ಗುಜುರಿ ವಾಹನದಿಂದ ವಿಂಟೇಜ್ ಎಲೆಕ್ಟ್ರಿಕ್ ಕಾರು, ಬೆಲೆ 2.75 ಲಕ್ಷ ರೂ ನಿಂದ ಆರಂಭ!

By Suvarna News  |  First Published Aug 15, 2023, 4:22 PM IST

ಗುಜುರಿಗೆ ಹಾಕಿದ ವಾಹನಗಳನ್ನು ಖರೀದಿಸಿ ಕಡಿಮೆ ಬೆಲೆಯಲ್ಲಿ ವಿಂಟೇಜ್ ಎಲೆಕ್ಟ್ರಿಕ್ ಕಾರುಗಳನ್ನಾಗಿ ಪರಿವರ್ತಿಸುತ್ತಿರುವ 21 ವರ್ಷದ ಯುವರಾಜ್ ಪವಾರ್ ಇದೀಗ ಭಾರಿ ಜನಪ್ರಿಯರಾಗಿದ್ದಾನೆ. ಈತನ 45 ಕ್ಕೂ ಹೆಚ್ಚು ವಿಂಟೇಜ್ ಇವಿ ಕಾರುಗಳು ಮಾರಾಟವಾಗಿದ್ದರೆ, ಇದೀಗ 40ಕ್ಕೆ ಹೆಚ್ಚು ಕಾರಿನ ಆರ್ಡರ್ ಬಂದಿದೆ. ರೈತನ ಮಗನ ಸಾಧನೆಗೆ ಇದೀಗ ಮೆಚ್ಚುಗೆ ಸುರಿಮಳೆ ವ್ಯಕ್ತವಾಗಿದೆ.
 


ಮುಂಬೈ(ಆ.15)  ಹಳೇ ಗುಜುರಿ ವಾಹನಗಳಿಂದ ಅತ್ಯಂತ ಆಕರ್ಷಿಕ ವಿಂಟೇಜ್ ಎಲೆಕ್ಟ್ರಿಕ್ ವಾಹನ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದರ ಹಿಂದಿನ ಶಕ್ತಿ ಕೇವಲ 21 ವರ್ಷದ ಯುವಕ ಯುವರಾಜ್ ಪವಾರ್. ಮಹಾರಾಷ್ಟ್ರದ ಅಹಮ್ಮದ್‌ನಗರ ನಿವಾಸಿ ಯುವರಾಜ್ ಪವಾರ್ ಇದೀಗ ಭಾರಿ ಬೇಡಿಕೆಯ ವ್ಯಕ್ತಿ. ಯುವರಾಜ್ ಪವಾರ್ ಈಗಾಗಲೇ 45 ವಿಂಟೇಜ್ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ. ಇದೀಗ 40ಕ್ಕೂ ಹೆಚ್ಚು ಆರ್ಡರ್ ಬಂದಿದ್ದು, ಈ ಕಾರುಗಳನ್ನು ತಯಾರಿಸುವ ಕೆಲಸದಲ್ಲಿ ಯುವರಾಜ್ ನಿರತರಾಗಿದ್ದಾರೆ. ಗೋವಾ, ಹರ್ಯಾಣ ಸೇರಿದಂತೆ ಹಲವು ರಾಜ್ಯಗಳಿಗೆ ಈ ಕಾರು ಮಾರಾಟವಾಗುತ್ತಿದೆ.  ಮತ್ತೊಂದು ವಿಶೇಷ ಅಂದರೆ 2.75 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ಬೆಲೆಯ ಕಾರುಗಳಿಗೆ ಇದೀಗ ಬೇಡಿಕೆ ಡಬಲ್ ಆಗಿದೆ.

4ನೇ ತರಗತಿಯಿಂದ ಯುವರಾಜ್ ಪವಾರ್ ಶಾಲೆಯ ವಸ್ತು ಪ್ರದರ್ಶನಕ್ಕಾಗಿ ಮಾಡೆಲ್ ತಯಾರಿ ಪ್ರಥಮ ಬಹುಮಾನ ಗಳಿಸುತ್ತಿದ್ದ. ಈ ವೇಳೆ ಆವಿಷ್ಕಾರ ಕುತೂಹಲ ಹೆಚ್ಚಾಯಿತು. ಕೃಷಿ ಉಪಕರಣಗಳು, ಎಲೆಕ್ಟ್ರಿಕ್ ವಾಹನಗಳು ಸೇರಿದಂತೆ ಹಲವು ಮಾಡೆಲ್ ತಯಾರಿಸಿದ್ದೇನೆ. ಆಸಕ್ತಿ ಮುಂದುವರಿದಂತೆ ಆವಿಷ್ಕಾರಗಳು ಹೆಚ್ಚಾಯಿತು. ಕೊರೋನಾ ಕಾಲದಲ್ಲಿ ಪ್ರಾಯೋಗಿಕ ಎಲೆಕ್ಟ್ರಿಕ್ ವಾಹನ ತಯಾರಿಕೆ ಮಾಡಲು ಆರಂಭಿಸಿದೆ. ವಿಂಟೇಜ್ ವಾಹನ ತಯಾರಿಸಿ ಯಶಸ್ವಿಯಾದೆ ಎಂದು ಯುವರಾಜ್ ಪವಾರ್ ಹೇಳಿದ್ದಾರೆ.

Latest Videos

undefined

4 ಕೋಟಿ ರೂ ಲ್ಯಾಂಬೋರ್ಗಿನಿ ಕಾರಿನ ಮೇಲೆ ಜೈ ಶ್ರೀರಾಮ್ ಪ್ರಿಂಟ್ , ಇದು ವಿಶ್ವದಲ್ಲೇ ಮೊದಲು!

100ಕ್ಕೂ ಹೆಚ್ಚು ಪ್ರಯೋಗ ಮಾಡಿದ್ದಾರೆ. ಹೊಸ ಆವಿಷ್ಕಾರ ಮಾಡಿರುವ ಯುವರಾಜ್ ಇದೀಗ ಬಿಡುವಿಲ್ಲದೆ ವಿಂಟೇಜ್ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ತೊಡಗಿದ್ದಾರೆ. 45 ರಿಂದ 50 ವಾಹನಗಳು ಈಗಾಗಲೇ ಮಾರಾಟ ಮಾಡಿದ್ದಾರೆ. ಗಳೇ ಗುಜುರಿ ವಾಹನಗಳನ್ನು ಖರೀದಿಸಿ, ವಿಂಟೇಜ್ ಎಲೆಕ್ಟ್ರಿಕ್ ವಾಹನಗಳಾಗಿ ಪರಿವರ್ತಿಸಲಾಗುತ್ತದೆ. ಬ್ಯಾಟರಿ, ಸುಲಭ ಚಾರ್ಜಿಂಗ್, ಮೈಲೇಜ್ ಸೇರಿದಂತೆ ಎಲ್ಲವನ್ನು ಅತ್ಯಂತ ಸೂಕ್ಷ್ಮವಾಗಿ ತಯಾರಿಸುವ ಯುವರಾಜ್‌ಗೆ ಬೇರೆ ಬೇರೆ ರಾಜ್ಯಗಳಿಂದಲೂ ಬೇಡಿಕ ಬರುತ್ತಿದೆ.

2020ರ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದ ಯುವರಾಜ್, ತಂದೆಯ ಪೀಠೋಪಕರಣ ಶಾಪ್‌ನಲ್ಲಿ ಎಲೆಕ್ಟ್ರಿಕ್ ಕಾರು ತಯಾರಿಸಲು ಆರಂಭಿಸಿದ್ದಾರೆ. ವಿಂಟೇಜ್ ಕಾರುಗಳ ರೂಪದಲ್ಲಿ ಕಾರು ತಯಾರಿಸಿ ಇದೀಗ ಭಾರಿ ಯಶಸ್ಸು ಕಂಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿದ್ದ ರೋಲ್ಸ್ ರಾಯ್ಸ್ ಕಾರಿನ ಮಾದರಿ, ಬೆಂಜ್ ಕಾರಿನ ಮಾದರಿಗಳ ರೂಪದಲ್ಲಿ 2.75 ಲಕ್ಷ ರೂಪಾಯಿಂದ ವಿಂಟೇಜ್ ಕಾರುಗಳನ್ನು ತಯಾರಿಸಲಾಗುತ್ತಿದೆ.

ಪುಣೆಯ ಕಾಶಿಬಾಯಿ ನವಲೆ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿರುವ ಯುವರಾಜ್ ಇದೀಗ ಸಂಪೂರ್ಣವಾಗಿ ವಿಂಟೇಜ್ ಕಾರುಗಳ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಯುವರಾಜ್ ತಯಾರಿಸಿದ ವಿಂಟೇಜ್ ಎಲೆಕ್ಟ್ರಿಕ್ ಕಾರುಗಳು ಎಲ್ಲೆಡೆ ಮನೆ ಮಾತಾಗಿತ್ತು. ಯುವರಾಜ್‌ಗೆ ಅವರದ್ದೇ ಕ್ಷೇತ್ರದ ಶಾಸಕ ವಿಂಟೇಜ್ ಕಾರು ತಯಾರಿಸಿ ನೀಡುವಂತೆ ಮೊದಲ ಆರ್ಡರ್ ನೀಡಿದ್ದರು. ಇದೀಗ 45ಕ್ಕೂ ಹೆಚ್ಚು ವಾಹನ ಮಾರಾಟವಾಗಿದ್ದರೆ, 40ಕ್ಕೂ ಹೆಚ್ಚು ವಾಹನ ಆರ್ಡರ್ ಬಂದಿದ್ದು, ಕೆಲಸ ನಡೆಯತ್ತಿದೆ.

ಪೊಲೀಸರ ಚಲನ್ ತಪ್ಪಿಸಲು ಗರ್ಲ್‌ಫ್ರೆಂಡ್‌ನನ್ನೇ ಕೆಳಕ್ಕೆ ಬೀಳಿಸಿ ಪರಾರಿಯಾದ ಬೈಕರ್, ವಿಡಿಯೋ ವೈರಲ್!

ಈ ಕಾರುಗಳು 3 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ಇನ್ನು100 ಕಿಲೋಮೀಟರ್ ಮೈಲೇಜ್ ರೇಂಜ್ ಹೊಂದಿದೆ. ಮದುವೆ ಸಮಾರಂಭ, ಪುಣೆಯ ಫಿಲ್ಮ್ ಸಿಟಿ, ಹರ್ಯಾಣ, ಕೋಲ್ಕತಾ, ಮಧ್ಯಪ್ರದೇಶ, ಪಂಜಾಬ್, ಗೋವಾ ಸೇರಿದಂತೆ ಹಲವು ರಾಜ್ಯಗಳಿಗೆ ಇದೀಗ ಈ ವಿಂಟೇಜ್ ಇವಿ ಕಾರುಗಳು ಪೂರೈಕೆಯಾಗುತ್ತಿದೆ.
 

click me!