January 2022 Auto Sales: ಶೇ.1.4ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಕಿಯಾ ಇಂಡಿಯಾ!

By Suvarna News  |  First Published Feb 2, 2022, 10:03 AM IST

*ಜನವರಿಯಲ್ಲಿ 19,319 ವಾಹನಗಳ ಮಾರಾಟ
*ಅಗ್ರ ಐದು ಕಾರು ಮಾರಾಟ ಸಂಸ್ಥೆಗಳಲ್ಲಿ ಸ್ಥಾನ
*ಕಿಯಾ ಕ್ಯಾರೆನ್ಸ್ ಹೊಸ ಆಕರ್ಷಣೆ


Auto Desk: ತನ್ನ ವಿನೂತನ ಶೈಲಿ, ಇಂಜಿನ್ನ ಎಸ್ಯುವಿಗಳಿಂದಲೇ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದ ಕಿಯಾ ಮೋಟಾರ್ಸ್ (Kia motoras) ಹೊಸ ವರ್ಷದಲ್ಲಿ ಕೂಡ ಗ್ರಾಹಕರ ಬೇಡಿಕೆಯನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. 2022ರ ಜನವರಿಯಲ್ಲಿ ಕಿಯಾ ಇಂಡಿಯಾ ಮಾರುಕಟ್ಟೆಯಲ್ಲಿ ಶೇ.1.4ರಷ್ಟು ಮಾರಾಟದ ಪ್ರಗತಿ ದಾಖಲಿಸಿದೆ. ಕಿಯಾ ಕಂಪನಿಯು ಕಳೆದ ತಿಂಗಳು 19,319 ವಾಹನಗಳನ್ನು ಮಾರಾಟ ಮಾಡಿದ್ದು, ದೇಶದ ಅಗ್ರ ಐದು ಅತಿ ಹೆಚ್ಚು ಮಾರಾಟವಾದ ಕಾರು ತಯಾರಕರ ಪಟ್ಟಿಯಲ್ಲಿ ಮತ್ತೊಮ್ಮೆ ಸ್ಥಾನ ಪಡೆದುಕೊಂಡಿದೆ. ಕಿಯಾ ಸೆಲ್ಟೋಸ್ (kia seltos) 11,483 ವಾಹನಗಳನ್ನು ಮಾರಾಟ ಮಾಡಿದ್ದು, ಇದು ಕಂಪನಿಯ ಅಂಕಿಅಂಶಕ್ಕೆ ಅತಿ ಹೆಚ್ಚು ಕೊಡುಗೆ ನೀಡಿದೆ. ಇದರಿಂದ ಸೆಲ್ಟೋಸ್, ತಿಂಗಳಲ್ಲಿ ಹತ್ತಕ್ಕೂ ಹೆಚ್ಚು ಮಾರಾಟವಾದ ಕಾರುಗಳಲ್ಲಿ ಸ್ಥಾನ ಪಡೆದುಕೊಂಡಿದೆ.

ದೇಶದಲ್ಲಿ ತನ್ನ ಕಾರುಗಳನ್ನು ಪರಿಚಯಿಸಿದ ನಂತರ 30 ತಿಂಗಳ ಮಾರಾಟ ಕಾರ್ಯಾಚರಣೆಯಲ್ಲಿ, ಕಿಯಾ ಸುಮಾರು 3.9 ಲಕ್ಷ ವಾಹನಗಳ ಮಾರಾಟ ದಾಖಲಿಸುವಲ್ಲಿ ಯಶಸ್ವಿಯಾಗಿದೆ. 2022ರ ಆರಂಭದಲ್ಲಿ ಕೂಡ ಪೂರೈಕೆ ಸರಪಳಿಯ ಸಮಸ್ಯೆ ಮುಂದುವರಿಯಲಿದೆ ಎಂದು ಕಂಪನಿ ನಿರೀಕ್ಷಿಸುತ್ತಿದ್ದು, ಮುಂಜಾಗ್ರತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಲಿದೆ. ಆದರೆ, ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸೆಮಿಕಂಡಕ್ಟರ್ ಬಿಕ್ಕಟ್ಟು ಚೇತರಿಸಿಕೊಳ್ಳಲಿದೆ ಎಂದು ವಾಹನ ತಯಾರಕರು ಆಶಯ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಇದನ್ನೂ ಓದಿ: kia carens ಫೆಬ್ರವರಿಯಲ್ಲಿ ಕಿಯಾ ಕ್ಯಾರೆನ್ಸ್ ಬಿಡುಗಡೆ, 25 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ MPV ಕಾರು!

ಕಿಯಾ ಕ್ಯಾರೆನ್ಸ್ ಬಿಡುಗಡೆ: ಮೊದಲಿಗೆ ಭಾರತದಲ್ಲಿ ಸೆಲ್ಟೋಸ್ (seltos) ಅನ್ನು ಪರಿಚಯಿಸಿದ ಕಿಯಾ, ಅತಿ ಕಡಿಮೆ ಬೆಲೆಗೆ ಐಷಾರಾಮಿ ಸೌಲಭ್ಯ ನೀಡುವ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸಿ ಯಶಸ್ವಿಯಾಗಿದೆ. ನಂತರ ಮಾರುಕಟ್ಟೆಗೆ ಬಂದ ಸೋನೆಟ್ (sonnet) ಕೂಡ ಅದೇ ಹಾದಿ ಹಿಡಿಯಿತು. ಇದರ ಬೆನ್ನಲ್ಲೇ ಕಿಯಾ, ಕಾರ್ನಿವಲ್ (Carnival) ಅನ್ನು ಬಿಡುಗಡೆಗೊಳಿಸಿದೆ. ಈಗ 2022ರಲ್ಲಿ ಕಿಯಾ,  ತನ್ನ ನಾಲ್ಕನೇ ಉತ್ಪನ್ನವಾಗಿ ಕಿಯಾ ಕ್ಯಾರೆನ್ಸ್ ಅನ್ನು ಬಿಡುಗಡೆಗೊಳಿಸಿದೆ.

ಕೊರಿಯನ್ ಕಾರು ತಯಾರಕರು ಇತ್ತೀಚೆಗೆ ಆಂಧ್ರಪ್ರದೇಶದ ಅನಂತಪುರ ಉತ್ಪಾದನಾ ಘಟಕದಿಂದ ಮೂರು-ಸಾಲಿನ ವಾಹನದ ಮೊದಲ ಘಟಕ ಸ್ಥಾಪಿಸಿದ್ದಾರೆ. ರಿಸರ್ವೇಶನ್ ವಿಂಡೋ ತೆರೆದ ಮೊದಲ 24 ಗಂಟೆಗಳಲ್ಲಿ ಸುಮಾರು ಎಂಟು ಸಾವಿರ ಗ್ರಾಹಕರು ವಾಹನವನ್ನು ಬುಕ್ ಮಾಡಿದ್ದಾರೆ. "ಜನವರಿ ತಿಂಗಳು ನಮಗೆ ನಿಜವಾಗಿಯೂ ಸಂತಸಕರವಾಗಿದೆ, ನಮ್ಮ ಹೊಸ ಕೊಡುಗೆಯಾದ ಕಿಯಾ ಕ್ಯಾರೆನ್ಸ್ ದಾಖಲೆಯ ಪ್ರತಿಕ್ರಿಯೆ ಪಡೆಯುತ್ತಿದೆ" ಎಂದು ಕಿಯಾ ಇಂಡಿಯಾದ ಉಪ ನಿರ್ದೇಶಕ ಮತ್ತು ಮಾರಾಟ ಮತ್ತು ಮಾರ್ಕೆಟಿಂಗ್ ಮುಖ್ಯಸ್ಥ ಹರ್ದೀಪ್ ಬ್ರಾರ್ ಹೇಳಿದ್ದಾರೆ.

ಇದನ್ನೂ ಓದಿ: Kia Carens ಭಾರತದಲ್ಲಿ ಹೊಸ ದಾಖಲೆ, ಮೊದಲ ದಿನ 7,738 ಕಾರು ಬುಕ್!

ಕ್ಯಾರೆನ್ಸ್ ಭಾರತಕ್ಕಾಗಿ ತಯಾರಿಸಿದ ನಿರ್ದಿಷ್ಟ ಮಾದರಿಯಾಗಿದ್ದು, ಇದನ್ನು ಡಿಸೆಂಬರ್ನಲ್ಲಿ ಮೊದಲ ಬಾರಿಗೆ ವಿಶ್ವ ಮಟ್ಟದಲ್ಲಿ ಬಿಡುಗಡೆಗೊಳಿಸಲಾಗಿದೆ. ಆರು ಹಾಗೂ ಏಳು ಸೀಟುಗಳ ಮಾದರಿಗಳಲ್ಲಿ ಬರುವ ಈ ಕಿಯಾ ಕ್ಯಾರೆನ್ಸ್, ರಿಕ್ರಿಯೇಷನಲ್ ವಾಹನ ಎಂಬ ಗುರುತಿನೊಂದಿಗೆ ಮಾರುಕಟ್ಟೆಗೆ ಬಂದಿದೆ. ಇದು  ಎಂಪಿವಿ ವಲಯದಲ್ಲೇ ಅತಿ ಉದ್ದವಾದ ಕಾರಾಗಿದೆ. ಇದು 4540 ಎಂಎಂ ಉದ್ದ, 1800 ಎಂಎಂ ಅಗಲ ಹಾಗೂ 1708 ಎಂಎಂ ಎತ್ತರ ಇದೆ. ಇದರ ವ್ಹೀಲ್‌ ಬೇಸ್‌ ಇತರ ಕಾರುಗಳಿಗಿಂತ ಉದ್ದ ಇದೆ. 195 ಎಂಎಂ ಗ್ರೌಂಡ್‌ ಕ್ಲಿಯರೆನ್ಸ್ ಹೊಂದಿದೆ.

 ಎದುರಿನಲ್ಲಿ  ಮೇಲೆ ಕಪ್ಪು ಬಣ್ಣದ ಸ್ಟಾರ್‌ ವಿನ್ಯಾಸದ ಡಿಆರ್‌ಎಲ್‌ಗಳಿದ್ದು, 3ಡಿ ಟೆಕ್ಸಚರ್‌ ಅನ್ನು ಒಳಗೊಂಡಿದೆ. ಮತ್ತು ಮುಂಭಾಗದ ತುಂಬಾ ಕವರ್‌ ಆಗೋ ಕ್ರೋಮ್ ಸ್ಟ್ರೈಪ್‌ಗಳಿವೆ. ಸ್ಪ್ಲಿಟ್‌ ಹೆಡ್‌ಲ್ಯಾಂಡ್‌ಗಳು, ಕಿಯಾದ ಸಿಗ್ನೇಚರ್‌ ಸಿಂಬಲ್‌ ಆದ ಟೈಗರ್‌ ನೋಸ್‌ ಚಿಹ್ನೆಗಳು ಇದರ ಆಕರ್ಷಣೆಯಾಗಿದೆ. ಇಲ್ಲಿ 16 ಇಂಚಿನ ಅಲಾಯ್‌ ಚಕ್ರಗಳು ಕೂಡ ಕ್ರೋಮ್ ಫಿನಿಷ್‌ ಹೊಂದಿದೆ.ಈ ಹೊಸ ಎಸ್ಯುವಿ, ಹ್ಯುಂಡೈ ಅಲ್ಕಾಜರ್ (Hyundai alcazar), ಟಾಟಾ ಸಫಾರಿ (Tata Safari) ಮತ್ತು ಮಹೀಂದ್ರಾ ಎಕ್ಸ್ಯುವಿ 700 (Mahindra XUV700) ಜೊತೆಗೆ ಅದರ ಪ್ರಮುಖ ಪ್ರತಿಸ್ಪರ್ಧಿಗಳಾಗಿ Rs20 ಲಕ್ಷದ ಮೂರು-ಸಾಲಿನ ವಾಹನ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

click me!