ರೈಲ್ವೇ ಮೂಲಕ ವಾಹನ ರವಾನೆ: 174 ಮಿಲಿಯನ್ ಲೀ. ತೈಲ ಉಳಿಸಿದ ಮಾರುತಿ ಸುಜುಕಿ

By Suvarna News  |  First Published Jun 14, 2022, 6:02 PM IST

ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ), ಕಳೆದ ವರ್ಷ  2.33 ಲಕ್ಷ ವಾಹನಗಳನ್ನು ರೈಲುಗಳ ಮೂಲಕ ರವಾನೆ ಮಾಡಿದೆ


ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ)( Maruti Suzuki India- MSI), ಕಳೆದ ವರ್ಷ  2.33 ಲಕ್ಷ ವಾಹನಗಳನ್ನು ರೈಲುಗಳ ಮೂಲಕ ರವಾನೆ ಮಾಡಿದೆ. ಇದು ಇಲ್ಲಿಯವರೆಗೆ ಒಂದು ಹಣಕಾಸು ವರ್ಷದಲ್ಲಿ ರವಾನೆ ಮಾಡಿರುವ ಅತಿ ಹೆಚ್ಚಿನ ವಾಹನವಾಗಿದೆ. ಇದರಿಂದ 2021-22ನೇ ಸಾಲಿನಲ್ಲಿ ಕಂಪನಿ ರೈಲಿನ ಮೂಲಕ ಆಮದು ಮಾಡಿಕೊಂಡಿರುವ ವಾಹನಗಳ ಪ್ರಮಾಣ ಶೇ.23ರಷ್ಟು ಏರಿಕೆಯಾಗಿದೆ. 2020-21ನೇ ಆರ್ಥಿಕ ವರ್ಷದಲ್ಲಿ ಇದರ ಪ್ರಮಾಣ ಶೇ.1.89 ಲಕ್ಷದಷ್ಟಿತ್ತು.

 ಭಾರತವು ತನ್ನ ತೈಲ ಅಗತ್ಯದ ಶೇ.85 ರಷ್ಟು ಆಮದು ಮಾಡಿಕೊಳ್ಳುತ್ತದೆ ಮತ್ತು ಆದ್ದರಿಂದ ದೇಶದ ಪ್ರತಿ ಹನಿ ತೈಲವು ಮುಖ್ಯವಾಗಿದೆ. ಮಾರುತಿ ಸುಜುಕಿ ಇಂಡಿಯಾ ಕಳೆದ ಎಂಟು ವರ್ಷಗಳಲ್ಲಿ ಒಟ್ಟು 174 ಮಿಲಿಯನ್ ಲೀಟರ್ ತೈಲವನ್ನು ಉಳಿಸಿದೆ. ಈ ಸಮಯದಲ್ಲಿ, ಮಾರುತಿ (Maruti) ರೈಲ್ವೆ ಮೂಲಕ ದೇಶದ ವಿವಿಧ ಭಾಗಗಳಲ್ಲಿ 11 ಲಕ್ಷ ಕಾರುಗಳನ್ನು ಮಾರಾಟಕ್ಕೆ ರವಾನಿಸಿದೆ. ಇದರಿಂದ 4,800 ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಕಂಪನಿ ನೆರವಾದಂತಾಗಿದೆ.

Tap to resize

Latest Videos

ಮಾರುತಿಯ ಈ ಕ್ರಮವು ಟ್ರಕ್‌ಗಳ ಸುಮಾರು 1,56,000 ಟ್ರಿಪ್‌ಗಳನ್ನು ಕಡಿಮೆ ಮಾಡಿದೆ ಮತ್ತು 174 ಮಿಲಿಯನ್ ಲೀಟರ್ ಇಂಧನವನ್ನು ಉಳಿಸಿದೆ. 2021-22 ರ ಹಣಕಾಸು ವರ್ಷದಲ್ಲಿ, ಮಾರುತಿ ರೈಲ್ವೇ ಮೂಲಕ ದಾಖಲೆಯ 2.33 ಲಕ್ಷ ವಾಹನಗಳನ್ನು ದೇಶದ ವಿವಿಧ ಭಾಗಗಳಲ್ಲಿ ಮಾರಾಟಕ್ಕೆ ಕಳುಹಿಸಿದೆ. ಇದು ರೈಲ್ವೆ ಮೂಲಕ ಮಾರುತಿ ಕಳುಹಿಸಿದ ಅತಿದೊಡ್ಡ ರವಾನೆಯಾಗಿದೆ.

ಸುಮಾರು ಎಂಟು ವರ್ಷಗಳ ಹಿಂದೆ ರೈಲ್ವೇ (Indian Railways) ಮೂಲಕ ಮಾರುತಿ ತನ್ನ ವಾಹನಗಳನ್ನು ದೇಶದ ವಿವಿಧ ಭಾಗಗಳಿಗೆ ಸಾಗಿಸಲು ಆರಂಭಿಸಿತ್ತು ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಂಪನಿಯು 2020-21ರಲ್ಲಿ ರೈಲ್ವೆ ಮೂಲಕ ದೇಶದ ವಿವಿಧ ಭಾಗಗಳಿಗೆ 1.89 ಲಕ್ಷ ವಾಹನಗಳನ್ನು ಕಳುಹಿಸಿದೆ.

ಎಲೆಕ್ಟ್ರಿಕ್ ಬಸ್ ಪರಿಚಯಿಸಿದ ಸ್ವಿಚ್ ಇಂಡಿಯಾ

ಮಾರುತಿ ಸುಜುಕಿ ಕಾರುಗಳ ರವಾನೆಗೆ ರೈಲ್ವೆ ಇಲಾಖೆಯ ಪರವಾನಗಿ ಪಡೆದಿರುವುದು ಹೇಗೆ ಎಂಬುದು ಕುತೂಹಲಕಾರಿ ವಿಷಯ. ಈ ಕುರಿತು ಪ್ರತಿಕ್ರಿಯಿಸಿರುವ ಮಾರುತಿ ಸುಜುಕಿಯ ಕಾರ್ಯನಿರ್ವಾಹಕ ನಿರ್ದೇಶಕ ರಾಹುಲ್ ಭಾರ್ತಿ, 2013ರಲ್ಲಿ ರೈಲ್ವೇ ಇಲಾಖೆಯಿಂದ ಆಟೊಮೊಬೈಲ್‌ (Automobile) ಫ್ರೈಟ್‌ ಟ್ರೈನ್‌ ಆಪರೇಟರ್‌ (ಎಎಫ್‌ಟಿಒ-AFTO) ಇಂದ ಪರವಾನಗಿ ಪಡೆದ ಮೊದಲ ಆಟೊಮೊಬೈಲ್‌ ತಯಾರಕ ಕಂಪನಿ ಮಾರುತಿ ಸುಜುಕಿ. ಈ ಪರವಾನಗಿಯಿಂದ ಕಂಪನಿ, ರೈಲ್ವೇ ಸಂಪರ್ಕದ ಮೂಲಕ ಅತಿ-ವೇಗದ, ಹೆಚ್ಚು ಸಾಮರ್ಥ್ಯದ ವಾಹನಗಳನ್ನು ರವಾನೆ ಮಾಡಲು ಸಾಧ್ಯವಾಯಿತು ಎಂದರು.

 ರೈಲ್ವೇ ಮೂಲಕ ಕಾರುಗಳನ್ನು ಕಳುಹಿಸುವುದರಿಂದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ರಸ್ತೆಯ ಸಂಚಾರ ದಟ್ಟಣೆಯನ್ನು ಸಹ ನಿವಾರಿಸುತ್ತದೆ. 2014-15 ನೇ ಸಾಲಿನಲ್ಲಿ ಕಂಪನಿಯು 66,000 ಕಾರುಗಳನ್ನು ರೈಲ್ವೆ ಮೂಲಕ ಕಳುಹಿಸಿದೆ ಎಂದು ಅವರು ಹೇಳಿದರು. ಕಂಪನಿಯು ತನ್ನ ರೈಲುಗಳನ್ನು ಕಳುಹಿಸಲು ರೈಲ್ವೆಯ ಬಳಕೆಯನ್ನು ಹೆಚ್ಚಿಸಲಿದೆ ಎಂದು ಅವರು ಹೇಳಿದರು.

ಪ್ರಸ್ತುತ, ಕಂಪನಿಯು ದೇಶದ ವಿವಿಧ ಭಾಗಗಳಿಗೆ ಕಳುಹಿಸುವ ರೈಲುಗಳಲ್ಲಿ ಶೇ. 15 ರಷ್ಟು ರೈಲುಗಳನ್ನು ರೈಲ್ವೇ ಮೂಲಕ ಸಾಗಿಸಲಾಗುತ್ತದೆ. ಕಂಪನಿಯು 41 ರೈಲ್ವೇ ರೇಕ್‌ಗಳನ್ನು ಹೊಂದಿದೆ. ಪ್ರತಿ ರೇಕ್ 300 ವಾಹನಗಳ ಸಾಮರ್ಥ್ಯವನ್ನು ಹೊಂದಿದೆ.

ಪ್ರಸ್ತುತ ಕಂಪನಿ ದೆಹಲಿ-ಎನ್‌ಸಿಆರ್‌ ಮತ್ತು ಗುಜರಾತ್‌ನಲ್ಲಿ ಆರು ಲೋಡಿಂಗ್‌ ಟರ್ಮಿನಲ್‌ಗಳನ್ನು ಬಳಕೆ ಮಾಡುತ್ತದೆ ಮತ್ತು ಬೆಂಗಳೂರು, ಮುಂಬೈ, ಗುವಾಹಟಿ, ಇಂದೋರ್‌, ಅಹಮದಾಬಾದ್‌ ಸೇರಿ 16 ತಲುಪುವ ಟರ್ಮಿನಲ್‌ಗಳನ್ನು ಹೊಂದಿದೆ. ಇದು ಇದು ರಸ್ತೆ ಸಾರಿಗೆಗಿಂತ ಶೇ.50ರಷ್ಟು ವೇಗವಾಗಿ ರವಾನೆ ಮಾಡಬಲ್ಲದು ಮತ್ತು ಸಾಮಾನ್ಯವಾಗಿ 16 ದಿನಗಳಲ್ಲಿ ತೆಗೆದುಕೊಳ್ಳುತ್ತದೆ.

 

 

click me!