ಏಳು ಬೀಳುಗಳಲ್ಲಿ ಜೊತೆಗಿದ್ದ 50 ಉದ್ಯೋಗಿಗಳಿಗೆ ಕಾರು ಗಿಫ್ಟ್ ನೀಡಿದ ಚೆನ್ನೈ ಕಂಪನಿ!

By Suvarna News  |  First Published Jan 4, 2024, 6:23 PM IST

ಚೆನ್ನೈನ ಐಟಿ ಕಂಪನಿ 2009ರಲ್ಲಿ ಆರಂಭಗೊಂಡಿತ್ತು. ಆರಂಭದಿಂದ ಕಂಪನಿಯ ಏಳು ಬೀಳುಗಳಲ್ಲಿ ಜೊತೆಗಿದ್ದ 50 ಉದ್ಯೋಗಿಳಿಗೆ ಕಾರು ಉಡುಗೊರೆಯಾಗಿ ನೀಡಲಾಗಿದೆ. 


ಚೆನ್ನೈ(ಜ.04) ದೀಪಾವಳಿ ಸೇರಿದಂತೆ ಕೆಲ ಸಂದರ್ಭದಲ್ಲಿ ಕಂಪನಿ ತನ್ನ ಉದ್ಯೋಗಿಗಳಿಗೆ ಬೋನಸ್ ಸೇರಿದಂತೆ ಇತರ ಉಡುಗೊರೆ ನೀಡುವುದು ಸಾಮಾನ್ಯ. ಕೆಲ ಕಂಪನಿ ತಮ್ಮ ಉದ್ಯೋಗಿಗಳಿಗೆ ಕಾರು ಉಡುಗೊರೆಯಾಗಿ ನೀಡಿದೆ. ಇದೀಗ ಹೊಸ ವರ್ಷಕ್ಕೆ ಚೆನ್ನೈನ ಐಡಿಯಾಸ್ 2IT ಟೆಕ್ನಾಲಜಿ ಸರ್ವೀಸ್ ಲಿಮಿಟೆಡ್ ಕಂಪನಿ ಹೊಸ ವರ್ಷಕ್ಕೆ ಬಂಪರ್ ಉಡುಗೊರೆ ನೀಡಿದೆ. ಕಂಪನಿಯ ಏಳು ಬೀಳುಗಳಲ್ಲಿ ಜೊತೆಗಿದ್ದ 50 ಉದ್ಯೋಗಗಳಿಗೆ 50 ಕಾರು ಉಡುಗೊರೆಯಾಗಿ ನೀಡಿದೆ. 

ಐಡಿಯಾಸ್ 2IT ಟೆಕ್ನಾಲಜಿ ಸರ್ವೀಸ್ ಲಿಮಿಟೆಡ್ ಕಂಪನಿ 2009ರಲ್ಲಿ ಆರಂಭಗೊಂಡಿತು. ಮುರಳಿ ಹಾಗೂ ಮುರಳಿ ಪತ್ನಿ ಜೊತೆಗೂಡಿ ಕಂಪನಿ ಆರಂಭಿಸಿದ್ದರು. ಸಣ್ಣ ಮಟ್ಟದಲ್ಲಿ ಆರಂಭಗೊಂಡ ಕಂಪನಿ ಇದೀಗ ಚೆನ್ನೈನ ಅತೀ ದೊಡ್ಡ ಟೆಕ್ ಕಂಪನಿಯಾಗಿ ಬೆಳೆದು ನಿಂತಿದೆ. ಹೀಗಾಗಿ ಆರಂಭದಿಂದ ಕಂಪನಿ ಜೊತೆಗಿದ್ದ ಉದ್ಯೋಗಿಗಳನ್ನು ಗುರುತಿಸಿ ಕಂಪನಿ ಈ ಹೊಸ ವರ್ಷದಲ್ಲಿ ಕಾರು ಉಡುಗೊರೆಯಾಗಿ ನೀಡಿದೆ. 

Tap to resize

Latest Videos

undefined

 

ಮೊದಲ ಉದ್ಯೋಗಿಗೆ ಮರ್ಸಿಡಿಸ್ ಬೆಂಜ್ ಕಾರು ಗಿಫ್ಟ್ ನೀಡಿದ ಕೇರಳದ ಐಟಿ ಕಂಪನಿ!

ಕಂಪನಿಯ ಸಂಪೂರ್ಣ ಷೇರು ನನ್ನ ಹಾಗೂ ಪತ್ನಿ ಹೆಸರಿನಲ್ಲಿದೆ. ಇದೀಗ ಕಂಪನಿ ಲಾಭದಲ್ಲಿದೆ. ಕಂಪನಿಯ ಶ್ರೇಯಸ್ಸಿನಲ್ಲಿ ಉದ್ಯೋಗಿಗಳ ಕೊಡುಗೆ ಅಪಾರ. ಅವರಿಂದಲೇ ಈ ಕಂಪನಿ ಬೆಳೆದು ನಿಂತಿದೆ. ಹೀಗಾಗಿ ಆರಂಭದಿಂದಲೂ ಕಂಪನಿ ಜೊತೆಗಿರುವ ಉದ್ಯೋಗಳಿಗೆ ಶೇಕಡಾ 33 ರಷ್ಟು ಷೇರುಗಳನ್ನು ನೀಡಲಾಗುತ್ತಿದೆ. ಇದೇ ವೇಳೆ 50 ಉದ್ಯೋಗಿಗಳನ್ನು ಗುರುತಿಸಿ ಅವರಿಗೆ ಕಾರು ಉಡುಗೊರೆಯಾಗಿ ನೀಡಲಾಗಿದೆ ಎಂದು ಕಂಪನಿ ಸಂಸ್ಥಾಪಕ ಮುರಳಿ ಹೇಳಿದ್ದಾರೆ.

ವಿಶೇಷ ಅಂದರೆ ನಮ್ಮ ಕಂಪನಿಯ ಹಲವು ಉದ್ಯೋಗಿಗಳು ಇದೇ ಮೊದಲ ಬಾರಿಗೆ ಕಾರಿನ ಮಾಲೀಕರಾಗಿದ್ದಾರೆ. ಮೊದಲ ಬಾರಿಗೆ ಕಾರು ಡ್ರೈವಿಂಗ್ ಮಾಡಿ ಆನಂದ ಪಟ್ಟಿದ್ದಾರೆ. ಮಾರುತಿ ಸುಜುಕಿ ಕಂಪನಿಯ ಬಲೆನೋ, ಬ್ರೆಜಾ, ಫ್ರಾಂಕ್ಸ್, ಇಗ್ನಿಸ್, ವಿಟಾರ, ಎರ್ಟಿಗಾ ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಕಳೆದ 5 ವರ್ಷದಿಂದ ಕಂಪನಿ ಜೊತೆಗೆ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ಕಾರು ನೀಡಲಾಗಿದೆ ಎಂದು ಮುರಳಿ ಹೇಳಿದ್ದಾರೆ.

ಜಿಮ್ ಟ್ರೈನರ್‌ಗೆ ಪ್ರಭಾಸ್ ನೀಡಿದ 89 ಲಕ್ಷ ರೂ. ಬೆಲೆಯ ರೇಂಜ್ ರೋವರ್ ಕಾರಿನ ವಿಶೇಷತೆ ಇಲ್ಲಿದೆ

ಕಳೆದ ವರ್ಷ ಇದೇ ಐಡಿಯಾಸ್ 2IT ಟೆಕ್ನಾಲಜಿ ಸರ್ವೀಸ್ ಲಿಮಿಟೆಡ್ ಕಂಪನಿ 100 ಉದ್ಯೋಗಿಗಳಿಗೆ 100 ಮಾರುತಿ ಬಲೆನೋ ಕಾರು ಉಡುಗೊರೆಯಾಗಿ ನೀಡಿತ್ತು. ಇದೇ ವೇಳೆ ಮಾತನಾಡಿದ್ದ ಮುರಳಿ, ಕಂಪನಿಯ ಉದ್ಯೋಗಿಗಳೇ ತಮ್ಮ ಪರಿಶ್ರಮದ ಮೂಲಕ ಇದನ್ನು ಗಳಿಸಿದ್ದಾರೆ. ಉದ್ಯೋಗಿಗಳ ಕೊಡುಗೆಗಳನ್ನು ಪುರಸ್ಕರಿಸುವ ಮತ್ತಷ್ಟುಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು’ ಎಂದು ಕಂಪನಿಯ ಸ್ಥಾಪಕ ಮುರಳಿ ವಿವೇಕಾನಂದನ್‌ ಹೇಳಿದ್ದರು.

click me!