Tata Motors Q3 Results: 1,451 ಕೋಟಿ ರೂ. ನಷ್ಟ ದಾಖಲಿಸಿದ ಟಾಟಾ ಮೋಟಾರ್ಸ್!

By Suvarna News  |  First Published Feb 2, 2022, 9:38 AM IST
  • 2022ರ 3ನೇ ತ್ರೈಮಾಸಿಕದಲ್ಲಿ ನಷ್ಟ ಪ್ರಟಕಣೆ
  • ಕಳೆದ ವರ್ಷದಲ್ಲೂ ನಷ್ಟದ ದಾಖಲೆ
  • ಇವಿ ವಲಯದಲ್ಲಿ ಸ್ವಲ್ಪ ಚೇತರಿಕೆ

Auto Desk: ಕಳೆದ ಕೆಲ ವರ್ಷಗಳಲ್ಲಿ ಒಂದರ ಹಿಂದೊಂದು ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದರೂ, ಟಾಟಾ ಮೋಟಾರ್ಸ್ ಹಲವು ಕಾರಣಗಳಿಂದ ದೊಡ್ಡ ಮೊತ್ತದ ನಷ್ಟವನ್ನು ಎದುರಿಸುತ್ತಿದೆ. ಟಾಟಾ ಮೋಟಾರ್ಸ್ 2022 ರ 3ನೇ ತ್ರೈಮಾಸಿಕದಲ್ಲಿ ಬರೋಬ್ಬರಿ 1,451 ಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಅದೇ ಅವಧಿಯಲ್ಲಿ ಈ ನಷ್ಟದ ಪ್ರಮಾಣ 2941.48 ಕೋಟಿ ರೂ.ಗಳಷ್ಟಿತ್ತು. ಹೆಚ್ಚಿನ ಸರಕು ವೆಚ್ಚಗಳು ಮತ್ತು ಸೆಮಿಕಂಡಕ್ಟರ್ ಕೊರತೆ ಈ ನಷ್ಟಕ್ಕೆ ಕಾರಣವಾಗಿದೆ. 2022ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯ 72,229 ಕೋಟಿ ರೂ.ಗಳಷ್ಟಿದೆ. 2021ರ ಇದೇ ಅವಧಿಯಲ್ಲಿ ಆದಾಯ 75,653.79 ಕೋಟಿ ರೂ.ಗಳಷ್ಟಿತ್ತು. ಇದಕ್ಕೆ ಹೋಲಿಸಿದರೆ, ಇದು ಶೇ. 4.52 ರಷ್ಟು ಕುಸಿತ ಕಂಡಿದೆ.

2021ರ ಆರ್ಥಿಕ ವರ್ಷದ 3ನೇ ತ್ರೈಮಾಸಿಕದಲ್ಲಿ ಟಾಟಾ ಮೋಟಾರ್ಸ್,  ರೂ 638 ಕೋಟಿಗಳ ನಿವ್ವಳ ನಷ್ಟ ದಾಖಲಿಸಿದ್ದರೂ, 2022ರ 3ನೇ ತ್ರೈಮಾಸಿಕದಲ್ಲಿ 176 ಕೋಟಿ ರೂ. ನಿವ್ವಳ ಲಾಭವನ್ನು ವರದಿ ಮಾಡಿದೆ. ಟಾಟಾ ಮೋಟಾರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಘ್, "ಇದು ಆಟೋ ಉದ್ಯಮವು ಹೆಚ್ಚಿನ ವಿಭಾಗಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಸಾಕ್ಷಿಯಾಗಿದೆ. ಆದರೆ, ಸೆಮಿಕಂಡಕ್ಟರ್ ಪೂರೈಕೆ ಕೊರತೆ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ" ಎಂದಿದ್ದಾರೆ.

Latest Videos

undefined

ಇದನ್ನೂ ಓದಿElectric Car sales ಎರಡು ವರ್ಷದಲ್ಲಿ 4 ಸಾವಿರ ಎಂಜಿ ZS ಎಲೆಕ್ಟ್ರಿಕ್ ಕಾರು ಮಾರಾಟ, ಫೆಬ್ರವರಿಯಲ್ಲಿ ಫೇಸ್‌ಲಿಫ್ಟ್ ಲಾಂಚ್!

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಳ ನಿರೀಕ್ಷೆ: ಈ ಎಲ್ಲಾ ಪರಿಸ್ಥಿತಿಗಳ ನಡುವೆಯೂ ವಾಣಿಜ್ಯ, ಪ್ರಯಾಣಿಕ ಮತ್ತು ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯು ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಕಂಪನಿಯ ರಫ್ತು ಪ್ರಮಾಣ 2,00,212 ವಾಹನಗಳು ಅಂದರೆ, ಶೇ.30ರಷ್ಟು ವರ್ಷಕ್ಕೆ ಏರಿಕೆಯಾಗಿದೆ. ವಾಣಿಜ್ಯ ವಾಹನಗಳು ಶೇ.19ರಷ್ಟು ಬೆಳವಣಿಗೆ ಕಂಡಿದೆ. ಟಾಟಾ ಮೋಟಾರ್ಸ್ ಗುಂಪಿನ ಸಿಎಫ್ಒ ಪಿಬಿ ಬಾಲಾಜಿ, ಸಿವಿ ವಿಭಾಗದಲ್ಲಿ ಬೇಡಿಕೆಯ ಚೇತರಿಕೆಯು ನಿರೀಕ್ಷೆಗಿಂತ ನಿಧಾನವಾಗಿದ್ದರೂ, ಪ್ರತಿ ತ್ರೈಮಾಸಿಕದಲ್ಲಿ ಅದು ಸುಧಾರಿಸುತ್ತಿದೆ ಎಂದಿದ್ದಾರೆ.

ಮತ್ತೊಂದೆಡೆ, ಪ್ರಯಾಣಿಕ ವಾಹನಗಳು ಶೇ.44ರಷ್ಟು ಏರಿಕೆ ಕಂಡು, 109,000 ವಾಹನಗಳ ಮಾರಾಟದೊಂದಿಗೆ, ತನ್ನ ಅತ್ಯಧಿಕ ತ್ರೈಮಾಸಿಕ ಚಿಲ್ಲರೆ ವ್ಯಾಪಾರ ದಾಖಲಿಸಿದೆ. ಜೊತೆಗೆ, ಇವಿ (EV) ಮಾರಾಟವು 5,500 ಸಂಖ್ಯೆಗಳನ್ನು ದಾಟಿ  ಶೇ.93ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ. ಬಿಎಸ್6 ಮಾನದಂಡಗಳನ್ನು ಜಾರಿಗೊಳಿಸಿದ ನಂತರ ಕಳೆದ ವರ್ಷ ಮಾರ್ಚ್ನಿಂದ ವಾಹನಗಳ ಬೆಲೆ ಸುಮಾರು  ಶೇ.26 ರಷ್ಟು ಹೆಚ್ಚಾಗಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಬೆಲೆಯ ಒತ್ತಡವು ಸ್ವಲ್ಪ ಸಡಿಲಗೊಳ್ಳುವ ಸಾಧ್ಯತೆಯಿದೆ ಎಂದು ಬಾಲಾಜಿ ಆಶಾಭಾವನೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Nexon EV sales ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿಗೆ ಭಾರಿ ಬೇಡಿಕೆ, ಕಳೆದ 10 ತಿಂಗಳಲ್ಲಿ 9 ಸಾವಿರ EV ಮಾರಾಟ!

ಕಳೆದ ವರ್ಷ ಟಾಟಾ ಮೋಟಾರ್ಸ್ ಕಳೆದ ವರ್ಷ ಟಾಟಾ ಪಂಚ್ನಂತಹ ದೇಶದ ಮೊದಲ ಸಬ್-ಕಾಂಪ್ಯಾಕ್ಟ್ ಎಸ್ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದಕ್ಕೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಕ್ಕೂ ಮುನ್ನ ಕಂಪನಿ, ಟಾಟಾ ಟಿಗೋರ್ ಇವಿಯನ್ನು ಪರಿಚಯಿಸಿತ್ತು. ಇದು ಕಂಪನಿಯ ಇವಿ ವಲಯದ ಕಡಿಮೆ ದರದ ವಾಹನವಾಗಿತ್ತು. 2022ರ ಆರಂಭದಲ್ಲಿ ಕಂಪನಿ, ಟಾಟಾ ಟಿಯಾಗೋ ಸಿಎನ್ಜಿಯನ್ನು ಕೂಡ ಬಿಡುಗಡೆಗೊಳಿಸಿದೆ.

ಟಾಟಾ ಮೋಟಾರ್ಸ್ನ ಬ್ರಿಟನ್ ಶಾಖೆ, ಜೆಎಲ್ಆರ್ 9 ಮಿಲಿಯನ್ ಪೌಂಡ್ಗಳ ಪೂರ್ವ-ತೆರಿಗೆ ನಷ್ಟವನ್ನು ಪ್ರಕಟಿಸಿದೆ. ಇದರಿಂದ ಶೇ.21ರಷ್ಟು ಆದಾಯ ಕಡಿಮೆಯಾಗಿದ್ದು, 4.7 ಬಿಲಿಯನ್ ಪೌಂಡ್ಗಳಿಗೆ ಇಳಿಕೆಯಾಗಿದೆ. 2021ರ ಮೂರನೇ ತ್ರೈಮಾಸಿಕಕ್ಕೆ ಹೋಲಿಸಿದರೆ,  ಮಾರಾಟ ಶೇ.38ರಷ್ಟು ಕುಸಿದಿದೆ. ಈ  ಕುರಿತು ಪ್ರತಿಕ್ರಿಯಿಸಿದ ಜೆಎಲ್ಆರ್ನ ಸಿಇಒ ಥಿಯೆರಿ ಬೊಲ್ಲೋರ್, ಈ ತ್ರೈಮಾಸಿಕದಲ್ಲಿ ಸೆಮಿಕಂಡಕ್ಟರ್ ಪೂರೈಕೆಗಳು ಮಾರಾಟವನ್ನು ನಿರ್ಬಂಧಿಸುವುದನ್ನು ಮುಂದುವರೆಸಿದೆ. ಆದರೂ, ಈ ತ್ರೈಮಾಸಿಕದಲ್ಲಿ ವಿತರಣೆಗಳು ಪ್ರಾರಂಭವಾಗುವ ಮೊದಲು ನ್ಯೂ ರೇಂಜ್ ರೋವರ್ನ 30,000  ವಾಹನಗಳು ಮಾರಾಟವಾಗಿದೆ ಎಂದು ಬೊಲ್ಲೂರ್ ಹೇಳಿದರು. 

click me!