ಕೈಗೆಟುಕುವ ದರದಲ್ಲಿ ಮಾರಾಟಕ್ಕಿದೆ ವಿಜಯ್ ಮಲ್ಯ ಮರ್ಸಿಡಿಸ್ ಮೇಬ್ಯಾಕ್ 62 ಕಾರು!

By Chethan Kumar  |  First Published Jul 26, 2024, 4:49 PM IST

ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ದುಬಾರಿ ಕಾರುಗಳ ಪೈಕಿ ಅಪರೂಪದ, ಕೆಲವೇ ಕೆಲವು ಮಂದಿಯಲ್ಲಿರುವ ಒರಿಜನ್ ಮರ್ಸಿಡಿಸ್ ಮೇಬ್ಯಾಕ್ ಕಾರು ಇದೀಗ ಕೈಗೆಟುಕುವ ದರದಲ್ಲಿ ಮಾರಾಟಕ್ಕಿದೆ. ಆನ್‌ಲೈನ್ ಮೂಲಕವೇ ಬುಕಿಂಗ್ ಕೂಡ ಮಾಡಬಹುದು.
 


ಬೆಂಗಳೂರು(ಜು.26) ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಭಾರತದ ಬಹುತೇಕ ಆಸ್ತಿಗಳು ಮುಟ್ಟಗೋಲು ಹಾಕಿಕೊಲ್ಳಲಾಗಿದೆ. ಈ ಪೈಕಿ ಕಾರು, ಪ್ರೈವೇಟ್ ಜೆಟ್ ಸೇರಿದಂತೆ ಹಲವು ಐಷಾರಾಮಿ ವಸ್ತುಗಳು ಸೇರಿವೆ. ಭಾರತದಲ್ಲಿ ಬೆರಳೆಣಿಕೆ ವ್ಯಕ್ತಿಗಳ ಪೈಕಿ ಮಲ್ಯ ಅವರ ಬಳಿಯೂ ಈ ಕಾರಿದೆ. ಮಲ್ಯ ಅವರ ಈ ಅಪರೂಪದ ಮರ್ಸಿಡಿಸ್ ಬೆಂಜ್ ಒರಿಜನ್ ಮೇಬ್ಯಾಕ್ ಕಾರು ಮಾರಾಟಕ್ಕಿದೆ. ಮರ್ಸಿಡಿಸ್ ಬೆಂಜ್ ಮೇಬ್ಯಾಕ್ 62 ಕಾರು ಇದೀಗ ಸುಲಭವಾಗಿ ಖರೀದಿಸಲು ಸಾಧ್ಯವಿದೆ. 

ಮೇಬ್ಯಾಕ್ ಸೀರಿಸ್‌ನ ಒರಿಜಲ್ ಮೇಬ್ಯಾಕ್ 62. ಈ ಮಾಡೆಲ್ 2013ರಲ್ಲಿ ಸ್ಥಗಿತಗೊಂಡಿದೆ. ಇದಾದ ಬಳಿಕ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಜಿಎಲ್‌ಎಸ್ 600, ಎಸ್ 580 ಹಾಗೂ ಎಸ್ 680 ಸೀರಿಸ್ ಕಾರು ಮಾರುಕಟ್ಟೆಯಲ್ಲಿದೆ. ಆದರೆ ಒರಿಜಲ್ ಮೇಬ್ಯಾಕ್ ಕಾರು ಅನ್ನೋ ಹೆಗ್ಗಳಿಕೆಗೆ ಮೇಬ್ಯಾಕ್ 62 ಪಾತ್ರವಾಗಿದೆ. ಈ ಕಾರು ಭಾರತದಲ್ಲಿ ಕೆಲವೇ ಕೆಲವು ಮಂದಿಯಲ್ಲಿದೆ. ಈ ಪೈಕಿ ವಿಜಯ್ ಮಲ್ಯ ಕೂಡ ಒಬ್ಬರಾಗಿದ್ದರು. ಆದರೆ ಈ ಕಾರುಗಳು ಸದ್ಯ ವಿಜಯ್ ಮಲ್ಯ ಬಳಿ ಇಲ್ಲ. ವಿಜಯ್ ಬಳಸಿದ ಈ ಕಾರು ಇದೀಗ ಮಾರಾಟಕ್ಕೆ ಲಭ್ಯವಿದೆ. ಸೆಕೆಂಡ್ ಹ್ಯಾಂಡ್ ಕಾರು ಡೀಲರ್ ಬಿಗ್ ಬಾಯ್ ಟಾಯ್ಝ್ ಈ ಕಾರನ್ನು ಮಾರಟಕ್ಕಿಟ್ಟಿದೆ.

Tap to resize

Latest Videos

undefined

ನನ್ನ ಜೀವನದಲ್ಲಿ ಸರ್‌ನೇಮ್ ಯಾವತ್ತೂ ನೆರವಾಗಿಲ್ಲ, ಬರಿ ಅವಮಾನವೇ ಎಂದ ಸಿದ್ಧಾರ್ಥ್ ಮಲ್ಯ!

2009ರ ಮಾಡೆಲ್ ಮೇಬ್ಯಾಕ್ 62 ಕಾರಿಗೆ ಸದ್ಯದ ಬೆಲೆ 2.49 ಕೋಟಿ ರೂಪಾಯಿ. ವಿಜಯ್ ಮಲ್ಯ ಬಳಸಿದ ನಂಬರ್ ಹಾಗೇ ಇದೆ. ಈ ಕಾರಿಗೆ ವಿಜಯ್ ಮಲ್ಯ 9999 ನಂಬರ್ ಲಕ್ಷ ಲಕ್ಷ ರೂಪಾಯಿ ನೀಡಿ ಖರೀದಿಸಿದ್ದರು. ಇನ್ನು ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶ ರಿಜಿಸ್ಟ್ರೇಶನ್ ಹೊಂದಿದೆ. ಕಪ್ಪು ಹಾಗೂ ಗೋಲ್ಡನ್ ಡ್ಯುಯೆಲ್ ಟೋನ್ ಬಣ್ಣದ ಈ ಕಾರು ಅತ್ಯಂತ ಆಕರ್ಷವಾಗಿದೆ. ಇದು ವಿಜಯ್ ಮಲ್ಯ ವಿಶೇಷವಾಗಿ ಸೂಚಿಸಿದ ಬಣ್ಣವಾಗಿದೆ.

ಈ ಕಾರು ಕೇವಲ 33,971 ಕಿಲೋಮೀಟರ್ ಕ್ರಮಿಸಿದೆ. 5.5 ಲೀಟರ್ ಟ್ವಿನ್ ಟರ್ಬೋ ಎಂಜಿನ್ ಹೊಂದಿರುವ ಈ ಕಾರು ಉತ್ತಮ ಕಂಡೀಷನ್‌ನಲ್ಲಿದೆ. 2019ರ ಮರ್ಸಿಡೀಸ್ ಬೆಂಜ್ ವಿಂಟೇಜ್ ಕಾರು ರ್ಯಾಲಿಯಲ್ಲೂ ಈ ಕಾರು ಪಾಲ್ಗೊಂಡಿತ್ತು. ಸೆಡಾನ್ ಕಾರು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ವಿಜಯ್ ಮಲ್ಯ ಕಾರು ಖರೀದಿಸಲು ಇಚ್ಚಿಸುವವರು ಅಧಿಕೃತ ಡೀಲರ್ ಸಂಪರ್ಕಿಸಬಹದು.  
ಒಂದು ಕಾಲದಲ್ಲಿ ಬಿಲಿಯನೇರ್‌ ಶ್ರೀಮಂತರಾಗಿ ಈಗ ದಿವಾಳಿಯಾಗಿರುವ ಭಾರತದ ಟಾಪ್‌ ಉದ್ಯಮಿಗಳ ಲಿಸ್ಟ್

click me!