Citroen controversy ಲೈಂಗಿಕ ಕಿರುಕುಳ ಪ್ರಚೋದನೆ ಆರೋಪ, ಸಿಟ್ರೊಯೆನ್ ಕಾರು ಜಾಹೀರಾತು ಹಿಂಪಡೆದ ಕಂಪನಿ!

By Suvarna NewsFirst Published Jan 2, 2022, 5:55 PM IST
Highlights
  • ಸಿಟ್ರೊಯೆನ್ ಕಾರು ಫೀಚರ್ಸ್ ಹೇಳಲು ಹೋಗಿ ಎಡವಟ್ಟು
  • ಜಾಹೀರಾತಿನಲ್ಲಿ ಲೈಂಗಿಕ ಕಿರುಕುಳ ಪ್ರಚೋದನೆ ನೀಡಿದ ಜಾಹೀರಾತು
  • ಭಾರಿ ಟೀಕೆ, ಆಕ್ರೋಷದ ಬೆನ್ನಲ್ಲೇ ಜಾಹೀರಾತು ಹಿಂಪಡೆದ ಕಂಪನಿ

ಈಜಿಪ್ಟ್(ಜ.02): ಭಾರತ ಸೇರಿದಂತೆ ಹಲವು ದೇಶಗಲ್ಲಿ ಸಿಟ್ರೊಯೆನ್ ಕಾರು(Citroen car) ಬಿಡುಗಡೆಯಾಗಿದೆ. ಸಿಟ್ರೊಯೆನ್ ತನ್ನ ಜಾಲವನ್ನು ಮತ್ತಷ್ಟು ರಾಷ್ಟ್ರಗಳಿಗೆ ವಿಸ್ತರಿಸುತ್ತಿದೆ. ಇದರ ನಡುವೆ ಸಿಟ್ರೊಯೆನ್ ಕಾರಿಗೆ ಈಜಿಪ್ಟ್‌ನಲ್ಲಿ(Egypt) ಭಾರಿ ಹಿನ್ನಡೆಯಾಗಿದೆ. ಹೊಚ್ಚ ಕಾರು ಬಿಡುಗಡೆ ಮಾಡುವ ಮೊದಲೇ ಇದೀಗ ವಿವಾದಕ್ಕೆ ಕಾರಣವಾಗಿದೆ. ಹೌದು, ಸಿಟ್ರೊಯೆನ್ ಕಾರಿನ ಜಾಹೀರಾತು(advertisement) ಲೈಂಗಿಕ ಕಿರುಕುಳಕ್ಕೆ ಪ್ರಚೋದನೆ ನೀಡುತ್ತಿದೆ ಅನ್ನೋ ಆರೋಪ, ಟೀಕೆ ಬಲವಾಗಿ ಕೇಳಿಬಂದಿದೆ. ಪರಿಣಾಮ ಕಂಪನಿ ತನ್ನ ಜಾಹೀರಾತನ್ನೇ ಹಿಂಪಡಿದೆ.

ಸಿಟ್ರೊಯೆನ್ SUV ಕಾರಿನ ಜಾಹೀರಾತು ಈ ಅವಾಂತರ ಮಾಡಿದೆ. ಜಾಹೀರಾತಿಗಾಗಿ ಸಿಟ್ರೊಯೆನ್ ಅತೀ ಹೆಚ್ಚು ಹಣ ವ್ಯಯಿಸಿದೆ. ಈಜಿಪ್ಟಿನ ಖ್ಯಾತ ಗಾಯಕ ಅಮರ್ ದಿಯಾಬ್ ಬಳಸಿ ಈ ಜಾಹೀರಾತು ನಿರ್ಮಾಣ ಮಾಡಲಾಗಿದೆ. ಜಾಹೀರಾತು ನಿರ್ಮಾಣ ಕಂಪನಿ ನಿರ್ಮಿಸಿದ ಜಾಹೀರಾತಿಗೆ ಸಿಟ್ರೊಯೆನ್ ಕೂಡ ಒಕೆ ಎಂದು ವಾಹಿನಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದೆ. ಆದರೆ ಇದರಲ್ಲಿ ಅತೀ ದೊಡ್ಡ ಪಮಾದ ಆಗಿದೆ ಅನ್ನೋ ವಿಚಾರ ಪ್ರಸಾರದ ಬಳಿಕವಷ್ಟೇ ಕಂಪನಿಗೆ ತಿಳಿದಿದೆ.

ಫ್ರಾನ್ಸ್ ಮೂಲದ ಸಿಟ್ರೊಯೆನ್ SUV ಕಾರು ಭಾರತದಲ್ಲಿ ಬಿಡುಗಡೆ!

ಸಿಟ್ರೊಯೆನ್ ಕಾರಿನ ಜಾಹೀರಾತಿನಲ್ಲಿ ಸಿಂಗರ್ ಅಮರ್ ದಿಯಾಬ್ ಕಾರು ಚಲಾಯಿಸಿಕೊಂಡು ನಗರದಲ್ಲಿ ಸಾಗುವ ದೃಶ್ಯವಿದೆ. ಇದೇ ವೇಳೆ ಜಿಬ್ರಾ ಕ್ರಾಸಿಂಗ್ ಮೂಲಕ ರಸ್ತೆ ದಾಟಲು ಯುವತಿಯೊಬ್ಬಳು ಮುಂದಾಗುವ ದೃಶ್ಯವಿದೆ. ಮಹಿಳೆ ರಸ್ತೆ ದಾಟಲು ಮುಂದಾದಾಗ ಅಮರ್ ದಿಯಾಬ್(Amr Diab) ಕಾರನ್ನು ನಿಲ್ಲಿಸುತ್ತಾನೆ. ಒಂದು ಕ್ಷಣ ಯುವತಿ ಗಾಬರಿಯಾಗುವ ದಶ್ಯ. ಆದರೆ ಇಷ್ಟೇ ಆಗಿದ್ದರೆ ಇದರಲ್ಲೇನು ತಪ್ಪು ಇರಲಿಲ್ಲ. ಕಾರಿನ ಮಹತ್ವದ ಫೀಚರ್ ಒಂದನ್ನು ಹೇಳುವ ಭರದಲ್ಲಿ ತಪ್ಪಾಗಿದೆ. ಕಾರಿನ ರೇರ್ ವಿವ್ಯೂ ಮಿರರ್‌ನಲ್ಲಿ ಕ್ಯಾಮಾರ ಅಳವಡಿಸಲಾಗಿದೆ. ಇದು ಈ ಕಾರಿನ ಹೊಸ ಫೀಚರ್ಸ್.  ಈ ರೇರ್ ವಿವ್ಯೂ ಮಿರರ್‌ನಲ್ಲಿ ಅಳವಡಿಸಿರುವ ಕ್ಯಾಮಾರ, ವಿಡಿಯೋ, ಫೋಟೋ ಸೆರೆಹಿಡಿಯಲಿದೆ. 

ಫ್ರೆಂಚ್ ಕಾರು ಈಗ ಬೆಂಗಳೂರಿನಲ್ಲಿ; ಮಿಲ್ಲರ್ಸ್ ರಸ್ತೆಯಲ್ಲಿ ಸಿಟ್ರೊಯನ್ ಶೋ ರೂಂ ಆರಂಭ!

ಈ ಜಾಹಿರಾತಿನಲ್ಲಿ ಕಾರು ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ ಬಳಿಕ ಗಾಬರಿಗೊಂಡ ಯುವತಿ ಸಾವರಿಕೊಂಡು  ಜಿಬ್ರಾ ಕ್ರಾಸಿಂಗ್ ಮೂಲಕ ರಸ್ತೆ ದಾಟಿದ್ದಾಳೆ. ಈ ವೇಳೆ ಸಿಂಗರ್ ತನ್ನ ರೇರ್ ವಿವ್ಯೂ ಮಿರರ್‌ನಲ್ಲಿನ ಕ್ಯಾಮಾರ ಮೂಲಕ ಆಕೆಯ ಫೋಟೋ ತೆಗೆದಿದ್ದಾನೆ. ಇಷ್ಟೇ ನೋಡಿ, ಇದು ಕಾರಿನ ಹೊಸ ಫೀಚರ್ ಹೇಳಲು ಬಳಸಿದ ರೀತಿ. ಆದರೆ ಈ ಜಾಹೀರಾತು ಪ್ರಸಾರವಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಕಾರಣವಾಗಿದೆ. ಮಹಿಳೆಯ ಅನುಮತಿ ಇಲ್ಲದೆ ಫೋಟೋ ತೆಗೆಯುವುದು ಲೈಂಗಿಕ ಕಿರುಕುಳವಾಗಿದೆ(Sexual Harassment). ಇಲ್ಲಿ ರಸ್ತೆಯಲ್ಲಿ ಹಾದು ಹೋಗುವ ಯುವತಿಯ ಫೋಟೋವನ್ನು ಯುವತಿಗೆ ಅರಿವಿಲ್ಲದಂತೆ ಸೆರೆಹಿಡಿಯುವ ದೃಶ್ಯವಿದೆ. ಇದು ನಿಯಮ ವಿರುದ್ಧವಾಗಿದೆ. ಹೀಗಾಗಿ ಈ ಜಾಹೀರಾತು ಲೈಂಗಿಕ ಕಿರುಕುಳಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಈಜಿಪ್ಟಿಯನ್-ಅಮೆರಿಕನ್ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ರೀಮ್ ಅಬ್ದೆಲ್‌ಲತೀಫ್ ಕಂಪನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ.

 

Taking a picture of a woman without her consent is creepy. You're enabling sexual harassment. pic.twitter.com/0fkYmQfNQV

— 𓆃 Reem Abdellatif - ريم عبداللطيف (@Reem_Abdellatif)

ಜಾಹೀರಾತು ಕಂಪನಿ, ಸಿಟ್ರೊಯೆನ್ ಕಾರು ಕಂಪನಿ, ಜೊತೆಗೆ ಖ್ಯಾತ್ ಗಾಯಕ ಅಮರ್ ದಿಯಾಬ್ ಕೂಡ ಮಹಿಳೆಯ ಫೋಟೋವನ್ನ ಆಕೆಯ ಅನುಮತಿ ಇಲ್ಲದೆ ದಾರಿಯಲ್ಲಿ ತೆಗೆಯುವ ದೃಶ್ಯದ ಕುರಿತು ವಿರೋಧ ವ್ಯಕ್ತಪಡಿಸದಿರುವುದು ದುರಂತ. ರಸ್ತೆ, ಸಾರ್ವಜನಿಕ, ಪ್ರದೇಶ ಸೇರಿದಂತೆ ಖಾಸಗಿ ಸ್ಥಳಗಳಲ್ಲೂ ಮಹಿಳೆಯ ಅನುಮತಿ ಇಲ್ಲದೆ ಫೋಟೋ ತೆಗೆಯುವುದು ಲೈಂಗಿಕ ಕಿರುಕುಳ ಅನ್ನೋದು ಸಾಮಾನ್ಯಜ್ಞಾನ ಎಂದು ರೀಮ್ ಅಬ್ದೆಲ್‌ಲತೀಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಿಟ್ರೊಯೆನ್ ಜಾಹೀರಾತು ಹಿಂಪಡೆದಿದೆ. ಇಷ್ಟೇ ಅಲ್ಲ ಭೇಷರತ್ ಕ್ಷಮೆ ಕೇಳಿದೆ. 

ಮೇಡ್ ಇನ್ ಇಂಡಿಯಾ ಸಿಟ್ರೊಯೆನ್ C5 ಏರ್‌ಕ್ರಾಸ್ ಕಾರು ಉತ್ಪಾದನೆ ಆರಂಭ!

ಆಗಿರುವ ತಪ್ಪಿಗೆ ಕಂಪನಿ  ಜಾಹೀರಾತು ಹಿಂಪಡೆದು ಮುಂದೆ ಎಚ್ಚರಿಕೆ ವಹಿಸುದಾಗಿ ಹೇಳಿದೆ. ಆದರೆ ಈ ಜಾಹೀರಾತಿನಿಂದ ಈಜಿಪ್ಟ್‌ನಲ್ಲಿನ ಲೈಂಗಿಕ ಕಿರುಕುಳ ಮತ್ತೆ ಭಾರಿ ಚರ್ಚೆಯಾಗುತ್ತಿದೆ. 2013ರಲ್ಲಿ ವಿಶ್ವಸಂಸ್ಥೆ ನಡೆಸಿದ ಸಮೀಕ್ಷೆ, ಅಧ್ಯಯನದ ವರದಿ ಪ್ರಕಾರ ಈಜಿಪ್ಟ್‌ನಲ್ಲಿ ಮಹಿಳೆಯರು, ಯುವತಿಯರು, ಬಾಲಕಿಯರು, ಹೆಣ್ಣುಮಕ್ಕಳು ಸೇರಿದಂತೆ  ಶೇಕಡಾ 99.3ರಷ್ಟು ಮಂದಿ ಒಂದಲ್ಲೂ ಒಂದು ರೀತಿಯಲ್ಲಿ ತಮ್ಮ ಜೀವನದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿದ್ದಾರೆ. ಶೇಕಡಾ 82.6 ರಷ್ಟು ಈಜಿಪ್ಟ್ ಮಹಿಳೆಯರು ರಸ್ತೆಯಲ್ಲಿ, ಸಾರ್ವಜನಿಕ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಎದುರಿಸಿದ್ದಾರೆ. 

click me!