ಹೋಂಡಾ ಕಾರ್ಸ್ ಇಂಡಿಯಾ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಫರ್ ಘೋಷಿಸಿದೆ. ಆಗಸ್ಟ್ 16 ರಿಂದ ಆಗಸ್ಟ್ 20ರವರೆಗೆ ಸೀಮಿತ ಅವಧಿಯ ಈ ಆಫರ್ ದೇಶದ ಎಲ್ಲೆಡೆ ಗ್ರಾಹಕರಿಗೆ ಲಭ್ಯವಿದೆ. ಈ ಆಫರ್ ಕುರಿತು ಮಾಹಿತಿ ಇಲ್ಲಿದೆ.
ಬೆಂಗಳೂರು(ಆ.15) ದೇಶದಲ್ಲೆಡೆ ಇಂದು ಸ್ವಾತಂತ್ರ್ಯ ದಿನಾಚರಣೆ. ಭಾರತದ ಮೂಲೆ ಮೂಲೆಯಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಸ್ವಾತಂತ್ರ್ಯದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಇತ್ತ ಹೋಂಡಾ ಕಾರ್ಸ್ ಇಂಡಿಯಾ ಸ್ವಾತಂತ್ರ್ಯ ದಿನಾಚರಣೆಗೆ ಭರ್ಜರಿ ಆಫರ್ ಘೋಷಿಸಿದೆ. ಆಗಸ್ಟ್ 16 ರಿಂದ ಆಗಸ್ಟ್ 20ರ ವರೆಗೆ ಹೋಂಡಾ ದೇಶಾದ್ಯಂತ ಸರ್ವೀಸ್ ಕ್ಯಾಂಪ್ ಆಯೋಜಿಸಿದೆ. ಸ್ಪೆಷಲ್ ಡೀಲ್ಸ್, ಕಾರ್ ಕೇರ್ ಸರ್ವೀಸ್, ಪೀರಿಯಾಡಿಕ್ಸ್ ನಿರ್ವಹಣೆ ಸೇರಿದಂತೆ ಹಲವು ಸೇವೆಗಳು ಲಭ್ಯವಿದೆ.
ಕಾರು ಸರ್ವೀಸ್, ಇಂಟಿರೀಯರ್ ಕ್ಲೀನಿಂಗ್, ಪೈಂಟಿಂಗ್ಸ್, ಹೆಡ್‌ಲ್ಯಾಂಪ್ಸ್, ವಿಂಡ್‌ಶೀಲ್ಡ್, ಅಂಡರ್ ಬಾಡಿ ಕೋಟಿಂಗ್ ಸೇರಿದಂತೆ ಹಲವು ಸೇವೆಗಳನ್ನು ಉಚಿತವಾಿ ನೀಡುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಸರ್ವೀಸ್ ಕ್ಯಾಂಪ್ ಮೂಲಕ ಗ್ರಾಹಕರು ತಮ್ಮ ಕಾರಿನ ಸಂಪೂರ್ಣ ಕೇರ್ ಮಾಡಬಹುದು. ದೇಶದ ಎಲ್ಲಾ ಹೋಂಡಾ ಸರ್ವೀಸ್ ಬಳಿ ಈ ಸರ್ವೀಸ್ ಕ್ಯಾಂಪ್ ಲಭ್ಯವಿದೆ. ಹೋಂಡಾ ಕಾರು ಗ್ರಾಹಕರು ಈ ಸೇವೆಯನ್ನು ಪಡೆದುಕೊಳ್ಳಬಹುದು.
undefined
ಹೊಚ್ಚ ಹೊಸ ಹೋಂಡಾ ಎಲವೇಟ್ SUV ಬುಕಿಂಗ್ ಆರಂಭ, 21 ಸಾವಿರ ರೂಗೆ ಮನೆಗೆ ತನ್ನಿ ಅತ್ಯುತ್ತಮ ಕಾರು!
ಹೋಂಡಾ ಈ ಬಾರಿಯ ಹಬ್ಬಗಳ ಸಂದರ್ಭದಲ್ಲಿ ಎಲಿವೇಟ್ ಎಸ್‌ಯುವಿ ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ. ಜುಲೈ 31ರಿಂದ ಹೋಂಡಾ ಎಲಿವೇಟ್ ಕಾರಿನ ಬುಕಿಂಗ್ ಆರಂಭಗೊಂಡಿದೆ. ಸೆಪ್ಟೆಂಬರ್ ತಿಂಗಳಿನಿಂದ ಡೆಲಿವರಿ ಆರಂಭಗೊಳ್ಳಲಿದೆ. 21,000 ರೂಪಾಯಿ ನೀಡಿ ಈ ಕಾರು ಬುಕಿ ಮಾಡಿಕೊಳ್ಳಬಹುದು. ಹೋಂಡಾ ಕಾರುಗಳ ಪೈಕಿ ಅಮೇಜ್ ಭಾರತದಲ್ಲಿ ಭಾರಿ ಮೋಡಿ ಮಾಡಿದೆ.
ಶಕ್ತಿಶಾಲಿ ಹೆಡ್‌ಲೈಟ್, ಎಲ್‌ಇಡಿ ಬಲ್ಬುಗಳು, ಮಲ್ಟಿವ್ಯೂ ರೇರ್ ಕ್ಯಾಮೆರಾ, ಹೊಸದಾಗಿ ವಿನ್ಯಾಸ ಮಾಡಿದ ಇಂಟೀರಿಯರ್ ಹೀಗೆ ಅನೇಕ ಹೊಸ ಬದಲಾವಣೆಗಳೊಂದಿಗೆ ನ್ಯೂ ಹೋಂಡಾ ಅಮೇಜ್ ಕಾರು ಮೋಡಿ ಮಾಡಿದೆ. ಅಟೋಮ್ಯಾಟಿಕ್ ಮತ್ತು ಮ್ಯಾನ್ಯುವಲ್ ಎರಡೂ ಮಾದರಿಯಲ್ಲಿ ಕಾರು ಲಭ್ಯ. ಭಾರಿ ಯಶಸ್ಸಿನಿಂದ ಹಿಗ್ಗಿರುವ ಹೋಂಡಾ ಅಮೇಜ್, ಇತ್ತೀಚೆಗೆ ಹೋಂಡಾ ಡಬ್ಲ್ಯೂಆರ್-ವಿ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಹೋಂಡಾ ಅಮೇಜ್ ಪೆಟ್ರೋಲ್, ಡೀಸೆಲ್ ವರ್ಶನ್‌ಗಳಲ್ಲಿ ಸಿಗುತ್ತದೆ. ಮ್ಯಾನ್ಯುವಲ್ ಟ್ರಾನ್ಸ್‌ಮಿಶನ್, ಸಿವಿಟಿ ಮಾದರಿಗಳಲ್ಲಿ ಲಭ್ಯ. ಹೋಂಡಾ ಡಬ್ಲ್ಯೂಆರ್-ವಿ ಹೊಸ ಆವೃತ್ತಿ ಟಾಪ್ ಗ್ರೇಡ್ ವಿಎಕ್ಸ್ ಆಧಾರಿತ. ಬಾಡಿ ಗ್ರಾಫಿಕ್ಸ್ ಮೂಲಕ ಇನ್ನಷ್ಟುಮೋಹಕವಾಗಿ ಕಾಣುತ್ತೆ. ಇದೂ ಪೆಟ್ರೋಲ್, ಡೀಸೆಲ್ ಆವೃತ್ತಿಗಳಲ್ಲಿ ಮಾರುಕಟ್ಟೆಗೆ ಬಂದಿದೆ.
ಭಾರತ ದೂಷಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ, ಆರ್ಥಿಕ ಬಿಕ್ಕಟ್ಟಿನಿಂದ ಹೋಂಡಾ ಕಾರು ಘಟಕ ಸ್ಥಗಿತ!
ಹಬ್ಬದ ವೇಳೆಗೆ ತನ್ನ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್, ಇಂಡಿಯಾ ಇಂಡಸ್ ಇಂಡ್ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದ ಗ್ರಾಹಕರಿಗೆ ಹೋಂಡಾ ಅಮೇಜ್ ಮತ್ತು ಹೋಂಡಾ ಸಿಟಿಯ ಖರೀದಿಯ ಮೇಲೆ ಕಡಿಮೆ ಇಎಂಐ, 100% ಎಕ್ಸ್ ಶೋರೂಂ ಫಂಡಿಂಗ್ ಇತ್ಯಾದಿ ಪ್ರಯೋಜನಗಳಿವೆ ಎಂದು ಕಂಪೆನಿ ಹೇಳಿದೆ.