ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಸೋನಾಲಿಕಾ ‘ಟೈಗರ್’ ಬಿಡುಗಡೆ

By Suvarna News  |  First Published Dec 29, 2020, 11:09 AM IST

ಶೀಘ್ರವೇ ಎಲ್ಲ ವಾಹನಗಳು ಅಂದರೆ ಕಾರು, ಮೋಟಾರ್‌ಸೈಕಲ್, ಬಸ್ಸುಗಳೆಲ್ಲವೂ ಎಲೆಕ್ಟ್ರಿಕ್ ವಾಹನಗಳಾಗಲಿವೆ ಎಂಬುದು ಗೊತ್ತಿರುವ ಸಂಗತಿ. ಆದರೆ, ಅತಿ ಹೆಚ್ಚು ಪವರ್ ಬೇಡುವ ಕೆಲಸಗಳಿಗೆ ಉಪಯೋಗಿಸುವ ಟ್ರಾಕ್ಟರ್‌ನಂಥ ವಾಹನಗಳು ಕೂಡ ಈಗ ವಿದ್ಯುತ್‌ಚಾಲಿತ ಸೆಗ್ಮೆಂಟ್‌ಗೆ ಅಡಿಯಿಡುತ್ತಿವೆ. ದೇಶದ ಪ್ರಮುಖ ಟ್ರಾಕ್ಟರ್ ಬ್ರಾಂಡ್ ಆಗಿರುವ ಸೋನಾಲಿಕಾ ಟ್ರಾಕ್ಟರ್ ಇದೀಗ ದೇಶದ ಮೊದಲ ಎಲೆಕ್ಟ್ರಿಕ್ ಟ್ರಾಕ್ಟರ್ ಟೈಗರ್ ಬಿಡುಗಡೆ ಮಾಡಿದೆ.


ಬಹುಶಃ ಮುಂದಿನ 10ರಿದಂ 20 ವರ್ಷದಲ್ಲಿ ರಸ್ತೆಗಳಲ್ಲಿ ವಿದ್ಯುತ್‌ಚಾಲಿತ ವಾಹನಗಳೇ ಕಾಣಸಿಗಬಹುದು. ಈಗಾಲೇ ವಿದ್ಯುತ್‌ಚಾಲಿತ ವಾಹನಗಳ ಭರಾಟೆ ಜೋರಾಗಿದೆ. ಬಹುತೇಕ ಎಲ್ಲ ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ. ಪ್ರಯಾಣಿಕ ವಾಹನಗಳು ಮಾತ್ರ ವಿದ್ಯುತ್‌ಚಾಲಿತ ವಾಹನಗಳಾಗಿ ಬದಲಾಗುತ್ತಿವೆ ಎಂದು ಭಾವಿಸಬೇಕಿಲ್ಲ. ಯಾಕೆದಂರೆ, ಕಮರ್ಷಿಯಲ್ ಮತ್ತು ಕೃಷಿಗೆ ಯೋಗ್ಯವಾದ ವಾಹನಗಳು ಈಗ ವಿದ್ಯುತ್‌ಚಾಲಿತವಾಹನಗಳಾಗಿ ಬದಲಾಗುತ್ತಿವೆ. ಈ ಸಾಲಿಗೆ ಟ್ರ್ಯಾಕ್ಟರ್ ಕೂಡ ಸೇರುತ್ತಿದೆ.

ಹೋಂಡಾ ಗ್ರೇಜಿಯಾ ಖರೀದಿ ಮೇಲೆ 5000 ರೂ. ಕ್ಯಾಶ್‌ಬ್ಯಾಕ್ ಆಫರ್

Tap to resize

Latest Videos

undefined

ಟ್ರ್ಯಾಕ್ಟರ್ ಸೆಗ್ಮೆಂಟ್‌ನಲ್ಲಿ ಬಹುದೊಡ್ಡ ಹೆಸರು ಮಾಡಿರುವ ಸೋನಾಲಿಕ್ ಟ್ರಾಕ್ಟರ್, ಇತ್ತೀಚೆಗಷ್ಟೇ ಎಲೆಕ್ಟ್ರಿಕಲ್(ವಿದ್ಯುತ್‌ಚಾಲಿತ) ಟ್ರಾಕ್ಟರ್ ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ವಿದ್ಯುತ್‌ಚಾಲಿತ ಟ್ರಾಕ್ಟರ್ ಎಂಬ ಕೀರ್ತಿಯನ್ನು ಅಂಟಿಸಿಕೊಂಡಿದೆ. 25.5 ಕಿಲೋ ವ್ಯಾಟ್ ನ್ಯಾಚುರಲ್ ಕೂಲಿಂಗ್ ಕಾಂಪಾಕ್ಟ್ ಬ್ಯಾಟರಿ ಆಧರಿತ ಟೈಗರ್ ಹೆಸರಿನ ಎಲೆಕ್ಟ್ರಿಕ್ ಟ್ರಾಕ್ಟರ್ ದೇಶದ ಗದ್ದೆಗಳಿಗೆ ಇಳಿದಿದೆ. ಡೀಸೆಲ್ ಆಧರಿತ ಟ್ರ್ಯಾಕ್ಟರ್‌ಗೆ ಹೋಲಿಸಿದರೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುತ್ತದೆ. ಇದರ 5.99 ಲಕ್ಷ ರೂ.(ಎಕ್ಸ್ ಶೋರೂಮ್). ಕಂಪನಿ ಈಗಾಗಲೇ ಈ ಇ-ಟ್ರ್ಯಾಕ್ಟರ್  ಬುಕಿಂಗ್ ಕೂಡ ಓಪನ್ ಮಾಡಿದೆ.

ಸೋನಾಲಿಕ್ ಟ್ರಾನ್ಸಿಮಿಷನ್ ಹೊಂದಿರುವ ಈ ಫೀಲ್ಡ್ ರೆಡಿ ಇ ಟ್ರಾಕ್ಟರ್‌ನ ಗರಿಷ್ಠ ವೇಗ ಪ್ರತಿ ಗಂಟೆಗೆ 24.93 ಕಿಲೋ ಮೀಟರ್. ಎರಡು ಟನ್ ಟ್ರಾಲಿ ಕಾರ್ಯಾಚರಣೆಗೆ 8 ಗಂಟೆಯ ಬ್ಯಾಟರಿ ಬ್ಯಾಕ್‌ಅಪ್ ಕೂಡ ಇದೆ. ಜೊತೆಗೆ, ನೀವ ನಾಲ್ಕು ಗಂಟೆಯಲ್ಲಿ ಚಾರ್ಚ್ ಆಗುವ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಇದು ಆಪ್ಷನಲ್ ಆಗಿ ನೀಡುತ್ತದೆ.

ಕೃಷಿ ಉತ್ಪಾದಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸಲು ತಾಂತ್ರಿಕತೆಯ ಲಾಭವನ್ನು ನಿರಂತರವಾಗಿ ಭಾರತದ ಪ್ರತಿಯೊಬ್ಬ ರೈತನಿಗೆ ಒದಗಿಸುವ ಭರವಸೆಯನ್ನು ಟೈಗರ್ ಎಲೆಕ್ಟ್ರಿಕ್ ಒದಗಿಸುತ್ತದೆ. ಪರಿಕಲ್ಪನೆ ಮತ್ತು ಫೀಲ್ಡ್ ರೆಡಿ ನಡುವಿನ ಅಂತರವನ್ನು ನಾವು ತಗ್ಗಿಸಿದ್ದೇವೆ. ಆದರೆ ಕೃಷಿ ಯಾಂತ್ರೀಕರಣ ತಂತ್ರಜ್ಞಾನದಲ್ಲಿ ಜಾಗತಿಕ ಮಾನದಂಡಗಳೊಂದಿಗೆ ವೇಗವನ್ನು ಕಾಯ್ದುಕೊಂಡಿದ್ದೇವೆ ಎಂದು ಸೋನಾಲಿಕಾ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ರಾಮನ್ ಮಿತ್ತಲ್ ಟ್ರಾಕ್ಟರ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ.

ಯುರೋಪ್‌ನಲ್ಲಿ ವಿನ್ಯಾಸಗೊಳಿಸಲಾಗಿರುವ ಟೈಗರ್ ಎಲೆಕ್ಟ್ರಿಕ್ ಟ್ರಾಕ್ಟರ್ ಅನ್ನು ಪಂಜಾಬ್‌ನ ಹೋಶಿಯಾರ್‌ಪುರದ ಸೋನಾಲಿಕಾ ಟ್ರಾಕ್ಟರ್ ಪ್ಲಾಂಟ್‌ನಲ್ಲಿ ತಯಾರಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

7000 ರಾಯಲ್ ಎನ್‌ಫೀಲ್ಡ್ ಮಿಟಿಯರ್ ಸೋಲ್ಡ್, ಕ್ಲಾಸಿಕ್ 350 ಮಾರಾಟವಾಗಿದ್ದೆಷ್ಟು?

ಯುರೋಪ್ ಮತ್ತು ಅಮೆರಿಕದ ರೈತರಿಗೆ ಒದಗಿಸಲಾಗುವ ಜಾಗತಿಕ ತಂತ್ರಜ್ಞಾನವನ್ನೇ ಟೈಗರ್ ಎಲೆಕ್ಟ್ರಿಕ್ ಟ್ರಾಕ್ಟರ್ ಹೊಂದಿದೆ. ದೇಶಿ ನಿರ್ಮಿತ ಐಪಿ67 ಕಾಂಪ್ಲೈಂಟ್ 25.5 ಕಿಲೋ ವ್ಯಾಟ್ ನ್ಯಾಚುರಲ್ ಕೂಲಿಂಗ್ ಬ್ಯಾಟರಿಯನ್ನು ಈ ಇ ಟೈಗರ್ ಎಲೆಕ್ಟ್ರಿಕ್ ಟ್ರಾಕ್ಟರ್ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಜರ್ಮನಿ ವಿನ್ಯಾಸದ ಇಂಧನ ದಕ್ಷತೆಯ ಇಟ್ರಾಕ್ ಮೋಟಾರ್ ನಿಮಗೆ ಅತಿ ಹೆಚ್ಚಿನ ಪವರ್ ಮತ್ತು ಶೂನ್ಯ ಆರ್‌ಪಿಎಂ ಡ್ರಾಪ್‌ನೊಂದಿ ಹೆಚ್ಚಿನ ಗರಿಷ್ಠ ಟ್ರಾಕ್ ಶಕ್ತಿಯನ್ನು ಉತ್ಪಾದಿಸುತ್ತದೆ.

ಸೋನಾಲಿಕಾ ಟ್ರಾಕ್ಟರ್ ಕಂಪನಿಯು ದೇಶದ ಪ್ರಮುಖ ಟ್ರಾಕ್ಟರ್ ತಯಾರಿಕಾ ಕಂಪನಿಯಾಗಿದೆ ಮತ್ತು ನಂಬರ್ 1 ರಫ್ತು ಬ್ರ್ಯಾಂಡ್ ಕೂಡ ಹೌದು. ಕಂಪನಿಯು ನಮ್ಮ ದೇಶ ಮಾತ್ರವಲ್ಲದೇ 130 ಅಧಿಕ ಬೇರೆ ದೇಶಗಳಲ್ಲಿ 11 ಲಕ್ಷ ಅಧಿಕ ಗ್ರಾಹಕರನ್ನು ಹೊಂದಿರುವ ಕಂಪನಿಯಾಗಿದ್ದು, ತನ್ನದೇ ಮಾರುಕಟ್ಟೆಯ ಮೌಲ್ಯವನ್ನು ಬೆಳೆಸಿಕೊಂಡಿದೆ.

ಸೋನಾಲಿಕಾ 20-120 ಎಚ್‌ಪಿ ಮತ್ತು 70 ಪ್ಲಸ್ ಸಾಧನಗಳಲ್ಲಿ ವಿಶಾಲವಾದ ಹೆವಿ ಡ್ಯೂಟಿ ಟ್ರಾಕ್ಟರ್ ಶ್ರೇಣಿಯನ್ನು ಪಂಜಾಬ್‌ನ ಹೋಶಿಯಾರ್‌ಪುರ್ ಸೌಲಭ್ಯದಲ್ಲಿ ತಯಾರಿಸುತ್ತದೆ, ಇದು ಜಗತ್ತಿನಾದ್ಯಂತದ ಗ್ರಾಹಕರ ವಿವಿಧ ಅಗತ್ಯಗಳನ್ನು ಪೂರೈಸುತ್ತದೆ. ರೈತ-ಕೇಂದ್ರಿತ ಬ್ರಾಂಡ್ ಆಗಿರುವ ಭಾರತ ಸರ್ಕಾರವು ದೇಶದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸ್ಫೂರ್ತಿದಾಯಕ ಯೋಜನೆಗಾಗಿ ನಿತಿ-ಆಯೋಗ ಕೊಡುಗೆ ನೀಡಿದ ಏಕೈಕ ಟ್ರಾಕ್ಟರ್ ಬ್ರಾಂಡ್ ಆಗಿ ಸೋನಾಲಿಕಾ ಅವರನ್ನು ಆಯ್ಕೆ ಮಾಡಲಾಗಿದೆ.

ಇನ್ನು ಹೋಂಡಾ ಸಿವಿಕ್, ಸಿಆರ್- ವಿ ಕಾರಿನ ಉತ್ಪಾದನೆ ಇಲ್ಲ

click me!