ಸಹೋದರನಿಗೆ ಕೋಟಿ ಮೌಲ್ಯದ ಬೆಂಜ್ ಕಾರು ಉಡುಗೊರೆ ನೀಡಿದ ನಟಿ ಶೆಹನಾಜ್!

By Suvarna News  |  First Published Aug 1, 2023, 3:25 PM IST

ಬಿಗ್‌ಬಾಸ್ ಖ್ಯಾತಿಯ ನಟಿ ಶೆಹನಾಜ್ ಗಿಲ್ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಶೆಹನಾಜ್ ಗಿಲ್ ಕುರಿತು ಸಹೋದರ ಭಾವನಾತ್ಮ ಪೋಸ್ಟ್ ಭಾರಿ ಸಂಚಲನ ಸೃಷ್ಟಿಸಿದೆ. ಕಾರಣ ತನ್ನ ಕಷ್ಟ-ಖುಷಿಯಲ್ಲಿ ಜೊತೆಗೆ ನಿಂತ ಪ್ರೀತಿಯ ಸಹೋದರನಿಗೆ ಶೆಹನಾಜ್ ಐಷಾರಾಮಿ ಮರ್ಸಿಡೀಸ್ ಬೆಂಜ್ ಕಾರು ಉಡುಗೊರೆ ನೀಡಿದ್ದಾರೆ. 
 


ಮುಂಬೈ(ಆ.01) ಬಿಗ್‌ಬಾಸ್ ಮೂಲಕ ಅತೀ ಹೆಚ್ಚು ಖ್ಯಾತಿ ಪಡೆದ ನಟಿ ಶೆಹನಾಜ್ ಗಿಲ್ ಬಳಿಕ ಪ್ರತಿ ದಿನ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಸಿದ್ಧಾರ್ತ್ ಶುಕ್ಲಾ ಹಠಾತ್ ನಿಧನದ ಬಳಿಕ ಶೆಹನಾಜ್ ಗಿಲ್ ಬದುಕಿನಲ್ಲಿ ಹಲವು ಸವಾಲು ಎದುರಿಸಿದ್ದಾರೆ. ಚೇತರಿಕೆ ಕಾಣಲು ಹಲವು ದಿನಗಳನ್ನೇ ತೆಗೆದುಕೊಂಡಿದ್ದಾರೆ. ಇದೀಗ ಶೆಹನಾಜ್ ಗಿಲ್ ತಮ್ಮ ಸಿನಿ ಕರಿಯರ್‌ನಲ್ಲೂ ಚಾಪು ಮಾಡಿಸುತ್ತಿದ್ದಾರೆ. ಆದರೆ ತಮ್ಮ ಬದುಕಿನ ಸುಖ ದುಃಖದಲ್ಲಿ ಜೊತೆಯಾಗಿ ನಿಂತು ನೆರವು ನೀಡಿದ ಪ್ರೀತಿಯ ಸಹೋದರನಿಗೆ ಅಕ್ಕರೆಯ ಉಡುಗೊರೆ ನೀಡಿದ್ದಾರೆ. ಅಣ್ಣ ಶೆಹಬಾದ್ ಬದೇಶಾಗೆ ಐಷಾರಾಮಿ ಮರ್ಸಿಜೀಸ್ ಬೆಂಜ್ ಇ ಕ್ಲಾಸ್ ಕಾರು ಉಡುಗೊರೆಯಾಗಿ ನೀಡಿದ್ದಾರೆ.

ಶೆಹನಾಜ್ ಗಿಲ್ ಉಡುಗೊರೆಯಾಗಿ ನೀಡಿದ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರಿನ ಬೆಲೆ 74.95 ಲಕ್ಷ ರೂಪಾಯಿಯಿಂದ 88.96 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ರಸ್ತೆ ತರಿಗೆ, ನೋಂದಣಿ, ವಿಮೆ ಸೇರಿದಂತೆ ಇತರ ವೆಚ್ಚಗಳು ಸೇರಿ 96 ಲಕ್ಷ ರೂಪಾಯಿ ಆಗಲಿದೆ. ಸರಿಸುಮಾರು 1 ಕೋಟಿ ಮೌಲ್ಯದ ಕಾರನ್ನು ಅಣ್ಣನಿಗೆ ಉಡುಗೊರೆಯಾಗಿ ನೀಡಿದ್ದಾರೆ.

Tap to resize

Latest Videos

undefined

 

ಡುಮ್ಮಿ ಎಂದು ಬಾಡಿ ಶೇಮಿಂಗ್​ಗೆ ಒಳಗಾಗಿದ್ದನ್ನು ನೆನೆದ ನಟಿ Shehnaaz Gill

ಕಪ್ಪು ಬಣ್ಣದ ಬೆಂಜ್ ಇ ಕ್ಲಾಸ್ ಕಾರಿನ ಕೀಯನ್ನು ಶೋ ರೂಂ ಸಿಬ್ಬಂದಿಗಳು ಶೆಹಬಾಜ್ ಬದೇಶಾಗೆ ಹಸ್ತಾಂತರಿಸಿದ್ದಾರೆ. ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ್ದಾರೆ. ಬಳಿಕ ಖುದ್ದು ಶೆಹಬಾದ್ ಕಾರು ಡ್ರೈವ್ ಮಾಡಿ ತೆರಳಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ಶೆಹಬಾಜ್ ಭಾವನಾತ್ಮಕ ವಿಡಿಯೋ ಪೋಸ್ಟ್ ಹಾಕಿದ್ದಾರೆ. ಶೆಹಬಾಜ್ ಆಪ್ತರು, ಗೆಳೆಯರು ಹಾಗೂ ಅಭಿಮಾನಿಗಳ ಬಳಕ ಶುಭಕೋರಿದ್ದಾರೆ.

ಶೆಹನಾಜ್ ಬಳಿ ಹಲವು ಐಷಾರಾಮಿ ಕಾರುಗಳಿವೆ. ರೇಂಜ್ ರೋವರ್ ಇವೋಕ್ಯೂ, ಜಾಗ್ವಾರ್ ಎಕ್ಸ್‌ಜೆ, ಮರ್ಸಡೀಸ್ ಬೆಂಜ್ ಎಸ್ ಕ್ಲಾಸ್ ಕಾರು ಹೊಂದಿದ್ದಾರೆ. ಇದೀಗ ಈ ಸಾಲಿಗೆ ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಸೇರಿದೆ. ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು ಒಬ್ಸಿಡಿಯನ್ ಬ್ಲಾಕ್, ಮೊಜಾವೆ ಸಿಲ್ವರ್, ಸೆಲೆಂಟಿಕ್ ಗ್ರೇ, ಡಿಸೈನೋ ರೆಡ್, ಹೈಟೆಕ್ ಸಿಲ್ವರ್ ಹಾಗೂ ಪೋಲಾರ್ ವೈಟ್ ಬಣ್ಣದಲ್ಲಿ ನೂತನ ಕಾರು ಲಭ್ಯವಿದೆ.

 

'ನಕಲಿ' ಇನ್ಸ್ಟಾ ಖಾತೆಯಿಂದ ಸಲ್ಮಾನ್ ಖಾನ್ ಫಾಲೋ ಮಾಡಿ ಸಿಕ್ಕಿಬಿದ್ದ ಶೆಹನಾಜ್ ಗಿಲ್

ಮರ್ಸಿಡೀಸ್ ಬೆಂಜ್ ಇ ಕ್ಲಾಸ್ ಕಾರು OM656 ಟರ್ಬೋ I6 ಎಂಜಿನ್ ಹೊಂದಿದೆ. 282 bhp ಪವರ್ ಹಾಗೂ 600 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯಹೊಂದಿದೆ. ಡೀಸೆಲ್ ವೇರಿಯೆಂಟ್ ಕಾರು ಇದಾಗಿದ್ದು ಬಿಎಸ್6 ಎಮಿಶನ್ ಎಂಜಿನ್ ಹೊಂದಿದೆ. ಜೊತೆಗೆ 2925 cc, 6 ಸಿಲಿಂಡರ್ ಇನ್‌ಲೈನ್, 4 ವೇಲ್ವ್, DOHC ಎಂಜಿನ್ ಹೊಂದಿರುವ ಕಾರಣ ಅತ್ಯುತ್ತಮ ಪರ್ಫಾಮೆನ್ಸ್ ನೀಡಲಿದೆ.

ಸುರಕ್ಷತೆಯಲ್ಲಿ ಹಲವು ಫೀಚರ್ಸ್ ಈ ಕಾರಿನಲ್ಲಿದೆ ಎಬಿಎಸ್ ಬ್ರೇಕಿಂಗ್, ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್, ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಹೋಲ್ಡ್ ಅಸಿಸ್ಟ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಕೇವಲ 6 ಸೆಕೆಂಡ್‌ನಲ್ಲಿ 100 ಕಿ,ಮೀ ವೇಗ ತಲುಪಲಿದೆ. 5 ಸೀಟರ್ ಕಾರು ಇದಾಗಿದ್ದು, ಅತ್ಯುತ್ತಮ ಹಾಗೂ ಆರಾಮದಾಯಕ ಪ್ರಯಾಣ ನೀಡಲಿದೆ.
 

click me!