ಕಡಿಮೆ ಬೆಲೆ, ಅತ್ಯುತ್ತಮ ಡಿಸೈನ್, ಅತ್ಯಾಧುನಿಕ ತಂತ್ರಜ್ಞಾನದಲ್ಲಿ ಸ್ಮಾರ್ಟ್‌ಫೋನ್ ನೀಡಿದ ಹೆಗ್ಗಳಿಗೆ ಶಓಮಿಗಿದೆ. ಇದೀಗ Xiaomi ಅಗ್ಗದ ಬೆಲೆಯಲ್ಲಿ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ.
ಬೀಜಿಂಗ್(ನ.16) ಅತೀ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ನೀಡಿದ ಹೆಗ್ಗಳಿ ಚೀನಾದ Xiaomiಗೆ ಸಲ್ಲಲಿದೆ. ಇದೀಗ Xiaomi ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ ಮಾಡಿದೆ. Xiaomi SU7 ಹೆಸರಿನ ಈ ಕಾರು ಹೊಸ ಸಂಚಲನ ಸಷ್ಟಿಸಿದೆ. ಅತ್ಯುತ್ತಮ ಡಿಸೈನ್ ಮೂಲಕ ಗಮನಸೆಳೆದಿದೆ. ಈ ಮೂಲಕ Xiaomi ಇದೀಗ ಅಧಿಕೃತವಾಗಿ ಎಲೆಕ್ಟ್ರಿಕ್ ಕಾರು ಉತ್ಪಾದನೆ ಕ್ಷೇತ್ರಕ್ಕೂ ಕಾಲಿಟ್ಟಿದೆ.
MS11 ಹೆಸರಿನಲ್ಲಿ ಇದೇ ಕಾರು ಅನಾವರಣಗೊಂಡಿತ್ತು. ಇದೀಗ ಹೊಸ ಹೊಸ ಹೆಸರು, ಕೆಲ ಮಹತ್ತರ ಬದಲಾವಣೆಗಳೊಂದಿಗೆ ಅನಾವರಣಗೊಂಡಿದೆ. ಇಷ್ಟೇ ಅಲ್ಲ ಉತ್ಪಾದನೆ ಕೂಡ ಆರಂಭಗೊಳ್ಳುತ್ತಿದೆ. Xiaomi SU7 ಎಲೆಕ್ಟ್ರಿಕ್ ಕಾರು ಬೇಸ್ ಟ್ರಿಮ್ ಹಾಗೂ ಹೈಯರ್ ಟ್ರಿಮ್ ಮಾಡೆಲ್‌ನಲ್ಲಿ ಲಭ್ಯವಿದೆ. SU7, SU7 ಪ್ರೋ ಹಾಗೂ SU7 ಮ್ಯಾಕ್ಸ್ ಮೂರು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯವಾಗಲಿದೆ. ಬೇಸ್ ಟ್ರಿಮ್ ಮಾಡೆಲ್ ಕಾರಿನ ಗರಿಷ್ಠ ವೇಗ 210 ಕಿ.ಮೀ ಪ್ರತಿ ಗಂಟೆಗೆ, ಇನ್ನು ಹೈಯರ್ ಟ್ರಿಮ್ 265 ಕಿ.ಮೀ ಪ್ರತಿಗಂಟೆಗೆ.
undefined
ಬರುತ್ತಿದೆ ಕಡಿಮೆ ಬೆಲೆಯ, 550 ಕಿ.ಮೀ ಮೈಲೇಜ ನೀಡುವ ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಕಾರು!
ಮುಂದಿನ ತಿಂಗಳು ಅಂದರೆ ಡಿಸೆಂಬರ್ ತಿಂಗಳಲ್ಲಿ ನೂತನ Xiaomi SU7 ಕಾರು ಬಿಡುಗಡೆಯಾಗುತ್ತಿದೆ. 2024ರ ಫೆಬ್ರವರಿಯಿಂದ ಬುಕಿಂಗ್ ಮಾಡಿದ ಗ್ರಾಹಕರಿಗೆ ಡೆಲಿವರಿ ಆರಂಭಗೊಳ್ಳಲಿದೆ. ಈಗಾಗಲ್ ಟ್ರಯರ್ ಪ್ರೊಡಕ್ಷನ್ ಕಾರುಗಳು ಉತ್ಪಾದನೆಯಾಗಿದೆ. Xiaomi ಹಾಗೂ ಬಿಜಿಂಗ್ ಆಟೋಮೊಟಿವ್ ಇಂಡಸ್ಟ್ರಿ ಹೋಲ್ಡಿಂಗ್ ಜಂಟಿಯಾಗಿ ಕಾರು ಉತ್ಪಾದನೆ ಮಾಡಲಿದೆ.
ಈ ಕಾರಿನ ಪವರ್ ಫರ್ಫಾಮೆನ್ಸ್‌ನಲ್ಲಿ ಎರಡು ಆಯ್ಕೆಯಿದೆ. ರೇರ್ ವೀಲ್ ಡ್ರೈವ್ ಹಾಗೂ ಆಲ್ ವೀಲ್ ಡ್ರೈವ್. ರೇರ್ ವೀಲ್ ಡ್ರೈವ್ ಕಾರಿನಲ್ಲಿ 220 kW ಮೋಟಾರ್ ಬಳಕೆ ಮಾಡಲಾಗುತ್ತದೆ. ಇನ್ನು ಆಲ್ ವೀಲ್ ಡ್ರೈವ್ ಕಾರಿನಲ್ಲಿ 495 kW ಮೋಟಾರ್ ಬಳಕೆ ಮಾಡಲಾಗುತ್ತದೆ
8 ವರ್ಷ ಬ್ಯಾಟರಿ ವಾರೆಂಟಿ, 440 ಕಿ.ಮಿ ಮೈಲೇಜ್: BMW iX1 ಎಲೆಕ್ಟ್ರಿಕ್ ಕಾರು ಬಿಡುಗಡೆ!
ಹೊಚ್ಚ ಹೊಸ Xiaomi SU7 ಕಾರು 500 ರಿಂದ 700 ಕಿ.ಮೀ ಮೈಲೇಜ್ ನೀಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಮೈಲೇಜ್ ಕುರಿತ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಇದರ ಬೆಲೆ ಕೂಡ ಬಹಿರಂಗವಾಗಿಲ್ಲ. ಸಾಮಾನ್ಯವಾಗಿ Xiaomiಯ ಎಲ್ಲಾ ಎಲೆಕ್ಟ್ರಿಕ್ ಪ್ರಾಡಕ್ಟ್‌ಗಳು ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಹೀಗಾಗಿ ಇದೇ ರೀತಿ ಕಡಿಮೆ ಬೆಲೆಯಲ್ಲಿ ಹೊಸ Xiaomi SU7 ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.