯ.

click me!