ಬೆಂಗಳೂರಿನ ರಸ್ತೆಯಲ್ಲಿ ಫೆರಾರಿ ಸವಾರಿ, ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಲು ನೋವಾಗುತ್ತೆ ಎಂದ ಫ್ಯಾನ್ಸ್!

By Suvarna News  |  First Published Nov 9, 2023, 4:57 PM IST

ಬೆಂಗಳೂರಿನಲ್ಲಿ ಇತರ ಎಲ್ಲಾ ನಗರಕ್ಕಿಂತ ಹೆಚ್ಚಿನ ಸೂಪರ್ ಕಾರುಗಳಿವೆ. ಇಲ್ಲಿ ಸೂಪರ್ ಕಾರು ಮಾರಾಟದಲ್ಲೂ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಫೆರಾರಿ ಕಾರುಗಳು ಬೆಂಗಳೂರಿನ ರಸ್ತೆಯಲ್ಲಿ ರ್ಯಾಲಿ ನಡೆಸಿತ್ತು. ಇಂತಹ ಸೂಪರ್ ಕಾರು ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಿದರೆ ಬೇಸರವಾಗುತ್ತದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.


ಬೆಂಗಳೂರು(ನ.09) ಐಟಿ ಸಿಟಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರಿನಲ್ಲಿ ಶ್ರೀಮಂತರ ಪಟ್ಟಿ ದೊಡ್ಡದಿದೆ. ಇದಕ್ಕಿಂತ ಹೆಚ್ಚಾಗಿ ವಿಶ್ವದ ಎಲ್ಲಾ ದುಬಾರಿ ಕಾರುಗಳು ಇಲ್ಲಿವೆ. ಮತ್ತೊಂದು ವಿಶೇಷ ಅಂದರೆ ಬೆಂಗಳೂರಿನಲ್ಲಿ ಸೂಪರ್ ಕಾರುಗಳ ಸಂಖ್ಯೆ ಇತರ ನಗರಕ್ಕಿಂತ ಹೆಚ್ಚಿದೆ. ಇತ್ತೀಚೆಗೆ ಬೆಂಗಳೂರಿನ ರಸ್ತೆಯಲ್ಲಿ ಇಟಾಲಿಯನ್ ಸೂಪರ್ ಕಾರು ಫೆರಾರಿ ಅಬ್ಬರ ನಡೆಸಿತ್ತು. ಒಂದಕ್ಕಿಂತ ಒಂದು ಮಿಗಿಲಾದ, ಕಣ್ಣು ಕುಕ್ಕುವ ಕಾರುಗಳು ಬೆಂಗಳೂರಿನ ರಸ್ತೆಯಲ್ಲಿ ಸದ್ದು ಮಾಡಿತ್ತು. ಈ ವಿಡಿಯೋ ಅತೀ ಹೆಚ್ಚು ವೀಕ್ಷಣೆ ಹಾಗೂ ಕಮೆಂಟ್ ಪಡೆದಿದೆ. ಬೆಂಗಳೂರಿನಲ್ಲಿ ನಡೆದ ಫೆರಾರಿ ಮಾಲೀಕರ ರ್ಯಾಲಿಗೆ ಫೆರಾರಿ ಕಾರು ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ದುಬಾರಿ ಕಾರುಗಳು ಈ ರೀತಿ ಟ್ರಾಫಿಕ್‌ನಲ್ಲಿ ಸಿಲುಕಿ ಒದ್ದಾಡುತ್ತಿರುವುದನ್ನು ನಮ್ಮಿಂದ ನೋಡಲು ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

pavangamemaster ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೆರಾರಿ ಕಾರುಗಳ ಸಾವರಿ ವಿಡಿಯೋ ಹಂಚಿಕೊಳ್ಳಲಾಗಿದೆ.ಬೆಂಗಳೂರು ರಸ್ತೆಯಲ್ಲಿ ಫೆರಾರಿ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಉದ್ಯಮಿ ಅಶನೀರ್ ಗ್ರೋವರ್ ಮಾಡಿರುವ ಕಮೆಂಟ್ ವೈರಲ್ ಆಗಿದೆ. ಒಂದೇ ಬಾರಿ ಬೆಂಗಳೂರು ರಸ್ತೆಯಲ್ಲಿ ಫೆರಾರಿ ಕಾರುಗಳು. ಆದರೆ ಇಂತಹ ಕುದರೆಗಳು ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿರುವುದು ನೋಡಲು ನೋವಾಗುತ್ತದೆ ಎಂದು ಅಶನೀರ್ ಗ್ರೋವರ್ ಕಮೆಂಟ್ ಮಾಡಿದ್ದಾರೆ.

Tap to resize

Latest Videos

undefined

Viral Video: ಶ್ರೀಮಂತನ ಈ ಕೆಲಸ ನೋಡಿ ದಂಗಾದ ನೆಟ್ಟಿಗರು!

6 ಕೋಟಿ, 7 ಕೋಟಿ ರೂಪಾಯಿ ಕಾರುಗಳ ಈ ರೀತಿ ಟ್ರಾಫಿಕ್ ಸಿಲುಕಿ ಒದ್ದಾಡುತ್ತಿದೆ. ಇದಕ್ಕಿಂತ  3 ಲಕ್ಷ ರೂಪಾಯಿ ಸಣ್ಣ ಕಾರು ಲೇಸು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಅತ್ಯುತ್ತಮ ವಿಡಿಯೋ, ಬಣ್ಣ ಬಣ್ಣದ ಕಾರು, ಆದರೆ ಬೆಂಗಳೂರಿನ ರಸ್ತೆ ವಾಸ್ತವವೇ ಈ ವಿಡಿಯೋದಲ್ಲಿ ಹೈಲೈಟ್ ಆಗುತ್ತಿದೆ ಎಂದು ಮತ್ತೆ ಕೆಲವರು ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ನಗರದಲ್ಲಿನ ಸಂಚಾರ ದಟ್ಟಣೆ ವಿಶ್ವದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಬೆಂಗಳೂರಿನ ಟ್ರಾಫಿಕ್ ಕುರಿತ ಮೀಮ್ಸ್, ಟ್ರೋಲ್ ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತದೆ. ಇದರ ನಡುವೆ ಫೆರಾರಿ ಕಾರುಗಳು ಬೆಂಗಳೂರು ರಸ್ತೆಯಲ್ಲಿ ಸಿಲುಕಿರುವ ವಿಡಿಯೋಗಳು ಮತ್ತೆ ಮೀಮ್ಸ್‌ಗೆ ಆಹಾರವಾಗುತ್ತಿದೆ. 

 

 
 
 
 
 
 
 
 
 
 
 
 
 
 
 

A post shared by GM Pavan (@pavangamemaster)

 

ಸೂಪರ್ ಕಾರು ರಸ್ತೆಗಿಳಿದ ಖುಷಿಯಲ್ಲಿ ಹಲವರು ವಿಡಿಯೋ ಮಾಡಿ ಹಾಕಿದ್ದಾರೆ. ಸೂಪರ್ ಕಾರುಗಳ ವೇಗ, ಶಬ್ದ, ಹಾಗೂ ರೋಡ್ ಗ್ರಿಪ್ , ರಸ್ತೆಯಲ್ಲಿ ಬಣ್ಣ ಬಣ್ಣದ ಕಾರುಗಳನ್ನು ನೋಡುವುದೇ ಚೆಂದ. ಆದರೆ ಬೆಂಗಳೂರು ರಸ್ತೆಯಲ್ಲಿ ಈ ಕಾರುಗಳು ಮುಂದೆ ಸಾಗದೆ, ಶಬ್ಧ ಮಾಡದೆ ಸೊರಗಿರುವುದನ್ನು ಕಾರು ಪ್ರಿಯಲು ನೋಡಲು ಇಷ್ಟಪಡುವುದಿಲ್ಲ.

7.50 ಕೋಟಿ ರೂ ಫೆರಾರಿ SF90 ಕಾರಿನಲ್ಲಿ ಅಕಾಶ್ ಅಂಬಾನಿ ಜಾಲಿ ಡ್ರೈವ್!

ಬೆಂಗಳೂರಿನ ರಸ್ತೆಯಲ್ಲಿ ಸೂಪರ್ ಕಾರುಗಳ ರ್ಯಾಲಿಗಳು ಹೊಸದಲ್ಲ. ಫೆರಾರಿ, ಲ್ಯಾಂಬೋರ್ಗಿನಿ, ಪೊರ್ಶೆ, ಬೆಂಟ್ಲಿ, ಆಸ್ಟನ್ ಮಾರ್ಟಿನ್ ಆಡಿ ಸೇರಿದಂತೆ ಹಲವು ಕಾರುಗಳು ರಸ್ತೆಯಲ್ಲಿ ಕಾಣಸಿಗುತ್ತದೆ. ಇನ್ನು ಈ ಕಾರುಗಳ ರ್ಯಾಲಿಗಳು ಆಯೋಜನೆಗೊಳ್ಳುತ್ತದೆ. 
 

click me!