*2.5 ಕೋಟಿ ರೂ.ಗಳ ಕಾರು
*ಸ್ಥಳೀಯವಾಗಿ ಜೋಡಿಸಿದ ಕಾರು
*2023 ರವರೆಗೆ ಬುಕಿಂಗ್ ಪೂರ್ಣ
Auto Desk: ಮರ್ಸಿಡೀಸ್-ಬೆನ್ಸ್ (Mercedes-Benz) ಇಂಡಿಯಾ ಹೊಸ ತಲೆಮಾರಿನ ಮರ್ಸಿಡೀಸ್ ಮೇ ಬ್ಯಾಕ್ ಎಸ್ ಕ್ಲಾಸ್ ಲಿಮೋಸಿನ್ ( Mercedes-Maybach S-ಕ್ಲಾಸ್ Limosin) ಅನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ. ಎಸ್-ಕ್ಲಾಸ್ ಮೇಬ್ಯಾಕ್ ದರ 2.5 ಕೋಟಿ ರೂ.ಗಳಿಂದ ಪ್ರಾರಂಭವಾಗುತ್ತವೆ. ಎಸ್80 4 ಮ್ಯಾಟಿಕ್ ಗೆ 3.2 ಕೋಟಿ ರೂ.( ಎಕ್ಸ್-ಶೋರೂಮ್) ವರೆಗೆ ಇರುತ್ತದೆ. ಇದರಲ್ಲಿ ಮೊದಲನೆಯದು ಸಂಪೂರ್ಣವಾಗಿ ಸ್ಥಳೀಯವಾಗಿ ಜೋಡಿಸಲ್ಪಟ್ಟ ವಾಹನವಾಗಿದೆ., ಎರಡನೆಯದು ಸಂಪೂರ್ಣ ನಿರ್ಮಿಸಲಾದ ಘಟಕವಾಗಿ (CBU) ಭಾರತಕ್ಕೆ ಆಗಮಿಸುತ್ತದೆ. ಹೊಸ ಎಸ್-ಕ್ಲಾಸ್ ಮೇಬ್ಯಾಕ್ 2020ರ ನವೆಂಬರ್ನಲ್ಲಿ ಜಾಗತಿಕವಾಗಿ ಪರಿಚಯಿಸಲ್ಪಟ್ಟಿತ್ತು.
ಹೊಸ ಸ್ಟ್ಯಾಂಡರ್ಡ್ ಎಸ್-ಕ್ಲಾಸ್ ಹೆಚ್ಚು ಲೆಗ್ರೂಮ್, ಹೆಚ್ಚು ಸೌಕರ್ಯಗಳು ಮತ್ತು ಹೆಚ್ಚು ಶಕ್ತಿಶಾಲಿ ಪವರ್ಟ್ರೇನ್ ಅನ್ನು ನೀಡುತ್ತದೆ. ಎಸ್680ಗೆ ಭಾರತದಲ್ಲಿ ಭಾರಿ ಬೇಡಿಕೆಯಿದ್ದು, 2023 ರವರೆಗೆ ಬುಕಿಂಗ್ ಆಗಿದೆ ಎಂದು ಮರ್ಸಿಡೀಸ್ ಬೆನ್ಸ್ ಇಂಡಿಯಾ ದೃಢಪಡಿಸಿದೆ.
undefined
ಇದನ್ನೂ ಓದಿ: ಕೇರಳದ ಉದ್ಯೋಗಿಗೆ ಮರ್ಸಿಡಿಸ್ ಬೆಂಜ್ ಕಾರು ಗಿಫ್ಟ್ ನೀಡಿದ ಮಾಲೀಕ
ಸ್ಟ್ಯಾಂಡರ್ಡ್ ಎಸ್-ಕ್ಲಾಸ್ಗೆ ಹೋಲಿಸಿದರೆ, ಹೊಸ-ಪೀಳಿಗೆಯ ಮರ್ಸಿಡಿಸ್-ಮೇಬ್ಯಾಕ್ ಎಸ್-ಕ್ಲಾಸ್ 180 ಎಂಎಂ ಉದ್ದದ ವೀಲ್ಬೇಸ್ ಹೊಂದಿದೆ. ಈ ಕಾರು ಸುಮಾರು 5.5 ಮೀಟರ್ ಉದ್ದವಿದೆ ಮತ್ತು ವಿದ್ಯುತ್ ಚಾಲಿತವಾಗಿ ಕಾರ್ಯನಿರ್ವಹಿಸಬಹುದಾದ ಹಿಂಬದಿಯ ಬಾಗಿಲುಗಳನ್ನು ಹೊಂದಿದೆ. ಇದರಲ್ಲಿ ಚಾಲಕರು 'ಡೋರ್ಮೆನ್' ವೈಶಿಷ್ಟ್ಯದೊಂದಿಗೆ ಮುಂಭಾಗದ ಸೀಟಿನಿಂದಲೇವ ಎಲ್ಲಾ ಬಾಗಿಲುಗಳನ್ನು ನಿಯಂತ್ರಿಸಬಹುದಾಗಿದೆ.
ಸ್ಟ್ಯಾಂಡರ್ಡ್ ಆವೃತ್ತಿಗೆ ಹೋಲಿಸಿದರೆ, ಹೊಸ ಮರ್ಸಿಡೀಸ್ ಮೇ ಬ್ಯಾಕ್ S-ಕ್ಲಾಸ್ ಕ್ರೋಮ್ಡ್ ಫಿನಿಷ್, ವಿಶಿಷ್ಟವಾದ ಬಾನೆಟ್, ಉದ್ದ ಸ್ಲ್ಯಾಟ್ಗಳು ಮತ್ತು ಕ್ರೋಮ್ ಸುತ್ತುವರೆದಿರುವ ಮೇಬ್ಯಾಕ್ ಗ್ರಿಲ್ ಪಡೆಯುತ್ತದೆ. ಎಲ್ಇಡಿ ಡಿಜಿಟಲ್ ಹೆಡ್ಲೈಟ್ಗಳು ಕೂಡ ಇದರ ಆಕರ್ಷಣೆಯಾಗಿರಲಿದೆ. ಇದು ಸಿ-ಪಿಲ್ಲರ್ನಲ್ಲಿ ಮೇಬ್ಯಾಕ್ ಲೋಗೋವನ್ನು ಸಹ ಹೊಂದಿದೆ.
ಇದರ ಸಿಗ್ನೇಚರ್ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಕೊಡುಗೆಯಲ್ಲಿ ಒಂದು ಆಯ್ಕೆಯಾಗಿ ಉಳಿಯಲಿದೆ. ಕಾರಿನ 19-ಇಂಚಿನ ಮೇಬ್ಯಾಕ್ ಅಲಾಯ್ ಚಕ್ರಗಳು ರೆಟ್ರೊ-ಮೊನೊಬ್ಲಾಕ್ ವಿನ್ಯಾಸದಲ್ಲಿದ್ದು, 20 ಅಥವಾ 21 ಇಂಚಿನ ಚಕ್ರಗಳಿಗೆ ಅಪ್ಗ್ರೇಡ್ ಮಾಡುವ ಆಯ್ಕೆಯೂ ಇದೆ.
ಇದನ್ನೂ ಓದಿ: Solar Powered Car 1,000 ಕಿ.ಮೀ ಮೈಲೇಜ್, ಸೋಲಾರ್ ಚಾಲಿತ ಮರ್ಸಿಡಿಸ್ ಬೆಂಜ್ ವಿಶನ್ EQXX ಕಾರು ಅನಾವರಣ!
ಮರ್ಸಿಡೀಸ್ ಮೇ ಬ್ಯಾಕ್ S-ಕ್ಲಾಸ್ನಲ್ಲಿನ ಟೆಕ್ ಅಪ್ಗ್ರೇಡ್ಗಳು ಪ್ರತಿ ಆಸನಕ್ಕೆ ಬಹು-ಕಾಂಟೂರ್ ಮಸಾಜ್, ಆರ್ಮ್ರೆಸ್ಟ್ಗಳು, ಡೋರ್ ಪ್ಯಾನೆಲ್ಗಳು, ಸೀಟ್ ವೆಂಟಿಲೇಶನ್ ಮತ್ತು ಹಿಂಬದಿ ಸೀಟ್ ಫುಟ್ರೆಸ್ಟ್ಗಾಗಿ ಕ್ಯಾಫ್ ಮಸಾಜ್ ಅನ್ನು ಸಹ ಒಳಗೊಂಡಿದೆ. ಪೂರ್ಣ-ಉದ್ದದ ಸೆಂಟರ್ ಕನ್ಸೋಲ್, ಟ್ರೇ ಟೇಬಲ್ಗಳು, ಹಿಂಬದಿ-ಸೀಟಿನ ಕೂಲರ್ ಮತ್ತು ಎಕ್ಸಿಕ್ಯುಟಿವ್ ರಿಯರ್ ಸೀಟ್ ಪ್ಯಾಕೇಜ್ ಅನ್ನು ಗ್ರಾಹಕರು ಆಯ್ಕೆ ಮಾಡಬಹುದು.
ಈ ಮಾದರಿಯಲ್ಲಿ ಹೊಸ ತಲೆಮಾರಿನ MBUX ಇನ್ಫೋಟೈನ್ಮೆಂಟ್ ಸಿಸ್ಟಂ ಇದೆ. ಇದರಲ್ಲಿ ಮುಂಭಾಗ ಮತ್ತು ಮಧ್ಯದಲ್ಲಿ 12.8-ಇಂಚಿನ ಡಿಸ್ಪ್ಲೇ, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎರಡು 11.6-ಇಂಚಿನ ಹಿಂಬದಿ-ಸೀಟ್ ಎಂಟರ್ಟೈನ್ಮೆಂಟ್ ಮಾನಿಟರ್ಗಳು ಮತ್ತು ಹಿಂಭಾಗದ ನಡುವೆ ಇರುವ ತೆಗೆಯಬಹುದಾದ ಟ್ಯಾಬ್ಲೆಟ್ಗಳಿವೆ.
ಇದಲ್ಲದೆ, ಹೊಸ ಎಸ್-ಕ್ಲಾಸ್ ಮೇಬ್ಯಾಕ್ ಭಾರತದಲ್ಲಿ ಎವೇಸಿವ್ ಸ್ಟೀರಿಂಗ್ ಅಸಿಸ್ಟ್ ಮತ್ತು ಕ್ರಾಸ್-ಟ್ರಾಫಿಕ್ ಫಂಕ್ಷನ್ನೊಂದಿಗೆ ಆಕ್ಟಿವ್ ಬ್ರೇಕ್ ಅಸಿಸ್ಟ್ ಪಡೆದ ಮೊದಲ ಕಾರು ಎನಿಸಿಕೊಂಡಿದೆ. ಇದರಲ್ಲಿ ಎರಡು ಬೆಲ್ಟ್ಬ್ಯಾಗ್ಗಳು ಮತ್ತು ಹಿಂಭಾಗದ ಏರ್ಬ್ಯಾಗ್ಗಳು ಸೇರಿದಂತೆ 13 ಏರ್ಬ್ಯಾಗ್ಗಳು, ಐಚ್ಛಿಕ ರಿಯರ್-ಆಕ್ಸಲ್ ಸ್ಟೀರಿಂಗ್ ಮತ್ತು ಏರ್ಮ್ಯಾಟಿಕ್ ಏರ್ ಸಸ್ಪೆನ್ಷನ್ ಸಹ ಇದೆ.
ಹೊಸ-ಪೀಳಿಗೆಯ ಮರ್ಸಿಡೀಸ್ ಮೇಬ್ಯಾಕ್ ಎಸ್ 580 ನಲ್ಲಿನ EQ ಬೂಸ್ಟ್ 48-ವೋಲ್ಟ್ -ಹೈಬ್ರಿಡ್ ತಂತ್ರಜ್ಞಾನದೊಂದಿಗೆ ಹೊಸ 4.0-ಲೀಟರ್ V8 ಟ್ವಿನ್-ಟರ್ಬೋಚಾರ್ಜ್ಡ್ ಎಂಜಿನ್ನೊಂದಿಗೆ ಬರುತ್ತದೆ. ಮೋಟಾರ್ 496 bhp ಮತ್ತು 700 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 6.0-ಲೀಟರ್ V12 ಮೋಟಾರ್ 604 bhp ಮತ್ತು 900 Nm ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ.
ಇದು ಈ ವಿಭಾಗದಲ್ಲಿರುವ ಎಸ್-ಕ್ಲಾಸ್ ಮೇಬ್ಯಾಕ್ ವಿಭಾಗದಲ್ಲಿ ರೋಲ್ಸ್ ರಾಯ್ಸ್ ಘೋಸ್ಟ್ ಮತ್ತು ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಗೆ ಸ್ಪರ್ಧೆ ನೀಡಲಿದೆ.