ನವದೆಹಲಿ(ಜ.26): ಹ್ಯುಂಡೈ ಕ್ರೇಟಾ (Hyundai Creta) 2021ರಲ್ಲಿ ವರ್ಷದಿಂದ ವರ್ಷಕ್ಕೆ 32,799 ವಾಹನಗಳ ಮಾರಾಟ ಘೋಷಿಸಿದ್ದು, ವರ್ಷದ ಅತಿ ಹೆಚ್ಚು ರಫ್ತಾಗಿರುವ ಎಸ್ಯುವಿ ಎಂದು ಗುರುತಿಸಿಕೊಂಡಿದೆ. ಕಳೆದ ವರ್ಷ ಒಟ್ಟು 25,995 ಕ್ರೇಟಾ (Creta) ವಾಹನಗಳನ್ನು ಕಂಪನಿ ಹೊರದೇಶಗಳಿಗೆ ರಫ್ತು ಮಾಡಿತ್ತು.
ಹುಂಡೈ ಮೋಟಾರ್ ಇಂಡಿಯಾ ಕಳೆದ ವರ್ಷ ಒಟ್ಟು 42,238 ಎಸ್ಯುವಿ (SUV) ಗಳನ್ನು ರಫ್ತು ಮಾಡಿದ್ದು, ಅದರಲ್ಲಿ ವೆನ್ಯೂ ಮತ್ತು ಕ್ರೆಟಾ ಗ್ರ್ಯಾಂಡ್ನಂತಹ ಮಾದರಿಗಳು ಸೇರಿವೆ. ವೆನ್ಯೂ ರಫ್ತು ಅಂಕಿಅಂಶಗಳು 7,698ಗಳಷ್ಟಿದ್ದರೆ, ಕ್ರೆಟಾ ಗ್ರ್ಯಾಂಡ್ನ ರಫ್ತು 1,741ರಷ್ಟಿದೆ. ಈ ಮೈಲಿಗಲ್ಲಿನೊಂದಿಗೆ, ದೇಶೀಯ ಮಾರುಕಟ್ಟೆಯಲ್ಲಿ ಹ್ಯುಂಡೈ, ಎಸ್ಯುವಿ ನಾಯಕತ್ವ ಉಳಿಸಿಕೊಂಡಿದೆ. ಕ್ರೇಟಾ ಕಂಪನಿಯ ‘ಮೇಕ್-ಇನ್-ಇಂಡಿಯಾ’ (Make in India) ಪರಿಕಲ್ಪನೆಗೆ ಬದ್ಧವಾಗಿದೆ ಎಂದು ಕಂಪನಿ ತಿಳಿಸಿದೆ.
undefined
ಹ್ಯುಂಡೈ ಕ್ರೆಟಾಗೆ ಮಾರು ಹೋದ ಜನ; ಮಾರಾಟದಲ್ಲಿ ಶೇ.20ರಷ್ಟು ಏರಿಕೆ!
ಈಎಲ್ಲಾ ರಫ್ತು ಪ್ರಮಾಣದ ಜೊತೆಗೆ, ಕ್ರೇಟಾ ಕಂಪನಿಯ ಒಟ್ಟು ರಫ್ತಿಗೆ ಶೇ.93ಕ್ಕಿಂತ ಹೆಚ್ಚಿನ ಕೊಡುಗೆ ನೀಡಿದೆ. ಜೊತೆಗೆ, ವೆನ್ಯೂ ಎಸ್ಯುವಿಯ ರಫ್ತು ಇದನ್ನು ದೇಶದ ಪ್ರಮುಖ ಎಸ್ಯುವಿ ರಫ್ತುದಾರರಲ್ಲಿ ಒಂದಾಗಿಸಿದೆ.ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ನ ಎಂಡಿ ಮತ್ತು ಸಿಇಒ ಉನ್ ಸೂ ಕಿಮ್, “ಕ್ರೇಟಾ ಹ್ಯುಂಡೈ ಕಂಪನಿಯ ಯಶಸ್ಸಿನಲ್ಲಿ ಮಹತ್ವದ ಪಾಲುದಾರಿಕೆ ಹೊಂದಿದೆ" ಎಂದರು. ಜಾಗತಿಕ ಸೆಮಿಕಂಡಕ್ಟರ್ ಬಿಕ್ಕಟ್ಟು ಮತ್ತು ವಿವಿಧ ಜಾಗತಿಕ ಮಾರುಕಟ್ಟೆಗಳಲ್ಲಿ ಮರುಕಳಿಸುವ ಲಾಕ್ಡೌನ್ಗಳ ಹೊರತಾಗಿಯೂ ವಾಹನ ತಯಾರಕ ಸಂಸ್ಥೆ ತನ್ನ ರಫ್ತು ಆರ್ಡರ್ಬುಕ್ನಲ್ಲಿ ಶೇ.91ರಷ್ಟು ಬೆಳವಣಿಗೆಯನ್ನು ಕಂಡಿದೆ.
ಹುಂಡೈ ಕ್ರೇಟಾ ಬೆಲೆ 10.22 ಲಕ್ಷ ರೂ.ಗಳಿಂದ ಪ್ರಾರಂಭವಾಗಿ 17.93 ಲಕ್ಷ ರೂ.ಗಳವರೆಗೆ ಇದೆ. ಕ್ರೇಟಾದ ಪೆಟ್ರೋಲ್ ಆವೃತ್ತಿಯ ಬೆಲೆ 10.22 ಲಕ್ಷ ರೂ.ಗಳಿಂದ 17.93 ಲಕ್ಷ ರೂ. ಹಾಗೂ ಡೀಸೆಲ್ ಆವೃತ್ತಿಯ ಬೆಲೆ 10.69 ಲಕ್ಷ ರೂ.ಗಳಿಂದ 17.84 ಲಕ್ಷ ರೂ.ಗಳ ನಡುವೆ ಇದೆ.
GIIASನಲ್ಲಿ ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಲಾಂಚ್
ಕ್ರೇಟಾ ಬಿಎಸ್6 ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. ಸ್ಟ್ಯಾಂಡರ್ಡ್ ಪೆಟ್ರೋಲ್ ಮೋಟಾರ್ 1.5-ಲೀಟರ್ 112ಬಿಎಚ್ಪಿ/144ಎನ್ಎಂ ಉತ್ಪಾದಿಸುತ್ತದೆ ಮತ್ತು. ಪೆಟ್ರೋಲ್ ಮೋಟರ್ 1.4-ಲೀಟರ್ ಟರ್ಬೊ ಜಿಡಿಐ(GDi) ಯುನಿಟ್ 138 ಬಿಎಚ್ಪಿ (bhp)/242 ಎನ್ಎಂ(Nm) ಉತ್ಪಾದಿಸುತ್ತದೆ ಮತ್ತು ಏಳು-ವೇಗದ ಡಿಸಿಟಿ (DCT)ಯೊಂದಿಗೆ ಮಾತ್ರ ನೀಡಲಾಗುತ್ತಿದೆ. ಇದು ಏಕೈಕ ಡೀಸೆಲ್ 113bhp/250Nm ಉತ್ಪಾದಿಸುವ 1.5-ಲೀಟರ್ ನಾಲ್ಕು ಸಿಲಿಂಡರ್ ಘಟಕ ಹೊಂದಿದೆ ಮತ್ತು ಆರು-ವೇಗದ ಮ್ಯಾನ್ಯುಯಲ್ನೊಂದಿಗೆ ಬರಲಿದೆ.
ಹ್ಯುಂಡೈ ಇಂಡಿಯಾ ಕಳೆದ ವರ್ಷ ಕ್ರೆಟಾ, i20, ವೆರ್ನಾ ಮತ್ತು ಅಲ್ಕಾಜರ್ನಂತಹ ಮಾದರಿಗಳನ್ನು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿತ್ತು. ಜೊತೆಗೆ, ದಕ್ಷಿಣ ಆಫ್ರಿಕಾ ಮತ್ತು ಪೆರು ಸೇರಿದಂತೆ ಕೆಲವು ಪ್ರಮುಖ ವಿದೇಶಿ ಮಾರುಕಟ್ಟೆಗಳಲ್ಲಿ ಅದರ ಅಸ್ತಿತ್ವದಲ್ಲಿರುವ ಮಾದರಿಗಳ ಹೊಸ ಎನ್ ಲೈನ್ ಮತ್ತು ಎಲ್ಪಿಜಿ ರೂಪಾಂತರಗಳ ರಫ್ತು ಪ್ರಕ್ರಿಯೆ ಪ್ರಾರಂಭಿಸಿತು. ಹೆಚ್ಚುವರಿಯಾಗಿ, ಇದು ತನ್ನ ರಫ್ತು ದೇಶಗಳ ಪಟ್ಟಿಗೆ ಡೊಮಿನಿಕಾ, ಚಾಡ್, ಘಾನಾ ಮತ್ತು ಲಾವೋಸ್ನಂತಹ ನಾಲ್ಕು ಹೊಸ ಮಾರುಕಟ್ಟೆಗಳನ್ನು ಕೂಡ ಹ್ಯುಂಡೈ ಸೇರಿಸಿಕೊಂಡಿದೆ.
2015ರಲ್ಲಿ ಕ್ರೇಟಾ ಬಿಡುಗಡೆಯಾದ ನಂತರ ಇದು ಹ್ಯುಂಡೈನ ಅತ್ಯಂತ ಯಶಸ್ವಿ ಕಾರಾಗಿದೆ. ಇದು ಕಿಯಾ ಸೆಲ್ಟೋಸ್, ನಿಸ್ಸಾನ್ ಕಿಕ್ಸ್, ರೆನಾಲ್ಟ್ ಡಸ್ಟರ್ ಮತ್ತು ಕ್ಯಾಪ್ಚರ್ ಮತ್ತು ಎಂಜಿ ಹೆಕ್ಟರ್ ಮತ್ತು ಟಾಟಾ ಹ್ಯಾರಿಯರ್ನಂತಹ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿದೆ.