ಹೊಸ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಕಾರ್ ಲಾಂಚ್

By Suvarna News  |  First Published Aug 19, 2021, 6:03 PM IST

ಬಹು ನಿರೀಕ್ಷೆಯ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಸೆಡಾನ್ ಕಾರ್ ಲಾಂಚ್ ಆಗಿದೆ. ಕಾರಿನ ಹೊರಾಂಗಣ ಮತ್ತು ಒಳಾಂಗಣವು ಮರುವಿನ್ಯಾಸಗೊಳಿಸಲಾಗಿದೆ. ಮೂರು ವೆರಿಯೆಂಟ್ ಹಾಗೂ ಐದು ಬಣ್ಣಗಳ ಆಯ್ಕೆಯಲ್ಲಿ ಮಾರಾಟಕ್ಕೆ ಈ ಕಾಲ್ ಲಭ್ಯವಿದೆ.


ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯ ಜನಪ್ರಿಯ ಕಾಂಪಾಕ್ಟ್ ಸೆಡಾನ್ ಹೋಂಡಾ ಅಮೇಜ್ ಈಗ ಹೊಸ ಅವತಾರದಲ್ಲಿ ಗ್ರಾಹಕರ ಮುಂದೆ ಪ್ರತ್ಯಕ್ಷವಾಗಿದೆ. 2021ರ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಸೆಡಾನ್‌ ಬಗ್ಗೆ ಬಹಳ ದಿನಗಳಿಂದಲೂ ಕುತೂಹಲವಿತ್ತು. ಅದೀಗ ಕೊನೆಗೊಂಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಕಾರುಗಳ ಪೈಕಿ ಅಮೇಜ್‌ ಸೆಡಾನ್‌ ಕಾರಿಗೆ ಬೇಡಿಕೆ ಇದೆ. ಹಾಗಾಗಿಯೇ ಬದಲಾದ ಕಾಲದಲ್ಲಿ ಕಂಪನಿಯು ಫೇಸ್‌ಲಿಫ್ಟ್ ವರ್ಷನ್ ಅಮೇಜ್ ಅನ್ನು ಬಿಡುಗಡೆ ಮಾಡಿದೆ. 2021ರ ಹೋಂಡಾ ಅಮೇಜ್ ಫೇಸ್‌ಲಿಫ್ಟ್ ಕಾರಿನ ಬೆಲೆ ದಿಲ್ಲಿಯಲ್ಲಿ 6.32 ಲಕ್ಷ ರೂ.ನಿಂದ ಶುರುವಾಗಿ, 11.15 ಲಕ್ಷ ರೂ.ವರೆಗೂ ತಲುಪತ್ತದೆ. ಇಧು ಶೋರೂಮ್ ಬೆಲೆಯಾಗಿದೆ. 

Latest Videos

undefined

ಸದ್ಯದಲ್ಲೇ ಟಾಟಾದಿಂದ ಹೊಸ ಝಿಪ್ಟ್ರಾನ್ ಟಿಗೋರ್ ಎಲೆಕ್ಟ್ರಿಕ್ ಕಾರ್

ಕಂಪನಿಯು ಈ ಕಾರನ್ನು ಮೂರುವ ವೆರೆಯಿಂಟ್‌ಗಳಲ್ಲಿ ಬಿಡುಗಡೆ ಮಾಡಿದೆ. ಈ ಹಿಂದಿನ ಹೋಂಡಾ ಅಮೇಜ್ ಕಾರಿನ ಬೆಲೆ 6.22 ಲಕ್ಷ ರೂ.ನಿಂದ ಆರಂಭವಾಗಿ 9.99 ಲಕ್ಷ ರೂ.ವರೆಗೂ ಇತ್ತು. ಹಳೆಯ ಅಮೇಜ್‌ಗೆ ಹೋಲಿಸಿದರೆ, ಹೊಸ ಅಮೇಜ್ ಫೇಸ್‌ಲಿಫ್ಟ್ ತುಸು ತುಟ್ಟಿಯಾಗಿದೆ ಎಂದು  ಹೇಳಬಹುದು. 

2021 ಅಮೇಜ್ ಫೇಸ್‌ಲಿಫ್ಟ್ ಕಾರನ್ನ ಬಾಹ್ಯ ಮತ್ತು ಆಂತರಿಕ ನವೀಕರಣಗಳೊಂದಿಗೆ ಪರಿಚಯಿಸಲಾಗಿದೆ. ಇದು ಎಲ್ಇಡಿ ಡಿಆರ್‌ಎಲ್‌ಗಳನ್ನು ಸಂಯೋಜಿಸಿರುವ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳಿಂದ ಸುತ್ತುವರಿದ ಹೊಸ ಸಾಲಿಡ್ ವಿಂಗ್ ಫೇಸ್ ಫ್ರಂಟ್ ಗ್ರಿಲ್ ಹೊಂದಿದೆ. ಇದು ಕಾರಿನ ಒಟ್ಟು ಅಂದವನ್ನೂ ಹೆಚ್ಚಿಸಿದೆ ಎಂದು ಹೇಳಬಹುದು. 

ಮರುವಿನ್ಯಾಸಗೊಳಿಸಲಾದ ಬಂಪರ್‌ಗಳಲ್ಲಿ ನೀವು ಎಲ್ಇಡಿ ಫಾಕ್ ಲ್ಯಾಂಪ್ಸ್‌ಗಳನ್ನು ಕಾಣಬಹುದು. ಹಿಂಬದಿಯಲ್ಲಿ ಸಿ ಆಕಾರದ ಎಲ್ಇಡಿ ಕಾಂಬಿನೇಷನ್ ಲ್ಯಾಂಪ್ಸ್‌ಗಳಿವೆ. ಹಿಂಬದಿಯ ಬಂಪರ್ ಕೂಡ ಮರುವಿನ್ಯಾಸಗೊಳಿಸಲಾಗಿದೆ. ಈ ಕಾಂಪಾಕ್ಟ್ ಸೆಡಾನ್ ಕಾರ್‌ನಲ್ಲಿ ನೀವು, ಹೊಸ ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಟಚ್ ಸೆನ್ಸರ್ ಆಧಾರಿತ ಸ್ಮಾರ್ಟ್ ಎಂಟ್ರಿ ಸಿಸ್ಟಮ್ ಕಾಣಬಹುದು. ಹಾಗೆಯೇ 15 ಇಂಚಿನ ಡೈಮಂಡ್-ಕಟ್ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳ ಹೊಸ ಸೆಟ್ ಅನ್ನು ಈ ಕಾರ್ ಹೊಂದಿದೆ.

ಹಬ್ಬದ ಸೀಸನ್‌ಗೆ ಎರಡು ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದ ಒಮೆಗಾ ಸೀಕಿ

ಹೊಸ ಅಮೇಜ್ ಫೇಸ್‌ಲಿಫ್ಟ್ ಕಾರ್ ಹೊರಮೈ ಐದು ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಗೋಲ್ಡನ್ ಬ್ರೌನ್ ಮೆಟಾಲಿಕ್, ಪ್ಲಾಟಿನಮ್ ವೈಟ್ ಪರ್ಲ್, ರೆಡಿಯೆಂಟ್ ರೆಡ್ ಮೆಟಾಲಿಕ್, ಲೂನಾರ್ ಸಿಲ್ವರ್ ಮೆಟಾಲಿಕ್ ಮತ್ತು ಮೀಟೋರಾಯ್ಡ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ಈ ಕಾರ್ ಮಾರಾಟಕ್ಕೆ ಸಿಗಲಿದೆ. 

ಹೊರ ವಿನ್ಯಾಸದಲ್ಲಿ ಮಾತ್ರವಲ್ಲದೇ ಅಮೇಜ್ ಫೇಸ್‌ಲಿಫ್ಟ್ ಆವೃತ್ತಿ ಕಾರಿನ ಒಳಾಂಗಣ ವಿನ್ಯಾಸದಲ್ಲಿ ನೀವು ಸಾಕಷ್ಟು ಸುಧಾರಣೆಗಳನ್ನು ಗುರುತಿಸಬಹುದಾಗಿದೆ. ನಿಮಗೆ ಕಣ್ಣಿಗೆ ಕಾಣುವ ಬದಲಾವಣೆ ಎಂದರೆ- 7 ಇಂಚ್ ಡಿಜಿಪ್ಯಾಡ್ 2.0 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್. ಇದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹಾಗೂ ವೆಬ್‌ಲಿಂಕ್‌ಗೆ ಸಪೋರ್ಟ್ ಮಾಡುತ್ತದೆ. 
 

ಈ ಹೊಸ ಕಾರಿನಲ್ಲಿ ಮಲ್ಟಿ ವ್ಯೂ ಕ್ಯಾಮೆರಾ ಅಳವಡಿಸಲಾಗಿದೆ. ಅಂದರೆ, ನಾರ್ಮಲ್, ವೈಡ್ ಮತ್ತು ಟಾಪ್ ಡೌನ್ ವ್ಯೂ ಅನ್ನು ನೀವು ನೋಡಬಹುದು. ಸೀಟುಗಳಲ್ಲಿ ಹೊಸ ಮಾದರಿ ಸ್ಟಿಚಿಂಗ್ ಪ್ಯಾಟರ್ನ್ ಕಾಣಬಹುದು. ಎಫ್1 ಪ್ರೇರಿತ ಪ್ಯಾಡಲ್ ಶಿಫ್ಟ್, ಆಟೋಮೆಟಿಕ್ ಕ್ಲೈಮೆಟ್ ಕಂಟ್ರೋಲ್, ಒನ್ ಫುಸ್ ಸ್ಟಾರ್ಟ್ ಮತ್ತು ಸ್ಟಾಪ್  ಬಟನ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ಇನ್ನಿತರ ಫೀಚರ್‌ಗಳನ್ನು ಗಮನಿಸಬಹುದಾಗಿದೆ.

#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!

1.2 ಲೀಟರ್ ಐ ವಿಟಿಇಸಿ ಎಂಜಿನ್ ಮತ್ತು 1.5 ಲೀಟರ್ ಐ ಟಿಟಿಇಸಿ ಡೀಸೆಲ್ ಎಂಜಿನ್ ಗಳ ಆಯ್ಕೆಯಲ್ಲಿ ಈ ಹೊಸ ಅಮೇಜ್ ಫೇಸ್‌ಲಿಫ್ಟ್ ಸೆಡಾನ್ ಮಾರಾಟಕ್ಕೆ ಸಿಗಲಿದೆ. ಈ ಎಂಜಿನ್ ಗರಿಷ್ಠ 90ಪಿಎಸ್ ಪವರ್ ಹಾಗೂ 110 ಗರಿಷ್ಠ ಟಾರ್ಕ್ ಪವರ್ ಉತ್ಪಾದಿಸುತ್ತದೆ. 5 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ ಅಳವಡಿಸಲಾಗಿದೆ. 

click me!