ಭಾರತದಲ್ಲಿ ಹೋಂಡಾ ZR V ಅತ್ಯಾಧುನಿಕ ಹೈಬ್ರಿಡ್ suv ಕಾರು ಬಿಡುಗಡೆ , 22.80 ಕಿ.ಮಿ ಮೈಲೇಜ್

Published : Jul 25, 2026, 09:19 PM IST
Honda ZR-V Hybrid SUV Arrives in India

ಸಾರಾಂಶ

ಎಸ್‌ಯುವಿ ಭಾರತದಲ್ಲಿ ಭಾರಿ ಬೇಡಿಕೆ ಕಾರಾಗಿದೆ. ಇದೀಗ ಹೋಂಡಾ ಅತ್ಯಾಧುನಿಕ ಹೈಬ್ರಿಡ್ ಕಾರು ಬಿಡುಗಡೆ ಮಾಡಿದೆ. ಹಲವು ವಿಶೇಷತೆ, ಸೆನ್ಸಿಂಗ್ ತಂತ್ರಜ್ಞಾನಗಳ ಹೋಂಡಾ ZR-V e:HEV ಕಾರು ಬಿಡುಗಡೆಯಾಗಿದೆ.

ನವದೆಹಲಿ (ಜು.25) ಹೋಂಡಾ ಭಾರತದಲ್ಲಿ ಹೊಸ ಕಾರು ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೈಬ್ರಿ್ ಎಸ್‌ಯುವಿ ಕಾರು ಇದಾಗಿದೆ. ಹೋಂಡಾ ZR-V e:HEV ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಜಪಾನ್‌ನಿಂದ 'ಕಂಪ್ಲೀಟ್ಲಿ ಬಿಲ್ಟ್ ಯುನಿಟ್ ರೂಪದಲ್ಲಿ ನೇರವಾಗಿ ಆಮದು ಮಾಡಿಕೊಳ್ಳುವ ಈ ಕಾರು ಹಲವು ವಿಶೇಷತೆ ಹೊಂದಿದೆ.

ನೂತನ ಕಾರಿನ ಮೈಲೇಜ್

ಪ್ರತಿ ಲೀಟರ್ ಪೆಟ್ರೋಲ್‌ಗೆ 22.80 ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದು, ಕೇವಲ 7.9 ಸೆಕೆಂಡುಗಳಲ್ಲಿ 0 ಯಿಂದ 100 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಹೋಂಡಾ ZR-V ಕಾರಿನಲ್ಲಿ 2.0 ಲೀಟರ್ e:HEV ಸ್ಪೋರ್ಟ್ಸ್ ಹೈಬ್ರಿಡ್ ಪವರ್‌ಟ್ರೇನ್ ಎಂಜಿನ್ ಹೊಂದಿದೆ. 2.0-ಲೀಟರ್ ಡೈರೆಕ್ಟ್ ಇಂಜೆಕ್ಷನ್ ಅಟ್ಕಿನ್ಸನ್-ಸೈಕಲ್ ಎಂಜಿನ್ ಮತ್ತು ಅಡ್ವಾನ್ಸ್ಡ್ ಡ್ಯುಯಲ್-ಮೋಟರ್ ಹೈಬ್ರಿಡ್ ಸಿಸ್ಟಮ್ (e-CVT) ಹೊಂದಿದ್ದು, 184 PS ಗರಿಷ್ಠ ಪವರ್ ಹಾಗೂ 315 Nm ಟಾರ್ಕ್ ಸಾಮರ್ಥ್ಯ ಹೊಂದಿದೆ.

ಕಾರಿನ ಬೆಲೆ

ಹೊಚ್ಚ ಹೊಸ ಹೋಂಡಾ ZR-V ಹೈಬ್ರಿಡ್ ಕಾರಿನ ಆರಂಭಿಕ ಬೆಲೆ ₹47,99,000 (ಎಕ್ಸ್‌-ಶೋರೂಂ). ಈ ಇಂಟೆಲಿಜೆಂಟ್ ಹೈಬ್ರಿಡ್ ಸಿಸ್ಟಮ್ ಪರಿಸ್ಥಿತಿಗೆ ತಕ್ಕಂತೆ ಎಲೆಕ್ಟ್ರಿಕ್ (EV Direct Drive), ಹೈಬ್ರಿಡ್ ಮತ್ತು ಎಂಜಿನ್ ಡ್ರೈವ್ ಮೋಡ್‌ಗಳ ನಡುವೆ ಬದಲಾಗುತ್ತದೆ. ಕಾರಿಗೆ ಸ್ಪೋರ್ಟಿ ಮತ್ತು ಪ್ರೀಮಿಯಂ ಲುಕ್ ನೀಡಲು ಮುಂಭಾಗ ಹಾಗೂ ಹಿಂಭಾಗದಲ್ಲಿ ವಿಶಿಷ್ಟ ಸ್ಟೈಲಿಂಗ್ ನೀಡಲಾಗಿದ್ದು, ಫುಲ್-ಎಲ್‌ಇಡಿ ಲೈಟಿಂಗ್ ಹಾಗೂ 18-ಇಂಚಿನ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ.

22.8 ಸೆಂ.ಮೀ (9-ಇಂಚು) ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದ್ದು, ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡುತ್ತದೆ. 12 ಸ್ಪೀಕರ್ ಹೊಂದಿರುವ ಪ್ರೀಮಿಯಂ ಬೋಸ್ (Bose) ಆಡಿಯೋ ಸಿಸ್ಟಮ್ ಅಳವಡಿಸಲಾಗಿದೆ.25.9 ಸೆಂ.ಮೀ (10.2 ಇಂಚು) ಫುಲ್ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಹಾಗೂ ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಲಭ್ಯವಿದೆ.

ಹೋಂಡಾ ಸೆನ್ಸಿಂಗ್ ತಂತ್ರಜ್ಞಾನದ ಸುರಕ್ಷತೆ

ಹೋಂಡಾ ಸೆನ್ಸಿಂಗ್' ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್ (ADAS) ನೀಡಲಾಗಿದೆ.

ಕೊಲಿಷನ್ ಮಿಟಿಗೇಷನ್ ಬ್ರೇಕಿಂಗ್ ಸಿಸ್ಟಮ್ (CMBS)

ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ (ACC)

ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್ (LKAS)

ರೋಡ್ ಡಿಪಾರ್ಚರ್ ಮಿಟಿಗೇಷನ್ ಸಿಸ್ಟಮ್

ಇತರ ಸೇಫ್ಟಿ ಫೀಚರ್ಸ್:

8 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್ ಮತ್ತು ಮುಂಭಾಗ-ಹಿಂಭಾಗದ ಪಾರ್ಕಿಂಗ್ ಸೆನ್ಸರ್‌ಗಳು.

PREV
Read more Articles on
click me!

Recommended Stories

Upcoming Sub 4 Meter SUVs: ಭಾರತದ ರಸ್ತೆಗಿಳಿಯಲಿವೆ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳು
ಬರುತ್ತಿದೆ ಟಾಟಾ ಟಿಯಾಗೋ ಪ್ರತಿಸ್ಪರ್ಧಿ ನಿಸಾನ್ ಎಲೆಕ್ಟ್ರಿಕ್ ಕಾರು, 259Km ಮೈಲೇಜ್, ಕಡಿಮೆ ಬೆಲೆ