Kia Price Hike ಕರೆನ್ಸ್ ಕಾರು ಬಿಡುಗಡೆಗೂ ಮುನ್ನವೇ ಗ್ರಾಹಕರಿಗೆ ಶಾಕ್ ನೀಡಿದ ಕಿಯಾ!

By Suvarna News  |  First Published Jan 10, 2022, 5:38 PM IST
  • ಕಿಯಾ ಕೆರೆನ್ಸ್ MPV ಕಾರಿನ ಬುಕಿಂಗ್ ಜ.14ರಿಂದ ಆರಂಭ
  • ಬಹುನಿರೀಕ್ಷಿತ ಕಾರು ಬಿಡುಗಡೆಗೂ ಮುನ್ನ ಬೆಲೆ ಏರಿಕೆ ಶಾಕ್
  • ಭಾರತದಲ್ಲಿ ಕಿಯಾ ಕಾರುಗಳ ಬೆಲೆ ಹೆಚ್ಚಳ

ನವದೆಹಲಿ(ಜ.10): ಅತ್ಯಲ್ಪ ಅವಧಿಯಲ್ಲಿ ಭಾರತದ ಕಾರು ಮಾರುಕಟ್ಟೆ(Car Market) ಮಿಂಚಿನ ಸಂಚಲನ ಸೃಷ್ಟಿಸಿದ ಕಿಯಾ ಮೋಟಾರ್ಸ್(Kia Motors) ಇದೀಗ ಕಿಯಾ ಕರೆನ್ಸ್ MPV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ನೂತನ ಕಾರಿನ ಬುಕಿಂಗ್ ಜನವರಿ 14 ರಿಂದ ಆರಂಭಗೊಳ್ಳಲಿದೆ. ಹೊಸ ಕಾರಿನ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಕಿಯಾ ಶಾಕ್ ನೀಡಿದೆ. ಕಿಯಾ ತನ್ನ ಎಲ್ಲಾ ಕಾರುಗಳ ಮೇಲೆ ಬೆಲೆ(Price Hike) ಹೆಚ್ಚಳ ಮಾಡತ್ತಿದೆ.

ಭಾರತದ ಮಾರುಕಟ್ಟೆಯಲ್ಲಿ ಸದ್ಯ ಕಿಯಾ ಮೋಟಾರ್ಸ್ ಕಂಪನಿಯ ಸೆಲ್ಟೋಸ್, ಕಿಯಾ ಕಾರ್ನಿವಲ್ ಹಾಗೂ ಕಿಯಾ ಸೋನೆಟ್ ಕಾರು ಲಭ್ಯವಿದೆ. ಇದೀಗ ಈ ಮೂರು ಕಾರುಗಳ ಬೆಲೆ ಹೆಚ್ಚಳವಾಗುತ್ತಿದೆ. ಗರಿಷ್ಠ 54,000 ರೂಪಾಯಿ ಹೆಚ್ಚಳವಾಗುತ್ತಿದೆ. ಹೀಗಾಗಿ ಹೊಸ ಕಾರು ಖರೀದಿಸುವ ಗ್ರಾಹಕರು(Customers) ಇದೀಗ ಹೆಚ್ಚುವರಿ ಹೊರೆ ಹೊರಬೇಕಾಗಿದೆ.

Tap to resize

Latest Videos

Kia Carens MPV ಬಿಡುಗಡೆಗೂ ಮುನ್ನ ಕಿಯಾ ಕರೆನ್ಸ್ ಕಾರಿನ ವೇರಿಯೆಂಟ್, ಎಂಜಿನ್, ಫೀಚರ್ಸ್ ಮಾಹಿತಿ ಬಹಿರಂಗ!

ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕ, ಸಾರಿಗೆ ಸೇರಿದಂತೆ ಹಲವು ಕಾರಣಗಳಿಂದ  ಉತ್ಪಾದನಾ ವೆಚ್ಚ(Production) ಹೆಚ್ಚಾಗಿದೆ. ಹೀಗಾಗಿ ಅನಿವಾರ್ಯವಾಗಿ ಕಾರಿನ ಬೆಲೆ ಹೆಚ್ಚಳ ಮಾಡತ್ತಿದ್ದೇವೆ ಎಂದು ಕಿಯಾ ಮೋಟಾರ್ಸ್ ಹೇಳಿದೆ. ಕಿಯಾ  ಸೆಲ್ಟೋಸ್ ಕಾರಿಗೆ 6,000 ದಂದ 11,000 ರೂಪಾಯಿವರೆಗೆ ಹೆಚ್ಚಿಸಲಾಗುತ್ತಿದೆ. ಇನ್ನು ಕಿಯಾ ಸೊನೆಟ್ ಕಾರಿನ ಬೆಲೆಯನ್ನು 4,000 ರೂಪಾಯಿಯಿಂದ 20,000 ರೂಪಾಯಿ ವರೆಗೆ ಹೆಚ್ಚಳ ಮಾಡಲಾಗುತ್ತಿದೆ. ಇನ್ನು ಕಿಯಾ ಕಾರ್ನಿವಲ್ ಬೆಲೆಯನ್ನು 50,000 ರೂಪಾಯಿಯಿಂದ 54,000 ರೂಪಾಯಿವರೆಗೆ ಹೆಚ್ಚಿಸಲಾಗುತ್ತಿದೆ.

ಮತ್ತಷ್ಟು ಆಕರ್ಷಕ, ಹೆಚ್ಚುವರಿ ಫೀಚರ್ಸ್, ಕಿಯಾ ಸೆಲ್ಟೋಸ್ ಆ್ಯನಿವರ್ಸಡಿ ಎಡಿಶನ್ ಕಾರು ಲಾಂಚ್!

ಕಿಯಾ ಮೋಟಾರ್ಸ್ ಕಾರಿನ ಬೆಲೆ ಹೆಚ್ಚಳ:
ಕಿಯಾ ಸೆಲ್ಟೋಸ್:  6,000 ರೂ ನಿಂದ 11,000 ರೂಪಾಯಿ
ಕಿಯಾ ಸೊನೆಟ್:  4,000 ರೂ ನಿಂದ 20,000 ರೂಪಾಯಿ
ಕಿಯಾ ಕಾರ್ನಿವಲ್:  50,000 ರೂ ನಿಂದ  54,000 ರೂಪಾಯಿ

ಕಿಯಾ ಕರೆನ್ಸ್:
ಕಿಯಾ ಮೋಟಾರ್ಸ್ ಶೀಘ್ರದಲ್ಲೇ ಕಿಯಾ ಕರೆನ್ಸ್ MPV ಕಾರು ಬಿಡುಗಡೆ ಮಾಡುತ್ತಿದೆ. ಈಗಾಗಲೇ ಅನಾವರಣಗೊಂಡಿರುವ ಕಿಯಾ ಕರೆನ್ಸ್(Kia Carens) ಕಾರು ಜನವರಿ 14 ರಿಂದ ಬುಕಿಂಗ್ ಆರಂಭಗೊಳ್ಳಲಿದೆ. ಅತ್ಯಂತ ಆಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಕಾರಾಗಿದೆ. ನೂತನ ಕಾರು ಮೂರು ಎಂಜಿನ್‌ಗಳಲ್ಲಿ ಲಭ್ಯವಿದೆ. 1.5 ಲೀಟರ್ ಪೆಟ್ರೋಲ್, 1.4 ಲೀಟರ್ ಟರ್ಬೋ ಪೆಟ್ರೋಲ್ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಕಾರು ಲಭ್ಯವಿದೆ.

ಕಿಯಾ ಕರೆನ್ಸ್ ಕಾರಿನ ಅಂದಾಜು ಬೆಲೆ 15 ರಿಂದ 18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  1.5 ಲೀಟರ್ ಪೆಟ್ರೋಲ್ ಎಂಜಿನ್ ಕಾರು 113bhp ಹಾಗೂ 144Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಈ ಆಯ್ಕೆಯಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹೊಂದಿದೆ. ಇನ್ನು 1.4 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕಾರು 138bhp ಹಾಗೂ 242Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಹಾಗೂ 7 ಸ್ಪೀಡ್ DCT ಟ್ರಾನ್ಸ್‌ಮಿಶನ್ ಲಭ್ಯವಿದೆ. ಇನ್ನು ಡೀಸೆಲ್ ಎಂಜಿನ್ ಕಾರು 113bhp ಹಾಗೂ 250Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಡೀಸೆಲ್ ಎಂಜಿನ್ ಕಾರಿನಲ್ಲಿ 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯೂ ಲಭ್ಯವಿದೆ.10.25 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಕರೆನ್ಸ್ ಕಾರು ಹ್ಯುಂಡೈ ಅಲ್ಕಜರ್, ಟಾಟಾ ಸಫಾರಿ, ಎಂಜಿ ಹೆಕ್ಟರ್ ಪ್ಲಸ್, ಮಹೀಂದ್ರ XUV700 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.
 

click me!