ಟಾಟಾ, ಮಹೀಂದ್ರಗೆ ಸೆಡ್ಡು ಹೊಡೆಯಲು ಬರುತ್ತಿದೆ ಹೊಂಡಾ O ಆಲ್ಫಾ ಇವಿ, ಡಿ.2ಕ್ಕೆ ಲಾಂಚ್

Published : Oct 17, 2026, 07:53 PM IST
Honda O Alpha EV Coming on December 2

ಸಾರಾಂಶ

ಡಿಸೆಂಬರ್ 2ಕ್ಕೆ ಹೋಂಡಾ 0 ಆಲ್ಫಾ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಅನಾವರಣಗೊಳ್ಳುತ್ತಿದೆ. ಟಾಟಾ ಸಿಯೆರಾ, ಮಹೀಂದ್ರ BE 6 ಸೇರಿದಂತೆ ಪ್ರಮುಖ ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರು ಹಲವು ವಿಶೇಷತೆ ಹೊಂದಿದೆ.

ನವದೆಹಲಿ (ಅ.17) ಎಲೆಕ್ಟ್ರಿಕ್ ಕಾರುಗಳಲ್ಲಿ ಸದ್ಯ ಟಾಟಾ ಮೋಟಾರ್ಸ್ ಹಾಗೂ ಮಹೀಂದ್ರ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದರ ಜೊತೆಗೆ ಎಂಜಿ, ಬಿವೈಡಿ ಸೇರಿದಂತೆ ಹಲವು ಬ್ರ್ಯಾಂಡ್ ಕಾರುಗಳು ಲಭ್ಯವಿದೆ. ಇದೀಗ ಹೋಂಡಾ ಟಾಟಾ,ಮಹೀಂದ್ರ ಸೇರಿದಂತೆ ಪ್ರಮುಖ ಇವಿ ಕಾರುಗಳಿಗೆ ಸೆಡ್ಡು ಹೊಡೆಯಲು ಹೋಂಡಾ ಹೊಂಡಾ O ಆಲ್ಫಾ ಕಾರು ಅನಾವರಣ ಮಾಡುತ್ತಿದೆ. ಡಿಸೆಂಬರ್ 2ರಂದು ಭಾರತದಲ್ಲಿ ಹೊಸ ಕಾರು ಅನಾವರಣವಾಗುತ್ತಿದೆ. ಅತ್ಯಾಕರ್ಷಕ ವಿನ್ಯಾಸ, ಪರ್ಫಾಮೆನ್ಸ್, ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಈ ಕಾರು ಭಾರತದಲ್ಲಿ ಅನಾವರಣಗೊಳ್ಳಲಿದೆ.

ಹೋಂಡಾದ ಮೊದಲ ಇವಿ ಕಾರು

ಹೋಂಡಾ ಭಾರತದಲ್ಲಿ ಹಲವು ಫ್ಯೂಯೆಲ್ ಕಾರುಗಳ ಮೂಲಕ ಉತ್ತಮ ಮಾರುಕಟ್ಟೆ ಹೊಂದಿದೆ. ಇದೀಗ ಹೋಂಡಾ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಂದಾಗಿದೆ. ಮಿಡ್‌ಸೈಜ್ ಎಸ್‌ಯುವಿ ಕಾರಿನ ಮೂಲಕ ಪ್ರತಿಸ್ಪರ್ಥಧಿಗಳಿಗೆ ನಡುಕ ಹಟ್ಟಿಸಲು ಮುಂದಾಗಿದೆ. ವಿನ್ಯಾಸದಲ್ಲಿ ಹಲವು ಹೊಸತನಗಳು ಈ ಕಾರಿನಲ್ಲಿದೆ. ಸಾಮಾನ್ಯವಾಗಿ ಕಾರಿನ ಮುಂಭಾಗ ಹಾಗೂ ಟೇಲ್ ವಿನ್ಯಾಸದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಇದು ಇವಿ ಕಾರುಗಳ ಹೊಸತನಕ್ಕೆ ನಾಂದಿ ಹಾಡಲಿದೆ.

ಜಪಾನ್ ಮೊಬಿಲಿಟಿ ಶೋನಲ್ಲಿ ಈ ಕಾರನ್ನು ಪ್ರದರ್ಶಿಸಲಾಗಿತ್ತು. ಹೊಂಡಾ O ಆಲ್ಫಾ ಕಾರಿನಲ್ಲಿ ಎರಡು ಬ್ಯಾಟರಿ ಪ್ಯಾಕ್ ಬಳಸುವ ಸಾಧ್ಯತೆ ಇದೆ. 65kWh ದಿಂದ 75kWh ಬ್ಯಾಟರಿ ಬಳಸುವ ಸಾಧ್ಯತೆ ಇದೆ. ಥ್ರೀ ಸ್ಪೋಕ್ ಸ್ಟೀರಿಂಗ್ ವೀಲ್, ಟಚ್‌ಸ್ಕ್ರೀನ್ ಇನ್‌ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ಟೆಕ್ ಆಧಾರಿತ ಫೀಚರ್ಸ್ ಈ ಕಾರಿನಲ್ಲಿದೆ.

ಕಾರಿನ ಬೆಲೆ ಎಷ್ಟು?

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಹೋಂಡಾ ಎಲೆಕ್ಟ್ರಿಕ್ ಕಾರಿನ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 17 ಲಕ್ಷ ರೂಪಾಯಿಯಿಂದ 25 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ. ಶೀಘ್ರದಲ್ಲೇ ಕಾರಿನ ಬೆಲೆ ಸೇರಿದಂತೆ ಇತರ ಮಾಹಿತಿಗಳು ಬಹಿರಂಗವಾಗಲಿದೆ.

ಹೊಂಡಾ O ಆಲ್ಫಾ ಎಲೆಕ್ಟ್ರಿಕ್ ಕಾರು ಮಹೀಂದ್ರ ಬಿಇ 6, ಟಾಟಾ ಸಿಯೆರಾ ಇಿ, ಟೋಯೋಟಾ ಅರ್ಬನ್ ಕ್ರೂಸರ್ ಎಬೆಲ್ಲಾ, ಮಾರುತಿ ಸುಜುಕಿ ಇ ವಿಟಾರ ಹಾಗೂ ಹ್ಯುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರಿಗೆ ಪ್ರತಿಸ್ಪರ್ಧಿಯಾಗಿದೆ.

PREV
Read more Articles on
click me!

Recommended Stories

SUV ಕಾರುಗಳತ್ತ ಭಾರತೀಯರ ಒಲವು; ಕಾರು ಸಾಲದಲ್ಲಿ ಬರೋಬ್ಬರಿ 49% ಏರಿಕೆ, EMI ಅವಧಿ ಎಷ್ಟು ಗೊತ್ತಾ?
Watch: ನಿಜವಾಯ್ತು ಹಾರುವ ಕಾರು, ಗಾಳಿಯಲ್ಲಿ ತೇಲಿ, ಪಲ್ಟಿ ಹೊಡೆದ Tesla Roadster ಎಲೆಕ್ಟ್ರಿಕ್ ಕಾರು!