ನವದೆಹಲಿ(ಮಾ.01): ಭಾರತದಲ್ಲಿ ಟಾಟಾ ಕಾರುಗಳ(Tata Motors) ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದೆ. ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್ ಹಾಗೂ ಗರಿಷ್ಠ ಸುರಕ್ಷತೆಯ ಟಾಟಾ ಕಾರುಗಳು ಮಾರಾಟದಲ್ಲಿ ದಾಖಲೆ ಬರೆಯುತ್ತಿದೆ. ಜನವರಿ ಬಳಿಕ ಇದೀಗ ಫೆಬ್ರವರಿಯಲ್ಲೂ ಟಾಟಾ ಮೋಟಾರ್ಸ್ ಕಾರು ದಾಖಲೆ ಬರೆದಿದೆ. ಫೆಬ್ರವರಿಯಲ್ಲಿ 39,981 ಟಾಟಾ ಕಾರುಗಳು(Tata Car Sales) ಮಾರಾಟವಾಗಿದೆ.
2022 ಫೆಬ್ರವರಿ ತಿಂಗಳ ಮಾರಾಟದಲ್ಲಿ ಟಾಟಾ ಮೋಟಾರ್ಸ್ ಶೇಕಡಾ 46.85ರಷ್ಟು ಏರಿಕೆಯಾಗಿದೆ. 2021ರ ಫೆಬ್ರವರಿ ತಿಂಗಳಲ್ಲಿ 27,225 ಟಾಟಾ ಕಾರುಗಳು ಮಾರಾಟವಾಗಿತ್ತು. ಇನ್ನು 2022ರ ಜನವರಿಯಲ್ಲಿ 40,7777 ಕಾರುಗಳು ಮಾರಾಟವಾಗಿತ್ತು. ಫೆಬ್ರವರಿ ತಿಂಗಳಲ್ಲಿ 2,846 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗಿದೆ.
Tata Nexon Car ಟಾಟಾ ನೆಕ್ಸಾನ್ ಕಾರಿಗೆ ಹೆಚ್ಚಾಯ್ತು ಬೇಡಿಕೆ, 4 ಹೊಸ ವೇರಿಯೆಂಟ್ ಲಾಂಚ್!
2022ರ ಹೊಸ ವರ್ಷದಲ್ಲಿ ಟಾಟಾ ಕಾರುಗಳು ಮಾರಾಟದಲ್ಲಿ ಸತತವಾಗಿ 40 ಸಾವಿರ ಗಡಿ ದಾಟುತ್ತಿದೆ. ಈ ಮೂಲಕ ಟಾಟಾ ಭಾರತದ ಕಾರು ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳುತ್ತಿದೆ. ಇದು ಮಾರುತಿ ಸುಜುಕಿ ಹಾಗೂ ಹ್ಯುಂಡೈ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ.
ಕಾರು ಮಾರಾಟದಲ್ಲಿ ಟಾಟಾ ನೆಕ್ಸಾನ್, ಟಾಟಾ ಅಲ್ಟ್ರೋಜ್ ಹಾಗೂ ಪಂಚ್ ಕಾರಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಪಂಚ್ ಇತ್ತೀಚೆಗೆ ಬಿಡುಗಡೆಯಾದ ಕಾರಾಗಿದೆ. ಇನ್ನು ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಕಾರು ಅಪ್‌ಗ್ರೇಡ್ ವರ್ಶನ್ ಬಿಡುಗಡೆಯಾಗಿದೆ. ಇತ್ತೀಚೆಗೆ ನೆಕ್ಸಾನ್ ಕಾರು ಹೆಚ್ಚುವರಿ ಫೀಚರ್ಸ್‌ನೊಂದಿಗೆ, ನಾಲ್ಕು ಹೊಸ ವೇರಿಯೆಂಟ್ ಬಿಡುಗಡೆ ಮಾಡಲಾಗಿದೆ. ರಾಯಲ್ ಬ್ಲೂ ಕಲರ್‌ನೊಂದಿಗೆ ಬಿಡುಗಡೆಯಾಗಿದೆ.
Tata Kaziranga ಕಾಜಿರಂಗಾ ವನ್ಯಜೀವಿ ಸಂರಕ್ಷಣೆಗಾಗಿ ಟಾಟಾ ಮೋಟಾರ್ಸ್ ಕಾಜಿರಂಗಾ SUV ಎಡಿಶನ್ ಬಿಡುಗಡೆ!
ಟಾಟಾ ಹೊಸ ಕಾರು ಟಾಟಾ ಪಂಚ್
ಮಿನಿ ಎಸ್‌ಯುವಿ ಎಂದು ಕರೆಯಬಹುದಾದ ಟಾಟಾ ಮೋಟಾರ್ಸ್‌ನ ಹೊಸ ಕಾರು ಟಾಟಾ ಪಂಚ್ ಬಿಡುಗಡೆ ಆಗಿದೆ. ಸೇಫ್ಟಿಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದಿರುವ ಈ ಕಾರಿನ ಆರಂಭಿಕ ಬೆಲೆ ರು. 5.49 ಲಕ್ಷ ರು.(ಎಕ್ಸ್ ಶೋರೂಮ್ ದೆಹಲಿ) 1.2 ಲೀ ರಿವೋಟ್ರಾನ್ ಬಿಎಸ್6 ಇಂಜಿನ್ ಹೊಂದಿರುವ ಈ ಕಾರು 1199 ಸಿಸಿ ಸಾಮರ್ಥ್ಯ ಹೊಂದಿದೆ. ಪೆಟ್ರೋಲ್ ಇಂಜಿನ್‌ನ ಕಾರು ಲಭ್ಯವಿದ್ದು, ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಎರಡೂ ಮಾದರಿಯಲ್ಲಿ ಟಾಟಾ ಪಂಚ್ ಸಿಗುತ್ತದೆ. ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಪಂಚ್, ಡ್ಯುಯೆಲ್ ಏರ್ ಬ್ಯಾಗ್, ಫಾಗ್‌ಲೈಟ್ ಇತ್ಯಾದಿ ಅನೇಕ ಫೀಚರ್‌ಗಳನ್ನು ಹೊಂದಿದೆ. ಟಾಟಾ ಪಂಚ್ ಲೀ.ಗೆ 18 ಕಿಮೀ ಮೈಲೇಜ್ ಕೊಡುತ್ತದೆ ಅಂತ ಕಂಪನಿ ಘೋಷಿಸಿದೆ. ರು.21,000 ಕೊಟ್ಟು ಈ ಕಾರನ್ನು ಬುಕ್ ಮಾಡಬಹುದು. ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ ವಿಭಾಗದ ಅಧ್ಯಕ್ಷ ಶೈಲೇಶ್ ಚಂದ್ರ, ‘ಭಾರತೀಯ ರಸ್ತೆಗಳಲ್ಲಿ ಲೀಲಾಜಾಲವಾಗಿ ಸಂಚರಿಸುವ ಈ ಕಾರು ಆರಾಮದಾಯಕ ವಿನ್ಯಾಸದಲ್ಲಿದೆ. ಗ್ರಾಹಕರ ಸುರಕ್ಷತೆಯನ್ನೂ ಗಮನದಲ್ಲಿಟ್ಟು ಈ ಕಾರನ್ನು ರೂಪಿಸಲಾಗಿದೆ’ ಎಂದು ಹೇಳಿದ್ದಾರೆ.
ಹೊಸ ಮಾದರಿಯಲ್ಲಿ ಟಾಟಾ ಹ್ಯಾರಿಯರ್ ಮತ್ತು ಸಫಾರಿ
ಟಾಟಾ ಮೋಟಾರ್ಸ್ ಇಂಡಿಯಾ ಎಕ್ಸ್‌ಟಿಎ ಪ್ಲಸ್ ಆವೃತ್ತಿಯ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಶನ್, ಪನೋರಮಿಕ್ ಸನ್‌ರೂಫ್ ವಿನ್ಯಾಸಗಳಲ್ಲಿ ಈ ಕಾರುಗಳು ಬಿಡುಗಡೆಯಾಗಿವೆ. 2.0 ಡೀಸೆಲ್ ಇಂಜಿನ್ ಇರುವ ಈ ಕಾರು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಆರ್17 ಅಲಾಯ್ ವೀಲ್ಸ್ ಇತ್ಯಾದಿ ಫೀಚರ್‌ಗಳನ್ನು ಹೊಂದಿದೆ. ಮ್ಯೂಸಿಕ್ ಎನ್‌ಜಾಯ್ ಮಾಡುವವರಿಗೆ ಒಟ್ಟು 8 ಸ್ಪೀಕರ್‌ಗಳಿವೆ. ಟಚ್‌ಸ್ಕ್ರೀನ್ ಇನ್‌ಫೋಟೈನ್‌ಮೆಂಟ್ ಸಿಸ್ಟಮ್ ಇದೆ. ಆಟೊಮ್ಯಾಟಿಕ್ ಆಗಿ ಟೆಂಪರೇಚರ್ ಕಂಟ್ರೋಲ್ ಆಗುತ್ತೆ. ರೈನ್ ಸೆನ್ಸಿಂಗ್ ಕ್ಲೋಶರ್ ಇರುವ ಕಾರಣ ಮಂಜು, ಮಳೆಯಲ್ಲೂ ಡ್ರೈವ್ ಎನ್‌ಜಾಯ್ ಮಾಡಬಹುದು.
ಟಾಟಾದ 21 ವಾಣಿಜ್ಯ ವಾಹನ ಬಿಡುಗಡೆ
ಇ- ಬಸ್, ಟ್ರಕ್ ಸೇರಿದಂತೆ ಸುಮಾರು 21 ವಾಣಿಜ್ಯ ವಾಹನಗಳನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಿದೆ. ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನ ವಿಭಾಗದಲ್ಲಿ 7 ವಾಹನಗಳು, ಲೈಟ್ ಕಮರ್ಷಿಯಲ್ ವಿಭಾಗದಲ್ಲಿ 4 ರಿಂದ 18 ಟನ್ ತೂಕದ 5 ವಾಹನಗಳು ಬಿಡುಗಡೆಗೊಂಡಿವೆ. 5 ಸಣ್ಣ ಕಮರ್ಷಿಯಲ್ ವೆಹಿಕಲ್ ಬಿಡುಗಡೆಯಾಗಿದೆ. ಉತ್ತಮ ಕಾರ್ಯನಿರ್ವಹಣೆಯ ಜೊತೆಗೆ ಇಂಧನ ಉಳಿತಾಯಕ್ಕೆ ಪೂರಕವಾಗಿ ಇವುಗಳನ್ನು ನಿರ್ಮಿಸಲಾಗಿದೆ ಎಂದು ಕಂಪನಿ ಹೇಳಿದೆ.