ಕೇಂದ್ರ ಸರ್ಕಾರ ಭಾರತ್ ಎನ್ಸಿಎಪಿ ಅನ್ನು ಜಾರಿಗೆ ತರಲು ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಭಾರತ್ ಎನ್ಸಿಎಪಿಯನ್ನು ಅನುಮೋದನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ಮಾರುತಿ ಸುಜುಕಿ ಅಧ್ಯಕ್ಷ ಆರ್ಸಿ ಭಾರ್ಗವ, ಇದರ ಅಗತ್ಯ ಭಾರತಕ್ಕೆ ಇಲ್ಲ ಎಂದಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಎಲ್ಲಾ ಕಾರುಗಳು ಗ್ಲೋಬಲ್ ಎನ್ಕ್ಯಾಪ್ನಲ್ಲಿ ಕ್ರ್ಯಾಶ್ ಟೆಸ್ಟ್ಗೆ ಒಳಪಡುತ್ತಿರುವುದು ಹೊಸದೇನಲ್ಲ. ಆದರೆ, ಈ ಕ್ರ್ಯಾಶ್ ಪರೀಕ್ಷೆಗಳು ಯಾವುವು? ಈ ಪರೀಕ್ಷೆ ನಡೆಸುವ ಎನ್ಸಿಎಪಿ (NCAP) ಎಂದರೇನು ಅನ್ನೋದು ಗೊತ್ತಾ? NCAP ಎಂದರೆ ನ್ಯೂ ಕಾರ್ ಅಸೆಸ್ಮೆಂಟ್ ಪ್ರೋಗ್ರಾಂ. ಇದನ್ನು ಪ್ರಪಂಚದ ವಿವಿಧ ಘಟಕಗಳಿಂದ ಮಾಡಲಾಗುತ್ತದೆ. ಸದ್ಯ ಯುರೋ NCAP,ಏಷಿಯನ್ NCAP, ಗ್ಲೋಬಲ್ NCAP, ಆಸ್ಟ್ರೇಲಿಯನ್ NCAP, ಜಪಾನ್ NCAP, ಲ್ಯಾಟಿನ್ NCAP, ಕೊರಿಯನ್ NCAP, ಚೀನಾ NCAP, ಅಮೆರಿಕದ IIHS ಮತ್ತು ಹೆಚ್ಚಿನದನ್ನು ಹೊಂದಿದ್ದೇವೆ.
ಈ ಎಲ್ಲಾ ಏಜೆನ್ಸಿಗಳು ಕಾರುಗಳ ಅಪಘಾತ ತಡೆಯುವ ಅಥವಾ ಅಪಘಾತವಾದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತವೆ. ಅದರ ಎಲ್ಲಾ ಕಚ್ಚಾ ಡೇಟಾವನ್ನು ವಿಶ್ಲೇಷಿಸಿದ ನಂತರ, ಅತ್ಯಧಿಕ ಸುರಕ್ಷತಾ ಫೀಚರ್ಗಳನ್ನು ಒಳಗೊಂಡ ಕಾರುಗಳಿಗೆ 5 (ಅತ್ಯಧಿಕ) ಮತ್ತು ಕಡಿಮೆ ಉಳ್ಳವರಿಗೆ ಅದರ ಅನುಸಾರ ರೇಟಿಂಗ್ ನೀಡಲಾಗುತ್ತದೆ. ಶೂನ್ಯ ಎಂದರೆ ಅತಿ ಕಡಿಮೆ ಎಂದು ಪರಿಗಣಿಸಲಾಗುತ್ತದೆ.
ಈ ಕೇಂದ್ರ ಸರ್ಕಾರ ಭಾರತ್ ಎನ್ಸಿಎಪಿ ಅನ್ನು ಜಾರಿಗೆ ತರಲು ಮುಂದಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಅವರು ಭಾರತ್ ಎನ್ಸಿಎಪಿಯನ್ನು ಅನುಮೋದನೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ಮಾರುತಿ ಸುಜುಕಿ ಅಧ್ಯಕ್ಷ ಆರ್ಸಿ ಭಾರ್ಗವ, ಇದರ ಅಗತ್ಯ ಭಾರತಕ್ಕೆ ಇಲ್ಲ ಎಂದಿದ್ದಾರೆ.
ಅವರ ಪ್ರಕಾರ, ಭಾರತವು ಯುರೋಪ್ಗಿಂತ ಸಂಪೂರ್ಣವಾಗಿ ವಿಭಿನ್ನ ಮಾರುಕಟ್ಟೆಯಾಗಿದ್ದು, ಅಲ್ಲಿ ಕ್ರ್ಯಾಶ್ ಟೆಸ್ಟ್ ರೇಟಿಂಗ್ಗಳು ಮಾನದಂಡ ವಿಭಿನ್ನವಾಗಿದೆ. ಭಾರತದಲ್ಲಿನ ಈ ಹೊಸ ಮಾನದಂಡ ವ್ಯವಸ್ಥೆಯು ಶ್ರೀಮಂತರಿಗ" ಮಾತ್ರ ಪ್ರಯೋಜನವನ್ನು ನೀಡುತ್ತದೆ ಮತ್ತು ದ್ವಿಚಕ್ರ ವಾಹನ ಖರೀದಿದಾರರಿಗೆ ಉತ್ತಮ ಸಾರಿಗೆಯನ್ನು ಒದಗಿಸುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಕಾರುಗಳಲ್ಲಿ 6 ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಿರುವುದಕ್ಕೆ ಕೂಡ ಮಾರುತಿ ಕಳವಳ ವ್ಯಕ್ತಪಡಿಸಿತ್ತು. ಏಕೆಂದರೆ ಇದು ಅಂತಿಮ ಖರೀದಿದಾರರಿಗೆ ಉತ್ಪನ್ನವನ್ನು ಹೆಚ್ಚು ದುಬಾರಿಯನ್ನಾಗಿ ಮಾಡುತ್ತದೆ. ಆದರೆ, SRS ಏರ್ಬ್ಯಾಗ್ಗಳು ಸೆಕೆಂಡರಿ ರೆಸ್ಟ್ರೆಂಟ್ ಸಿಸ್ಟಮ್ಗಳು ಮತ್ತು ಸೀಟ್ಬೆಲ್ಟ್ಗಳಂತಹ ಪ್ರಾಥಮಿಕ ಸಂಯಮ ವ್ಯವಸ್ಥೆಗಳು ಏರ್ಬ್ಯಾಗ್ಗಳಿಗಿಂತ ಹೆಚ್ಚಿನ ಜೀವಗಳನ್ನು ಉಳಿಸುತ್ತವೆ.
ಇದನ್ನೂ ಓದಿ: ಭಾರತೀಯ ಕಾರುಗಳ ಸುರಕ್ಷತೆ ಪರಿಶೀಲಿಸಲಿದೆ ಭಾರತ್ ಎನ್ಕ್ಯಾಪ್: ಗಡ್ಕರಿ
ಭಾರತ್ ಎನ್ಸಿಎಪಿ ಅಗತ್ಯವಿದೆಯೇ? ಈ ಪ್ರಶ್ನೆಗೆ ಹಲವು ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಒಂದೆಡೆ, ಭಾರತೀಯರಿಗೆ ಸುರಕ್ಷಿತವಾದ ಕಾರುಗಳನ್ನು ತಯಾರಿಸುವಲ್ಲಿ ಕಾರು ತಯಾರಕರನ್ನು ಉತ್ತೇಜಿಸಲು ಪ್ರಯತ್ನಿಸುತ್ತಿರುವ ಭಾರತ ಸರ್ಕಾರದ ಶ್ಲಾಘನೀಯ ಕ್ರಮ ಎಂಬ ಮಾಥು ಕೇಳಿ ಬಂದರೆ, ಭಾರತದ ಅತಿದೊಡ್ಡ ಕಾರು ತಯಾರಕರು ಇದನ್ನು ವಿರೋಧಿಸುತ್ತಿದ್ದಾರೆ.
ಇದನ್ನೂ ಓದಿ: ಆಗಸ್ಟ್‌ನಲ್ಲಿ ಹೊಂಡಾ, ಮಹೀಂದ್ರಾ, ಹ್ಯುಂಡೈ ಕಾರಿನ ಜಾಗತಿಕ ಅನಾವರಣ
ದೇಶದ ಪ್ರತಿಯೊಂದು ಕಾರು ಕೂಡ ಕ್ರ್ಯಾಶ್ ರೇಟಿಂಗ್ನೊಂದಿಗೆ ಕ್ರ್ಯಾಶ್ ಪರೀಕ್ಷೆಗಳಲ್ಲಿ ಉತ್ತೀರ್ಣ ಹೊಂದಬೇಕು ಎಂದು ಸರ್ಕಾರ ಕಡ್ಡಾಯಗೊಳಿಸಿಲ್ಲ. ಕೆಲ ಕಾರುಗಳು 0-ಸ್ಟಾರ್ ರೇಟಿಂಗ್ನೊಂದಿಗೆ ಕ್ರ್ಯಾಶ್ ಪರೀಕ್ಷೆಯಲ್ಲಿ ವಿಫಲವಾಗಬಹುದು. ಆದರೆ, ಮಾರುಕಟ್ಟೆಯಲ್ಲಿ ಮಾತ್ರ ಅದು ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಬಹುದು ಎಂಬುದು ಅವರ ವಾದ.
ಮೋಟಾರ್ಸೈಕಲ್ಗಳಿಗಿಂತ ಕಾರುಗಳು ಸುರಕ್ಷಿತವಾಗಿದೆ. ಭಾರತೀಯ ಕಾರು ಖರೀದಿದಾರರು ದಡ್ಡರಲ್ಲ. 0-ಸ್ಟಾರ್ ಕ್ರ್ಯಾಶ್ ರೇಟಿಂಗ್ ಹೊಂದಿರುವ ಕಾರುಗಳು ಕೂಡ ಮೋಟಾರ್ ಸೈಕಲ್ಗಿಂತ ಸುರಕ್ಷಿತವಾಗಿದೆ ಎಂದು ಅವರಿಗೆ ತಿಳಿದಿದೆ. ಇಲ್ಲಿಯವರೆಗೆ ಬಜೆಟ್ ಕಾರುಗಳಲ್ಲಿ ಕಡಿಮೆ ಕ್ರ್ಯಾಶ್ ರೇಟಿಂಗ್ಗಳು ಸಮಸ್ಯೆಯಾಗಿಲ್ಲ. ಏಕೆಂದರೆ ಇದು ನಿರೀಕ್ಷಿತವಾಗಿರುತ್ತದೆ.
ಆದರೆ, ಈ ಕ್ರಮದಿಂದ, ಯುರೋಪ್ ಮತ್ತು ಉತ್ತರ ಅಮೆರಿಕದಂತಹ ಹೆಚ್ಚು ಪ್ರಬುದ್ಧ ಮಾರುಕಟ್ಟೆಗಳಿಗೆ ಭಾರತೀಯ ರಫ್ತು ಏರಿಕೆ ಕಾಣಲಿದೆ. ಏಕೆಂದರೆ ಈ ಎನ್ಕ್ಯಾಪ್ ನಿಯಮಗಳು ಅಲ್ಲಿನ ಕಾರುಗಳಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಅವರು ತಿಳಿಸಿದರು.