ಮಹೀಂದ್ರಾದ ಮುಖ್ಯ ವಿನ್ಯಾಸಕ, ಪ್ರತಾಪ್ ಬೋಸ್ ಅವರು ಹೊಸ ಸ್ಕಾರ್ಪಿಯೋ N ನ ವಿನ್ಯಾಸದ ವಿವರಗಳನ್ನು ವಿವರಿಸಿದ್ದಾರೆ
2022 ರ ಜೂನ್ ತಿಂಗಳು ಮಹೀಂದ್ರಾ ಕಂಪನಿಯ ಸ್ಕಾರ್ಪಿಯೋ ಬ್ರಾಂಡ್ನ 20 ನೇ ವಾರ್ಷಿಕೋತ್ಸವ. ಅದರ ಸ್ಮರಣಾರ್ಥ ಇಂದು ಮಹೀಂದ್ರಾ ಇಲ್ಲಿಯವರೆಗಿನ ಅತ್ಯಾಧುನಿಕ, ಅತ್ಯಂತ ಶಕ್ತಿಶಾಲಿ ಮತ್ತು ಅತಿದೊಡ್ಡ ಸ್ಕಾರ್ಪಿಯೊದ ಆವೃತ್ತಿಯನ್ನು ಬಿಡುಗಡೆಗೊಳಿಸುತ್ತಿದೆ. ಇಂದು ಸಂಜೆ 5.30ಕ್ಕೆ ಮಹೀಂದ್ರಾ ಸ್ಕಾರ್ಪಿಯೋ ಎನ್ ಬಿಡುಗಡೆಗೊಳ್ಳಲಿದೆ. ಜೂನ್ 2002 ರಲ್ಲಿ ಮೊದಲ ಮಹೀಂದ್ರಾ ಸ್ಕಾರ್ಪಿಯೋ ಜನಿಸಿತು.
ಇದಕ್ಕೆ ಮುಂಚಿತವಾಗಿ, ಮಹೀಂದ್ರಾದ ಮುಖ್ಯ ವಿನ್ಯಾಸಕ, ಪ್ರತಾಪ್ ಬೋಸ್ ಅವರು ಹೊಸ ಸ್ಕಾರ್ಪಿಯೋ N ನ ವಿನ್ಯಾಸದ ವಿವರಗಳನ್ನು ವಿವರಿಸಿದ್ದಾರೆ. ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿರುವ ಹೊಸ ವೀಡಿಯೊದಲ್ಲಿ, ಬೋಸ್ ಅವರು ಅವರು ಸ್ಕಾರ್ಪಿಯೋದ ಹೊರಭಾಗಗಳು, ಒಳಾಂಗಣಗಳು ಹಾಗೂ 2022 ರ ಮಹೀಂದ್ರ ಸ್ಕಾರ್ಪಿಯೋ N ಎಸ್ಯುವಿಗಳ ಬಿಗ್ ಡ್ಯಾಡಿ ಆಗಿರುವುದು ಹೇಗೆ ಎಂದು ವಿವರಿಸುತ್ತಾರೆ.
ಸ್ಕಾರ್ಪಿಯೊ ಎನ್ ಮುಂಭಾಗದಲ್ಲಿ ಹೊಸ ಟ್ವಿನ್ ಪೀಕ್ಸ್ ಲೋಗೋವನ್ನು ಪಡೆಯುವ ಎರಡನೇ ಮಹೀಂದ್ರಾ SUV ಆಗಿದೆ. ಮೊದಲನೆಯದು ಇದು ಕಳೆದ ವರ್ಷ ಬಿಡುಗಡೆಯಾಗಿರುವ XUV700. ಹಾಗೂ ಇದರ ಬದಿಯಲ್ಲಿ, ಮಹೀಂದ್ರಾದ ಸಿಗ್ನೇಚರ್ ಬೀಫಿ ವೀಲ್ ಆರ್ಚ್ಗಳಿವೆ. ಮೆಟಾಲಿಕ್ ಟೈಲ್ ಲೈನ್ ಅನ್ನು ಬೆಲ್ಟ್ ಲೈನ್ಗೆ ಸಂಯೋಜಿಸಲಾಗಿದೆ. ಇದು ಚೇಳಿನ ಆಕಾರದಲ್ಲಿ ಎದ್ದು ತೋರುತ್ತದೆ.
A legend, both outside and inside..(2/2) pic.twitter.com/uh16iFhikV
— anand mahindra (@anandmahindra)ಡಬಲ್ ಬ್ಯಾರೆಲ್ ಹೆಡ್ಲ್ಯಾಂಪ್ಗಳು, ಎಲ್ಇಡಿ ಟರ್ನ್ ಇಂಡಿಕೇಟರ್ಗಳು, ಪ್ರೀಮಿಯಂ ಕ್ರೋಮ್ ಸ್ಲ್ಯಾಟ್ಗಳು, ದೊಡ್ಡ ಭವ್ಯವಾದ ಗ್ರಿಲ್, ಫಾಗ್ಲ್ಯಾಂಪ್ ಅನ್ನು ಆವರಿಸಿರುವ ಎಲ್ಇಡಿ ಡಿಆರ್ಎಲ್, 18 ಇಂಚಿನ ಮೆಷಿನ್ ಕಟ್ ಅಲಾಯ್ ಚಕ್ರಗಳು ಇತ್ಯಾದಿಗಳನ್ನು ಹೊರಗಿನ ಇತರ ವಿನ್ಯಾಸದ ಮುಖ್ಯಾಂಶಗಳು ಒಳಗೊಂಡಿವೆ. ಒಳಭಾಗದಲ್ಲಿ, ಇದು ಕಂದು- ಕಪ್ಪು ಡ್ಯುಯಲ್ ಟೋನ್ನ ವಿನ್ಯಾಸ, ಆರಾಮದಾಯಕವಾದ ಸೀಟುಗಳು, ಸುಧಾರಿತ ಅಡ್ರಿನಾಕ್ಸ್ ಇನ್ಫೋಟೈನ್ಮೆಂಟ್ ಸಿಸ್ಟಮ್ನೊಂದಿಗೆ ಮೆಟಲ್ ಫಿನಿಶ್ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್ಗಳಿರಲಿವೆ. ಜೊತೆಗೆ, ಇದು ಅಲೆಕ್ಸಾ ಪವರ್ ಅನ್ನು ಸಹ ಪಡೆಯಲಿದ್ದು, ಅದು ವಾಹನ ಆನ್ ಮಾಡುವುದರಿಂದ ಸನ್ ರೂಫ್ ತೆರೆಯುವುದರವರೆಗೆ ಎಲ್ಲವನ್ನೂ ಒಂದು ಕಮಾಂಡ್ನಲ್ಲಿಯೇ ಮಾಡುತ್ತದೆ.
undefined
ಮಹೀಂದ್ರಾ ಸ್ಕಾರ್ಪಿಯೋ ಬಿಡುಗಡೆ
ಪವರ್ಟ್ರೇನ್ ಮತ್ತು ಕೀ ಸ್ಪೆಕ್ಸ್ ಸ್ಕಾರ್ಪಿಯೊ ಎನ್ 2 ಟರ್ಬೊ ಚಾರ್ಜ್ಡ್ ಮೋಟಾರ್ಗಳು, ಪೆಟ್ರೋಲ್ ಮತ್ತು ಡೀಸೆಲ್ ಪಡೆಯಲಿದೆ. mStallion 2 ಲೀಟರ್ ಟರ್ಬೊ ಪೆಟ್ರೋಲ್ ಮೋಟಾರ್ 200 PS ಮತ್ತು 370/380 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
2.2 ಲೀಟರ್ mHawk ಡೀಸೆಲ್ ಎಂಜಿನ್ 2 ಟ್ಯೂನ್ಗಳಲ್ಲಿ ಲಭ್ಯವಿರುತ್ತದೆ. ಕಡಿಮೆ ಸ್ಥಿತಿಯಲ್ಲಿ, ಡೀಸೆಲ್ ಮೋಟಾರ್ 132 PS ಮತ್ತು 300 Nm ಟಾರ್ಕ್ ಅನ್ನು ಹೊರಹಾಕುತ್ತದೆ ಮತ್ತು 6-ಸ್ಪೀಡ್ MT ಮತ್ತು RWD ಕಾನ್ಫಿಗರೇಶನ್ನೊಂದಿಗೆ ಮಾತ್ರ ಲಭ್ಯವಿರುತ್ತದೆ. ಹೈಯರ್-ಸ್ಪೆಕ್ ಟ್ರಿಮ್ಗಳು 175 PS ಮತ್ತು 370/400 Nm ಗರಿಷ್ಠ ಟಾರ್ಕ್ನೊಂದಿಗೆ ಅದೇ ಮೋಟರ್ ಉತ್ತಮ ಸಾಮರ್ಥ್ಯ ನೀಡಲಿದೆ.
6-ಸ್ಪೀಡ್ MT ಮತ್ತು 6-ಸ್ಪೀಡ್ AT ಟ್ರಾನ್ಸ್ಮಿಷನ್ ಆಯ್ಕೆಗಳು . ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರಲಿರುವ '4xplor' 4-ವೀಲ್ ಡ್ರೈವ್ ಸಿಸ್ಟಮ್ , 6-ಆಸನಗಳು ಮತ್ತು 7-ಆಸನಗಳ ಆವೃತ್ತಿಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. 6-ಆಸನಗಳ ಆವೃತ್ತಿಯು ಎರಡನೇ ಸಾಲಿನಲ್ಲಿ ಕ್ಯಾಪ್ಟನ್ ಸೀಟ್ಗಳನ್ನು ಹೊಂದಿರುತ್ತದೆ ಮತ್ತು ಮಧ್ಯಮ ಸಾಲಿನ ಪ್ರಯಾಣಿಕರಿಗೆ ಆರ್ಮ್ ರೆಸ್ಟ್ಗಳನ್ನು ನೀಡುತ್ತದೆ. 7-ಆಸನಗಳ ಆವೃತ್ತಿಯು ಸಾಂಪ್ರದಾಯಿಕ ಬೆಂಚ್ ಸೆಟಪ್ ಅನ್ನು ಹೊಂದುವ ನಿರೀಕ್ಷೆಯಿದೆ.
ಕೆಜಿಎಫ್ 2 ದೊಡ್ಡಮ್ಮನ ಥರ ಮಹೀಂದ್ರಾ ಬಿಗ್ ಡ್ಯಾಡಿ