62 ಕಿ.ಮೀ ಮೈಲೇಜ್, 3.3 ಕೋಟಿ ಬೆಲೆಯ ಕಾರು ಖರೀದಿಸಿದ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್!

By Suvarna News  |  First Published Dec 23, 2023, 4:05 PM IST

ರಾಜಕೀಯ ನಾಯಕರಿಗೆ ಇದೀಗ BMW XM ಕಾರಿನ ಮೇಲೆ ಭಾರಿ ಪ್ರೀತಿ. ಕಾರಣ ಇದರ ನಿರ್ವಹಣೆ ಇತರ ಐಷಾರಾಮಿ ಕಾರುಗಳಿಗೆ ಹೋಲಿಸಿದರೆ ಕಡಿಮೆ. ಹೀಗಾಗಿ ಹಲವರು ಈ ಕಾರು ಖರೀದಿಗೆ ಮುಗಿಬಿದ್ದಿದ್ದಾರೆ. ಇದೀಗ ಮತ್ತೊರ್ವ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ BMW XM ಕಾರು ಖರೀದಿಸಿದ್ದಾರೆ.


ಉಡುಪಿ(ಡಿ.23) ಭಾರತದಲ್ಲಿ ದುಬಾರಿ ಕಾರುಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳು, ಶ್ರೀಮಂತರು ಐಷಾರಾಮಿ ಕಾರು ಖರೀದಿಸುವುದು ಹೊಸ ವಿಚಾರವಲ್ಲ. ಆದರೆ ಇತ್ತೀಚೆಗೆ ಐಷಾರಾಮಿ ಕಾರುಗಳ ಪೈಕಿ BMW XM ಕಾರು ಭಾರಿ ಟ್ರೆಂಡ್ ಆಗುತ್ತಿದೆ. ಈ ಕಾರು ಖರೀದಿಸಲು ಹಲವರು ಮುಗಿ ಬೀಳುತ್ತಿದ್ದಾರೆ. ಎಂಟಿಬಿ ನಾಗರಾಜ್ ಬಳಿಕ ಮತ್ತೋರ್ವ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಇದೇ ಕಾರು ಖರೀದಿಸಿದ್ದಾರೆ. ಹಲವು ವಿಶೇಷತೆ ಹೊಂದಿರುವ ಈ ಕಾರು ಇದೀಗ ಮಧ್ವರಾಜ್ ಕಾರು ಸಂಗ್ರಹಾಲಯ ಸೇರಿಕೊಂಡಿದೆ.

ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಮೋದ್ ಮಧ್ವರಾಜ್ ಖರೀದಿಸಿರುವ ಹೊಸ BMW XM ಕಾರು ಒಂದು ಲೀಟರ್ ಪೆಟ್ರೋಲ್‌ಗೆ 62 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕಾರಣ ಇದು ಹೈಬ್ರಿಡ್ ಎಂಜಿನ್ ಹೊಂದಿದೆ. ಟ್ವಿನ್ ಟರ್ಬೋ ಚಾರ್ಜ್ ಪೆಟ್ರೋಲ್ ಎಂಜಿನ್ ಜೊತೆ ಎಲೆಕ್ಟ್ರಿಕ್ ಮೋಟಾರು ಹೊಂದಿದೆ. ಹೀಗಾಗಿ ಇದರ ಮೈಲೇಜು ಬರೋಬ್ಬರಿ 62. 

Tap to resize

Latest Videos

undefined

1 ಲೀ.ಪೆಟ್ರೋಲ್‌ಗೆ 62 ಕಿ.ಮೀ ಮೈಲೇಜ್, ದುಬಾರಿ BMW ಕಾರು ಖರೀದಿಸಿದ MTB ನಾಗರಾಜ್!

ಹೊಸ ಕಾರಿನ ಕುರಿತು ಸ್ವತಃ ಪ್ರಮೋದ್ ಮಧ್ವರಾಜ್ ಸಂತಸ ಹಂಚಿಕೊಂಡಿದ್ದಾರೆ. BMW ಕುಟುಂಬದ ಭಾಗವಾಗಿರುವುದು ಹೆಮ್ಮೆ ತಂದಿದೆ ಎಂದು ಮಧ್ವರಾಜ್ ಹೇಳಿದ್ದಾರೆ. ಹೊಸ ಕಾರನ್ನು ಪ್ರಮೋದ್ ಮಧ್ವರಾಜ್ ಅವರ ಅಮ್ಮುಂಜೆ ಮನೆಗೆ ಡೆಲವರಿ ಮಾಡಲಾಗಿದೆ. ಹೊಸ ಕಾರಿನ ಮುಂದೆ ಫೋಟೋ ತೆಗೆದುಕೊಂಡಿದ್ದಾರೆ. 

BMW XM ಕಾರು ಬಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಬಿಜೆಪಿಯ ಹೊಸಕೋಟೆ ನಾಯಕ ಎಂಟಿಬಿ ನಾಗರಾಜ್ ಕೂಡ ಇದೇ ಕಾರು ಖರೀದಿಸಿದ್ದರು. ಕರ್ನಾಟಕದಲ್ಲಿ BMW XM ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. BMW XM ಕಾರು ಖರೀದಿಸಿದ ರಾಜಕೀಯ ನಾಯಕರ ಪಟ್ಟಿಗೆ ಪ್ರಮೋದ್ ಮಧ್ವರಾಜ್ ಕೂಡ ಸೇರಿಕೊಂಡಿದ್ದಾರೆ.

BMW ಕಾರುಗಳ ಪೈಕಿ M ಮಾಡೆಲ್ ಕಾರು ಇದಾಗಿದೆ. 4.4 ಲೀಟರ್ ಟ್ವಿನ್ ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಕಾರು  653 PS ಪವರ್ ಹಾಗೂ 800 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 8 ಸ್ಪೀಟ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಹೈಬ್ರಿಡ್ ಪ್ಲಗ್ ಇನ್ ಕಾರಣ ಒಂದು ಲೀಟರ್ ಪೆಟ್ರೋಲ್‌ಗೆ 62 ಕಿ.ಮೀ ಮೈಲೇಜ್ ನೀಡಲಿದೆ. ಇನ್ನು ಕೇವಲ ಎಲೆಕ್ಟ್ರಿಕ್ ಮೋಟಾರಿನಲ್ಲಿ ಕಾರು ಚಲಾಯಿಸಿದರೆ ಅಂದರೆ ಇವಿ ಮೋಡ್‌ನಲ್ಲಿ ಕಾರು 88 ಕಿ.ಮೀ ಮೈಲೇಜ್ ನೀಡಲಿದೆ. 

 

BMW iX ಎಲೆಕ್ಟ್ರಿಕ್ ಕಾರು ಖರೀದಿಸಿ ಪರದಾಡಿದ ಬಾಲಿವುಡ್ ನಟಿ, ವಿಡಿಯೋ ವೈರಲ್!

ಪ್ರಮೋದ್ ಮಧ್ವರಾಜ್ ಬಹುದೊಡ್ಡ ಉದ್ಯಮಿಯಾಗಿ ಯಶಸ್ಸುಕಂಡಿದ್ದಾರೆ. ಮಧ್ವರಾಜ್ ಬಳಿ ದುಬಾರಿ ಮೌಲ್ಯದ ರೋಲ್ಸ್ ರಾಯ್ಸ್ ಕಾರು ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಗೆ ಮಧ್ವರಾಜ್ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.


 

click me!