BMW New Laucnhes: ಜರ್ಮನಿ ಮೂಲಕದ ಲಕ್ಸುರಿ ಆಟೊಮೊಬೈಲ್ ತಯಾರಕ ಕಂಪನಿ ಬಿಎಂಡಬ್ಲ್ಯು (BMW) 2022ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು 19 ಕಾರುಗಳು ಹಾಗೂ ಐದು ಮೋಟಾರ್ ಸೈಕಲ್ಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ.
ಜರ್ಮನಿ ಮೂಲಕದ ಲಕ್ಸುರಿ ಆಟೊಮೊಬೈಲ್ ತಯಾರಕ ಕಂಪನಿ ಬಿಎಂಡಬ್ಲ್ಯು (BMW) 2022ನೇ ಸಾಲಿನಲ್ಲಿ ಭಾರತದಲ್ಲಿ ಒಟ್ಟು 19 ಕಾರುಗಳು ಹಾಗೂ ಐದು ಮೋಟಾರ್ ಸೈಕಲ್ಗಳನ್ನು ಬಿಡುಗಡೆಗೊಳಿಸುವ ಗುರಿ ಹೊಂದಿದೆ. ಜೊತೆಗೆ, ಈ ವರ್ಷದ ಮೇ ತಿಂಗಳಲ್ಲಿ ಬಿಎಂಡಬ್ಲ್ಯು, ಆಲ್-ಎಲೆಕ್ಟ್ರಿಕ್ ಸೆಡಾನ್ (All-electric sedan) ಅನ್ನು ಕೂಡ ಬಿಡುಗಡೆಗೊಳಿಸಲಿದೆ. ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಆಟೊಮೊಬೈಲ್ ಕಂಪನಿ ನಾಲ್ಕು ಚಕ್ರಗಳ ವಾಹನ ಮಾರಾಟದಲ್ಲಿ ಶೇ.25 ಹಾಗೂ ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.41 ರಷ್ಟು ಪ್ರಗತಿ ದಾಖಲಿಸಿದೆ.
ಆಟೊಮೊಬೈಲ್ ವಲಯವನ್ನು ಕಾಡುತ್ತಿರುವ ಸೆಮಿ ಕಂಡಕ್ಟರ್ ಕೊರತೆ, ರಷ್ಯಾ-ಉಕ್ರೇನ್ ಯುದ್ಧ ಮತ್ತು ಚೀನಾದಲ್ಲಿ ಕಾಡುತ್ತಿರುವ ಕೋವಿಡ್ -19 ಪರಿಸ್ಥಿತಿಯಿಂದ ಪೂರೈಕೆ ಸರಣಿಯಲ್ಲಿ ಉಂಟಾಗಿರುವ ಅವ್ಯವಸ್ಥೆಗಳ ನಡುವೆಯೂ ಬಿಎಂಡಬ್ಲ್ಯು ವಾಹನಗಳ ಮಾರಾಟ ಗಣನೀಯ ಏರಿಕೆ ಕಂಡಿದೆ. 2022ರ ಜನವರಿ-ಮಾರ್ಚ್ನಲ್ಲಿ, ಬಿಎಂಡಬ್ಲ್ಯು ಸಮೂಹ ತನ್ನ ಅತ್ಯುತ್ತಮ ಮಾರಾಟ ಅಂಕಿ ಅಂಶಗಳನ್ನು ಪ್ರದರ್ಶಿಸಿದೆ. ಈ ಅವಧಿಯಲ್ಲಿ 2,815 ನಾಲ್ಕು-ಚಕ್ರಗಳ ವಾಹನಗಳ ಮಾರಾಟ ದಾಖಲಾಗಿದೆ. ಕಂಪನಿಯ ಸೆಡಾನ್ (sedan) ಹಾಗೂ ಎಸ್ಯುವಿ (SUV) ವಲಯದಲ್ಲಿ 2,636 ವಾಹನಗಳು ಮಾರಾಟವಾಗಿದ್ದರೆ, 179 ಮಿನಿ ಲಕ್ಸುರಿ ಕಾಂಪ್ಯಾಕ್ಟ್ (mini luxury compact) ಕಾರುಗಳು ಸೇಲ್ ಆಗಿವೆ. ಈ ಅವಧಿಯಲ್ಲಿ ಒಟ್ಟು 1,518 ವಾಹನಗಳ ಮಾರಾಟದೊಂದಿಗೆ ಬಿಎಂಡಬ್ಲ್ಯು ಮೋಟೋರ್ಯಾಡ್ (BMW Motorrad) ಶೇ.41.1ರಷ್ಟು ಪ್ರಗತಿ ದಾಖಲಿಸಿದೆ.
undefined
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಡಬ್ಲ್ಯು ಭಾರತ ಸಮೂಹದ ಅಧ್ಯಕ್ಷ ವಿಕ್ರಂ ಪವ್ಹಾ, ಈಗಲೂ ಪೂರೈಕೆ ಸರಣಿ ವ್ಯವಸ್ಥಿತವಾಗಿಲ್ಲ. ನಮ್ಮ ಬಳಿ ಈಗಲೂ 2,500 ನಾಲ್ಕು ಚಕ್ರಗಳು ಹಾಗೂ 1,500 ಮೋಟಾರ್ಸೈಕಲ್ಗಳಿಗೆ ಆರ್ಡರ್ಗಳಿವೆ. ಈ ಪೈಕಿ ನಾವು ಇನ್ನಷ್ಟು ಮಾರಾಟ ದಾಖಲಿಸಬಹುದಿತ್ತು.ಸದ್ಯ ದಾಖಲಾಗಿರುವ ಮಾರಾಟ ದುಪ್ಪಟ್ಟಾಗಿಸಬಹುದಿತ್ತು” ಎಂದಿದ್ದಾರೆ.
“ಎಲ್ಲಾ ಲಾಜಿಸ್ಟಿಕ್ ಸಮಸ್ಯೆಗಳ ನಡುವೆಯೂ 2022ರ ಮೊದಲ ತ್ರೈಮಾಸಿಕದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ ಆರ್ಡರ್ಗಳನ್ನು ಪೂರೈಸಲು ಸಾಧ್ಯವಾದಲ್ಲಿ ಇದು ನಮಗೆ ಅತ್ಯುತ್ತಮ ವರ್ಷವಾಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Maruti discounts ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದ ಮಾರುತಿ ಸುಜುಕಿ, ಕೈಗೆಟುಕುವ ದರದಲ್ಲಿ ಕಾರು ಲಭ್ಯ!
ಆಟೊಮೊಬೈಲ್ ವಲಯದಲ್ಲಿ ಇನ್ನೂ ಸೆಮಿಕಂಡಕ್ಟರ್ ಕೊರತೆಯ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ. ಉಕ್ರೇನಿನಲ್ಲಿನ ಭೌಗೋಳಿಕ ರಾಜಕೀಯ ಸನ್ನಿವೇಶಗಳು ಹಾಗೂ ಚೀನಾದ ಕೋವಿಡ್-19 (COVID-19) ಪರಿಸ್ಥಿತಿಯಿಂದ ಇನ್ನಷ್ಟು ಹೆಚ್ಚಿನ ಸವಾಲುಗಳು ಎದುರಾಗುವ ನಿರೀಕ್ಷೆಯಿದೆ. ಅದನ್ನು ಎದುರಿಸಲು ಸಜ್ಜಾಗಬೇಕಿದೆ.
ಬಿಎಂಡಬ್ಲ್ಯು ಇಂಡಿಯಾ ತನ್ನ ಆಲ್-ಎಲೆಕ್ಟ್ರಿಕ್ i4 ಸೆಡಾನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಪ್ರಿಲ್ 28 ರಂದು ಅನಾವರಣಗೊಳಿಸಲು ಸಜ್ಜಾಗಿದೆ. ಇತ್ತೀಚೆಗೆ ಇಂಡಿಯಾ ಆರ್ಟ್ ಫೇರ್ನಲ್ಲಿ ಒನ್-ಆಫ್ iX ಎಲೆಕ್ಟ್ರಿಕ್ SUV ಅನ್ನು ಪ್ರದರ್ಶಿಸಿತು.
ಬಿಎಂಡಬ್ಲ್ಯು ಐಎಕ್ಸ್ (BMW iX) ಮತ್ತು ಇತ್ತೀಚೆಗೆ ಮಿನಿ ಎಲೆಕ್ಟ್ರಿಕ್ ಬಿಡುಗಡೆಯಾದ ನಂತರ, BMW i4 ಕಂಪನಿಯ ಮೂರನೇ ಎಲೆಕ್ಟ್ರಿಕ್ ಕಾರ್ ಆಗಿದೆ. ಹೊಸ-ಪೀಳಿಗೆಯ 4 ಸರಣಿಯಲ್ಲಿ ನಿರ್ಮಿಸಲಾದ ಆಲ್-ಎಲೆಕ್ಟ್ರಿಕ್ i4 ಸೆಡಾನ್ ದೊಡ್ಡ ಮುಂಭಾಗದ ಗ್ರಿಲ್, ಸಿಗ್ನೇಚರ್ ಕೂಪ್ ರೂಫ್ಲೈನ್, LED ಹೆಡ್ಲ್ಯಾಂಪ್ಗಳು ಮತ್ತು ನೀಲಿ ಸ್ಟ್ರೈಫ್ ಇರುವ ವಿನ್ಯಾಶಗಳನ್ನು ಪಡೆಯುವ ಸಾಧ್ಯತೆಯಿದೆ.
ಇದನ್ನೂ ಓದಿ: Maruti Ertiga 11 ಸಾವಿರ ರೂಗೆ ಬುಕ್ ಮಾಡಿ 2022ರ ಹೊಚ್ಚ ಹೊಸ ಮಾರುತಿ ಎರ್ಟಿಗಾ!
BMW i4 ಇಂಟೀರಿಯರ್ ಕುರಿತು ಹೇಳುವುದಾದರೆ, ಇದು ಬೃಹತ್ 14.9-ಇಂಚಿನ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಮತ್ತು ಐಡ್ರೈವ್8 (iDrive8) ಸಾಫ್ಟ್ವೇರ್ನೊಂದಿಗೆ 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ಬರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಎಲೆಕ್ಟ್ರಿಕ್ i4 ಸೆಡಾನ್ ಅನ್ನು 2 ವೇರಿಯಂಟ್ಗಳಲ್ಲಿ ಲಭ್ಯವಿದೆ - ಎಂ50 ಸೆಡಾನ್ M50 sedan ಮತ್ತು ಇಡ್ರೈವ್40 ಗ್ರ್ಯಾನ್ ಕೂಪ್ (eDrive40 Gran Coupe).