BMW i4, iX ಸೋಲ್ಡ್ ಔಟ್: 2022ರ ಆಗಸ್ಟ್ನಲ್ಲಿ ಬಿಡುಗಡೆ ನಿರೀಕ್ಷೆ!

By Suvarna News  |  First Published Jan 2, 2022, 12:05 PM IST

*ಬಿಡುಗಡೆಗೊಳಿಸಿದ್ದ ಐ4 ಹಾಗೈ ಐಎಕ್ಸ್ ಎಲೆಕ್ಟ್ರಿಕ್ ಕಾರುಗಳು ಸೋಲ್ಡ್‌ ಔಟ್‌
*ಬೇಡಿಕೆ ಪೂರೈಸಲು ಕಾರ್ಯಪಡೆಯನ್ನು ಶೇ.5ರಷ್ಟು ಏರಿಸಲು ಕಂಪನಿ
*2025 ರ ಮೊದಲು ಮಿಲಿಯನ್ ಮಾರಾಟದ ಗುರಿ


Auto Desk: ಐಷಾರಾಮಿ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ಇತ್ತೀಚೆಗೆ ಬಿಡುಗಡೆಗೊಳಿಸಿದ್ದ ಐ4 ಹಾಗೈ ಐಎಕ್ಸ್ ಎಲೆಕ್ಟ್ರಿಕ್ ಕಾರುಗಳು ಕೆಲವೇ ದಿನಗಳಲ್ಲಿ ಸಂಪೂರ್ಣ ಸೋಲ್ಡ್ ಔಟ್ ಆಗಿವೆ! ಈ ವಿಷಯವನ್ನು ಖುದ್ದು ಅದರ ಸಿಇಓ ಓಲಿವರ್ ಜಿಪ್ಸಿ ತಿಳಿಸಿದ್ದಾರೆ.ಅಷ್ಟೇ ಅಲ್ಲ, ಹೆಚ್ಚುತ್ತಿರುವ ಬೇಡಿಕೆ ಹಿನ್ನೆಲೆಯಲ್ಲಿ,  ಮುಂದಿನ ಕಾರು ತಯಾರಕಾ ಘಟಕದ ಕಾರ್ಯಪಡೆಯನ್ನು ಶೇ.5ರಷ್ಟು ಏರಿಸಲು ಕಂಪನಿ ಮುಂದಾಗಿದೆ.
ಬಿಎಂಡಬ್ಲ್ಯು ಐ4 ಹಾಗೂ ಐಎಕ್ಸ್ ಎಲೆಕ್ಟ್ರಿಕ್ ವಾಹನಗಳು ಕೆಲವೇ ತಿಂಗಳಲ್ಲಿ ಸಂಪೂರ್ಣ ಸೋಲ್ಡ್ ಔಟ್ ಆಗಿದೆ. ಈ ಕುರಿತು ಹೇಳಿಕೆ ನೀಡಿರುವ ಜಿಪ್ಸಿ, “ ನಮ್ಮ ಐ4 ಕಾರುಗಳು ಸೋಲ್ಡ್ ಔಟ್ ಆಗಿದೆ. ಜೊತೆಗೆ, ಐಎಕ್ಸ್ ಕುಡ. ಆದ್ದರಿಂದ ಮುಂದಿನ ವರ್ಷ ನಾವು ನಮ್ಮ ಕಾರ್ಯಪಡೆಯನ್ನು ಶೇ.5ರಷ್ಟು ಏರಿಸಲು ನಿರ್ಧರಿಸಿದ್ದೇವೆ” ಎಂದಿದ್ದಾರೆ.

ಐ4 ಮತ್ತು ಐಎಕ್ಸ್ ಐದನೇ ಪೀಳಿಗೆಯ ಎಲೆಕ್ಟ್ರಿಕ್ ಕಾರ್ ತಂತ್ರಜ್ಞಾನ ಹೊಂದಿದೆ. ಒಟ್ಟಾರೆಯಾಗಿ, ಬಿಎಂಡಬ್ಲ್ಯು (BMW) 1 ಮಿಲಿಯನ್ಗಿಂತಲೂ ಹೆಚ್ಚು ಪ್ಲಗ್-ಇನ್ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಿದೆ ಮತ್ತು 2025 ರ ಮೊದಲು ಮತ್ತೊಂದು ಮಿಲಿಯನ್ ಮಾರಾಟ ಮಾಡಲು ಮುಂದಾಗಿದೆ.ಐಎಕ್ಸ್ ಎಕ್ಸ್ ಡ್ರೈವ್ 50 ಒಂದು ಚಾರ್ಜ್ಗೆ 521 ಕಿಲೋಮೀಟರ್ ಸಂಚಾರ ವ್ಯಾಪ್ತಿ ನಿಡಬಲ್ಲದು. ಐ4 ಡ್ರೈವ್ 40, 484 ಕಿಮೀ ನೀಡಬಲ್ಲದು.

Latest Videos

undefined

ಇದನ್ನೂ ಓದಿ: Auto Sales: 2021ರಲ್ಲಿ 40,273 ಎಂಜಿ ಮೋಟಾರ್ಸ್ ವಾಹನಗಳ ಮಾರಾಟ!

ಇದು ಚಾರ್ಜ್ ಮಾಡುವ ಆತಂಕವಿಲ್ಲದೆ ವಾಹನವನ್ನು ಆರಾಮವಾಗಿ ಚಾಲನೆ ಮಾಡಲು ಬೇಕಿರುವ ಸಾಮರ್ಥ್ಯವಾಗಿದೆ. ಬಿಎಂಡಬ್ಲ್ಯು (BMW) i4 ಸೆಡಾನ್ ಕಾರು ಆಗಸ್ಟ್ 2022 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಿಎಂಡಬ್ಲ್ಯು ಐ4 ಡಿಫೆಂಡರ್, ಎಕ್ಸ್3 (X3) ಎಂ(M) ಮತ್ತು Q8 (ಕ್ಯೂ8) ಗೆ ಪ್ರತಿಸ್ಪರ್ಧಿಯಾಗಲಿದೆ. ಇದರ ದರ 80 ಲಕ್ಷ ರೂ.ಗಳಿಂದ ಆರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಎಲೆಕ್ಟ್ರಿಕ್ ಸೆಡಾನ್ ಒಂದು ಅಥವಾ ಎರಡು ರೂಪಾಂತರಗಳಲ್ಲಿ ಲಭ್ಯವಿರಬಹುದು. BMW i4 83.9kWh ಬ್ಯಾಟರಿ ಪ್ಯಾಕ್ ಹೊಂದಿದ್ದು, 335 ಬಿಎಚ್ಪಿ (bhp) ಮತ್ತು 430 ಎನ್ಎಂ (Nm) ಉತ್ಪಾದಿಸುತ್ತದೆ ಮತ್ತು 493 ಮತ್ತು 590km ನಡುವೆ ಡಬ್ಲ್ಯುಎಲ್ಟಿಪಿ (WLTP) ಪ್ರಮಾಣೀಕೃತ ಶ್ರೇಣಿ ಹೊಂದಿದೆ. ಬ್ರ್ಯಾಂಡ್ ಸಣ್ಣ ಬ್ಯಾಟರಿ ಪ್ಯಾಕ್ ಮತ್ತು ಬ್ಯಾಕ್ ಟೈರ್ ಡ್ರೈವ್ ಸಂಯೋಜನೆಯೊಂದಿಗೆ ಬರಲಿದೆ. BMW ಅಡಾಪ್ಟಿವ್ LED ಹೆಡ್ಲೈಟ್ಗಳು, LED ಹಿಂಬದಿ ದೀಪಗಳು, ಸನ್ರೂಫ್, ಪಾರ್ಕಿಂಗ್ ಮತ್ತು ರಿವರ್ಸಿಂಗ್ ಅಸಿಸ್ಟೆಂಟ್, iDrive OS 8 ಜೊತೆಗೆ 12.3 ಮತ್ತು 14.9-ಇಂಚಿನ ಸಿಂಗಲ್-ಪೀಸ್ ಡಿಸ್ಪ್ಲೇಗಳು, ಬಹು-ವಲಯ ತಾಪಮಾನ ನಿಯಂತ್ರಣ, ADAS, ರಿವರ್ಸಿಂಗ್ ನೆರವು, ಬಹು ಏರ್ಬ್ಯಾಗ್ಗಳನ್ನು ಒದಗಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ: Car Sales ಮಾರಾಟದಲ್ಲಿ ಶೇ.4 ರಷ್ಟು ಕುಸಿತ ಕಂಡ ಮಾರುತಿ ಸುಜುಕಿ!

i4 AC ಮತ್ತು DC ಸಂಪರ್ಕಗಳನ್ನು ಬೆಂಬಲಿಸುತ್ತದೆ, ಗರಿಷ್ಠ DC ಚಾರ್ಜಿಂಗ್ ಸಾಮರ್ಥ್ಯವನ್ನು CCS ಪ್ರಕಾರದ ಕನೆಕ್ಟರ್ ಮೂಲಕ 200kW ರೇಟ್ ಮಾಡಲಾಗಿದೆ. ಅಂತೆಯೇ, 7, 11 ಮತ್ತು 22kW ನಂತಹ ವ್ಯಾಪಕ ಶ್ರೇಣಿಯ ಟೈಪ್ 2 AC ಕನೆಕ್ಟರ್ಗಳನ್ನು ಬಳಸಿಕೊಂಡು ಇದನ್ನು ಚಾರ್ಜ್ ಮಾಡಬಹುದು. ಬಿಎಂಡಬ್ಲ್ಯು ಶೀಘ್ರದಲ್ಲೇ 3- ಸರಣಿ ಹೊಂದಿರುವ ಐ3 ಬಿಡುಗಡೆಗೊಳಿಸಲಿದೆ. ಜೊತೆಗೆ, ಮಿನಿಕೂಪರ್ ಎಸ್ಇ ಕೂಡ ಬಿಡುಗಡೆಯಾಗಿದೆ. ಬಿಎಂಡಬ್ಲ್ಯು ತನ್ನ 7-ಸೀರಿಸ್ ಅನ್ನು ಕೂಡ ಎಲೆಕ್ಟ್ರಿಕ್ ಮಾದರಿಯಲ್ಲಿ ತರುವ ಯೋಜನೆ ಹೊಂದಿದೆ. ಇದು ಪೆಟ್ರೋಲ್ ಆಧಾರಿತ ಎಸ್-ಕ್ಲಾಸ್ಗೆ ಉತ್ತರವಾಗಲಿದೆ.
ಅಂತಿಮವಾಗಿ, ಅಲ್ಲಿ ಎಲೆಕ್ಟ್ರಿಕ್ 5- ಸರಣಿಗಳು ಬರುವ ನಿರೀಕ್ಷೆಯಿದೆ. ಜತೊಎಗೆ, ಎಂ5 ಹಾಗೂ ಎಕ್ಸ್1 ಕೂಡ. ಇದು 25 ಪ್ಲಗ್-ಇನ್ ವಾಹನಗಳಾಗಿದ್ದು, 2023ರಲ್ಲಿ ಇವುಗಳು ಬಿಡುಗಡೆಯಾಗಲಿದೆ.
 

click me!