ಮೇಲೆ ಹಾರ್ತಿದೆ ಕಾರು ! ಟೆಸ್ಟಿಂಗ್‌ ವಿಡಿಯೋ ವೈರಲ್‌, ಶುರುವಾಗಿದೆ ಮುಂಗಡ ಬುಕ್ಕಿಂಗ್‌

Published : Feb 22, 2025, 05:13 PM ISTUpdated : Feb 22, 2025, 06:35 PM IST
ಮೇಲೆ ಹಾರ್ತಿದೆ ಕಾರು ! ಟೆಸ್ಟಿಂಗ್‌ ವಿಡಿಯೋ ವೈರಲ್‌, ಶುರುವಾಗಿದೆ ಮುಂಗಡ ಬುಕ್ಕಿಂಗ್‌

ಸಾರಾಂಶ

ಅಮೆರಿಕದಲ್ಲಿ ಹಾರುವ ಕಾರಿಗೆ ಅನುಮತಿ ಸಿಕ್ಕಿದ್ದು, ಪರೀಕ್ಷೆಗಳು ನಡೆಯುತ್ತಿವೆ. ಅಲೆಫ್ ಏರೋನಾಟಿಕ್ಸ್ ಕಂಪನಿಯು ಎಲೆಕ್ಟ್ರಿಕ್ ಕಾರನ್ನು ತಯಾರಿಸಿದ್ದು, ಒಮ್ಮೆ ಚಾರ್ಜ್ ಮಾಡಿದರೆ 110 ಕಿ.ಮೀ ಚಲಿಸುತ್ತದೆ. ಇದು ರನ್ ವೇ ಇಲ್ಲದೆ ಹಾರಬಲ್ಲದು. ಇಬ್ಬರು ಕುಳಿತುಕೊಳ್ಳಬಹುದಾದ ಈ ಕಾರಿನ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ. 2.5 ಕೋಟಿ ಬೆಲೆಯ ಈ ಕಾರಿಗೆ 13 ಸಾವಿರ ನೀಡಿ ಮುಂಗಡ ಬುಕ್ಕಿಂಗ್ ಮಾಡಬಹುದು. ಈಗಾಗಲೇ 3300 ಬುಕ್ಕಿಂಗ್ ಆಗಿದೆ.

ಈ ಟ್ರಾಫಿಕ್ ಜಾಮ್ (Traffic jam) ನಲ್ಲಿ ದಿನದ ಅರ್ಧ ಸಮಯ ಕಳೆದು ಹೋಗುತ್ತೆ ಅಂತ ಗೊಣಗ್ತಿದ್ದ ಜನರಿಗೆ ಖುಷಿ ಸುದ್ದಿಯೊಂದಿದೆ. ರಸ್ತೆಯಲ್ಲಿ ಓಡ್ತಿದ್ದ ಕಾರ್ ಇನ್ಮುಂದೆ ಮೇಲೆ ಹಾರಾಡಲಿದೆ. ಎರಡು ವರ್ಷಗಳ ಹಿಂದೆಯೇ ಹಾರಾಡುವ ಕಾರಿಗೆ ಅಮೆರಿಕಾ ಅನುಮತಿ ನೀಡಿತ್ತು. ಈಗ ಕಾರು ಸಿದ್ಧವಾಗಿದೆ. ಅದ್ರ ಟೆಸ್ಟಿಂಗ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಮೇಲೆ ಹಾರುತ್ತಿರುವ ಕಾರಿನ ವಿಡಿಯೋ ವೈರಲ್ ಆಗಿದೆ. ಸಿನಿಮಾ, ಸೀರಿಯಲ್ ನಲ್ಲಿ ಮಾತ್ರ ನಾವು ಕಾರು ಹಾರಾಡೋದನ್ನು ನೋಡ್ತಿದ್ವಿ. ಆದ್ರೆ ಇನ್ಮುಂದೆ ನಿಜವಾಗ್ಲೂ ಕಾರು ಹಾರೋದನ್ನು ನೋಡ್ಬಹುದು. ಹಾರುವ ಕಾರಿನಲ್ಲಿ ಕುಳಿತುಕೊಳ್ಳುವ ಸಮಯ ಶೀಘ್ರವೇ ಬರಲಿದೆ. 

ಗಾಳಿಯಲ್ಲಿ ಹಾರುವ ಕಾರಿಗೆ ಪೆಟ್ರೋಲ್, ಡಿಸೇಲ್ ಬೇಕಾಗಿಲ್ಲ. ಪೆಟ್ರೋಲ್ ಬೆಲೆ  ಗಗನಕ್ಕೇರಿದ ಎನ್ನುವವರಿಗೆ ಇದು ಬೆಸ್ಟ್ ಕಾರ್. ಇದು ಎಲೆಕ್ಟ್ರಿಕ್ ಕಾರಾಗಿದ್ದು, ಒಮ್ಮೆ ಚಾರ್ಜ್ ಮಾಡಿದ್ರೆ 110 ಕಿಲೋಮೀಟರ್ ಓಡಲಿದೆ. ಅಮೆರಿಕದ ವಾಹನ ತಯಾರಕ ಕಂಪನಿ ಅಲೆಫ್ ಏರೊನಾಟಿಕ್ಸ್ (Aleph Aeronautics) ಇದನ್ನು ತಯಾರಿಸಿದೆ. ಅಲೆಫ್ ಮಾಡೆಲ್ ಎ ಕಾರಿನ ಪರೀಕ್ಷೆಯನ್ನು ಕಂಪನಿ ನಡೆಸುತ್ತಿದೆ. ಕಂಪನಿ ಇದನ್ನು ವಾಯುಯಾನ ಮತ್ತು ಆಟೋಮೋಟಿವ್ ಇತಿಹಾಸದಲ್ಲಿ ಒಂದು ಪ್ರಮುಖ ಸಾಧನೆ ಎಂದು ಪರಿಗಣಿಸಲಾಗುತ್ತಿದೆ.

3 ಸೆಕೆಂಡ್‌ಗಳಲ್ಲೇ 100 ಕಿ.ಮೀ ವೇಗ ತಲುಪುವ ಎಂಜಿ ಸೈಬರ್‌ಸ್ಟರ್‌ ಎಂ9ಗೆ ಬುಕ್ಕಿಂಗ್‌ ಶುರು!

ಹಾರುವ ಕಾರನ್ನು ಕ್ಯಾಲಿಫೋರ್ನಿಯಾದ ಸುರಕ್ಷಿತ ರಸ್ತೆಯಲ್ಲಿ ಪರೀಕ್ಷಿಸಲಾಗಿದೆ. ವಿಡಿಯೋದಲ್ಲಿ ಕಾರು ಮೇಲೆ ಹಾರೋದನ್ನು ನೋಡ್ಬಹುದು. ನಿಧಾನವಾಗಿ ಮೇಲೆ ಹಾರುವ ಕಾರು, ಕೆಳಗೆ ನಿಂತಿದ್ದ ಬಿಳಿ ಕಾರನ್ನು ದಾಟಿ ಮುಂದೆ ಹೋಗಿ ಲ್ಯಾಂಡ್ ಆಗುತ್ತೆ. ಈ ಕಾರು ಚಲಿಸಲು ಯಾವ್ದೇ ರನ್ ವೇ ಅಗತ್ಯವಿಲ್ಲ. ಕಾರು ಮೇಲೆ ಹಾರಿದ ವಿಡಿಯೋವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದು ಇದೇ ಮೊದಲು ಎಂದು ಅಲೆಫ್ ಏರೋನಾಟಿಕ್ಸ್‌ನ ಸಿಇಒ ಜಿಮ್ ಡುಖೋವ್ನಿ ಹೇಳಿದ್ದಾರೆ.  ವಿಡಿಯೋದಲ್ಲಿ ಕಂಡು ಬರುವ ಕಾರು ಅಲೆಫ್‌ನ ಮಾಡೆಲ್ ಝೀರೋದ ಅಲ್ಟ್ರಾಲೈಟ್ ಆವೃತ್ತಿಯಾಗಿದ್ದು ನಂತ್ರ ಅದನ್ನು ಕಮರ್ಶಿಯಲ್ ಮಾಡೆಲ್ ಆಗಿ ಸಿದ್ಧಪಡಿಸಲಾಗಿದೆ. 

ಕಾರಿನ ವೇಗ ಎಷ್ಟು? : ಈ ಕಾರಿನಲ್ಲಿ ಇಬ್ಬರು ಕುಳಿತುಕೊಳ್ಳಬಹುದು.   ಇದು ಆಟೋಪೈಲಟ್ ಮೋಡ್‌ನಲ್ಲಿಯೂ ಹಾರಲು ಸಾಧ್ಯವಾಗುತ್ತದೆ. ಈ ಕಾರಿಗೆ ಜಾಲರಿ ಭಾಗವನ್ನು ಅಳವಡಿಸಲಾಗಿದೆ. ಅದರ ಕೆಳಗೆ ಎಂಟು ತಿರುಗುವ ರೋಟರ್‌ಗಳಿವೆ. ಇದು ಕಾರಿನ ಹಾರಾಟವನ್ನು ಆರಾಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಇದನ್ನು ನೆಲದ ಮೇಲೂ ಓಡಿಸಬಹುದು. ಆಗ ಕಾರಿನಲ್ಲಿ ಅಳವಡಿಸಲಾದ ನಾಲ್ಕು ಸಣ್ಣ ಎಂಜಿನ್ ರಸ್ತೆಯಲ್ಲಿ ಓಡಲು ನೆರವಾಗುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 40 ಕಿ.ಮೀ ಎಂದು ಕಂಪನಿ ಹೇಳಿದೆ. 

ಬಿಡುಗಡೆಯಾಗುತ್ತಿದೆ ಕಡಿಮೆ ಬೆಲೆಯ 7 ಸೀಟರ್ ಕಾರು, ಹೈಬ್ರಿಡ್-ಇವಿ ಮಾದರಿಯಲ್ಲಿ ಲಭ್ಯ

ಮುಂಗಡ ಬುಕ್ಕಿಂಗ್ ಶುರು : ಕೇವಲ 13 ಸಾವಿರ ನೀಡಿ ನೀವು ಕಾರಿನ ಮುಂಗಡ ಬುಕ್ಕಿಂಗ್ ಶುರು ಮಾಡ್ಬಹುದು. ಅದ್ರ ಮೂಲ ಬೆಲೆ 2.5 ಕೋಟಿ ಎಂದು ಅಂದಾಜಿಸಲಾಗಿದೆ. ಈಗಾಗಲೇ 3300 ಮುಂಗಡ ಬುಕ್ಕಿಂಗ್ ನಡೆದಿದೆ ಎಂದು ಕಂಪನಿ ಹೇಳಿದೆ. ಕಂಪನಿ 2023ರಲ್ಲಿ ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ನಿಂದ ವಿಶೇಷ ವಾಯು ಯೋಗ್ಯತಾ ಒಪ್ಪಿಗೆ ಪತ್ರವನ್ನು ಪಡೆದಿತ್ತು.  
 

PREV
click me!

Recommended Stories

Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ
ಭಾರತದ ಮೊದಲ 7 ಸೀಟರ್ ಎಲೆಕ್ಟ್ರಿಕ್ SUV ಕಾರು XEV 9S ಪರಿಚಯಿಸಿದ ಮಹೀಂದ್ರ,ಟಾಟಾಗೆ ಠಕ್ಕರ್