25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹ್ಯುಂಡೈ ವರ್ನಾ, ಐಷಾರಾಮಿ ಕಾರಿಗೆ ಪೈಪೋಟಿ!

By Suvarna News  |  First Published Mar 21, 2023, 3:29 PM IST

ಹೊಸ ವಿನ್ಯಾಸ, ಐಷಾರಾಮಿ ಕಾರುಗಳಾದ ಮರ್ಸಿಡಿಸ್, ಆಡಿ, BMW ಕಾರಿಗೆ ಪೈಪೋಟಿ ನೀಡಬಲ್ಲ ಆಕರ್ಷಕ ಲುಕ್, ಕೈಗೆಟುಕುವ ದರಲ್ಲಿ 2023ರ ಹ್ಯುಂಡೈ ವರ್ನಾ ಕಾರು ಬಿಡುಗಡೆಯಾಗಿದೆ. 25 ರೂಪಾಯಿ ನೀಡಿ ಹೊಸ ಕಾರು ಬುಕ್ ಮಾಡಿಕೊಳ್ಳಬಹುದು. ಹೊ ಸ ಕಾರಿನ ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
 


ನವದೆಹಲಿ(ಮಾ.21): ಹ್ಯುಂಡೈ ಇಂಡಿಯಾ ಹೊಚ್ಚ ಹೊಸ ವರ್ನಾ ಕಾರು ಬಿಡುಗಡೆ ಮಾಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ವರ್ನಾ ಕಾರಿಗೂ ಇದೀಗ ಬಿಡುಗಡೆಯಾಗಿರುವ ವರ್ನಾ ಕಾರಿಗೂ ಭಾರಿ ವ್ಯತ್ಯಾಸವಿದೆ. ಇಷ್ಟೇ ಅಲ್ಲ ಐಷಾರಾಮಿ ಕಾರಿಗೆ ಪೈಪೋಟಿ ನೀಡಬಲ್ಲ ವಿನ್ಯಾಸ, ಆರಾಮದಾಯಕ ಪ್ರಯಾಣ, ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ನೂತನ ಹ್ಯುಂಡೈ ವರ್ನಾ ಕಾರು ಪ್ರಿಮಿಯರ್ ಹಾಗೂ ಲಕ್ಷುರಿ ಕಾರಿನ ಎಲ್ಲಾ ಗುಣಲಕ್ಷಣ ಹೊಂದಿದೆ. ಹಾರಿಜಾನ್ LED ಲೈಟ್ ಸೇರಿದಂತೆ ವಿನ್ಯಾಸದಲ್ಲಿ ಮಾಡಿರುವ ಮಹತ್ತರ ಬದಲಾವಣೆಯಿಂದ ಹ್ಯುಂಡೈ ವರ್ನಾ ಭಾರತದ ಕಾರು ಮಾರುಕಟ್ಟೆಯಲ್ಲಿ ಹೊಸ ಬದಲಾವಣೆ ತರಲಿದೆ. 25,000 ರೂಪಾಯಿಗೆ ಹೊಚ್ಚ ಹೊಸ ವರ್ನಾ ಕಾರು ಬುಕ್ ಮಾಡಲು ಸಾಧ್ಯವಿದೆ.

ಹೊಸ ವರ್ನಾ ಸೆಡಾನ್ ಕಾರಿನ ಬೆಲೆ 10.9 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) . ವಿಶೇಷ ಅಂದರೆ ಈ ಕಾರು ಇಂದು ಬಿಡುಗಡೆ ಮಾಡಲಾಗಿದೆ. ಲಾಂಚ್ ಆದ ಕೆಲವೇ ಗಂಟೆಗಳಲ್ಲಿ 8,000ಕ್ಕೂ ಅಧಿಕ ಕಾರು ಬುಕ್ ಆಗಿವೆ. ನೂತನ ಕಾರು ಏರೋಡೈನಾಮಿಕ್  ಫ್ರೇಮ್ ಹೊಂದಿದೆ. 8 ಬೋಸ್ ಪ್ರಿಮಿಯರ್ ಸೌಂಡ್ ಸ್ಪೀಕರ್ಸ್, ಹೆಚ್‌ಡಿ ಆಡಿಯೋ ವಿಡಿಯೋ ನ್ಯಾವಿಗೇಶನ್ ಸಿಸ್ಟಮ್, ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

Tap to resize

Latest Videos

undefined

 

ಹ್ಯುಂಡೈ ಪ್ಯಾಲಿಸೈಡ್ to ಹವಲ್ F7; 2023ರಲ್ಲಿ ಬಿಡುಗಡಯಾಗಲಿರುವ 7 ಸೀಟರ್ ಕಾರು!

ಸೇಫ್ಟಿ ಫೀಚರ್ಸ್‌ನಲ್ಲೂ ವರ್ನಾ ಗ್ರಾಹಕರಿಗೆ ಹೊಸ ಕೊಡುಗೆ ನೀಡಿದೆ.ಅಡ್ವಾನ್ಸ್ಡ್  ಡ್ರೈವರ್ ಅಸೆಸ್ಟೆಟೆನ್ಸ್ ಸಿಸ್ಟಮ್(ADAS)ರೇಡರ್ಸ್, ಸೆನ್ಸಾರ್, ರಸ್ತೆಯಲ್ಲಿನ ಅಡೆ ತಡೆ ಪತ್ತೆ ಹಚ್ಚಲು ಡೆಟೆಕ್ಟ್ ಕ್ಯಾಮಾರ, ಆಟೋನೋಮಸ್ ಎಮರ್ಜೆನ್ಸಿ ಬ್ರೇಕಿಂಗ್, ಲೇನ್ ಕೀಪ್ ಅಸಿಸ್ಟ್, ಅಡಾಪ್ಟೀವ್ ಕ್ರೂಸ್ ಕಂಟ್ರೋಲ್, ಲೇನ್ ಎಕ್ಸಿಟ್ ವಾರ್ನಿಂಗ್ ಸೇರಿದಂತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಫೀಚರ್ಸ್ ನೀಡಲಾಗಿದೆ.

ಹೊಸ ಕಾರು 1.5 ಲೀಟರ್ MPi ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ GDi ಪೆಟ್ರೋಲ್ ಎಂಜಿನ್ ಹಾಗೂ 1.5 ಲೀಟರ್ ಟರ್ಬೋ GDi ಪೆಟ್ರೋಲ್ ಎಂಜಿನ್ ವೇರಿಯೆಂಟ್‌ನಲ್ಲಿ ಲಭ್ಯವಿದೆ.  117.5 kW ಪಿಎಸ್ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.   

ನೂತನ ವರ್ನಾ ಕಾರು ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ಸ್ಲಾವಿಯಾ, ವೋಕ್ಸ್‌ವ್ಯಾಗನ್ ವರ್ಚಸ್, ಹೋಂಡಾ ಸಿಟಿ ಸೇರಿದಂತೆ ಪ್ರಿಮಿಯಂ ಸೇಡಾನ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಹ್ಯುಂಡೈ ಐಯೋನಿಕ್ 6 ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲೇ ಸೋಲ್ಡ್ ಔಟ್

ಫೆಬ್ರವರಿಯಲ್ಲಿ ದಾಖಲೆಯ 3.35 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ
ಕಳೆದ ತಿಂಗಳು ದೇಶಾದ್ಯಂತ 3.35 ಲಕ್ಷ ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಈ ಮೂಲಕ ವಾಹನ ಉತ್ಪಾದನಾ ಕಂಪನಿಗಳು ಮಾರಾಟದಲ್ಲಿ ಉತ್ತಮ ಪ್ರಗತಿ ದಾಖಲಿಸಿವೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.11ರಷ್ಟುಹೆಚ್ಚಳವಾಗಿದೆ. ಜೊತೆಗೆ ಫೆಬ್ರವರಿ ತಿಂಗಳಲ್ಲಿ ಯಾವುದೇ ವರ್ಷವೊಂದರಲ್ಲಿ ದಾಖಲಾದ ಗರಿಷ್ಠ ಮಾರಾಟದ ಪ್ರಮಾಣವಾಗಿದೆ. ಈ ಪೈಕಿ ಮಾರುತಿ ಸುಜುಕಿ ಶೇ.11ರಷ್ಟು(1.55 ಲಕ್ಷ), ಹ್ಯುಂಡೈ ಶೇ.7ರಷ್ಟು(47001), ಮಹೀಂದ್ರ ಶೇ.10 (30358), ಕಿಯಾ ಶೇ.36 (24600), ಬಜಾಜ್‌ ಆಟೋ ಶೇ.36ರಷ್ಟು(1.53 ಲಕ್ಷ) ಪ್ರಗತಿ ಸಾಧಿಸಿವೆ.
 

click me!