ಪಿಂಕ್ ಸ್ಯಾರಿ, ಕಪ್ಪು ಗ್ಲಾಸ್; 3.2 ಕೋಟಿ ರೂಪಾಯಿ ಮೇಬ್ಯಾಕ್ ಕಾರಿನ ಜೊತೆ ಕಾಣಿಸಿಕೊಂಡ ಕಂಗನಾ!

By Suvarna News  |  First Published Aug 11, 2023, 2:46 PM IST

ಬಾಲಿವುಟ್ ನಟಿ ಕಂಗನಾ ರಣಾವತ್ ಚಿತ್ರಕ್ಕಿಂತ ಹೆಚ್ಚಾಗಿ ತಮ್ಮ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಾರೆ. ಇದೀಗ ಕಂಗನಾ ರಣವಾತ್ ತಮ್ಮ ಐಷಾರಾಮಿ ಕಾರಿನಿಂದಲು ಸುದ್ದಿಯಾಗಿದ್ದಾರೆ. ವಿಮಾನ ನಿಲ್ದಾಣಧಲ್ಲಿ ಕಂಗನಾ ರಣಾವತ್ ತಮ್ಮ 3.2 ಕೋಟಿ ರೂಪಾಯಿ ದುಬಾರಿ ಕಾರು ಏರಿದ್ದಾರೆ. ಇದೀಗ ಕಂಗನಾ ಕಾರು ಹಾಗೂ ಕಂಗಾನ ಲುಕ್ ಭಾರಿ ವೈರಲ್ ಆಗಿದೆ.  


ಮುಂಬೈ(ಆ.11) ಚಿತ್ರದ ಶೂಟಿಂಗ್ ಸೇರಿದಂತೆ ಬ್ರ್ಯಾಂಡ್ ಪ್ರಮೋಶನ್‌ಗಳಲ್ಲಿ ಬ್ಯೂಸಿಯಾಗಿರುವ  ಬಾಲಿವುಡ್ ನಟಿ ಕಂಗನಾ ರಣಾವತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಕಂಗನಾ ರಣಾವತ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ಇದರಲ್ಲಿ ಮರ್ಸಿಡೀಸ್ ಬೆಂಜ್ ಮೇಬ್ಯಾಕ್ ಕಾರು ಎಲ್ಲರ ಗಮನಸೆಳೆದಿದೆ. ಕಾರಣ ಈ ಕಾರಿನ ಎಕ್ಸ್ ಶೋ ರೂಂ ಬೆಲೆ 3.2 ಕೋಟಿ ರೂಪಾಯಿ. ಆದರೆ ಕಂಗನಾ ರಣಾವತ್ ಈ ಕಾರಿಗೆ ಮತ್ತೆ 1 ಕೋಟಿ ರೂಪಾಯಿ ಖರ್ಚ ಮಾಡಿ ಕಸ್ಟಮೈಸ್ಡ್ ಮಾಡಿದ್ದಾರೆ. ತಮಗೆ ಬೇಕಾದ ರೀತಿಯಲ್ಲಿ, ತಮ್ಮ ಅಗತ್ಯಕ್ಕೆ ತಕ್ಕಂತೆ ಕಾರನ್ನು ಮಾಡಿಫಿಕೇಶನ್ ಮಾಡಿಸಿದ್ದಾರೆ.

ಇತ್ತೀಚೆಗೆ ಕಂಗನಾ ರಣಾವತ್‌ರನ್ನು ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಇದೇ ಮರ್ಸಿಡೀಸ್ ಮೇಬ್ಯಾಕ್ ಕಾರು ಆಗಮಿಸಿತ್ತು. ಈ ವೇಳೆ ಕಂಗನಾ ಕಸ್ಟಮೈಸ್ಡ್ ಕಾರು ಎಲ್ಲರ ಗಮನಸೆಳೆದಿತ್ತು. ಗೋಲ್ಡನ್ ಬಾರ್ಡರ್ ಲೈಟ್ ಪಿಂಕ್ ಸ್ಯಾರಿ ಹಾಗೂ ಗಾಗಲ್ಸ್‌ನಲ್ಲಿ ಕಂಗೊಳಿಸಿದ ಕಂಗನಾ, ತಮ್ಮ ಕಪ್ಪು ಬಣ್ಣದ ಮೇಬ್ಯಾಕ್ ಕಾರಿನ ಮುಂದೆ ನಿಂತು ಮಾಧ್ಯಮಗಳ ಕ್ಯಾಮೆರಾಗೆ ಫೋಸ್ ನೀಡಿದ್ದರು. ಬಳಿಕ ಕಾರು ಹತ್ತಿ ಪ್ರಯಾಣ ಬೆಳೆಸಿದ್ದರು.

Tap to resize

Latest Videos

undefined

ಕಂಗನಾ ಬಹುನಿರೀಕ್ಷಿತ Chandramukhi 2 ಪೋಸ್ಟರ್​ ರಿಲೀಸ್​: ಮೆಚ್ಚುಗೆಗಳ ಮಹಾಪೂರ- ಏನಿದರ ಕಥೆ?

ಕಂಗನಾ ಕಾರಿನ ಡೋರ್ ತೆರೆದಾಗ ಕಸ್ಟಮೈಸ್ಡ್  ಮೇಬ್ಯಾಕ್‌ನ ಆಕರ್ಷಕ ನೋಟ ಎಲ್ಲರ ಕಣ್ಣು ಕುಕ್ಕಿತ್ತು. 2022ರಲ್ಲಿ ಕಂಗನಾ ರಣವಾತ್ ಟಾಪ್ ಮಾಡೆಲ್ ಮರ್ಸಿಡೀಸ್ ಬೆಂಜ್ ಮೇಬ್ಯಾಕ್ ಎಸ್ ಕ್ಲಾಸ್ ಸೀರಿಸ್ ಕಾರು ತೆಗೆದುಕೊಂಡಿದ್ದರು.  ತಮ್ಮ ಧಾಕ್ಕಡ್ ಚಿತ್ರ ಬಿಡುಗಡೆಗೂ ಮುನ್ನ ಈ ಕಾರು ಖರೀದಿಸಿದ್ದರು. ಮೇಬ್ಯಾಕ್ ಎಸ್680 ಸೀರಿಸ್ ಕಾರು ಇದಾಗಿದ್ದು, ಅತ್ಯುತ್ತಮ ಪರ್ಫಾಮೆನ್ಸ್ ಹಾಗೂ ಆರಾಮದಾಯಕ ಪ್ರಯಾಣ ನೀಡಲಿದೆ. ಕಂಗನಾ ಕಳೆದ ವರ್ಷ ಈ ಕಾರು ಖರೀದಿಸಿದ್ದಾರೆ. ಆದರೆ ಕಸ್ಟಮೈಸ್ಡ್ ಕಾರಿನ ಇಂಟಿರಿಯರ್ ಈ ಬಾರಿ ಸ್ಪಷ್ಟವಾಗಿ ಗೋಚರಿಸಿದೆ.

ಕಳೆದ ವರ್ಷ ಕಂಗನಾ ರಣವಾತ್ ಮೇಬ್ಯಾಕ್ ಕಾರು ಖರೀದಿಸುವಾಗ ಇದರ ಎಕ್ಸ್ ಶೋ ರೂಂ ಬೆಲೆ 3.2 ಕೋಟಿ ರೂಪಾಯಿ. ಇನ್ನು ಆನ್ ರೋಡ್ ಬೆಲೆ ಸರಿಸುಮಾರು 4 ಕೋಟಿ ರೂಪಾಯಿ. ಆದರೆ ಇದೀಗ ಈ ಕಾರಿನ ಎಕ್ಸ್ ಶೋ ರೂ ಬೆಲೆ 4 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 

 

 

ವಿಮಾನ ನಿಲ್ದಾಣದಲ್ಲಿ ಕಂಗನಾ ರಣಾವತ್ ಕಾರಿನ ಡೋರ್ ತೆಗೆದು ಒಳ ಪ್ರವೇಶಿಸಿದ್ದಾರೆ. ಈ ವೇಳೆ ಕಾರಿನ ಇಂಟಿರಿಯರ್ ಹಾಗೂ ಅತ್ಯಾಕರ್ಷಕ ಮೇಬ್ಯಾಕ್ ನೋಟ ಎಲ್ಲರನ್ನು ಆಕರ್ಷಿಸಿದೆ. ಕಂಗನಾ ಬಳಿ ಇರುವ ಮೇಬ್ಯಾಕ್ ಎಸ್ 680 ಕಾರು 5980 cc ಎಂಜಿನ್ ಹೊಂದಿದೆ. ಅತ್ಯಂತ ಬಲಿಷ್ಠ ಹಾಗೂ ಪವರ್‌ಫುಲ್ ಎಂಜಿನ್ ಇದಾಗಿದೆ.ಆದರೆ ಈ ಕಾರಿನ ಮೈಲೇಜ್ ಕೇವಲ 7.52 ಕಿ.ಮೀ ಮಾತ್ರ. 

ಈ ಕಾರಿನ ಗರಿಷ್ಠ ವೇಗ 250 ಕಿಲೋಮೀಟರ್ ಪ್ರತಿ ಗಂಟೆಗೆ. 4.5 ಸೆಕೆಂಡ್‌ಗೆ 0-100 ಕಿ.ಮೀ ವೇಗ ಪಡೆದುಕೊಳ್ಳಲಿದೆ. ಮತ್ತೊಂದು ವಿಶೇಷ ಅಂದರೆ 12 ಸಿಲಿಂಡರ್ ಕೆಪಾಸಿಟಿ ಎಂಜಿನ್ ಇದಾಗಿದೆ. ಹೀಗಾಗಿ ಇದರ ಸಾಮರ್ಥ್ಯವನ್ನು ನೀವು ಊಹಿಸಬಹುದು. ಇದೇ ಕಾರಣಕ್ಕೆ ಮೈಲೇಜ್ ಕಡಿಮೆ. ಪೆಟ್ರೋಲ್ ಎಂಜಿನ್ ಕಾರು 603 bhp ಪವರ್ ಹಾಗೂ 900 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಮತ್ತೊಂದು ಬಾಂಬ್ ಸಿಡಿಸಿದ ಕಂಗನಾ: ಶಾಕಿಂಗ್ ಹೇಳಿಕೆ ಕೊಟ್ಟ ನಟಿ ಪೋಸ್ಟ್ ವೈರಲ್..!

ಬಿಎಸ್6, ಟ್ವಿನ್ ಟರ್ಬೋ ಎಂಜಿನ್ ಹೊಂದಿರುವ ಮೇಬ್ಯಾಕ್ ಕಾರು ಗರಿಷ್ಠ ಸುರಕ್ಷತೆ ಫೀಚರ್ಸ್ ಹೊಂದಿದೆ. ಆಟೋಮ್ಯಾಟಿಕ್  ಎಮರ್ಜೆನ್ಸಿ ಬ್ರೇಕಿಂಗ್, 10 ಏರ್ ಬ್ಯಾಗ್, ಎಬಿಎಸ್ ಬ್ರೇಕಿಂಗ್, ಇಬಿಡಿ ಸಿಸ್ಟಮ್, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಫೋರ್ ವ್ಹೀಲ್ ಡ್ರೈವ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.

click me!