ಬೆಂಗಳೂರಿನ ಬೀದಿಯಲ್ಲಿ ಡ್ರೈವರ್ ರಹಿತ ಆಟೋನೊಮಸ್ ಕಾರು, ಹೈಟೆಕ್ ಕಾರಿಗೆ ಚಾಲಕರೇ ಬೇಕಿಲ್ಲ!

By Suvarna NewsFirst Published Jul 27, 2023, 3:54 PM IST
Highlights

ಬೆಂಗಳೂರಿನ ರಸ್ತೆಯಲ್ಲಿ ಡ್ರೈವರ್ ರಹಿತ ಆಟೋನೊಮಸ್ ಕಾರು ಓಡಾಡುತ್ತಿದೆ. ಫ್ರೇಜರ್ ಟೌನ್ ಸೇರಿದಂತೆ ಕೆಲ ಪ್ರದೇಶದಲ್ಲಿ ಅಟೊನೋಮಸ್ ಕಾರು ಕಾಣಿಸಿಕೊಂಡಿದೆ. ಈ ಮೂಲಕ ಹೈಟೆಕ್ ಸಿಟಿ ಬೆಂಗಳೂರು ತಂತ್ರಜ್ಞಾನದಲ್ಲಿ ಎಲ್ಲರಿಗಿಂತ ಮುಂದೂ ಅನ್ನೋದು ಮತ್ತೆ ಸಾಬೀತು ಪಡಿಸಿದೆ

ಬೆಂಗಳೂರು(ಜು.27): ವಿದೇಶಗಳಲ್ಲಿ ಅದರಲ್ಲೂ ಪ್ರಮುಖವಾಗಿ ಟೆಸ್ಲಾ ಆಟೋನೋಮಸ್ ಕಾರು ಭಾರಿ ಸಂಚಲನ ಸೃಷ್ಟಿಸಿದೆ. ಭಾರತದಲ್ಲಿ ಡ್ರೈವರ್ ರಹಿತ ಕಾರಿನ ಪ್ರಯೋಗಕ್ಕೆ ಪರ ವಿರೋಧಗಳು ಇವೆ. ಇದರ ನಡುವೆ ಹೈಟೆಕ್ ಸಿಟಿ ಬೆಂಗಳೂರಿನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಚಾಲಕ ರಹಿತ ಅಟೋನೋಮಸ್ ಕಾರು ಓಡಾಡುತ್ತಿದೆ. ಬೆಂಗಳೂರಿನ ಬೀದಿ ಬೀದಿಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಚಾಲಕ ರಹಿತ ಕಾರು ಕಾಣಿಸಿಕೊಳ್ಳುತ್ತಿದೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಸ್ಟಾರ್ಟ್ ಅಪ್ ನಗರ ಎಂದೇ ಖ್ಯಾತಿಗಳಿಸಿರುವ ಬೆಂಗಳೂರು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುವುದರಲ್ಲಿ ಎಲ್ಲರಿಗಿಂತ ಮುಂದೆ ಅನ್ನೋದು ಮತ್ತೆ ಸಾಬೀತಾಗಿದೆ.

ಬೆಂಗಳೂರಿನ ಫ್ರೇಜರ್‌ಟೌನ್ ಬೀದಿಯಲ್ಲಿ ಅಟೋನೋಮಸ್ ಕಾರು ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಅನಿರುಧ್ ರವಿಶಂಕರ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನ ರಸ್ತೆಯಲ್ಲಿ ಎಂದು ಬರೆದು, ವಿಡಿಯೋ ಹಂಚಿಕೊಂಡಿದ್ದಾರೆ. ಫ್ಯೂಚರಿಸ್ಟಿಕ್ ಡಿಸೈನ್ ಹೊಂದಿರುವ ಕಪ್ಪು ಬಣ್ಣದ ಕಾರು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.  ಬೆಂಗಳೂರಿನಲ್ಲಿನ ಚಾಲಕ ರಹಿತ ಕಾರು ಓಡಾಡುತ್ತಿರುವುದು ನಿಜ.ಈ ಕಾರಿನ ಹೆಸರು zPod. ಈ ಕಾರನ್ನು ಮೈನಸ್ ಝೀರೋ ಸ್ಟಾರ್ಟ್ ಅಪ್ ಕಂಪನಿ ಅಭಿವೃದ್ಧಿಪಡಿಸಿದೆ.

 

ಡ್ರೈವರ್ ಇಲ್ಲ, 8 ಕ್ಯಾಮರಾ, AI ತಂತ್ರಜ್ಞಾನ ನೆರವಿನಿಂದ ಚಲಿಸಲಿದೆ ಸ್ವಯಂಚಾಲಿತ ಟೆಸ್ಲಾ ಕಾರು!

ಮೈನಸ್ ಝೀರೋ ಸ್ಟಾರ್ಟ್ ಅಪ್ ಕಂಪನಿ ಆವಿಷ್ಕರಿಸಿದ ಅತ್ಯಾಧುನಿಕ ತಂತ್ರಜ್ಞಾನದ ಕಾರು ಇದಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಈ ಕಾರು ಚಾಲಕನಿಲ್ಲದೆ ಸಾಗುತ್ತದೆ. ಬೆಂಗಳೂರಿನ ಹಲವರು zPod ಕಾರು ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ನೋಡಿದ್ದಾರೆ. ಮೈನಸ್ ಝೀರೋ ಕಂಪನಿ ತನ್ನ ಬ್ರೈನ್‌ಚೈಲ್ಡ್ ಕಾರಾಗಿರುವ zPod ನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರ ಅಂತಿಮ ಹಂತದ ಪರೀಕ್ಷೆಗಳು ನಡೆಯುತ್ತಿದೆ. ಬೆಂಗಳೂರಿನ ಬೀದಿಯಲ್ಲಿ zPod ಕಾರಿನ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಹೆಚ್ಚಾಗಿ zPod ಕಾರು ಕಾಣಸಿಗುತ್ತಿದೆ.

 

On the streets of Bengaluru. ⁦⁩ pic.twitter.com/VtahXpa6Mh

— anirudh ravishankar (@anrdh89)

 

ಈ ಕಾರಿನ ವಿಶೇಷ ಎಂದರೆ ಇತರ ಕಾರುಗಳಂತೆ ಡ್ಯಾಶ್‌ಬೋರ್ಡ್, ಸ್ಟೀರಿಂಗ್ ವ್ಹೀಲ್ ಇಲ್ಲ. ಎಲ್ಲವೂ ಎಐ ತಂತ್ರಜ್ಞಾನ. ನಾಲ್ಕು ಸೀಟಿನ ಈ ಕಾರು ಹೊಸ ಮಾದರಿ ವಿನ್ಯಾಸಹೊಂದಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್, ಕ್ಯಾಮರಾ, ನ್ಯಾವಿಗೇಶನ್ ಮೂಲಕ ಕಾರು ಯಾವುದೇ ಚಾಲನಕ ಸಹಾಯವಿಲ್ಲದೆ ಸಾಗಲಿದೆ. ವಾಯ್ಸ್ ಕಮಾಂಡಿಂಗ್ ಕೂಡ ಇದರಲ್ಲಿದೆ. ಕಾರು ಸಾಗುತ್ತಿದ್ದಂತೆ ತಕ್ಷಣ ಕಾರು ನಿಲ್ಲಿಸಲು ವಾಯ್ಸ್ ಕಮಾಂಡಿಂಗ್ ನೀಡಿದರೆ ಸಾಕು, ಕಾರು ರಸ್ತೆ ಬದಿಯಲ್ಲಿ ನಿಲ್ಲಲಿದೆ. 

Jaguar Features ಸ್ವಯಂಚಾಲಿತ ಚಾಲನೆ, ಪಾರ್ಕಿಂಗ್ ಸೇರಿ AI ಫೀಚರ್ಸ್‌, ನಿವಿಡಿಯಾ ಜೊತೆ ಜಾಗ್ವಾರ್ ಒಪ್ಪಂದ!

ಲೆವಲ್ 5 ಆಟೋನೊಮಿ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಬಳಸಲಾಗಿದೆ. ಹೀಗಾಗಿ ಈ ಕಾರು ಆಪರೇಟ್ ಮಾಡಲು ಮನುಷ್ಯನ ಅಗತ್ಯವಿಲ್ಲ. ಕುಳಿತು ಕಮಾಂಡ್ ನೀಡಿದರೆ ಸಾಕು, ಸುಖಕರ ಪ್ರಯಾಣ ನೀಡಲಿದೆ. ಈ ಕಾರಿನಲ್ಲಿ ಯೂ ಟರ್ನ್ ಅತ್ಯಂತ ಸುಲಭ. ಫ್ಲಿಪ್ ಆಯ್ಕೆ ಇದರಲ್ಲಿದೆ. ಹೀಗಾಗಿ ಹೇಗೆ ಬೇಕಾದರು ಕಾರು ಚಲಿಸಲಿದೆ. 

 

 
 
 
 
 
 
 
 
 
 
 
 
 
 
 

A post shared by Minus Zero (@minuszero)

 

 

click me!