ಹೊಸ ವರ್ನಾ ಸೆಡಾನ್ ಅನ್ನು ಪ್ರೋತ್ಸಾಹಿಸಲು ಎಲಾಂಟ್ರಾ ಬಿಡುಗಡೆ ಮುಂದೂಡಲಿದೆ ಹ್ಯುಂಡೈ

By Suvarna News  |  First Published Aug 23, 2022, 12:15 PM IST

ಭಾರತೀಯ ಮಾರುಕಟ್ಟೆಯಲ್ಲಿ ವರ್ನಾ ಕಾರನ್ನು ಪ್ರೋತ್ಸಾಹಿಸಲು ಹ್ಯುಂಡೈ ಕಂಪನಿ ನಿರ್ಧರಿಸಿದ್ದು, ಇದಕ್ಕಾಗಿ ಹೊಸ ಎಲಾಂಟ್ರಾ ಕಾರಿನ ಬಿಡುಗಡೆಯನ್ನು ಮುಂದೂಡಲಿದೆ.


ಹ್ಯುಂಡೈ ಮೋಟಾರ್ಸ್‌ (Hyundai Motors) 2020ರಲ್ಲಿ ಏಳನೇ ತಲೆಮಾರಿನ ಎಲಾಂಟ್ರಾ (Elantra) ಅನ್ನು ಅಂತರಾಷ್ಟ್ರೀಯವಾಗಿ ಅನಾವರಣಗೊಳಿಸಿತ್ತು. ಆದರೆ, ಭಾರತದಲ್ಲಿ ಮಾತ್ರ ಈ ಸೆಡಾನ್‌ (Sedan) ಕಾರನ್ನು ಇನ್ನೂ ಬಿಡುಗಡೆಗೊಳಿಸುವ ಯೋಚನೆ ಕಂಪನಿಗೆ ಇದ್ದಂತಿಲ್ಲ. ಮೂಲಗಳ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ವರ್ನಾ (Verna)ಕಾರನ್ನು ಪ್ರೋತ್ಸಾಹಿಸಲು ಕಂಪನಿ ನಿರ್ಧರಿಸಿದೆ.

ಹೊಸ ವರ್ನಾ ಹಿಂದಿನ ಮಾದರಿಗಿಂತ ದೊಡ್ಡದಿದೆ ಮತ್ತು ಹೆಚ್ಚು ವಿಶಾಲವಾಗಿರುತ್ತದೆ. ಇದು ಮಧ್ಯಮ ಗಾತ್ರದ ಮತ್ತು ಕಾರ್ಯನಿರ್ವಾಹಕ ಸೆಡಾನ್ ವಿಭಾಗವನ್ನು ಒಳಗೊಂಡಿದೆ ಎಂದು ಕಾರು ತಯಾರಕರು ಮಾಹಿತಿ ನೀಡಿದ್ದಾರೆ.

Tap to resize

Latest Videos

undefined

ಅಮೆರಿಕ ಸೇರಿದಂತೆ ಹೆಚ್ಚಿನ ಮಾರುಕಟ್ಟೆಗಳಲ್ಲಿ ಬೇಡಿಕೆಯಲ್ಲಿರುವ ವರ್ನಾ, ಹೋಂಡಾ ಸಿಟಿ, ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್‌ನಂತಹ(Volkswagen virtus) ಮಧ್ಯಮ ಗಾತ್ರದ ಸೆಡಾನ್‌ಗಳಿಗೆ ಸ್ಪರ್ಧೆ ನೀಡುತ್ತದೆ. ಭಾರತದಲ್ಲಿ ಸೆಡಾನ್‌ ವಿಭಾಗ ಬಹುತೇಕ ಬೆಲೆ ಕಳೆದುಕೊಂಡಿದೆ. ಇತ್ತೀಚೆಗೆ ಸ್ಕೋಡಾ ಈ ವಲಯದಲ್ಲಿ ಸ್ಕೋಡಾ ಆಕ್ಟೇವಿಯಾ ಮಾದರಿಯನ್ನು ಬಿಡುಗಡೆಗೊಳಿಸಿದೆ. ಅದರ ಬೆಲೆಯು ಈಗಾಗಲೇ 30 ಲಕ್ಷ ರೂ.ಗಳ ಗಡಿಯನ್ನು ದಾಟಿದೆ ಮತ್ತು ಹೊಸ ಹ್ಯುಂಡೈ ಟಕ್ಸನ್ 35 ಲಕ್ಷ ರೂಪಾಯಿಗಳ ಗಡಿಯನ್ನು ದಾಟಿದೆ. ಆದ್ದರಿಂದ ಈ ವಲಯದಲ್ಲಿ ಹೊಸ ವೆರ್ನಾದ ಹೆಚ್ಚಿನ (ಮತ್ತು ಹೆಚ್ಚು ದುಬಾರಿ) ವೇರಿಯಂಟ್‌ಗಳನ್ನು ಹೇಗೆ ಸ್ವೀಕರಿಸಲಾಗಿದೆ ಎಂಬುದನ್ನು ನೋಡಿದ ನಂತರವೇ ಹ್ಯುಂಡೈ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

ಮುಂದಿನ-ಪೀಳಿಗೆಯ ಹ್ಯುಂಡೈ ವೆರ್ನಾ (BN7) ದಕ್ಷಿಣ ಭಾರತದಲ್ಲಿ ಕೆಲವು ತಿಂಗಳ ಹಿಂದೆ ಪರೀಕ್ಷಿಸಲ್ಪಟ್ಟಿತು. ಕಂಪನಿಯ  ಹೊಸ ಮಾದರಿಯ ವಿನ್ಯಾಸವನ್ನು ಮರೆಮಾಚಿದೆ. ಆದರೆ ಕೆಲವು ಸ್ಟೈಲಿಂಗ್ ಸೂಚನೆಗಳು ಹೊಸ ವೆರ್ನಾದ ವಿನ್ಯಾಸವು ಹೊಸ ಎಲಾಂಟ್ರಾದಿಂದ ಹೆಚ್ಚು ಸ್ಫೂರ್ತಿ ಪಡೆದಿದೆ ಎಂದು ಸೂಚಿಸಿದೆ. ಇದು ಹೆಡ್‌ಲ್ಯಾಂಪ್‌ಗಳೊಂದಿಗೆ ವಿಲೀನಗೊಳ್ಳುವ ವಿಶಾಲವಾದ ಗ್ರಿಲ್‌ನೊಂದಿಗೆ ಇತ್ತೀಚಿನ 'ಸೆನ್ಸುಯಸ್ ಸ್ಪೋರ್ಟಿನೆಸ್' ವಿನ್ಯಾಸವನ್ನು ಅನುಸರಿಸುತ್ತದೆ.

ಇದು ಹಿಂದಿನ ವೆರ್ನಾಸ್‌ನಂತೆಯೇ ಮೊನಚಾದ ಛಾವಣಿಯೊಂದಿಗೆ ಫಾಸ್ಟ್‌ಬ್ಯಾಕ್ ತರಹದ ಶೈಲಿಯನ್ನು ಸೂಚಿಸಿವೆ. ಹಿಂಭಾಗದಲ್ಲಿ, ಹೊಸ ಎಲಾಂಟ್ರಾವನ್ನು ಹೋಲುವ ಕೋನೀಯ ಟೈಲ್ ಲ್ಯಾಂಪ್‌ಗಳನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹೊಸ ವೆರ್ನಾ ADAS ತಂತ್ರಜ್ಞಾನ ಸೇರಿದಂತೆ ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ವೆರ್ನಾ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ಗಳೊಂದಿಗೆ ಬರಲಿದೆ. ಹ್ಯುಂಡೈ ಕ್ರೆಟಾದಿಂದ ಹೆಚ್ಚು ಶಕ್ತಿಶಾಲಿ 1.4-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಸೇರಿಸಬಹುದು. ವಿಶೇಷವಾಗಿ ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್ ಎರಡೂ 1.5-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರಲಿದೆ.

ಇದನ್ನೂ ಓದಿ: ಹೊಚ್ಚ ಹೊಸ ಮಾರುತಿ ಅಲ್ಟೋ ಕೆ10 ಬಿಡುಗಡೆ, 3.99 ಲಕ್ಷ ರೂಪಾಯಿ, 25 ಕಿ.ಮೀ ಮೈಲೇಜ್!

ಹೊಸ ಸೆಡಾನ್ ಈ ವರ್ಷ ಜಾಗತಿಕವಾಗಿ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ ಮತ್ತು 2023 ರಲ್ಲಿ ಭಾರತದ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಎಲಾಂಟ್ರಾ ಕ್ಯಾಸ್ಕೇಡಿಂಗ್ ಗ್ರಿಲ್ ಮತ್ತು ಟಿ-ಆಕಾರದ ಎಲ್ಇಡಿ ಟೈಲ್-ಲೈಟ್‌ಗಳಂತಹ ಆಸಕ್ತಿದಾಯಕ ಅಂಶಗಳೊಂದಿಗೆ ಗಮನಾರ್ಹವಾದ 'ಪ್ಯಾರಾಮೆಟ್ರಿಕ್ ಡೈನಾಮಿಕ್ಸ್' ವಿನ್ಯಾಸ ಥೀಮ್ ಅನ್ನು ಒಳಗೊಂಡಿದೆ. ಹೊಸ-ಜೆನ್ ಸೆಡಾನ್ ಹುಂಡೈನ K3 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಎಲಾಂಟ್ರಾ 56 ಎಂಎಂ ಉದ್ದ, 51 ಎಂಎಂ ಕಡಿಮೆ ಮತ್ತು 26 ಎಂಎಂ ಅಗಲವಿದೆ, ವೀಲ್‌ಬೇಸ್‌ನಲ್ಲಿ 20 ಎಂಎಂ ಹೆಚ್ಚಳವಾಗಿದೆ.

ಇದನ್ನೂ ಓದಿ: ಹೊಸ ದಾಖಲೆ ಬರೆದ ಕಿಯಾ ಸೆಲ್ಟೋಸ್, 3 ವರ್ಷದಲ್ಲಿ 3 ಲಕ್ಷ ಕಾರು ಮಾರಾಟ!

ಅಂತರಾಷ್ಟ್ರೀಯವಾಗಿ, Elantra 2.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು CVT ಗೇರ್‌ಬಾಕ್ಸ್‌ ಹೊಂದಿರುತ್ತದೆ. ಮತ್ತು ಮೊದಲ ಬಾರಿಗೆ ಹ್ಯುಂಡೈ ಇದನ್ನು ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ನೀಡುತ್ತಿದೆ.1.6-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಜೊತೆಗೆ 32kW ಎಲೆಕ್ಟ್ರಿಕ್ ಮೋಟಾರ್ ಜೊತೆಗೆ 139hp ಪವರ್‌ ಮತ್ತು 264Nm ಟಾರ್ಕ್ ಉತ್ಪಾದಿಸುತ್ತದೆ. ಕಳೆದ ವರ್ಷ, ಹ್ಯುಂಡೈ 276hp, 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್‌ನಿಂದ ನಡೆಸಲ್ಪಡುವ Elantra N ಅನ್ನು ಅನಾವರಣಗೊಳಿಸಿತು.

click me!