ದೆಹಲಿಯಲ್ಲಿ ಅತೀ ದೊಡ್ಡ ಆಟೋ ಎಕ್ಸ್‌ಪೋ ಆರಂಭಗೊಂಡಿದೆ. ಈ ಬಾರಿ ಹಲವು ವಾಹನಗಳು ಅನಾವರಣಗೊಳ್ಳುತ್ತಿದೆ. ಈ ಪೈಕಿ ಇಂದು ಅನಾವರಣಗೊಂಡಿರುವ ಬಿವೈಡಿ ಎಲೆಕ್ಟ್ರಿಕ್ ಕಾರು ಎಲ್ಲರ ಗಮನಸೆಳೆಯುತ್ತಿದೆ. ಟೆಸ್ಲಾ 3 ಮಾಡೆಲ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಬಿವೈಡಿ ಸೀಲ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 700 ಕಿ.ಮೀ ಮೈಲೇಜ್ ನೀಡಲಿದೆ
ನವದೆಹಲಿ(ಜ.11): ಭಾರತದಲ್ಲಿ ಆಟೋ ಎಕ್ಸ್‌ಪೋ ಸಂಭ್ರಮ ಆರಂಭಗೊಂಡಿದೆ. ಕಳೆದ 3 ವರ್ಷ ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ದೆಹಲಿ ಆಟೋ ಎಕ್ಸ್‌ಪೋ ಇದೀಗ ಮತ್ತೆ ಆರಂಭಗೊಂಡಿದೆ. ಮೊದಲ ದಿನವೇ ಹಲವು ಕಾರುಗಳು ಅನಾವರಣಗೊಂಡಿದೆ. ಹೊಚ್ಚ ಹೊಸ ಕಿಯಾ ಕಾರ್ನಿವಲ್ ಸೇರಿದಂತೆ ಕೆಲ ಕಾರುಗಳು ಭಾರತದಲ್ಲಿ ಅನಾವರಣಗೊಂಡಿದೆ. ಇದರ ಜೊತೆಗೆ ಭಾರದಲ್ಲಿ ಈಗಾಗಲೇ ಎಲೆಕ್ಟ್ರಿಕ್ ಕಾರುಗಳ ಮೂಲಕ ಮೋಡಿ ಮಾಡಿರುವ ಬಿವೈಡಿ ಬ್ರ್ಯಾಂಡ್ ಇದೀಗ ಬಿವೈಡಿ ಸೀಲ್ ಅನ್ನೋ ಸೆಡಾನ್ ಕಾರು ಅನಾವರಣ ಮಾಡಿದೆ. ಇಂದು ಅನಾವರಣಗೊಂಡಿರುವ ಕಾರುಗಳ ಪೈಕಿ ಸೀಲ್ ಎಲ್ಲರ ಗಮನಸೆಳೆದಿದೆ. ಇದಕ್ಕೆ ಕಾರಣ ಬಿವೈಡಿ ಸೀಲ್ ಕಾರು ಟೆಸ್ಲಾ ಮಾಡೆಲ್ 3 ಕಾರಿಗೆ ಪ್ರತಿಸ್ಪರ್ಧಿಯಾಗಿದೆ. ವಿಶೇಷ ಅಂದರೆ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 700 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.
ಭಾರತದಲ್ಲಿ ಬಿವೈಡಿ ಕಾರು e6 MPV ಎಲೆಕ್ಟ್ರಿಕ್ ಕಾರಿನೊಂದಿಗೆ ಪ್ರವೇಶ ಪಡೆದಿತ್ತು. ಬಳಿಕ ಇತ್ತೀಚೆಗೆ ಅಟ್ಟೋ3 ಎಸ್‌ಯುವಿ ಕಾರನ್ನು ಬಿಡುಗಡೆ ಮಾಡಿದೆ. ಇದೀಗ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಬಿವೈಡಿ ಸೀಲ್ ಅನಾವರಣಗೊಂಡಿದೆ. ಎಲೆಕ್ಟ್ರಿಕ್ ಕಾರುಗಳ ಪೈಕಿ ಬಿವೈಡಿ ಹೊಸ ಅಧ್ಯಾಯ ಬರೆಯುವ ಸಾಧ್ಯತೆ ದಟ್ಟವಾಗಿದೆ.
undefined
3 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಆಟೋ ಎಕ್ಸ್‌ಪೋ, ಎಲೆಕ್ಟ್ರಿಕ್ ಸೇರಿ ಹಲವು ವಾಹನ ಅನಾವರಣ!
ನೂತನ ಬಿವೈಡಿ ಸೀಲ್ ಕಾರು ಅತ್ಯಾಕರ್ಷಕ ಡಿಸೈನ್ ಹೊಂದಿದೆ. ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಉತ್ತಮ ವಿನ್ಯಾಸ ಹೊಂದಿರುವ ಬಿವೈಡಿ ಸೀಲ್, ಕೂಪ್ ಶೇಪ್ ಡೂರ್ ಹೊಂದಿದೆ. ಇದು ಈ ಕಾರಿನ ಪ್ರಿಮಿಯಂ ಲುಕ್ ಹೆಚ್ಚಿಸಿದೆ. ಕಾರು 4,800 mm ಉದ್ದ ಹಾಗೂ 1,875 mm ಅಗಲವಿದೆ. ಲಾಂಗ್ ರೇಂಜ್ ವಾಹನಾಗಿರುವ ಕಾರಣ ಈ ಕಾರಿನಲ್ಲಿ AWD ಮೋಟಾರ್ ಬಳಸಲಾಗಿದೆ. ಹೆಚ್ಚು ಶಕ್ತಿಯುತ ಹಾಗೂ ಆರಾಮಾದಾಯಕ ಪ್ರಯಾಣ ನೀಡಲಿದೆ.
ಬಿವೈಡಿ ಸೀಲ್ ಕಾರು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ. ಒಂದು 700 ಕಿ.ಮೀ ಮೈಲೇಜ್ ನೀಡಬಲ್ಲ ಬ್ಯಾಟರಿ ಪ್ಯಾಕ್, ಮತ್ತೊಂದು 500ರ ಆಸುಪಾಸಿನ ಮೈಲೇಜ್ ನೀಡಬಲ್ಲ ಕಾರು. ಸೀಲ್ ಕಾರಿನ ಬೆಲೆ ಭಾರತದಲ್ಲಿ ಎಷ್ಟಿರಲಿದೆ ಅನ್ನೋ ಕುತೂಹಲ ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿದೆ ಎರಡು ಬಿವೈಡಿ ಶೋ ರೂಂ
ಬಿವೈಡಿ ಬೆಂಗಳೂರಿನಲ್ಲಿ ಎರಡು ಶೋ ರೂಂ ಹೊಂದಿದೆ. ಇತ್ತೀಚೆಗೆ ಎರಡನೇ ಶೋ ರೂಂ ತೆರೆದಿತ್ತು. ಪಿಪಿಎಸ್ ಮೋಟಾರ್ಸ್ ಶೋ ರೂಂ ಉಸ್ತುವಾರಿ ನೋಡಿಕೊಳ್ಳುತ್ತಿದೆ. ವಾರನ್ ಬಫೆಟ್ ಬೆಂಬಲಿತ ಆಟೋಮೊಬೈಲ್ ಕಂಪನಿ ಬಿವೈಡಿ ತನ್ನ ಮೊದಲ ಶೋರೂಮ್ ಅನ್ನು ವೈಟ್‌ಫೀಲ್ಡ್‌ನಲ್ಲಿ ಆರಂಭಿಸಿತ್ತು. ಭಾರತದಲ್ಲಿ ಸರಿಸುಮಾರು 10 ಶೋರೊಂಗಳನ್ನು ಬಿವೈಡಿ ಹೊಂದಿದೆ.
ಹೊಸ ವರ್ಷದಲ್ಲಿ ವಾಹನ ಖರೀದಿಸಲು ಸಕಾಲ, 5 ರಿಂದ 10 ಲಕ್ಷ ರೂಗೆ ಲಭ್ಯವಿಗೆ ಉತ್ತಮ ಕಾರು!
ದೆಹಲಿಯಲ್ಲಿ ಆರಂಭಗೊಂಡಿರುವ ಆಟೋ ಎಕ್ಸ್‌ಪೋ 2023 ಜನವರಿ 18ರ ವರೆಗೆ ನಡೆಯಲಿದೆ. 46ಕ್ಕೂ ಹೆಚ್ಚು ಹೊಚ್ಚ ಹೊಸ ಕಾರುಗಳು ಅನಾವರಣಗೊಳ್ಳಲಿದೆ. ಹಲವು ಕಾರುಗಳು ಬಿಡುಗಡೆಯಾಗಲಿದೆ. ಕೊರೋನಾ ಕಾರಣದಿಂದ ಕಳೆದ 3 ವರ್ಷಗಳಿಂದ ಸ್ಥಗಿತಗೊಂಡಿದ್ದ ಆಟೋ ಎಕ್ಸ್‌ಪೋ ಮತ್ತೆ ಆರಂಭಗೊಂಡಿದೆ.