ಟಾಟಾ ಪಂಚ್ ಪ್ರತಿಸ್ಪರ್ಧಿ ಹ್ಯುಂಡೈ ಎಕ್ಸ್‌ಟರ್ ಜು.10ಕ್ಕೆ ಬಿಡುಗಡೆ, ಬೆಲೆ 6 ಲಕ್ಷ ರೂ!

By Suvarna News  |  First Published May 26, 2023, 5:27 PM IST

ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಹೊಚ್ಚ ಹೊಸ ಹ್ಯುಂಡೈ ಎಕ್ಸ್‌ಟರ್ ಮಿನಿ SUV ಕಾರು ಬಿಡುಗಡೆಯಾಗುತ್ತಿದೆ. ಕೈಗೆಟುವ ಬೆಲೆಯಲ್ಲಿ ಅತ್ಯುತ್ತಮ ಕಾರು ಖರೀದಿಸುವ ಅವಕಾಶ ಬಂದಿದೆ. ನೂತನ ಕಾರಿನ ಫೀಚರ್ಸ್ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.
 


ನವದೆಹಲಿ(ಮೇ.26): ಭಾರತದಲ್ಲಿ SUV ಕಾರುಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಸಬ್ ಕಾಂಪಾಕ್ಟ್ ಹಾಗೂ ಮಿನಿ SUV ಕಾರುಗಳ ಬೇಡಿಕೆ ದುಪ್ಪಟ್ಟು. ಹೀಗಾಗಿ ಬಹುತೇಕ ಎಲ್ಲಾ ಕಾರು ಕಂಪನಿಗಳು ಹೊಸ ಹೊಸ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹ್ಯುಂಡೈ ಭಾರತದಲ್ಲಿ ಎಕ್ಸ್‌ಟರ್ ಮಿನಿ SUV ಕಾರು ಬಿಡುಗಡೆ ಮಾಡುತ್ತಿದೆ. ಈ ಕಾರು ಟಾಟಾ ಪಂಚ್, ಮಾರುತಿ ಸುಜುಕಿ ಫ್ರಾಂಕ್ಸ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ. ಜುಲೈ 10 ರಂದು ಈ ಕಾರು ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ನೂತನ ಕಾರಿ ಬೆಲೆ 6 ಲಕ್ಷ ರೂಪಾಯಿಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುವ ಸಾಧ್ಯತೆ ಇದೆ.

ಹ್ಯುಂಡೈ ಎಕ್ಸ್‌ಟರ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಜೊತೆಗೆ ಸಿಎನ್‌ಜಿ ವೇರಿಯೆಂಟ್ ಕೂಡ ಲಭ್ಯವಿದೆ. ಪೆಟ್ರೋಲ್ ಎಂಜಿನ್ ಕಾರು 82 BHP ಪವರ್ ಹಾಗೂ 114 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸಿಎನ್‌ಜಿ ಕಾರಿನ ಪವರ್ ಹಾಗೂ ಟಾರ್ಕ್ ಕೊಂಚ ಕಡಿಮೆಯಾಗಲಿದೆ. ಪೆಟ್ರೋಲ್ ಎಂಜಿನ್ ಕಾರು 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌‌ಮಿಶನ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಆದರೆ ಸಿಎನ್‌ಜಿ ವರ್ಶನ್ ಕಾರಿನಲ್ಲಿ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಕಾರು ಮಾತ್ರ ಲಭ್ಯವಿದೆ.

Tap to resize

Latest Videos

undefined

25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹ್ಯುಂಡೈ ವರ್ನಾ, ಐಷಾರಾಮಿ ಕಾರಿಗೆ ಪೈಪೋಟಿ!

ಹ್ಯುಂಡೈ ಎಕ್ಸ್‌ಟರ್ EX, S, SX, SX(O) ಹಾಗೂ ಟಾಪ್ ಮಾಡೆಲ್ SX(O) ಕೆನೆಕ್ಟ್ ಸೇರಿದಂತೆ 5 ವಿರಿಯೆಂಟ್‌ನಲ್ಲಿ ಲಭ್ಯವಿದೆ. ನೂತನ ಕಾರಿನಲ್ಲಿ ಹಲವು ಹೊಸ ಫೀಚರ್ಸ್ ಪರಿಚಯಿಸಲಾಗಿದೆ. ಡ್ಯಾಶ್ ಕ್ಯಾಮ್ ಹಾಗೂ ಡ್ಯುಯೆಲ್ ಕ್ಯಾಮೆರ ಹೊಂದಿದೆ. ಸ್ಮಾರ್ಟ್ ಎಲೆಕ್ಟ್ರಿಕ್ ಸನ್‌ರೂಫ್ ಹೊಂದಿದ್ದು, ವಾಯ್ಸ್ ಕಮಾಂಡ್ ಮೂಲಕ ಈ ಸನ್‌ರೂಫ್ ಕಾರ್ಯನಿರ್ವಹಿಸಲಿದೆ. ಒಪನ್ ಸನ್‌ರೂಫ್ ಅಥವಾ ಐ ವಾಂಟ್ ಟು ಸಿ ಸ್ಕೈ ಅನ್ನೋ ಧ್ವನಿ ಮೂಲಕ ಹೇಳುವ ಕಮಾಂಡನ್ನು ಈ ಸನ್‌ರೂಫ್ ಅರ್ಥ ಮಾಡಿಕೊಂಡು ಕಾರ್ಯನಿರ್ವಹಿಸಲಿದೆ. ಎಲೆಕ್ಟ್ರಕ್ ಸನ್‌ರೂಫ್ ಟಾಪ್ ಮಾಡೆಲ್ ಕಾರಿನಲ್ಲಿ ಮಾತ್ರ ಲಭ್ಯವಿದೆ.

ಹ್ಯುಂಡೈ ಈಗಾಗಲೇ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ಸು ಕಂಡಿದೆ. ಕಬ್ ಕಾಂಪಾಕ್ಟ್ ಸೆಗ್ಮೆಂಟ್ ಅಡಿಯಲ್ಲಿ ಹ್ಯುಂಡೆ ವೆನ್ಯೂ ಅತ್ಯಂತ ಯಶಸ್ಸು ಸಾಧಿಸಿದರೆ, ಪ್ರಿಮೀಯಂ ಸೆಗ್ಮೆಂಟ್‌ನಲ್ಲಿ ಕ್ರೆಟಾ ದಾಖಲೆಯ ಮಾರಾಟ ಕಂಡಿದೆ. ಕ್ರೇಟಾ ಹಲವು ಅಪ್‌ಡೇಟ್ ಮೂಲಕ ಹೊಸ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ.   ಹ್ಯುಂಡೈ ಕ್ರೇಟ ನೈಟ್‌ ಎಡಿಶನ್‌ ಮಧ್ಯಮ ಗಾತ್ರದ ಎಸ್‌ಯುವಿ ಆಗಿದ್ದು, ಇದರ ಎಕ್ಸ್‌ಶೋ ರೂಮ್‌ ಬೆಲೆ: 13,51,200 ರು. ಪೆಟ್ರೋಲ್‌ ಹಾಗೂ ಡೀಸೆಲ್‌ ಎಂಜಿನ್‌ಗಳೆರಡರಲ್ಲೂ ಲಭ್ಯ. ಈ ಕಾರ್‌ನ ಹೊರಭಾಗ ಹಾಗೂ ಒಳಭಾಗವನ್ನು ಕಡುಗಪ್ಪು ಬಣ್ಣದಿಂದ ವಿನ್ಯಾಸ ಮಾಡಲಾಗಿದೆ. 1.5 ಪೆಟ್ರೋಲ್‌ ಹಾಗೂ ಡೀಸೆಲ್‌ ಇಂಜಿನ್‌ಗಳಿವೆ. ಇದರ ಜೊತೆಗೆ ಹ್ಯುಂಡೈ ಕ್ರೇಟಾ ಎಂವೈ ಕಾರ್‌ ಅನ್ನೂ ಮೇಲ್ದರ್ಜೆಗೇರಿಸಲಾಗಿದೆ. 1.5 ಪೆಟ್ರೋಲ್‌ ಎಂಜಿನ್‌ ಹೊಂದಿರುವ ಈ ಕಾರ್‌ನ ಹಲವು ದಾಖಲೆ ಬರೆದಿದೆ. 

ಹ್ಯುಂಡೈ ಪ್ಯಾಲಿಸೈಡ್ to ಹವಲ್ F7; 2023ರಲ್ಲಿ ಬಿಡುಗಡಯಾಗಲಿರುವ 7 ಸೀಟರ್ ಕಾರು!
 

click me!