ನಿಮ್ಮ ಯಾವುದೇ ಕಾರನ್ನು ಸ್ಮಾರ್ಟ್‌ ಕಾರು ಮಾಡುತ್ತೆ ಜಿಯೋದ ಈ ಸಾಧನ: 58% ಡಿಸ್ಕೌಂಟ್‌ ಕೂಡ ಇದೆ!

By BK Ashwin  |  First Published Nov 6, 2023, 12:43 PM IST

ನಿಮ್ಮ ಹಳೆಯ ಕಾರಿಗೆ ಸ್ಮಾರ್ಟ್‌ ಕಾರಿನ ವೈಶಿಷ್ಟ್ಯಗಳನ್ನು ನೀಡಲು ಜಿಯೋ ಮೋಟಿವ್‌ ಎಂಬ ಸಾಧನವನ್ನು ಮುಖೇಶ್‌ ಅಂಬಾನಿ ಬಿಡುಗಡೆ ಮಾಡಿದ್ದಾರೆ. ಈ ಸಾಧನದ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ವಿವರ..


ನವದೆಹಲಿ (ನವೆಂಬರ್ 6, 2023): ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇತ್ತೀಚೆಗೆ ಜಿಯೋಮೋಟೀವ್ ಎಂಬ ಸಾಧನವನ್ನು ಬಿಡುಗಡೆ ಮಾಡಿದ್ದಾರೆ. ಇದು ಪಾಕೆಟ್ ಗಾತ್ರದ OBD (ಹೊರಹೋಗುವ ಡಯಲರ್) ಸಾಧನವಾಗಿದ್ದು, ಇದು ಯಾವುದೇ ಕಾರನ್ನು ನಿಮಿಷಗಳಲ್ಲಿ ಸ್ಮಾರ್ಟ್ ಕಾರಾಗಿ ಪರಿವರ್ತಿಸುತ್ತದೆ. ಈ ಹಿನ್ನೆಲೆ ಹಳೆಯ ಅಥವಾ ಬೇಸಿಕ್‌ ಮಾಡೆಲ್‌ ಕಾರನ್ನು ಸ್ಮಾರ್ಟ್‌ ಕಾರನ್ನಾಗಿ ಮಾಡಲು ಇದನ್ನು ಅಳವಡಿಸಬಹುದು ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್ ಮಾಡೆಲ್‌ಗಳು ಇಂಟರ್ನೆಟ್ ಸಂಪರ್ಕದೊಂದಿಗೆ ಬರುತ್ತದೆ. ಇದರಿಂದ ಬಳಕೆದಾರರು ತಮ್ಮ ಕಾರಿನ ಆಂತರಿಕ ಒಳನೋಟಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಲೊಕೇಷನ್‌, ಎಂಜಿನ್ ಆರೋಗ್ಯ ಮತ್ತು ಡ್ರೈವಿಂಗ್ ಕಾರ್ಯಕ್ಷಮತೆಯೂ ಸೇರಿದೆ. ಆದರೆ ನೀವು ಹಳೆಯ ಅಥವಾ ಮೂಲ ಮಾಡೆಲ್‌ನ ಹೊಸ ವಾಹನವನ್ನು ಓಡಿಸಿದರೆ ಹಲವು ಫೀಚರ್‌ಗಳು ಇರೋದಿಲ್ಲ.

Tap to resize

Latest Videos

undefined

ಇದನ್ನು ಓದಿ: ಅದ್ಭುತ ವೈಶಿಷ್ಟ್ಯಗಳುಳ್ಳ ಜಿಯೋ ಸ್ಮಾರ್ಟ್‌ ಗ್ಲಾಸ್‌ ಅನಾವರಣ: ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಪೈಪೋಟಿಗಿಳಿದ ಅಂಬಾನಿ!

ಆದರೆ, ನೀವು ಈಗ ನಿಮ್ಮ ಕಾರಿನಲ್ಲಿ ಯಾವುದೇ ನಿರ್ಣಾಯಕ ಮರು-ವೈರಿಂಗ್ ಇಲ್ಲದೆ ಈ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಹೊಂದಬಹುದು. ಇದಕ್ಕೆ  JioMotive ಸಾಧನ ಅಳವಡಿಸಿಕೊಂಡರೆ ಸಾಕು ಎಂದು ರಿಲಯನ್ಸ್ ಡಿಜಿಟಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

JioMotive (Jio ನ OBD) ಬಳಸಿಕೊಂಡು ಕಾರನ್ನು ಸ್ಮಾರ್ಟ್ ಕಾರಾಗಿ ಪರಿವರ್ತಿಸುವುದು ಹೇಗೆ?
OBD ಎಂಬುದು ಪ್ಲಗ್ - ಅಂಡ್ - ಪ್ಲೇ ಸಾಧನವಾಗಿದ್ದು ಅದು ಡ್ಯಾಶ್‌ಬೋರ್ಡ್‌ ಅಡಿಯಲ್ಲಿ ಇರುವ ಕಾರಿನ ಪೋರ್ಟ್‌ಗೆ ಸರಳವಾಗಿ ಪ್ಲಗ್ ಮಾಡುತ್ತದೆ. ಇದನ್ನು ಒಮ್ಮೆ ಇನ್ಸ್ಟಾಲ್‌ ಮಾಡಿದ ನಂತರ, ಇ - ಸಿಮ್ ಬಳಸಿ ಜಿಯೋ ನೆಟ್‌ವರ್ಕ್‌ಗೆ ಸಂಪರ್ಕಗೊಳ್ಳುತ್ತದೆ. ಹಾಗೂ, ಇದಕ್ಕಾಗಿ ನಿಮಗೆ ಪ್ರತ್ಯೇಕ ಡೇಟಾ ಯೋಜನೆ ಅಗತ್ಯವಿಲ್ಲ.

ಇದನ್ನೂ ಓದಿ: ವಿಶ್ವದ ನಂ. 1 ಶ್ರೀಮಂತ ವ್ಯಕ್ತಿಗೆ ಈ ಕ್ಷೇತ್ರದಲ್ಲಿ ಪೈಪೋಟಿ ನೀಡಲಿರೋ ಏಷ್ಯಾದ ನಂ. 1 ಶ್ರೀಮಂತ ಮುಖೇಶ್‌ ಅಂಬಾನಿ!

ಜಿಯೋ ಮೋಟಿವ್‌ನ ವೈಶಿಷ್ಟ್ಯಗಳು:

  • ನೈಜ-ಸಮಯದ ಟ್ರ್ಯಾಕಿಂಗ್: ನಿಮ್ಮ ವಾಹನದ ಲೊಕೇಷನ್‌ ಮತ್ತು ಚಲನೆಯನ್ನು ತಕ್ಷಣವೇ ಮೇಲ್ವಿಚಾರಣೆ ಮಾಡುತ್ತದೆ. ನಿಮ್ಮ ವಾಹನವನ್ನು ಬೇರೆಯವರು ಬಳಸಿದಾಗಲೂ ಸಹ ಮಾನಿಟರ್‌ ಮಾಡುತ್ತೆ.
  • ಇ - ಸಿಮ್: ಇದು ಜಿಯೋ ಸಿಮ್‌ ಜೊತೆಗೆ ನೀವು ಈಗಾಗಲೇ ಖರೀದಿಸಿದ ಮೊಬೈಲ್ ಡೇಟಾ ಪ್ಲ್ಯಾನ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳುತ್ತದೆ. ಹೀಗಾಗಿ, ಮತ್ತೊಂದು ಸಿಮ್‌ನ ಅಗತ್ಯವನ್ನು ನಿವಾರಿಸುತ್ತದೆ.
  • ಜಿಯೋ - ಫೆನ್ಸಿಂಗ್: ಇದು ಗ್ರಾಹಕರಿಗೆ ನಕ್ಷೆಯಲ್ಲಿ ವರ್ಚುವಲ್ ಗಡಿಗಳನ್ನು ಹೊಂದಿಸಲು ಅನುಮತಿಸುತ್ತದೆ.
  • ಟೈಮ್‌ ಫೆನ್ಸ್‌: ಪ್ರತಿ ಬಾರಿ ಅವರ ಕಾರನ್ನು 'ಆನ್' ಮಾಡಿದಾಗ ಅದು ಸಿಮ್ ಹೊಂದಿರುವ ವ್ಯಕ್ತಿಗೆ ನೋಟಿಫಿಕೇಷನ್‌ ಕಳುಹಿಸುತ್ತದೆ. ಇದು ಅವರ ಅರಿವಿಲ್ಲದೆ ಚಾಲನೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಡ್ರೈವಿಂಗ್ ಅನಾಲಿಟಿಕ್ಸ್: JioMotive ಸಾಧನ ಕಾರಿನ ವೇಗ, ಆಕ್ರಮಣಕಾರಿ ಬ್ರೇಕಿಂಗ್ ಮತ್ತು ಹೆಚ್ಚಿನವುಗಳಂತಹ ಡೇಟಾವನ್ನು ಸಂಗ್ರಹಿಸುತ್ತದೆ. ಡ್ರೈವಿಂಗ್ ಅಭ್ಯಾಸವನ್ನು ಸುಧಾರಿಸಲು ಇದನ್ನು ಬಳಸಬಹುದು.
  • ರಿಮೋಟ್ ಡಯಾಗ್ನೋಸ್ಟಿಕ್ಸ್: ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ಈ ಸಾಧನವು ಕಾರಿನ ಆರೋಗ್ಯ, ಕಾರ್ಯಕ್ಷಮತೆ ಮತ್ತು ಎಚ್ಚರಿಕೆಗಳನ್ನು ಸಮಯಕ್ಕೆ ಮುಂಚಿತವಾಗಿ ನೀಡುತ್ತದೆ. ಕಾರಿನ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಕಾರಿನ ಲೈಫ್‌ ವಿಸ್ತರಿಸಲು ಇದು ಉಪಯುಕ್ತವಾಗಿದೆ.

JioMotive ಬೆಲೆ: ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್‌ನಲ್ಲಿ ಜಿಯೋಮೋಟಿವ್ ಮೂಲ ಬೆಲೆ 11,999 ರೂ. ಇದೆ. ಆದರೆ, ಸದ್ಯ 58% ರಷ್ಟು ರಿಯಾಯಿತಿ ಅಂದರೆ 4,999 ರೂ. ಗೆ ಲಭ್ಯವಿದೆ. 

ಇದನ್ನೂ ಓದಿ: ಭಾರತದ ಅತಿದೊಡ್ಡ ವಾಣಿಜ್ಯ ಬ್ಯಾಂಕ್‌ ಬ್ರ್ಯಾಂಡ್‌ ರಾಯಭಾರಿಯಾದ ಭಾರತದ ಮಾಜಿ ಕೂಲ್‌ ಕ್ಯಾಪ್ಟನ್‌!

click me!