ಇದು ಚೀನಾ ಬುಗಾಟಿ ಚೀರೋನ್ ಕಾರು; ಆಲ್ಟೋಗಿಂತ ಕಡಿಮೆ ಬೆಲೆ, ಲೈಸೆನ್ಸ್ ಕೂಡ ಬೇಡ!

By Suvarna NewsFirst Published Dec 30, 2020, 2:26 PM IST
Highlights

ಬುಗಾಟಿ ಚಿರೋನ್ ವಿಶ್ವದ ಅತ್ಯಂತ ದುಬಾರಿ ಕಾರು. ಇಷ್ಟೇ ಅಲ್ಲ ಚಿರೋನ್ ಅತೀ ವೇಗದ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಇದೇ ಬುಗಾಟಿ ಚಿರೋನ್ ಕಾರಿನ ನಕಲಿ ರೂಪದಲ್ಲಿ ಚೀನಾ ಕಾರೊಂದು ಬಿಡುಗಡೆ ಮಾಡಿದೆ. ವಿಶೇಷ ಅಂದರೆ  ಚೀನಾದ ಬುಗಾಟಿ ಅತೀ ಕಡಿಮೆ ಬೆಲೆಯ ಕಾರಾಗಿದೆ. ಇಷ್ಟೇ ಅಲ್ಲ ಈ ಕಾರು ಚಲಾಯಿಸಲು ಲೈಸೆನ್ಸ್ ಕೂಡ ಬೇಕಿಲ್ಲ.

ಚೀನಾ(ಡಿ.30): ಯಾವುದೇ ಬ್ರ್ಯಾಂಡ್ ಉತ್ಪನ್ನಗಳ ನಕಲಿ ಉತ್ಪನ್ನಗಳನ್ನು ತಯಾರಿಸುವುದರಲ್ಲಿ ಚೀನಾ ಎತ್ತಿದ ಕೈ. ಅಸಲಿಗೂ ನಕಲಿಗೆ ಒಂದಿಂಚು ವ್ಯತ್ಯಾಸ ಬರದ ರೀತಿಯಲ್ಲಿ ಚೀನಾ ನಿರ್ಮಾಣ ಮಾಡುತ್ತಿದೆ. ಚೀನಾ ಆಟೋಮೊಬೈಲ್ ಕ್ಷೇತ್ರಕ್ಕೂ ಕೂಡ ಇದಕ್ಕೆ ಹೊರತಾಗಿಲ್ಲ. ಟಾಟಾ ಮೋಟಾರ್ಸ್, ರೇಂಜ್ ರೋವರ್, ಸೇರಿದಂತೆ ಹಲವು ಕಾರುಗಳ ನಕಲಿ ರೂಪಗಳು ಚೀನಾದಲ್ಲಿದೆ. ಇದೀಗ ಚೀನಾ ವಿಶ್ವದ ಅತ್ಯಂತ ದುಬಾರಿ ಕಾರಾದ ಬುಗಾಟಿ ಚಿರೋನ್ ನಕಲಿ ಮಾಡಿದೆ. 

ಛೀಮಾರಿ ಹಾಕಿಸಿಕೊಂಡ್ರೂ ಬುದ್ದಿ ಕಲಿತಿಲ್ಲ ಚೀನಾ, ಟಾಟಾ ನೆಕ್ಸಾನ್ ಡಿಸೈನ್ ಕಾಪಿ!

ಚೀನಾದ ಶಾನ್‌ಡೊಂಗ್ ಖಿಲು ಫೆಂಡ್ಜ್ ಕಂಪನಿ ಬುಗಾಟಿ ಕಂಪನಿಯ ಚಿರೋನ್ ಕಾರಿನ ಡಿಸೈನ್ ಕದ್ದು  ಅದೇ ರೀತಿಯಲ್ಲಿ ಕಾರು ಬಿಡುಗಡೆ ಮಾಡಿದೆ. ಇದು ಚೀನಾದ ಬುಗಾಟಿ ಕಾರು ಎಂದೇ ಪ್ರಖ್ಯಾತಿಯಾಗಿದೆ. ಬುಗಾಟಿ ಚಿರೋನ್ ಕಾರಿನ ಬೆಲೆ 20 ಕೋಟಿ ರೂಪಾಯಿಗೂ ಅಧಿಕವಾಗಿದೆ. ಆದರೆ ಚೀನಾದ ಶಾನ್‌ಡೊಂಗ್ ಖಿಲು ಫೆಂಡ್ಜ್ ಕಂಪನಿಯ ಪಿ8 ಕಾರಿನ ಬೆಲೆ 3.41 ಲಕ್ಷ ರೂಪಾಯಿ ಮಾತ್ರ. ನಮ್ಮಲ್ಲಿನ ಮಾರುತಿ ಅಲ್ಟೋ ಕಾರಿಗಿಂತ ಕಡಿಮೆ.

ಮತ್ತೊಂದು ಕಾರು ಡಿಸೈನ್ ಕದ್ದ ಚೀನಾ, ನಕಲು ಕಾರು ಪಾಕಿಸ್ತಾನದಲ್ಲಿ ಮಾರಾಟ!

ವಿಶೇಷ ಅಂದರೆ ಬುಗಾಟಿ ಚಿರೋನ್ ನಕಲಿ ಕಾರಾದ ಪಿ8, ಎಲೆಕ್ಟ್ರಿಕ್ ಕಾರಿಗಿದೆ. ಇದರ ಗರಿಷ್ಠ ವೇಗೆ 65 ಕಿ.ಮೀ ಪ್ರತಿ ಗಂಟೆಗೆ. ಇನ್ನು ಬುಗಾಟಿ ಚಿರೋನ್ ಕಾರಿನ ವೇಗ 430 ಕಿ.ಮೀಗೂ ಅಧಿಕ ಪ್ರತಿಗಂಟೆಗೆ. ಚೀನಾದ ಪಿ8 ಕಾರು ಡ್ರೈವ್ ಮಾಡಲು ಲೈಸೆನ್ಸ್ ಕೂಡ ಬೇಕಿಲ್ಲ. ಕಾರಣ ಇದು LSEV ವಿಭಾಗದಡಿಯಲ್ಲಿನ ಕಾರಾಗಿದೆ. ಅಂದರೆ ಲೋ ಸ್ಪೀಡ್ ಎಲೆಕ್ಟ್ರಿಕ್ ವೆಹಿಕಲ್ ಕಾರು. ಗರಿಷ್ಠ ವೇಗ ನಿಗದಿಗಿಂತ ಕಡಿಮೆ  ಇದ್ದರೆ ಲೈಸೆನ್ಸ್ ಅವಶ್ಯಕತೆ ಇಲ್ಲ. 

ಒಂದು ಬಾರಿ ಚಾರ್ಜ್ ಮಾಡಿದರ 150 ಕಿ.ಮೀ ಪ್ರಯಾಣದ ರೇಂದ್ ಸಿಗಲಿದೆ. ಆದರೆ ಸಂಪೂರ್ಣ ಚಾರ್ಜಿಂಗ್‌‌ 10 ಗಂಟೆ ತೆಗೆದುಕೊಳ್ಳಲಿದೆ.  ಕಾರಣ 220v ಚಾರ್ಜಿಂಗ್ ಸಿಸ್ಟಮ್ ಅಳವಡಿಸಲಾಗಿದೆ. 7 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ.

click me!