
ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟ ಅಜಿತ್ ಕುಮಾರ್ ಇತ್ತೀಚೆಗಷ್ಟೇ ಪೋರ್ಸೆ GT3 RS ಐಶಾರಾಮಿ ಕಾರು ಖರೀದಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಇದೀಗ ಅಜಿತ್ ಅವರ ಪತ್ನಿ ಹಾಗೂ ಮಾಜಿ ನಟಿ ಶಾಲಿನಿ ಅಜಿತ್ ಕುಮಾರ್, ಐಶಾರಾಮಿ ಪೋರ್ಸೆ GT3 RS ಕಾರಿನ ಫೋಟೋವನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಜಿತ್ ಕುಮಾರ್ ಕಾರು ಹಾಗೂ ಬೈಕುಗಳ ಬಗ್ಗೆ ಹಾಗೂ ಕಾರು ರೇಸ್‌ಗಳ ವಿಪರೀತ ಕ್ರೇಝ್ ಹೊಂದಿರುವ ವಿಚಾರ ಅವರ ಅಭಿಮಾನಿಗಳ ಪಾಲಿಗೆ ಗುಟ್ಟಾಗಿಯೇನೂ ಉಳಿದಿಲ್ಲ. ಇದೀಗ ನಟ ಅಜಿತ್ ಖರೀದಿಸಿರುವ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಅಗಿದೆ.
ನನಗೆ ಸ್ವಾತಂತ್ರ್ಯ ಬೇಕಿತ್ತು: ಲಖನೌ ತಂಡದಿಂದ ನಿರ್ಗಮನ ಬಗ್ಗೆ ಮೌನ ಮುರಿದ ಕೆ ಎಲ್ ರಾಹುಲ್!
ಶಾಲಿನಿ ಅಜಿತ್ ಕುಮಾರ್, ಪೋರ್ಸೆ GT3 RS ಕಾರಿನ ಜತೆ ಅಜಿತ್ ಇರುವ ಫೋಟೋದೊಂದಿಗೆ, "ಅವರು ಕಾರು ಕೊಂಡರು, ದಿ ಸ್ಟೈಲ್ ಅಂಡ್ ಮೈ ಹಾರ್ಟ್' ಎಂದು ಹಾರ್ಟ್ ಎಮೋಜಿ ಹಂಚಿಕೊಂಡಿದ್ದಾರೆ.
ಅಜಿತ್ ಕುಮಾರ್ ಕಾರು ಖರೀದಿಸುವಾಗ ಬಿಳಿ ಬಣ್ಣದ ಶರ್ಟ್ ಹಾಗೂ ನೀಲಿ ಕಾರ್ಗೊ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರು ಖರೀದಿಸುವಾಗ ಅಜಿತ್, ಕಾರಿನ ಬಗ್ಗೆ ಮಾಹಿತಿ ಪಡೆಯುತ್ತಿರುವ ಫೋಟೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ನಟ ಅಜಿತ್ ಕುಮಾರ್ ಖರೀದಿಸಿದ ಪೋರ್ಸೆ GT3 RS ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರುಪಾಯಿಗಳು ಎನ್ನಲಾಗುತ್ತಿದೆ. ಇದನ್ನು ಕೇಳಿದ ಫ್ಯಾನ್ಸ್ ಒಂದು ಕ್ಷಣ ಶಾಕ್ ಆಗಿದ್ದಾರೆ.
ಪೋರ್ಸೆ 911 GT3 RS ಕಾರಿನ ವಿಶೇಷತೆಗಳೇನು?:
ಪೋರ್ಸೆ 911 GT3 RS ಐಶಾರಾಮಿ ಕಾರು 4,000 ಸಿಸಿಯದ್ದಾಗಿದೆ. 6 ಸಿಲಿಂಡರ್ ಎಂಜೀನ್ ಹೊಂದಿರುವ ಈ ಕಾರು 0-100 ಕಿಲೋಮೀಟರ್ ವೇಗ ತಲುಪಲು ಕೇವಲ 3.2 ಸೆಕೆಂಡ್ ಕಾಲ ತೆಗೆದುಕೊಳ್ಳುತ್ತದೆ. ಈ ಕಾರಿನಲ್ಲಿ ಗರಿಷ್ಠ ಗಂಟೆಗೆ 296 ಕಿಲೋಮೀಟರ್ ವೇಗವನ್ನು ತಲುಪಬಹುದಾಗಿದೆ. ಈ ಕಾರಿನ ಮತ್ತೊಂದು ವಿಶೇಷ ಎಂದರೆ, ಈ ಕಾರಿನಲ್ಲಿ ಮೂರು ರೀತಿಯ ಡ್ರೈವಿಂಗ್ ಮೋಡ್‌ಗಳಿವೆ. ಮೊದಲನೆಯದ್ದು ನಾರ್ಮಲ್ ಡ್ರೈವಿಂಗ್, ಎರಡನೇಯದ್ದು ಸ್ಪೋರ್ಟ್ಸ್ ಡ್ರೈವಿಂಗ್ ಹಾಗೂ ಮೂರನೇಯದ್ದು ಟ್ರ್ಯಾಕ್ ಡ್ರೈವಿಂಗ್.
ಕೆಲ ತಿಂಗಳ ಹಿಂದಷ್ಟೇ ನಟ ಅಜಿತ್ ಕುಮಾರ್, ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಅಜಿತ್ ಕುಮಾರ್ ಬರೋಬ್ಬರಿ 9 ಕೋಟಿ ರುಪಾಯಿ ಮೌಲ್ಯದ ಫೆರಾರಿ ಕಾರು ಖರೀದಿಸಿದ್ದಾರೆ ಎನ್ನಲಾಗುತ್ತಿದೆ.
ಹೀಗಿತ್ತು ನೋಡಿ ಅಜಿತ್ ಫೆರಾರಿ ಕಾರು ರೈಡ್: